ಆಸೆಗೊಬ್ಬಳು ಮೀಸೆಗೊಬ್ಬ! 

Team Udayavani, Mar 13, 2019, 12:30 AM IST

x-11.jpg

ಅಭಿನಂದನ್‌ ಮೀಸೆ ನೋಡಿ, ಕನ್ನಡಿಯಲ್ಲಿ ಮುಖ ನೋಡಿಕೊಂಡೆ. ಛೇ! ಮೀಸೆ ಎಂಬ ದೇಶ ಪ್ರೇಮವೇ ಕಾಣುತ್ತಿಲ್ಲವಲ್ಲ… ಯುವಕರ ದಂಡು ಸಲೂನ್‌ನ ಮುಂದೆ ನಿಂತು ಮೀಸೆಯನ್ನು ಅಭಿನಂದನ್‌ ಮೀಸೆಯಂತೆ ಬಾಗಿಸಿ ಟ್ರಿಮ್‌ ಮಾಡಿಸಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಇದೇನಾಗಿ ಹೋಯ್ತು? ಮೀಸೆ ಎಂದರೆ ಗಂಡಸು, ಗಂಡಸು ಎಂದರೆ ದೇಶಪ್ರೇಮ ಎಂಬ ಸಮೀಕರಣ ಹುಟ್ಟಿಬಿಟ್ಟಿತಲ್ಲ…

ಹುಡುಗನೊಬ್ಬ ವಯಸ್ಸಿನ ಗಡಿ ದಾಟಿ ತರುಣನಾದರೆ ಮೀಸೆ ಮೂಡುತ್ತದೆ. ಸರಿ. ಆದರೆ, ಇವನೊಬ್ಬ ಗಡಿ ದಾಟಿದರೆ ನನಗ್ಯಾಕೆ ಮೀಸೆ ಆಸೆ ಮೂಡಬೇಕು? ಇವನೊಬ್ಬ ಗಡಿ ದಾಟಿದ್ದರಿಂದ ದೇಶದ ಜನರು ಜಾತಿ, ಮತ, ಭಾಷೆ, ಅಂತಸ್ತಿನ ಗಡಿಗಳನ್ನು ದಾಟಿ, ಭಾರತೀಯರೆಲ್ಲರೂ ಒಂದೇ ಎಂಬುದನ್ನು ಸಾರಿಬಿಟ್ಟರು. ಇದೇ ಭಾರತೀಯತೆ! ಧನ್ಯವಾದಗಳು ಅಭಿನಂದನ್‌ ವರ್ತಮಾನ್‌.

ಹೀಗೆಂದು ನಾನು, ನನ್ನ ಹಾಗೆ ಸಾವಿರಾರು ಜನ ಸೋಷಿಯಲ್‌ ಮೀಡಿಯಾದಲ್ಲಿ ದಾಖಲಿಸುವಾಗ ಅಭಿನಂದನ್‌ ಫೋಟೊಗಾಗಿ ತಡಕಾಡಿದ್ದಕ್ಕೆ, ಎಲ್ಲೋ ಒಂದೆರಡು ಫೋಟೊಗಳು ಸಿಕ್ಕಿದ್ದವಷ್ಟೆ. ಹೀಗಾದ್ರೆ ದೇಶಭಕ್ತಿಯನ್ನು ತಟ್ಟುವಂತೆ ಅಭಿವ್ಯಕ್ತಿಸುವುದು ಹೇಗೆ? ಶುರುವಾಯ್ತು ನೋಡಿ… ಅಭಿನಂದನ್‌ ಬಗ್ಗೆ, ಸೈನ್ಯದ ಬಗ್ಗೆ, ಪ್ರಧಾನಿಯ ಬಗ್ಗೆ, ಮುಖ್ಯವಾಗಿ ಅಭಿನಂದನ್‌ನ ಮೀಸೆ ಬಗ್ಗೆ ಸಾವಿರಾರು ಕ್ಯಾರಿಕೇಚರ್‌, ವ್ಯಂಗ್ಯಚಿತ್ರ, ರೇಖಾಚಿತ್ರ, ವರ್ಣಚಿತ್ರ ಮೂಡಿದವು. ಇದ್ದಕ್ಕಿದ್ದಂತೆ ಎಲ್ಲರೂ ಸಾಹಿತಿಗಳಾಗಿ, ಚಿತ್ರಕಾರರಾಗಿಬಿಟ್ಟರು. ಅವುಗಳಲ್ಲಿ ಒಂದು ಚಿತ್ರ ನನಗೆ ಬಹಳ ಇಷ್ಟವಾಯ್ತು. ಅದು ಅಭಿನಂದನ್‌ ಮೀಸೆ ಚಿತ್ರ.

ಕಲಾವಿದ ಎಂಪಿಎಂ ನಟರಾಜ್‌ ಎಂಬವರು ರಚಿಸಿದ ಆ ಚಿತ್ರದಲ್ಲಿ ತ್ರಿವರ್ಣ ಧ್ವಜವೇ ಅಭಿನಂದನ್‌ ಮುಖದ ರೂಪದಲ್ಲಿತ್ತು. ಕೇಸರಿ ತಲೆಗೂದಲು, ಹಣೆಯ ಮೇಲೆ ನೀಲಿ ಅಶೋಕ ಚಕ್ರದ ಜೊತೆ ಎದ್ದು ಕಾಣುತ್ತಿತ್ತು ಹಸಿರು ಮೀಸೆ! ಮೂಗಿನಿಂದ ಕಿವಿಯವರೆಗೂ ಹುಲುಸಾಗಿ ಹರಡಿದ್ದ ಅಂಕುಡೊಂಕಾದ ಆ ಮೀಸೆಯ ಚಿತ್ರ, ದೇಶಭಕ್ತಿಯೆಂದರೆ ಮೀಸೆಯೇ ಎನ್ನುವಷ್ಟರ ಮಟ್ಟಿಗೆ ಪ್ರಭಾವ ಬೀರಿತು. 

ಆ ಚಿತ್ರ ನೋಡಿ, ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಂಡೆ. ಛೇ! ಮೀಸೆ ಎಂಬ ದೇಶಪ್ರೇಮವೇ ಕಾಣುತ್ತಿಲ್ಲವಲ್ಲ… ಎಲ್ಲೆಲ್ಲೂ ಯುವಕರ ದಂಡು ಸಲೂನ್‌ನ ಮುಂದೆ ನಿಂತು ಮೀಸೆಯನ್ನು ಅಭಿನಂದನ್‌ ಮೀಸೆಯಂತೆ ಬಾಗಿಸಿ ಟ್ರಿಮ್‌ ಮಾಡಿಸಿಕೊಳ್ಳುತ್ತಿದ್ದಾರೆ. ಅಯ್ಯೋ, ನಮ್ಮ ದೇಶದಲ್ಲಿ ಇದೇನಾಗಿ ಹೋಯ್ತು? ಮೀಸೆ ಎಂದರೆ ಗಂಡಸು, ಗಂಡಸು ಎಂದರೆ ದೇಶಪ್ರೇಮ ಎಂಬ ಸಮೀಕರಣ ಹುಟ್ಟಿಬಿಟ್ಟಿತಲ್ಲ… ಸಾಧ್ಯವೇ ಇಲ್ಲ! ನನ್ನಂಥ ದೇಶಪ್ರೇಮಿಗೆ ಮೀಸೆ ಇಲ್ಲ ಅಂದ್ರೆ ಎಲ್ಲಿಯ ಸಮಾನತೆ? “ಬೇಕೇ ಬೇಕು, ಮೀಸೆ ಬೇಕು’ ಎಂಬ ಆಂತರ್ಯದ ಕೂಗಿಗೆ ಬೆಲೆ ಕೊಟ್ಟು “ನನ್ನ ಫೋಟೊಗಳಿಗೆ ಅಭಿನಂದನ್‌ ಮೀಸೆ ಬರುವ ಹಾಗೆ ಆ್ಯಪ್‌ ಮಾಡಿಕೊಡಿ’ ಎಂದು ಸೋಷಿಯಲ್‌ ಮೀಡಿಯಾದಲ್ಲಿ ರಿಕ್ವೆಸ್ಟ್‌ ಇಟ್ಟೆ. 

ನಂಗ್ಯಾಕೆ ಮೀಸೆಯ ಮೇಲೆ ಇಷ್ಟೊಂದು ಮೋಹ? ಮೀಸೆ ಹಿಂದೆಂದೂ ಅಪರಿಚಿತವಾಗಿರಲಿಲ್ಲ. ಆದರೆ, ಇಷ್ಟು ಅಪ್ಯಾಯಮಾನವೂ ಆಗಿರಲಿಲ್ಲ. ಕನ್ನಡಿ ಮುಂದೆ ಅಪ್ಪ ಮೀಸೆ ಕತ್ತರಿಸುವಾಗ ಪರೀಕ್ಷಕಿಯಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಕೈಗೆ ಕತ್ತರಿ ತೆಗೆದುಕೊಂಡು, ಆ ಕಡೆ ಎರಡು, ಈ ಕಡೆ ನಾಲ್ಕು ಕೂದಲನ್ನು ಕತ್ತರಿಸಿ ಬ್ಯಾಲೆನ್ಸ್‌ ಮಾಡುವಾಗ ಹುಟ್ಟಿದ ಹೆಮ್ಮೆಯ ಪ್ರೀತಿ, ಜೊತೆಜೊತೆಯಲ್ಲಿ ಆಟವಾಡುತ್ತಾ ಬೆಳೆದ ಹುಡುಗರು ಚಿಗುರುಮೀಸೆಯ ನವತರುಣರಾಗಿ ಎದುರು ನಿಂತಾಗ ಕಿಚ್ಚು ಹತ್ತಿಸಿದ ಪ್ರೇಮ, ಮುತ್ತು ಕೊಟ್ಟರೆ ಕೆಟ್ಟು ಹೋಗುತ್ತೀನೇನೋ ಎಂಬಂತೆ ಮೀಸೆ ಮೇಲೆ ಅತಿ ಕಾಳಜಿಯಿಂದ ಮುತ್ತಿಡುತ್ತಾ ಕಡೆಗದು ಮದುವೆ ಬಂಧನದೊಳಗೆ ಸಿಕ್ಕಿಕೊಂಡ ನಂತರ, “ಮುತ್ತು ಕೊಟ್ಟರೆ ಮೀಸೆ ಅಡ್ಡ ಬರುತ್ತಪ್ಪ’ ಎಂಬ ಹುಸಿಮುನಿಸಿನ ಪ್ರೇಮದಾಟದ ಯೌವನ ಪ್ರೀತಿ, ಮಡಿಲಲ್ಲಿದ್ದ ಗಂಡು ಮಗುವಿಗೆ ಐ ಬ್ರೋ ಪೆನ್ಸಿಲ್‌ನಿಂದ ಪುಟ್ಟದಾಗಿ ಮೀಸೆ ಬರೆದು ನಕ್ಕಾಗ ಉಕ್ಕಿದ ಮಮತೆ, ಬೆಳೆದು ನಿಂತ ಮಗ ಕನ್ನಡಿಯಲ್ಲಿ ಇಣುಕಿ ಮೀಸೆ ಸರಿಪಡಿಸಿಕೊಳ್ಳುವಾಗ ಮೂಡಿದ ವಾತ್ಸಲ್ಯ… ಮೀಸೆ ಪ್ರೇಮಕ್ಕೆ ಪುರಾವೆಗಳು ಒಂದೇ ಎರಡೇ? ಆದರೆ, ಇವೆಲ್ಲವನ್ನೂ ಮೀರಿ ಭಾರತದಷ್ಟೇ ಅಗಾಧವಾಗಿ ಕಂಡಿದ್ದು ಈ ಅಭಿನಂದನ್‌ ಮೀಸೆ.

ಅರ್ಥವಾಯಿತು! ಈ ಮೀಸೆಯ ಆಸೆ ಬೆಂಕಿಯಂತೆ ನನ್ನೊಳಗೆ ಹೇಗೆ ಆವರಿಸಿಕೊಂಡಿತು ಎಂದು. ಆಸೆ ಮೀಸೆಯದ್ದಲ್ಲ, ಅದರೊಳಗಿನ ತ್ಯಾಗ, ಬಲಿದಾನ, ಸಾಮರ್ಥ್ಯದ್ದು. ನಾವು ಊಹಿಸಿಕೊಳ್ಳಲೂ ಆಗದಂಥ ಕೆಲಸವನ್ನು ನಮ್ಮ ಸೈನಿಕರು ಮಾಡುತ್ತಿದ್ದಾರೆ. ಅವರೆಲ್ಲರ ಪ್ರತಿನಿಧಿಯಾಗಿ ಸಾವನ್ನು ಗೆದ್ದು ಬಂದ ವೀರ ಅಭಿನಂದನ್‌ ಮೀಸೆ ನಮ್ಮೆಲ್ಲರ ದೇಶಭಕ್ತಿಯ, ಗೆಲುವಿನ ಸಂಕೇತ. ನಾನೂ ಮೀಸೆ ಧರಿಸಿದ ಹೆಣ್ಣಾಗಿ ಹೆಮ್ಮೆಯಿಂದ ನನ್ನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದೆ.

ರೇಖಾರಾಣಿ

ಟಾಪ್ ನ್ಯೂಸ್

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.