ಮಣಿಪಾಲ ವೈದ್ಯಕೀಯ ಕಾಲೇಜು: ವಾರ್ಷಿಕೋತ್ಸವ
Team Udayavani, Mar 13, 2019, 1:00 AM IST
ಮಣಿಪಾಲ: ಗುಣಮಟ್ಟದ ಶಿಕ್ಷಣದಿಂದ ಮಣಿಪಾಲದ ವೈದ್ಯಕೀಯ ಕಾಲೇಜು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದೆ. ವೈದ್ಯಕೀಯ ಕಾಲೇಜು ಮುಂಚೂಣಿಯಲ್ಲಿರುವುದು ಮತ್ತು ಅದನ್ನು ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಆದರೆ ಮಣಿಪಾಲದ ಕಾಲೇಜು 2 ದಶಕಗಳಿಂದ ತನ್ನ ಸ್ಥಾನವನ್ನು ಕಾಪಾಡಿಕೊಂಡಿದೆ ಎಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ಉಪಕುಲಪತಿ ಡಾ| ಎಚ್.ಎಸ್ ಬಲ್ಲಾಳ್ ಹೇಳಿದರು.
ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಮತ್ತು ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ಪರೀಕ್ಷಾಂಗ ಸಚಿವ ಡಾ| ವಿನೋದ್ ವಿ. ಥೋಮಸ್ ಮಾತನಾಡಿ, ಮಣಿಪಾಲ್ ವೈದ್ಯಕೀಯ ಕಾಲೇಜು ಶೇ.98 ಫಲಿತಾಂಶ ಪಡೆಯುವುದರೊಂದಿಗೆ ಮಾಹೆಯ ಎಲ್ಲ ಕಾಲೇಜುಗಳಲ್ಲಿ ಅತ್ಯುತ್ತಮ ಕಾಲೇಜು ಆಗಿದೆ ಎಂದರು.
2018ರ ಉತ್ತಮ ಸಂಶೋಧನೆಗೆ ಸಿಗುವ ಡಾ| ಟಿಎಂಎ ಪೈ ಚಿನ್ನದ ಪದಕವನ್ನು ಡೆಂಟಲ್ ಮೆಟೀರಿಯಲ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ಕಿಶೋರ್ ಜಿಂಜುಪಲ್ಲಿ ಪಡೆದರು. ಫೇರ್ ಪ್ರಶಸ್ತಿಯನ್ನು ಡಾ| ವಾಸುದೇವ್ ಬಲ್ಲಾಳ್ ಹಾಗೂ ಡಾ| ರಾಜೇಶ್ವರಿ ಪಡೆದುಕೊಂಡರು. ಉತ್ತಮ ಬೋಧನೆಗಾಗಿ ಡಾ| ಆನಂದೀಪ್ ಶುಕ್ಲ ಹಾಗೂ ಡಾ| ವಿದ್ಯಾಸರಸ್ವತಿ ಪ್ರಶಸ್ತಿ ಪಡೆದರು.
ಉತ್ತಮ ವಿದ್ಯಾರ್ಥಿ ಮತ್ತು ಹೆಚ್ಚು ಅಂಕ ಗಳಿಸಿದ ಬಿ. ಕೃತಿಕಾ ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಸ್ನಾತ್ತಕೋತ್ತರ ವಿದ್ಯಾರ್ಥಿಗಳಲ್ಲಿ ಪ್ರೈಸ್ ಪ್ರಶಸ್ತಿಯನ್ನು ಪಿರಿಯೋಡೆಂಟಾಲಿಟಿ ವಿಭಾಗದ ಡಾ| ಮೋನಿಕಾ ಪಾಲ್ ಪಡೆದಿದ್ದಾರೆ.
ವಿದ್ಯಾರ್ಥಿ ವರದಿಯನ್ನು ಡಾ| ಸಾಯಿನಿವೇದಿತಾ ವಾಚಿಸಿದರು. ಡಾ| ಶಾನೆ ಯಿ ಕ್ಯು$Õಯನ್ ಕ್ವೆಕ್ ಅನಿಸಿಕೆ ವ್ಯಕ್ತಪಡಿಸಿದರು. ಮಣಿಪಾಲ ವೈದ್ಯಕೀಯ ಕಾಲೇಜಿನ ಡೀನ್ ಡಾ| ಕೀರ್ತಿಲತಾ ಎಂ. ಪೈ ಸ್ವಾಗತಿಸಿ, ವರದಿ ವಾಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.