ಮಧುಮೇಹಿಗಳ ಆಹಾರದಲ್ಲಿರಲಿ ನಿಯಮ
Team Udayavani, Mar 12, 2019, 7:12 AM IST
ಮಧುಮೇಹದ ಸಮಸ್ಯೆ ಹೊಂದಿರುವವರಿಗೆ ವೈದ್ಯರು ನೀಡುವ ಮೊದಲ ಸಲಹೆ ದೇಹದ ತೂಕ ಇಳಿಸುವಿಕೆ. ಟೈಪ್ 2 ಡಯಾಬೀಟಿಸ್ ಹೊಂದಿರುವವರಿಗೆ ದೇಹದ ತೂಕ ಇಳಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ತೂಕ ಇಳಿಕೆಯಿಂದ ರಕ್ತದೊತ್ತಡ ನಿಯಂತ್ರಿಸಬಹುದು. ಜತೆಗೆ ಹೃದಯನಾಳದ ಗಂಭೀರ ಸಮಸ್ಯೆಗಳಿಗೆ ಕಾರಣವಾಗುವ ಅಧಿಕ ರಕ್ತದೊತ್ತಡ, ಅಪಧಮನಿಗಳಲ್ಲಿ ತಡೆ ಉಂಟುಮಾಡುವ ಅಪಾಯ ಕಡಿಮೆ ಮಾಡಬಹುದು.
ಕೇವಲ ಶೇ. 5 ಅಥವಾ 10ರಷ್ಟು ಕೊಬ್ಬನ್ನು ಕಡಿಮೆ ಮಾಡಿಕೊಂಡರೆ ಮಧುವೇಹದ ಔಷಧಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಹೆಚ್ಚುವರಿ ಕೊಬ್ಬಿನಂಶವಿರುವ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿನ ಸಕ್ಕರೆ ಅಂಶವನ್ನು ಕುಗ್ಗಿಸುವಂತಹ ಇನ್ಸುಲಿನ್‌ಗೆ ದೇಹ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದ ಸಕ್ಕರೆಯ ಅಂಶವನ್ನು ನಿಯಂತ್ರಿಸಿವುದು ಹೆಚ್ಚು ಸವಾಲಾಗುತ್ತದೆ. ಯಾವುದೇ ಸಮಸ್ಯೆಯಿಲ್ಲದೇ ದೇಹದ ತೂಕ ಇಳಿಸಿಕೊಳ್ಳಬಯಸುವ ಮಧುಮೇಹಿ ಗಳಿಗೆ ಇಲ್ಲಿದೆ ಕೆಲವೊಂದು ಟಿಪ್ಸ್.
ವ್ಯಾಯಾಮದೊಂದಿಗೆ ಡಯೆಟ್
ನಿಯಮಿತ ವ್ಯಾಯಾಮ ಹೆಚ್ಚುವರಿ ತೂಕ ಕಡಿಮೆಗೊಳಿಸಲು ಸಹಕಾರಿ. ಕೇವಲ ಡಯೆಟ್ ಪಾಲಿಸಿ ತೂಕ ಇಳಿಸಿಕೊಳ್ಳುವವರಿಗಿಂತ ವ್ಯಾಯಾಮ ಹಾಗೂ ನಿಯಮಿತ ಯೋಜಿತ ಆಹಾರಗಳನ್ನು ಸೇವಿಸುವವರು ಬೇಗನೇ ತೂಕ ಇಳಿಸಿಕೊಳ್ಳುತ್ತಾರೆ. ಅತಿಯಾದ ತೂಕ ದೇಹದಲ್ಲಿನ ಜೀವಕೋಶಗಳು ಮೇದೋಜ್ಜೀರಕ ಗ್ರಂಥಿಗಳಿಂದ ಉತ್ಪತ್ತಿಯಾಗುವ ಇನ್ಸುಲಿನ್‌ಗೆ ತಡೆಯಾಗುತ್ತದೆ. ಹೀಗಾಗಿ ಟೈಪ್ 2 ಮಧುಮೇಹಿಗಳಿ ನಿಯಮಿತ ವ್ಯಾಯಾಮದೊಂದಿಗೆ ಡಯೆಟ್ ಅನುಸರಿಸಿದರೆ ರಕ್ತದಲ್ಲಿರುವ ಸಕ್ಕರೆಯಾಂಶ ಕಡಿಮೆಗೊಳಿಸಬಹುದು.
ಉಪಾಹಾರ ಮರೆಯಬೇಡಿ
ಎಲ್ಲ ಮಧುಮೇಹಿಗಳು ಬೆಳಗ್ಗಿನ ಉಪಾಹಾರವನ್ನು ಕಡ್ಡಾಯವಾಗಿ ಸೇವಿಸಬೇಕು. ಬೆಳಗ್ಗಿನ ಆಹಾರ ಬಿಟ್ಟರೆ ಅತಿಯಾದ ತಿನ್ನುವಿಕೆಗೆ ಕಾರಣವಾಗುತ್ತದೆ. ಇದು ರಕ್ತದಲ್ಲಿರುವ ಸಕ್ಕರೆಯಾಂಶವನ್ನು ಹೆಚ್ಚಿಸುವುದಲ್ಲದೆ, ತೂಕ ಇಳಿಸುವಿಕೆಯ ಯೋಜನೆಯನ್ನು ನಾಶಗೊಳಿಸುತ್ತದೆ. ತೂಕ ಇಳಿಸಿಕೊಳ್ಳಲು ಧಾನ್ಯಗಳು ಹೆಚ್ಚು ಸಹಕಾರಿ. ಹೀಗಾಗಿ ಬೆಳಗ್ಗಿನ ಆಹಾರಗಳಲ್ಲಿ ಧಾನ್ಯಗಳನ್ನು ಬಳಸಿ.
ಕ್ಯಾಲೋರಿಯ ಬಗ್ಗೆ ಗಮನವಿರಲಿ
ನಿಖರವಾದ ಕ್ಯಾಲೋರಿಗಳು ವಯಸ್ಸು, ಲಿಂಗ, ತೂಕ, ದೈಹಿಕ ಚಟುವಟಿಕೆ ಹಾಗೂ ದೇಹದ ಪ್ರಕಾರ ಗಳಿಗೆ ಅವಲಂಬಿತವಾಗಿರುತ್ತವೆೆ. ಟೈಪ್ 2 ಮಧುವೇಹ ಇರುವ ಮಹಿಳೆಯರು ದಿನಕ್ಕೆ 1200ರಿಂದ 1800 ಕ್ಯಾಲೋರಿ ಹಾಗೂ ಪುರುಷರು 1400ರಿಂದ 2000 ಕ್ಯಾಲೋರಿಗಳ ಗುರಿಯನ್ನು ಅನುಸರಿಸಬಹುದು. ದಿನದ ಡಯೆಟ್ ಯೋಜನೆಯಲ್ಲಿ ಈ ಲೆಕ್ಕಾಚಾರ ಇರಲಿ.
ಫೈಬರ್ ಅಂಶ ಹೆಚ್ಚಿರಲಿ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸಲು ಫೈಬರ್ ಸಹಾಯ ಮಾಡುತ್ತದೆ. ಇದರೊಂದಿಗೆ ಜೀರ್ಣಕ್ರಿಯೆ ಹಾಗೂ ದೇಹದ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಫೈಬರ್‌ಯುಕ್ತ ಆಹಾರಗಳನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವುದನ್ನು ತಡೆಯಬಹುದು. 31ರಿಂದ 50 ವಯಸ್ಸಿನ ಮಹಿಳೆಗೆ ದಿನಕ್ಕೆ ಕನಿಷ್ಠ 25 ಗ್ರಾಂ ಫೈಬರ್ ಅಗತ್ಯ, ಅದೇ ವಯಸ್ಸಿನ ಪುರುಷರು ನಿತ್ಯ 31 ಗ್ರಾಂ ಫೈಬರ್ ಸೇವಿಸಬೇಕು. ತೂಕ ಇಳಿಸಿಕೊಳ್ಳಲು ಹಾಗೂ ನಿಯಂತ್ರಿಸಿಕೊಳ್ಳಲು ಫೈಬರ್ ಭರಿತ ಪದಾರ್ಥಗಳಾದ ಕಾಳುಗಳು, ತರಕಾರಿಗಳನ್ನು ಸೇವಿಸಬೇಕು.
ಸಣ್ಣ ಗುರಿಯಿರಲಿ
ಒಂದೇ ಬಾರಿಗೆ ದೇಹದಲ್ಲಿ ಬದಲಾವಣೆಗಳಾಗಲು ಸಾಧ್ಯವಿಲ್ಲ. ಆದ್ದರಿಂದ ಸಣ್ಣ ಗುರಿ ಇಟ್ಟುಕೊಳ್ಳಿ. ಅಂದರೆ ವಾರದಲ್ಲಿ ನಾಲ್ಕು ಬಾರಿ ವಾಕಿಂಗ್, ವಾರಕ್ಕೊಮ್ಮೆ ಮಾತ್ರ ಸಿಹಿ ಸೇವ ನೆ ಎಂಬ ಸಣ್ಣ ಗುರಿಯಿಂದ ಡಯೆಟ್ ಯೋಜನೆ ಆರಂಭವಾಗಲಿ.
ಸಹಾಯ ಕೇಳಿ
ದೇಹದ ತೂಕ ಇಳಿಸಿಕೊಳ್ಳುವುದು ಕಷ್ಟದ ಕೆಲಸ. ಕೆಲವೊಂದು ಬಾರಿ ತೂಕ ಇಳಿಸುವಿಕೆಯ ಟ್ರ್ಯಾಕ್ ಬಿಟ್ಟು ಇನ್ನು ಸಾಧ್ಯವಿಲ್ಲ ಎಂಬ ಭಾವನೆ ಮೂಡಿ ದಾಗ ನಿಮ್ಮನ್ನು ಪ್ರೋತ್ಸಾಹಿಸುವ, ಹುರಿದುಂಬಿಸುವ ವ್ಯಕ್ತಿಗಳ ಸಹಾಯ ಪಡೆ ಯಿರಿ.
ಮಿನಿ ಆಹಾರವಿರಲಿ
ಮಧುಮೇಹಿಗಳ ಡಯೆಟ್ ಯೋಜನೆಯಲ್ಲಿ ಮೂರು ಅಥವಾ ನಾಲ್ಕು ಮಿನಿ ಊಟಗಳಿಂದ ರಚಿಸಲ್ಪಟ್ಟ ಆಹಾರವಿದ್ದರೆ ಉತ್ತಮ. ಇದರೊಂದಿಗೆ ಎರಡು ಬಾರಿ ಹೆಚ್ಚು ಪ್ರಮಾಣದ ಆಹಾರ ಸೇವನೆಯಿದ್ದರೆ ಒಳ್ಳೆಯದು. ಹೆಚ್ಚು ಪ್ರಮಾಣದ ಆಹಾರ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆಗೊಳಿಸಲು ಸಹಕಾರಿಯಾದರೆ, ಮಿನಿ ಊಟಗಳು ಗುಕೋಸ್ ಮಟ್ಟವನ್ನು ಕಡಿಮೆ ಇರುವಂತೆ ನೋಡಿಕೊಳ್ಳುತ್ತ. 3 ಬಾರಿ ಹೆಚ್ಚು ಆಹಾರ ಸೇವಿಸುವುದಕ್ಕಿಂತ 6 ಮಿನಿ ಊಟದ ಪದ್ಧªತಿಯನ್ನು ಬೆಳೆಸಿಕೊಳ್ಳಿ.
ರಮ್ಯಾ ಕೆದಿಲಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.