ಅಡೂರು : ವರ್ಷಾವಧಿ ಜಾತ್ರೋತ್ಸವ ಆರಂಭ
Team Udayavani, Mar 13, 2019, 1:00 AM IST
ಅಡೂರು: ಇತಿಹಾಸ ಪ್ರಸಿದ್ಧ ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಮಾ. 12ರಂದು ಆರಂಭಗೊಂಡಿತು.
ಬೆಳಗ್ಗೆ ವಾದ್ಯಘೋಷಗಳೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯ ಬಳಿಕ ಧ್ವಜಾರೋಹಣ ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ನೂತನವಾಗಿ ನಿರ್ಮಿಸಿದ ಬೇತಾಳ ಸಮರ್ಪಣೆ, ಸುತ್ತುಗೋಪುರದ ನಿಧಿ ಕೂಪನ್ ಬಿಡುಗಡೆ ಜರಗಿತು.
ಮಾ. 13ರಂದು ಸಂಜೆ 7ರಿಂದ ಗಣಪತಿ ಪ್ರಾರ್ಥನೆ, ಉಗ್ರಾಣ ತುಂಬಿಸುವುದು, 14 ರಂದು ಬೆಳಗ್ಗೆ 7ಕ್ಕೆ ಬೆಳಗ್ಗಿನ ಪೂಜೆ, 9ರಿಂದ ರುದ್ರ ಪಾರಾಯಣ, 11ರಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6 ರಿಂದ ಭಜನೆ, 7 ರಿಂದ ನಾಟಕ, ರಾತ್ರಿ 9.30 ರಿಂದ ಉತ್ಸವ ಬಲಿ, ತುಲಾಭಾರ ಪ್ರಾರ್ಥನೆ, ರಾತ್ರಿ ಪೂಜೆ, ಶ್ರೀ ಭೂತಬಲಿ ನಡೆಯಲಿದೆ.
ಮಾ. 20ರ ವರೆಗೆ ವಿವಿಧ ಕಾರ್ಯಕ್ರಮ ಗಳೊಂದಿಗೆ ವಾರ್ಷಿಕ ಜಾತ್ರೋತ್ಸವ ಜರಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.