ದೇವಗಿರಿಯಲ್ಲಿ ಎನ್ನೆಸ್ಸೆಸ್ ಶಿಬಿರ ಸಂಪನ್ನ
Team Udayavani, Mar 12, 2019, 7:39 AM IST
ಧಾರವಾಡ: ದೇವಗಿರಿ ಗ್ರಾಮದಲ್ಲಿ ಕರ್ನಾಟಕ ಕಾನೂನು ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ಶಿಬಿರ ವಿವಿಧ ಸೇವಾ ಕಾರ್ಯಗಳೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಒಂದು ವಾರ ನಡೆದ ಶಿಬಿರದಲ್ಲಿ ಗ್ರಾಮದಲ್ಲಿ ಸ್ವತ್ಛತೆ, ಹೂಳು ತೆಗೆಯುವುದು, ನೀರಿನ ಮೂಲಗಳ ಸಂರಕ್ಷಣೆ, ಮಳೆನೀರು ಸಂಗ್ರಹ, ಅಂತರ್ಜಲ ರಕ್ಷಣೆ, ಮತದಾನ ಜಾಗೃತಿ, ಶಾಲಾ ಅವರಣದ ಸ್ವತ್ಛತೆ ಮತ್ತು ರಂಗ ಮಂಟಪ ನಿರ್ವಹಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು.
ವರದಕ್ಷಿಣೆ ವಿರೋಧ, ಮಕ್ಕಳಿಗೆ ಅಕ್ಷರ ಕಲಿಕೆ, ಗ್ರಾಮ ನೈರ್ಮಲ್ಯ, ಸಸಿ ನೆಡುವುದು, ರಾಷ್ಟ್ರೀಯ ಭಾವೈಕ್ಯತೆ ಮತ್ತು ಮಹಿಳಾ ಸಬಲೀಕರಣ ಕುರಿತು ಸಂಪನ್ಮೂಲ ವ್ಯಕ್ತಿಗಳು ಗ್ರಾಮಕ್ಕೆ ಭೇಟಿಕೊಟ್ಟು ಉಪನ್ಯಾಸ ನೀಡಿದರು.
ಗ್ರಾಹಕ ಸಮಸ್ಯೆಗಳ ಕುರಿತು ಹಿರಿಯ ವಕೀಲರಾದ ಬಸವಪ್ರಭು ಹೊಸಕೇರಿ ಕೊನೆಯ ದಿನ ಉಪನ್ಯಾಸ ನೀಡಿದರು. ಸಿಪಿಐ ಮುಖಂಡರಾದ ಡಾ| ಸಿದ್ದನಗೌಡ ಪಾಟೀಲ ಅವರು ಗ್ರಾಮೀಣರ ಬದುಕು ಹಸನಾಗಲು ಮಾಡಬೇಕಿರುವ ಅಗತ್ಯ ಕೆಲಸಗಳ ಕುರಿತು ಮಾತನಾಡಿದರು. ಬಾಬು ಪಾಗೋಜಿ, ಸೋಮಲಿಂಗ ಯಂಕಮ್ಮನವರ, ತಾನಾಜಿ ದುರ್ಗಾಯಿ ಇನ್ನಿತರರು ಪಾಲ್ಗೊಂಡಿದ್ದರು.
ಗ್ರಾಮಾಭಿವೃದ್ಧಿಯಿಂದ ದೇಶದ ಪ್ರಗತಿ: ಚಿಕ್ಕನಗೌಡ
ಹುಬ್ಬಳ್ಳಿ: ಗ್ರಾಮಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಮಾಜಿ ಶಾಸಕ ಎಸ್.ಐ.
ಚಿಕ್ಕನಗೌಡ್ರ ಹೇಳಿದರು.
ಪಾಳೆ ಗ್ರಾಮದಲ್ಲಿ ಅದರಗುಂಚಿ ಸಿಐಸಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎಂಕಾಂ ಸ್ನಾತಕೋತ್ತರ ವಿಭಾಗದ ಎನ್ನೆಸ್ಸೆಸ್ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಹಳ್ಳಿಗಳಿಂದ ಕೂಡಿದ ರಾಷ್ಟ್ರವಾಗಿರುವುದರಿಂದ ಪ್ರಮುಖವಾಗಿ ಗ್ರಾಮಗಳ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿದೆ. ವಿದ್ಯಾರ್ಥಿಗಳು ಸಾಮಾಜಿಕ ಕಾಳಜಿಯನ್ನು ರೂಢಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.
ಆರ್.ಎಫ್. ಭರಮಗೌಡರ ಮಾತನಾಡಿದರು. ಶ್ರೀ ಷಡಕ್ಷರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಎಚ್.ಯು. ಮುಜಿತನವರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಚನ್ನಮ್ಮ ಶಿವನಗೌಡ್ರ, ಜಿಪಂ ಮಾಜಿ ಸದಸ್ಯ ಜಿ.ವಿ. ಕಳ್ಳಿಮನಿ, ಎನ್.ಜೆ. ಬಡಿಗೇರ ಇನ್ನಿತರರಿದ್ದರು.
ಸಮಾಜಮುಖೀ ಕಾರ್ಯ ಕೈಗೊಳ್ಳಿ
ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಕುಂದಗೋಳ ಸರ್ಕಾರಿ ಡಿಗ್ರಿ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಮ್ಮಿಕೊಂಡ ಶಿಬಿರದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.
ವಿಜಯಕುಮಾರ ಹಾಲಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜಮುಖೀ ಕಾರ್ಯವನ್ನು ತಮ್ಮ ಕಾಲೇಜಿನ ಎನ್ನೆಸ್ಸೆಸ್ ಮೂಲಕ ವ್ಯಕ್ತಪಡಿಸಿಕೊಂಡು ಸಾಗಿದಾಗ ಅವರಲ್ಲಿ ಹೊಸಹುಮ್ಮಸ್ಸು ಮೂಡಿದಂತಾಗುತ್ತದೆ ಎಂದರು.
ಪ್ರಾಚಾರ್ಯ ಎಂ.ಕೆ. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಬಸನಗೌಡ ಕರೆಹೊಳಲಪ್ಪಗೌಡ್ರ, ನಿಂಗಪ್ಪ ಕುಡುವಕ್ಕಲ, ದಾಕ್ಷಾಯಿಣಿ ಕೊಪ್ಪದ, ಬಸವರಾಜ ಮಡಿವಾಳರ, ಪ್ರೊ| ರಾಧಾಮತಿ ನಾಕೋಡ ಇದ್ದರು. ಕೃಷ್ಣಪ್ಪ ಲಮಾಣಿ ನಿರೂಪಿಸಿದರು, ಪ್ರವೀಣ ತಿಮ್ಮನಗೌಡ್ರ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.