ನಿಶ್ಚಿಂತ ನೀರವ್‌ ಮೋದಿ: ವಂಚಕರಿಗೆ ಶಿಕ್ಷೆಯಾಗಲಿ


Team Udayavani, Mar 13, 2019, 12:30 AM IST

x-20.jpg

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸಮುದ್ರ ಕಿನಾರೆಯಲ್ಲಿ ನೀರವ್‌ ಮೋದಿಯ ಬಂಗಲೆಯನ್ನು ಡೈನಮೈಟ್‌ ಇಟ್ಟು ಪುಡಿ ಮಾಡಲಾಗಿದೆ. ದೇಶಕ್ಕೆ ಮೋಸ ಮಾಡಿ ಹೋದ ಉದ್ಯಮಿಗಳನ್ನು ಸುಮ್ಮನೇ ಬಿಡುವುದಿಲ್ಲ ಎಂಬ ಸಂದೇಶ ಕಳುಹಿಸುವ ಪ್ರಯತ್ನ ಇದಾಗಿದೆ. 

100 ಕೋಟಿ ರೂ ಮೌಲ್ಯದ ಈ ಬಂಗಲೆಯನ್ನು ಸರ್ಕಾರಿ ಜಾಗದ ಮೇಲೆ ಅನಧಿಕೃತವಾಗಿ ಕಟ್ಟಿದ ಕಾರಣಕ್ಕಾಗಿ ಕೆಡವಲಾಗಿದೆ. ನೀರವ್‌ ಮೋದಿ ಭಾರತದಿಂದ ಪಲಾಯನಗೈದ ನಂತರದಿಂದ ಈ ಬಂಗಲೆ ಜಾರಿ ನಿರ್ದೇಶ ನಾಲಯದ ಹಿಡಿತದಲ್ಲಿತ್ತು. ನೀರವ್‌ ಮೋದಿಯೇನೋ ಅನಧಿಕೃತವಾಗಿ ಬಂಗಲೆ ನಿರ್ಮಿಸಿ ದೋಷಿಯೆನಿಸಿಕೊಂಡಿರ ಬಹುದು, ಆದರೆ ಆ ಬಂಗಲೆ ಕಟ್ಟಲು ಅನುವು ಮಾಡಿಕೊಟ್ಟ ಸರ್ಕಾರಿ ಯಂತ್ರವೂ ಅಷ್ಟೇ ದೋಷಿ. ಆದರೆ ಬಂಗಲೆ ನಿರ್ಮಾಣದ ಸಮಯ ದಲ್ಲಿ ನೀರವ್‌ ಮೋದಿ “ದೇಶದ್ರೋಹಿ’ ಅಥವಾ “ಮೋಸಗಾರ’ ಎಂದು ಕರೆಸಿಕೊಳ್ಳುತ್ತಿರಲಿಲ್ಲ, ಆತನಿಗೆ ಆಗ ದೇಶದ ಬ್ಯಾಂಕಿಂಗ್‌ ಮತ್ತು ಸರ್ಕಾರಿ ಯಂತ್ರದಿಂದ ವಿಶೇಷ ಗೌರವಾದರ ಗಳು ಪ್ರಾಪ್ತವಾಗುತ್ತಿದ್ದವು. ಇಲ್ಲದಿದ್ದರೆ ಮಹಾರಾಷ್ಟ್ರ ಸರ್ಕಾರ ಮತ್ತು ರಾಯ ಗಢದ ಸ್ಥಳೀಯ ಆಡಳಿತ ಈ ವ್ಯಕ್ತಿಗೆ ಅನಧಿಕೃತವಾಗಿ ಬಂಗಲೆ ನಿರ್ಮಿಸಲು ಅವಕಾಶವೇಕೆ ಕೊಡುತ್ತಿತ್ತು? 

ಇಲ್ಲಿ ಇನ್ನೊಂದು ಪ್ರಶ್ನೆಯೂ ಇದೆ. ಈ ಕಾರ್ಯಾಚರಣೆಗಳಿಂದ ನೀರವ್‌ ಮೋದಿ ಮೇಲೆ ಏನು ನೇರ ಪರಿಣಾಮ ಉಂಟಾಗುತ್ತದೆ ಎನ್ನುವುದು. ಈ ಮಧ್ಯೆ ಈ ವ್ಯಕ್ತಿ ಬ್ರಿಟನ್‌ನಲ್ಲಿ ತನ್ನ ವ್ಯವಹಾರ ಆರಂಭಿಸಿ ದ್ದಾನೆ, ಅಲ್ಲದೇ ಅಲ್ಲಿನ ಸರ್ಕಾರಿ ನ್ಯಾಷನಲ್‌ ಇನ್ಶೂರೆನ್ಸ್‌ ನಂಬರ್‌ ಪಡೆಯಲೂ ಸಫ‌ಲನಾಗಿದ್ದಾನೆ. ಆದಾಗ್ಯೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂಥ ಬೃಹತ್‌ ತನಿಖಾ ಸಂಸ್ಥೆಗಳು ಆತನ ಹಿಂದೆ ಬಿದ್ದಿವೆ, ಆತನ ಬ್ಯಾಂಕ್‌ ಖಾತೆಯನ್ನು ಜಪ್ತಿ ಮಾಡಿವೆ, ಭಾರತದಲ್ಲಿನ ಆತನ ಸಂಪತ್ತನ್ನೆಲ್ಲ ವಶ ಮಾಡಿವೆಯಾದರೂ ಸತ್ಯವೇನೆಂದರೆ, ಆತ ಲಂಡನ್‌ನಲ್ಲಿ ಪೂರ್ಣರೂಪದಲ್ಲಿ ಸುರಕ್ಷಿತವಾಗಿದ್ದಾನೆ ಮತ್ತು ಸ್ವತ್ಛಂದವಾಗಿ ಅಡ್ಡಾಡುತ್ತಾ, ಭಾರತ ಸರ್ಕಾರ, ಭಾರತೀಯ ಕಾನೂನು, ಭಾರತೀಯರ ಭಾವನೆಗಳನ್ನು ಪರೋಕ್ಷವಾಗಿ ಅಣಕಿಸುತ್ತಿದ್ದಾನೆ. 

ಇತ್ತೀಚೆಗಷ್ಟೇ ನೀರವ್‌ ಮೋದಿಯ ಒಂದು ವಿಡಿಯೋ ವೈರಲ್‌ ಆಗಿದೆ. ಆ ವೀಡಿಯೋದಲ್ಲಿ ಪತ್ರಕರ್ತ ಕೇಳುವ ಪ್ರತಿಯೊಂದು ಪ್ರಶ್ನೆಗೂ ನೀರವ್‌ ನಗುತ್ತಾ “ನೋ ಕಮೆಂಟ್‌’ ಎನ್ನುತ್ತಾನೆ. ಅತ್ಯಂತ ನಿಶ್ಚಿಂತ ಭಾವ ಆತನ ಮುಖದಲ್ಲಿ! ಭಾರತದ ಕಾನೂನಿನ ಬಗ್ಗೆ ನೀರವ್‌ ಮೋದಿಗೆ ಒಂದಿಷ್ಟೂ ಚಿಂತೆಯಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇದಷ್ಟೇ ಅಲ್ಲ, ಆತನ ವಿರುದ್ಧ ಇಂಟರ್‌ಪೋಲ್‌ ಕೂಡ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿದ್ದರೂ, ಆತ ಆರಾಮವಾಗಿ ಹೇಗೆ ಅಡ್ಡಾಡಿಕೊಂಡಿದ್ದಾನೆ ಎನ್ನುವ ಸ್ವಾಭಾವಿಕವಾಗಿ ಭಾರತೀಯರಲ್ಲಿ ಏಳುತ್ತದೆ. 

ನೀರವ್‌ ಮೋದಿ ಮತ್ತು ಆತನ ಮಾವ ಮೆಹುಲ್‌ ಚೋಕ್ಸಿ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಮೆಹುಲ್‌ ಚೋಕ್ಸಿ ಆ್ಯಂಟಿಗುವಾದ ಪೌರತ್ವ ಪಡೆದುಕೊಂಡು ಆರಾಮಾಗಿದ್ದಾನೆ.  ನೀರವ್‌ನನ್ನು ಭಾರತಕ್ಕೆ ಕರೆತರಲು ಸಕಲ ಪ್ರಯತ್ನ ನಡೆಸಿದ್ದೇವೆ ಎಂದು ಸರ್ಕಾರಿ ಸಂಸ್ಥೆಗಳು ಹೇಳುತ್ತವೆ. ಆದರೆ ಇತ್ತೀಚಿನ ವರದಿಯೊಂದು ಈ ದಾವೆಯನ್ನೇ ಪ್ರಶ್ನಿಸು ವಂತಿದೆ. ನೀರವ್‌ ಮೋದಿಯನ್ನು ಬಂಧಿಸುವ ನಿಟ್ಟಿನಲ್ಲಿ ಸಂಬಂಧಿಸಿದ ದಸ್ತಾವೇಜುಗಳನ್ನು ಕೇಳಿದರೂ, ಅನೇಕ ಬಾರಿ ಮಾಹಿತಿಯನ್ನು ಕಳಿಸಿದರೂ ಭಾರತ ಉತ್ತರಿಸುತ್ತಿಲ್ಲ ಎಂದು ಬ್ರಿಟನ್‌ ಅಧಿಕಾರ ವರ್ಗ ಹೇಳುತ್ತಿರುವುದಾಗಿ ಕೆಲ ಮಾಧ್ಯಮ ವರದಿಗಳು ಹೇಳುತ್ತಿವೆ. ನಿಜಕ್ಕೂ ಏನು ನಡೆಯುತ್ತಿದೆ ಎನ್ನುವುದೇ ಅರ್ಥವಾಗದಂಥ ಸ್ಥಿತಿ ನಿರ್ಮಾಣವಾಗಿದೆ. 

ಒಂದು ವೇಳೆ ಭಾರತ ತ್ವರಿತವಾಗಿ ಸ್ಪಂದಿಸಿ, ಖುದ್ದು ಬ್ರಿಟನ್‌ ಕೂಡ ಆತನ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಿದರೂ, ಅದು ಇತ್ಯರ್ಥವಾಗುವುದಕ್ಕೆ ಇನ್ನೆಷ್ಟು ದಿನ ಹಿಡಿಯಲಿದೆಯೋ?  ಮದ್ಯದ ದೊರೆ ವಿಜಯ್‌ ಮಲ್ಯ ಕಥೆಯಲ್ಲಿ ಏನಾಯಿತು ಎನ್ನುವುದನ್ನು ಭಾರತೀಯರು ನೋಡಿದ್ದಾರೆ. ಇಂಥ ವಂಚಕ ಉದ್ಯಮಿಗಳು ಕಾನೂನು ಪ್ರಕ್ರಿಯೆಗಳಲ್ಲಿನ ಜಟಿಲತೆಗಳು, ವಿಳಂಬಗಳು ಮತ್ತು ತಮ್ಮ ಹಣದ ಪ್ರಭಾವವನ್ನು ಬಳಸಿಕೊಂಡು ಸುರಕ್ಷಿತವಾಗಿ ಇರುತ್ತಾರೆ. ನೀರವ್‌ ಮೋದಿ, ಮಲ್ಯನನ್ನು ಭಾರತಕ್ಕೆ ಹಿಡಿದು ತರಲು ಇನ್ನೆಷ್ಟು ಸಮಯ ಹಿಡಿಯಲಿದೆಯೋ? ಅಷ್ಟರಲ್ಲೇ ಅವರ ವಿರುದ್ಧದ ಆಕ್ರೋಶದ ತೀವ್ರತೆಯೂ ದೇಶದಲ್ಲಿ ತಣ್ಣಗಾಗಿರುತ್ತದೆ. 

ಭಾರತ ಈಗಲಾದರೂ ಅಂತಾರಾಷ್ಟ್ರೀಯವಾಗಿ ತನ್ನ ಪ್ರಭಾವವನ್ನು ಪ್ರಬಲವಾಗಿ ಬಳಸಿಕೊಳ್ಳಲೇಬೇಕಿದೆ. ಇಡೀ ದೇಶಕ್ಕೆ ವಂಚಿಸಿದವರು ಇನ್ನೊಂದು ದೇಶದಲ್ಲಿ, ಅದು ಬ್ರಿಟನ್‌ನಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಾಯಾಗಿ ಇರುತ್ತಾರೆ ಎಂದರೆ, ಇದು ಆ ವ್ಯಕ್ತಿಗಳಷ್ಟೇ ಅಲ್ಲದೇ, ಆ ದೇಶವೂ ಭಾರತಕ್ಕೆ ಮಾಡುವ ಅವಮಾನವಾಗುತ್ತದೆ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.