ಶಿರ್ವ ಪಿಲಾರು: ಬಾವಿಗೆ ಬಿದ್ದ ಜಿಂಕೆ ರಕ್ಷಣೆ
Team Udayavani, Mar 13, 2019, 1:00 AM IST
ಶಿರ್ವ: ಇಲ್ಲಿಗೆ ಸಮೀಪದ ಪಿಲಾರು ಮಜಲಬೆಟ್ಟು ಅಡಿಪುಮನೆ ಅಂಗಾರ ದೇವಾಡಿಗ ಅವರ ಕೃಷಿ ಭೂಮಿಯಲ್ಲಿರುವ ಆವರಣವಿಲ್ಲದ ಪಾಳು ಬಾವಿಗೆ ಬಿದ್ದ ಸುಮಾರು 5 ವರ್ಷ ಪ್ರಾಯದ ಗಂಡು ಜಿಂಕೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೋಮವಾರ ಊರವರ ಸಹಕಾರದಿಂದ ಬಾವಿಯಿಂದ ಮೇಲೆ ಬರುವಂತೆ ಮಾಡಿ ರಕ್ಷಣೆ ಮಾಡಿದ್ದಾರೆ.
ನೀರಿಲ್ಲದ ಬಾವಿಗೆ ಬಿದ್ದಿದ್ದ ಜಿಂಕೆಯನ್ನು ಕಂಡು ಮನೆಯವರು ಗ್ರಾಮಸ್ಥರ ಮೂಲಕ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು.ಜಿಂಕೆ ಯಾವಾಗ ಬಾವಿಗೆ ಬಿದ್ದಿದೆ ಎಂಬ ಖಚಿತ ಮಾಹಿತಿ ಇರದೆ ರಾತ್ರಿ ಆಹಾರ ಅರಸಿಕೊಂಡು ಬಂದ ಜಿಂಕೆ ಆಯ ತಪ್ಪಿ ಬಾವಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ.
ಅರಣ್ಯ ಇಲಾಖೆ ಕಾರ್ಯಾಚರಣೆ
ಸುದ್ದಿ ತಿಳಿದ ಕೂಡಲೇ ಕಾರ್ಯಪ್ರವೃತ್ತ ರಾದ ಅಧಿಕಾರಿಗಳು ಪಡುಬಿದ್ರಿ ವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಅವರ ನೇತೃತ್ವದಲ್ಲಿ ಅರಣ್ಯ ರಕ್ಷಕರ ತಂಡ ಜೇಸಿಬಿಯ ಮೂಲಕ ಬಾವಿಯನ್ನು ಅಗಲ ಮಾಡಿ ಜಿಂಕೆಗೆ ಮೇಲೆ ಬರಲು ದಾರಿ ಮಾಡಿದ್ದಾರೆ.
ಆರೋಗ್ಯದಿಂದಿರುವ ಜಿಂಕೆ ಮೇಲೆ ಬಂದು ಪಿಲಾರುಕಾನ ಸುರಕ್ಷಿತಾರಣ್ಯ ಸೇರಿಕೊಂಡಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಡುಬಿದ್ರಿ ಉಪ ವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ, ಅರಣ್ಯ ರಕ್ಷಕರಾದ ಜಯರಾಮ ಶೆಟ್ಟಿ, ನಾಗೇಶ್, ಅಭಿಲಾಷ್, ಮಂಜು ಭಾಗ ವಹಿಸಿದ್ದು, ಗ್ರಾಮಸ್ಥರು ಸಹಕರಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.