ತೊಳೆದ ಮುತ್ತನು ಕಂಡೆ…


Team Udayavani, Mar 13, 2019, 12:30 AM IST

x-1.jpg

ಮಗಳು ಹೆರಿಗೆಗೆಂದು ಮನೆಗೆ ಬಂದ ಕ್ಷಣದಿಂದಲೇ, ಮಗುವಿಗೆ ಸ್ನಾನ ಮಾಡಿಸುವುದು ಹೇಗೆ ಎಂಬ ಚಿಂತೆ ಅಜ್ಜಿಯರನ್ನು ಕಾಡುತ್ತದೆ. ಮಗುವನ್ನು ಕಾಲಿನ ಮೇಲೆ ಅಥವಾ ತೊಡೆಯ ಮೇಲೆ ಮಲಗಿಸಿಕೊಂಡು, ಎಣ್ಣೆಯನ್ನು ಬೆಚ್ಚಗೆ ಮಾಡಿ, ಮೈಗೆಲ್ಲಾ ಹಚ್ಚಿ, ಬೆನ್ನು- ತಲೆಗೆ ತಟ್ಟುತ್ತಾ ಮೃದುವಾಗಿ ಮಸಾಜ್‌ ಮಾಡುವುದು, ಧ್ಯಾನಕ್ಕಿಂತಲೂ ತುಸು ಹೆಚ್ಚೇ ಏಕಾಗ್ರತೆಯನ್ನು ಬೇಡುತ್ತದೆ…

“ತೊಟ್ಟಿಲ ಒಳಗೊಂದು ತೊಳೆದ ಮುತ್ತನು ಕಂಡೆ 
ಹೊಟ್ಟೆ ಆಕಳಿಸಿ ನಗುವೋನ ನನ್ನಯ್ಯ 
ನೆತ್ತೀಲಿ ಕಂಡೆ ಹರಳೆಲೆ
ಮರದಲ್ಲಿ ಮರ ಹುಟ್ಟಿ, ಮರಚಿಂಗದ ಕಾಯಾಗಿ, ತಿನ್ನಲಾರದ ಹಣ್ಣು ಬಲುರುಚಿ…

 - ಹೀಗೆ ಜನಪದರು ಮಗುವನ್ನು ತೊಳೆದ ಮುತ್ತಿಗೆ, ತಿನ್ನಲಾರದ ಹಣ್ಣಿಗೆ ಹೋಲಿಸಿದ್ದಾರೆ. ಮಗುವನ್ನು ಆರೈಕೆ ಮಾಡುವ ಪ್ರಕ್ರಿಯೆಗಳೇ ಒಂದು ಚಾಲೆಂಜ್‌. ಮಗುವಿಗೆ ಎಣ್ಣೆ ಸ್ನಾನ ಮಾಡಿಸುವುದು ಅವುಗಳಲ್ಲೊಂದು. ಮಗಳು ಹೆರಿಗೆಗೆಂದು ಮನೆಗೆ ಬಂದ ಕ್ಷಣದಿಂದಲೇ, ಮಗುವಿಗೆ ಸ್ನಾನ ಮಾಡಿಸುವುದು ಹೇಗೆ ಎಂಬ ಚಿಂತೆ ಅಜ್ಜಿಯರನ್ನು ಕಾಡುತ್ತದೆ. ಮಗುವನ್ನು ಕಾಲಿನ ಮೇಲೆ ಅಥವಾ ತೊಡೆಯ ಮೇಲೆ ಮಲಗಿಸಿಕೊಂಡು, ಎಣ್ಣೆಯನ್ನು ಬೆಚ್ಚಗೆ ಮಾಡಿ, ಮೈಗೆಲ್ಲಾ ಹಚ್ಚಿ, ಬೆನ್ನು- ತಲೆಗೆ ತಟ್ಟುತ್ತಾ ಮೃದುವಾಗಿ ಮಸಾಜ್‌ ಮಾಡುವುದು, ಧ್ಯಾನಕ್ಕಿಂತಲೂ ತುಸು ಹೆಚ್ಚೇ ಏಕಾಗ್ರತೆಯನ್ನು ಬೇಡುತ್ತದೆ. ಸ್ನಾನ ಮಾಡಿಸುವಾಗ ನೀರು ಮಗುವಿನ ಕಣ್ಣು, ಮೂಗು, ಬಾಯಿಗೆ ಹೋಗದಂತೆ ತಡೆಯಲು ಹಣೆಯ ಮೇಲೆ ಕೈ ಹಿಡಿದು ಸ್ನಾನ ಮಾಡಿಸುವುದೂ ಒಂದು ಕಲೆ. ನಂತರ ಮಗುವಿಗೆ ಧೂಪ ಅಥವಾ ಲೊಬಾನ ಹಾಕಿ ಹಾಯಾಗಿ ನಿದ್ದೆ ಮಾಡಿಸುತ್ತಾರೆ. ಮಗುವಿಗೆ ಒಂದೆರಡು ವರ್ಷ ತುಂಬುವವರೆಗೂ ಎಣ್ಣೆ ಸ್ನಾನ ಮಾಡಿಸಿದರೆ ಆರೋಗ್ಯಕ್ಕೆ ಒಳ್ಳೆಯದು.  

ಎಣ್ಣೆ ಸ್ನಾನ ಒಳ್ಳೇದು…
ಎಳ್ಳೆಣ್ಣೆ, ಹರಳೆಣ್ಣೆ, ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ… ಇವುಗಳಲ್ಲಿ ಯಾವ ಎಣ್ಣೆಯಾದರೂ ಆದೀತು. ಅಭ್ಯಂಜನದಿಂದ ಮಗುವಿನ ಮಾಂಸಖಂಡಗಳ ಬೆಳವಣಿಗೆ ಸರಿಯಾಗಿ, ಮೂಳೆ ಗಟ್ಟಿಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಲು, ಚರ್ಮಕ್ಕೆ ಹೊಳಪು ಬರಲು, ಮಗುವಿಗೆ ಚೆನ್ನಾಗಿ ನಿದ್ದೆ ಬರಲು ಎಣ್ಣೆಸ್ನಾನ ಸಹಕಾರಿ. ಮಗು ದೊಡ್ಡದಾಗುವವರೆಗೆ ಪ್ರತಿದಿನ ಎಣ್ಣೆಸ್ನಾನ ಮಾಡಿಸಿ. ನೆಗಡಿ, ಕೆಮ್ಮು, ಜ್ವರ ಇದ್ದಾಗ ಸ್ನಾನಕ್ಕೆ ವಿರಾಮ ನೀಡಬಹುದು.

  ಒಂದು ಪಾತ್ರೆಯಲ್ಲಿ ನೀರು ಹಾಕಿ ಕಾಯಿಸಿ, ಆ ಪಾತ್ರೆಯಲ್ಲಿ ಎಣ್ಣೆಯ ಬಟ್ಟಲನ್ನಿಟ್ಟು ಎಣ್ಣೆಯನ್ನು ಬಿಸಿ ಮಾಡಿ. ಉಗುರು ಬೆಚ್ಚಗಾದ ಎಣ್ಣೆಯನ್ನು ಮಗುವಿನ ಕೈ ಕಾಲುಗಳಿಗೆ ಮೇಲಿನಿಂದ ಕೆಳಗೆ ಹಚ್ಚಬೇಕು. ಹೊಕ್ಕಳು ಹಾಗೂ ನೆತ್ತಿಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ. ಕೀಲುಗಳ ಮತ್ತು ಹೊಟ್ಟೆಯ ಭಾಗದಲ್ಲಿ ವೃತ್ತಾಕಾರವಾಗಿ, ತಲೆಯ ಮೇಲೆ ಬೆರಳುಗಳ ತುದಿಯಿಂದ, ಬೆನ್ನಿನ ಮೇಲೆ ಮೃದುವಾಗಿ ತಟ್ಟಿ, ಪಾದಗಳಿಗೆ ಮೃದುವಾಗಿ ಸವರುತ್ತಾ ಎಣ್ಣೆ ಹಚ್ಚಬೇಕು.

ನೀರಿಗೇನು ಬೆರೆಸಬೇಕು?
ಎಣ್ಣೆ ಹಚ್ಚಿ ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ. ಅತಿಯಾದ ಬಿಸಿನೀರಿನ ಸ್ನಾನ ಬೇಡ. ಸ್ನಾನ ಮಾಡಿಸುವ ನೀರಿಗೆ ಸ್ವಲ್ಪ ಲಿಂಬೆರಸ, ಗುಲಾಬಿ ಜಲ, ಏಲಕ್ಕಿ ಪುಡಿ ಬೆರೆಸಬಹುದು. ತಲೆಗೆ ಸ್ನಾನ ಮಾಡಿಸುವಾಗ ಕಣ್ಣಿಗೆ ನೀರು ಹೋಗದಂತೆ ಜೋಪಾನ ಮಾಡಿ. ಸ್ನಾನವಾದ ನಂತರ ಸ್ವತ್ಛವಾದ ಟವೆಲ್‌ನಿಂದ ಮೈ ಒರೆಸಿ, ನೆತ್ತಿಯಿಂದ ಕಾಲಿನವರೆಗೆ ಧೂಪವನ್ನು ಹಿಡಿಯಿರಿ. ಮಗುವಿಗೆ ಸಂಜೆ ವೇಳೆ ಸ್ನಾನ ಮಾಡಿಸಿದರೆ, ರಾತ್ರಿ ಚೆನ್ನಾಗಿ ನಿದ್ದೆ ಮಾಡುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಗುವನ್ನು ಬೆಚ್ಚಗಿಡುವುದು ಕೂಡ ಮುಖ್ಯ. ಸ್ವೆಟರ್‌ ಹಾಕಿಸಿ, ಕಂಚಿಗೆ ಹಾಗೂ ಕುಲಾವಿ ಕಟ್ಟಬೇಕು, ಬೆಚ್ಚಗಿನ ಟೋಪಿ ಹಾಕಬೇಕು. ಮಗುವನ್ನು ಕಾಟನ್‌ ಸೀರೆಯ ಜೋಗುಳದಲ್ಲಿ ಮಲಗಿಸುವುದು ಅದರ ಬೆಳವಣಿಗೆಗೆ ಸಹಕಾರಿ ಅನ್ನುತ್ತಾರೆ ಹಿರಿಯರು.

ಕಂದನ ಸ್ನಾನ ಹೀಗಿರಲಿ…
1. ಮಗುವಿನ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಬಳಸಿ. ಬಿಸಿ ನೀರು, ಮಗುವಿನ ಚರ್ಮಕ್ಕೆ ಘಾಸಿ ಮಾಡುತ್ತದೆ. 
2. ಸೋಪ್‌ನ ಬದಲು, ಹೆಸರುಕಾಳು ಹಿಟ್ಟು, ಕಡಲೆ ಹಿಟ್ಟು ಮತ್ತು ಮೆಂತ್ಯೆ ಹಿಟ್ಟನ್ನು ಸಮ ಪ್ರಮಾಣದಲ್ಲಿ ಬೆರೆಸಿ, ಸ್ನಾನ ಮಾಡಿಸಿ. 
3. ಮಗುವಿನ ಮೈಗೆ ಎಣ್ಣೆ ಹಚ್ಚಿ, ಬೆಳಗಿನ ಬಿಸಿಲಿನಲ್ಲಿ ನಿಲ್ಲಿಸಿ. ಮೂಳೆಯ ಬೆಳವಣಿಗೆಗೆ ಬೇಕಾದ ವಿಟಿಮಿನ್‌ “ಎ’  ಮತ್ತು “ಡಿ’, ಸೂರ್ಯ ಕಿರಣಗಳಿಂದ ಸಿಗುತ್ತದೆ. ರಿಕೆಟ್ಸ್‌ನಂಥ ಕಾಯಿಲೆಗಳನ್ನೂ ತಡೆಗಟ್ಟಬಹುದು. 
4. ಮಗುವಿಗೆ 5 ತಿಂಗಳಾಗುವವರೆಗೆ ಕಾಲಿನ ಮೇಲೆ ಮಲಗಿಸಿಕೊಂಡು ಎಣ್ಣೆ ಹಚ್ಚಿ  ಸ್ನಾನ ಮಾಡಿಸಬೇಕು. ನಂತರ ಕಾಲಿನ ಮೇಲೆ ಕೂರಿಸಿ ಸ್ನಾನ ಮಾಡಿಸಬಹುದು. ಮಗು ನಿಲ್ಲುವ ಸ್ಥಿತಿಗೆ ಬಂದ ಮೇಲೆ ನಿಲ್ಲಿಸಿ ಸ್ನಾನ ಮಾಡಿಸಬಹುದು. 
7. ರಾಸಾಯನಿಕ ಅಂಶ ಅಧಿಕವಾಗಿರುವ ಶ್ಯಾಂಪೂ, ಕ್ರೀಂ, ಬಾಡಿ ಲೋಶನ್‌, ಪೌಡರ್‌ ಬಳಕೆ ಬೇಡ.

ಜ್ಯೋತಿ ಪುರದ, ಹಾವೇರಿ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.