ಆರೋಗ್ಯ ವರ್ತಮಾನ
Team Udayavani, Mar 12, 2019, 6:41 AM IST
ಇ ಸಿಗರೇಟ್‌ನಿಂದ ಮಾನಸಿಕ ಖನ್ನತೆ
ದೇಹಾರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಿಚಾರದಲ್ಲಿ ಇ ಸಿಗರೇಟ್‌ಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಈ ವ್ಯಸನಕ್ಕೆ ಬಲಿಯಾದ ಮನುಷ್ಯ ಹೃದಯಕ್ಕೆ ಸಂಬಂಧಿಸಿದ ಅಥವಾ ಇನ್ಯಾ ವುದೋ ತೆರ ನಾದ ಕಾಯಿಲೆಗೆ ಒಳ ಗಾ ಗುವ ಸಾಧ್ಯತೆ ಇದ್ದು, ಮಾನಸಿಕ ಖನ್ನತೆಗೂ ದಾರಿ ಮಾಡಿಕೊಡುತ್ತದೆ ಎಂದು ಭಾರತೀಯ ಮೂಲದ ಸಂಶೋಧನ ವರದಿಯೊಂದು ತಿಳಿಸಿದೆ. ಯುಎಸ್‌ನ ಕನ್ಸಾಸ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯ ಪ್ರಕಾರ, ಇ ಸಿಗರೇಟ್‌ಗೆ ಅಡಿಕ್ಟ್ ಆಗಿರುವ ಜನರು ಮಾನಸಿಕ ಅಶಾಂತಿ, ಒತ್ತಡ ಮತ್ತು ಹೃದಯಾಘಾತಗಳಂತಹ ಮಾರಣಾಂತಿಕ ಕಾಯಿಲೆಗಳಿಗೂ ತುತ್ತಾಗುವ ಸಂಭವ ಹೆಚ್ಚು. ವರ್ಷಕ್ಕೆ ಸುಮಾರು ಶೇ. 56ರಷ್ಟು ಮಂದಿ ಇ ಸಿಗರೇಟ್ ವ್ಯಸನಿಗಳು ಇಂತಹ ಸಮಸ್ಯೆಗಳಿಂದ ಬಳಲುತ್ತಿರು ವುದಾಗಿಯೂ ಈ ವರದಿ ದಾಖಲೆಗಳನ್ನು ನೀಡಿದೆ.
ಮೈಗ್ರೇನ್ ಕಣ್ಣಿನ ಸಮಸ್ಯೆಗೆ ಕಾರಣ
ಅತಿಯಾದ ಮೈಗ್ರೇನ್ ಭವಿಷ್ಯದಲ್ಲಿ ಶುಷ್ಕ ಅಥವಾ ಒಣ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ ಎಂಬು ದನ್ನು ಹೆಲ್ತ್ ಡೇ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಈ ಅಧ್ಯಯನದಲ್ಲಿ 65 ವರ್ಷ ಮೇಲ್ಪಟ್ಟ ಪುರುಷರಲ್ಲಿ ಈ ಸಮಸ್ಯೆ ದ್ವಿಗುಣಗೊಂಡರೆ, ಅದೇ ಮಹಿಳೆಯರಲ್ಲಿ ಶೇ. 2.5ರಷ್ಟು ಅಪಾಯ ತರುತ್ತವೆ ಎಂಬ ವಿಷಯ ಬೆಳಕಿಗೆ ಬಂದಿದೆ. ಮೈಗ್ರೇನ್ ಮತ್ತು ಒಣ ಕಣ್ಣಿನ ನಡುವಿನ ಸಂಬಂಧವೂ ವಯಸ್ಸಾದವರಲ್ಲಿ ಕಂಡುಬರತ್ತದೆ. ವಿಶೇಷವಾಗಿ ಗರ್ಭಧಾರಣೆ ಸಂದರ್ಭದಲ್ಲಿ ಹಾರ್ಮೋನ್‌ನಲ್ಲಾಗುವ ಬದಲಾವಣೆಯಿಂದಾಗಿ ಶುಷ್ಕ ಕಣ್ಣಿನ ತೊಂದರೆ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.