ಲೋಕಸಭಾ ಚುನಾವಣೆ ದಿನಾಂಕ ಘೋಷಣೆ : ಪಕ್ಷಗಳ ಪ್ರಚಾರ ಆರಂಭ


Team Udayavani, Mar 13, 2019, 1:00 AM IST

loka.png

ಕುಂಬಳೆೆ: ಚುನಾವಣಾ ಆಯೋಗದಿಂದ ಚುನಾವಣೆಯ ದಿನಾಂಕ  ಘೋಷಣೆಯಾಗುವುದರೊಂದಿಗೆ ರಾಜ್ಯದಲ್ಲೂ ರಾಜಕೀಯ ಪಕ್ಷಗಳು ಸಕ್ರಿಯವಾಗಿವೆ. ಆಡಳಿತ ವಿರೋಧಿ ಪಕ್ಷಗಳ ನಾಯಕರು ಹೈ ಆಲರ್ಟ್‌ ಆಗಿದ್ದಾರೆ. ಕಾರ್ಯಕರ್ತರೂ ಉತ್ಸುಕರಾಗಿದ್ದಾರೆ. ಪಕ್ಷಗಳ ಪ್ರಚಾರ ಆರಂಭವಾಗಿದೆ.

ಪ್ರಬಲ ತ್ರಿಕೋನ ಸ್ಪರ್ಧೆ ನಡೆಯಲಿರುವ ಕಾಸರಗೋಡು ಲೋಕಸಭಾ ಮಂಡಲದಲ್ಲಿ ಎಡರಂಗ ಅಭ್ಯರ್ಥಿಯನ್ನು ಘೋಷಿಸಿದೆ. ಬಿ.ಜೆ.ಪಿ. ಮತ್ತು ಐಕ್ಯರಂಗದ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆ ಸಕ್ರಿಯವಾಗಿದೆ.

ಕಾಸರಗೋಡು ಲೋಕಸಭಾ ಸ್ಥಾನವನ್ನು ಎಡರಂಗದಿಂದ  ಕಸಿಯಲು ಐಕ್ಯರಂಗ ಈ ಬಾರಿ ಶಪಥ ಮಾಡಿದಂತಿದೆ. ಕಳೆದ 2014ರಲ್ಲಿ ಕೇವಲ 6,921 ಮತಗಳ ಅಂತರದಿಂದ ವಿಜೇತರಾದ ಕಳೆದ ಮೂರು ಬಾರಿ ಸಂಸದರಾಗಿದ್ದ ಎಡರಂಗದ ಲೋಕಸಭಾ ಸದಸ್ಯ ಪಿ. ಕರುಣಾಕರನ್‌ ಅವರನ್ನು ಈ ಬಾರಿ ಕೈ ಬಿಡಲಾಗಿದೆ.ಬದಲಾಗಿ ಸಿ.ಪಿ.ಎಂ. ನಾಯಕ ಮಾಜಿ ಶಾಸಕ ಕೆ.ಪಿ. ಸತೀಶ್‌ಚಂದ್ರನ್‌ ಅವರನ್ನು ಎಡರಂಗ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಬಿ.ಜೆ.ಪಿ. ರಾಷ್ಟ್ರೀಯ ಸಮಿತಿ ನಾಯಕ ಪಿ.ಕೆ. ಕೃಷ್ಣದಾಸ್‌ ಮತ್ತು ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರಕಾಶ್‌ಬಾಬು ಬಿ.ಜೆ.ಪಿ. ಸಂಭಾವ್ಯ ಅಭ್ಯರ್ಥಿಯಾಗಿರುವರು. ಐಕ್ಯರಂಗದ ಅಭ್ಯರ್ಥಿಯಾಗಿ ಮಾಜಿ ಲೋಕಸಭಾ ಸದಸ್ಯ ಐ. ರಾಮ ರೈ ಆವರ ಪುತ್ರ ನ್ಯಾಯವಾದಿ ಬಿ. ಸುಬ್ಬಯ್ಯ ರೈ ಅವರ ಹೆಸರು ಕೇಳಿ ಬರುತ್ತಿದೆ. ಎಡರಂಗ ಮತ್ತು ಐಕ್ಯರಂಗದೊಳಗೆ ಪ್ರಬಲ ಸ್ಪರ್ಧೆಯಾಗಿದ್ದು ಬಿ.ಜೆ.ಪಿ. ಪ್ರಬಲ ಸ್ಪರ್ಧೆ ನೀಡಲಿದೆ.

ಎಡರಂಗಕ್ಕೆ ರಾಜ್ಯ ಸರಕಾರದ ಸಾಧನೆ ಮತ್ತು ಹಾಲಿ ಲೋಕಸಭಾ ಸದಸ್ಯರು ತಮ್ಮ ನಿಧಿಯನ್ನು 98 ಶೇ. ವಿನಿಯೋಗಿಸಿ ಕ್ಷೇತ್ರದ ಅಭಿವೃದ್ಧಿ ಸಾಧಿಸಿದ ಅಸ್ತ್ರವಾದರೆ, ಐಕ್ಯರಂಗಕ್ಕೆ ಕೇಂದ್ರ ಸರಕಾರದ ಅಭಿವೃದ್ಧಿ ವೈಫಲ್ಯವನ್ನು ಎತ್ತಿತೋರಿಸಿ ಅಧಿಕಾರಕ್ಕೇರುವ ಆಸೆಯಾಗಿದೆ. ಬಿ.ಜೆ.ಪಿ. ಕೇಂದ್ರ ಸರಕಾರದ 5 ವರ್ಷಗಳ‌ ಸಾಧನೆ ಗಳ ಮತ್ತು ಉಗ್ರರ ಕೇಂದ್ರಕ್ಕೆ ಸರ್ಜಿಕಲ್‌ ದಾಳಿಯ ಸಾಧನೆ ಹಾಗೂ ಮತ್ತೂಮ್ಮೆ ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸುವ ಪಣವಾಗಿದೆ.

ಎಡರಂಗ ಪ್ರಚಾರದಲ್ಲಿ ಮುಂದಿದ್ದು ಎಲ್ಲ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ ಬಳಿಕ ಇದೀಗ ಆಯಾ ಲೋಕಸಭಾ ಮಂಡಲಗಳಲ್ಲಿ ಸಮಾವೇಶದ ಸಿದ್ಧತೆಯಲ್ಲಿದೆ. ಬಿ.ಜೆ.ಪಿ. ಮತ್ತು ಐಕ್ಯರಂಗಗಳ ಅಭ್ಯರ್ಥಿಗಳ ಆಯ್ಕೆಯ ಸಭೆ ನಡೆಯುತ್ತಿದೆ. ಬಿ.ಜೆ.ಪಿ. ಚುನಾವಣೆಗೆ ಮುನ್ನವೇ ಕಾರ್ಯಕರ್ತರ ಸಭೆಯನ್ನು ನಡೆಸಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಮುಂದಾಗಿದೆ.

ಎಡರಂಗದ ವತಿಯಿಂದ ಗೋಡೆಬರಹ ಇನ್ನಿತರ ಪ್ರಚಾರ ನಡೆಯುತ್ತಿದೆ.ಬಿ.ಜೆ.ಪಿ.ನಾಯಕರ ಮತ್ತು ಕಾರ್ಯಕರ್ತರ ವತಿಯಿಂದ ಮನೆ ಮನೆ ಸಂಪರ್ಕ,ಮನೆ ಮನೆಗಳಲ್ಲಿ ಧ್ವಜ ಮತ್ತು ಪಕ್ಷದ ಚಿಹ್ನೆಯ ಸ್ಟಿಕ್ಕರ್‌ ಅಂಟಿಸುವ ಕೆಲಸ ನಡೆಯುತ್ತಿದೆ.

ದೇಶದಾದ್ಯಂತ ವಿಪಕ್ಷಗಳು ಮಹಾಘಟಬಂಧನ್‌ಗೆ ಕಾಂಗ್ರೆಸ್‌ ಮತ್ತು ಸಿ.ಪಿ.ಎಂ. ಪರಸ್ಪರ ಕೈಜೋಡಿಸಲಿವೆ.ಆದರೆ ಕೇರಳದಲ್ಲಿ ಉಭಯ ರಂಗಗಳು ಪರಸ್ಪರ ಸ್ಪರ್ಧೆಗೆ ಸಜ್ಜಾಗಿವೆೆ. ಆದರೆ ಗೆದ್ದ ಬಳಿಕ ದಿಲ್ಲಿಯಲ್ಲಿ ಎಡರಂಗ ಮತ್ತು ಐಕ್ಯರಂಗಗಳು ಪರಸ್ಪರ ಒಟ್ಟಾಗಿ ಕೈ ಜೋಡಿಸಲಿವೆ.

ಹೆಚ್ಚಿನ ಕಡೆಗಳಲ್ಲಿ ಹೆಚ್ಚಿನೆಲ್ಲÉ ಎಡರಂಗದ ಹಾಲಿ  ಸಂಸದರಿಗೆ ಟಿಕೆಟ್‌ ನೀಡಿದರೆ ಕಾಸರಗೋಡಿನಲ್ಲಿ ಸೋಲುವ ಭಯದಿಂದ ಹಾಲಿ ಸಂಸದರನ್ನು ಕೈ ಬಿಟ್ಟಿದೆ ಎಂಬುದಾಗಿ ಐಕ್ಯರಂಗ ಹೇಳಿದರೆ, ಹಾಲಿ ಸಂಸದರಿಗೆ ಆರೋಗ್ಯದ ಪ್ರಶ್ನೆಯಿಂದ ಅನಿವಾರ್ಯವಾಗಿ ಕೈಬಿಡಲಾಗಿದ್ದು ಯುವ ನಾಯಕತ್ವಕ್ಕೆ ಟಿಕೆಟ್‌ ನೀಡಲಾಗಿದೆ.ಹಿಂದಿನ ಬಾರಿಗಿಂತಲೂ ಈ ಬಾರಿ ಇಲ್ಲಿ ಅತ್ಯಧಿಕ  ಮತದಿಂದ ಗೆಲ್ಲುವ ವಿಶ್ವಾಸ ಎಡರಂಗ ನಾಯಕರದು.ಅಲ್ಲದೆ ಈ ಹಿಂದೆ 15 ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ 12 ಬಾರಿಯೂ ಗೆಲುವು ಎಡರಂಗದ ಪಾಲಾಗಿತ್ತು.

ಮಂಜೇಶ್ವರ, ಕಾಸರಗೋಡು, ಉದುಮ, ಹೊಸದುರ್ಗ, ತೃಕ್ಕರಿಪ್ಪುರ, ಪಯ್ಯನ್ನೂರು ಮತ್ತು ಕಲ್ಯಾಶ್ಯೆರಿ ಏಳು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 13,24,384 ಮತದಾರರಿದ್ದು ಇದರಲ್ಲಿ 6,87,696 ಮಹಿಳೆಯರು ಮತ್ತು 6,36,689 ಪುರುಷರು ಮತ್ತು ಈರ್ವರು ಮಂಗಳಮುಖೀ ಮತದಾರರನ್ನು ಹೊಂದಿದ ಕೇÒತ್ರದಲ್ಲಿ ಮಹಿಳಾ ಮತದಾರರ ಮೇಲುಗೈಯಾಗಿದೆ.
ಇದೀಗ ಬಿರು ಬಿಸಿಲಿನ ಬೇಸಗೆಯಲ್ಲಿ ಚುನಾವಣೆ ಘೋಷಣೆಯಾಗಿ ಮುಂದಿನ ದಿನಗಳಲ್ಲಿ ಚುನಾವಣೆಯ ಕಾವು ಮತ್ತು ಬಿಸಿಲಿನ ಕಾವು ಇನ್ನಷ್ಟು ಏರಲಿದೆ.

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

12

Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.