ದ್ವೇಷ ಹುಟ್ಟಿಸುವ ವರ್ತನೆ ಸಲ್ಲದು : ಜಿಲ್ಲಾಧಿಕಾರಿ
Team Udayavani, Mar 13, 2019, 1:00 AM IST
ಕಾಸರಗೋಡು: ಚುನಾವಣೆ ಸಂಬಂಧ ಮಾದರಿ ನೀತಿಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜಾತಿ-ಮತ-ಭಾಷೆ ಹಿನ್ನೆಲೆಯಲ್ಲಿ ಜನತೆಯ ನಡುವೆ ದ್ವೇಷ ಹುಟ್ಟಿಸುವಂಥಾ ರೀತಿ ವರ್ತಿಸಬಾರದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ಜಾತಿ-ಮತಗಳ ಹೆಸರಲ್ಲಿ ಮತಯಾಚನೆ ನಡೆಸುವುದು, ಮತಯಾಚನೆಗೆ ಆರಾಧನಾಯಲಗಳ ಬಳಕೆ ನಡೆಸಕೂಡದು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತದಾರರನ್ನು ಬೆದರಿಸಿ, ಆಮಿಷವೊಡ್ಡಿ ತಮ್ಮ ಕಡೆ ಸೆಳೆಯಕೂಡದು. ಓರ್ವರ ಬದಲಿಗೆ ಇನ್ನೋರ್ವರನ್ನು ಬಳಸಿ ಮತದಾನ ನಡೆಸುವುದು, ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮತದಾದ ದಿನ ಪ್ರಚಾರ ನಡೆಸುವುದು, ಮತದಾನಕ್ಕೆ 48 ತಾಸು ಮುನ್ನ, ಚುನಾವಣೆಯ ಪ್ರಚಾರ ಮುಗಿದ ಅನಂತರ, ಮತದಾನ ಮುಗಿಯುವ ಮುನ್ನ, ಸಾರ್ವಜನಿಕ ಸಭೆ ನಡೆಸುವುದು ಇತ್ಯಾದಿ ಮಾದರಿ ನೀತಿಸಂಹಿತೆಯ ಉಲ್ಲಂಘನೆಯಾಗಿದೆ ಎಂದವರು ನುಡಿದರು.
ಯಾವ ನಾಗರಿಕನ ಸಮಾಧಾನಕರ ಬದುಕಿನಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಸ್ತಕ್ಷೇಪ ನಡೆಸಕೂಡದು. ಯಾವುದೇ ವ್ಯಕ್ತಿಯ, ಸಂಸ್ಥೆಯ ಸ್ವಾಮ್ಯದ ಕಟ್ಟಡ, ಜಾಗ, ಆಸ್ತಿಯಲ್ಲಿ ಸಂಬಂಧಪಟ್ಟವರ ಒಪ್ಪಿಗೆ, ಮಾಹಿತಿಯಿಲ್ಲದೆ ಪ್ರಚಾರ ಸಾಮಗ್ರಿ ಬಳಸಕೂಡದು ಎಂದವರು ಹೇಳಿದರು.
ವಿಪಕ್ಷದ ಅಭ್ಯರ್ಥಿ ನಡೆಸುವ ಪ್ರಚಾರ ಚಟುವಟಿಕೆಗಳಿಗೆ ತಡೆಯುಂಟು ಮಾಡುವುದು, ಅವರ ಪ್ರಚಾರ ಸಾಮಗ್ರಿಗಳಿಗೆ ಹಾನಿ ಮಾಡುವುದು ಇತ್ಯಾದಿ ಮಾದರಿ ನೀತಿಸಂಹಿತೆಯ ಉಲ್ಲಂಘನೆ ಎಂದು ತಿಳಿಸಿದರು.
ಅಭ್ಯರ್ಥಿಗಳು ಚುನಾವಣೆ ಸಭೆ, ವಾಹನ ಪ್ರಚಾರ ಇತ್ಯಾದಿ ನಡೆಸುವ ವೇಳೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಲಿಖೀತ ಅನುಮತಿ ಪಡೆಯಬೇಕು. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ವರೆಗಿನ ಅವಧಿಯಲ್ಲಿ ಧ್ವನಿವರ್ಧಕ ಬಳಸಿ ಪ್ರಚಾರ ನಡೆಸುವಂತಿಲ್ಲ. ಸರಕಾರಿ ಸಂಸ್ಥೆಗಳು, ಸರಕಾರಿ ಕಾರ್ಯಕ್ರಮಗಳು ಚುನಾವಣೆ ಪ್ರಚಾರಕ್ಕಾಗಿ ಬಳಸಕೂಡದು. ಸರಕಾರಿ, ಸಾರ್ವಜನಿಕ ಸಂಸ್ಥೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಚಾರ ಸಾಮಗ್ರಿಗಳ ಬಳಕೆ ನಡೆಸಕೂಡದು.
ಎ. 23ರಂದು ನಡೆಯುವ ಮತದಾನ ಸಂಬಂಧ ಮಾ. 28ರಂದು ಗಝೆಟೆಡ್ ಆದೇಶ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಎ.4, ಸೂಕ್ಷ್ಮ¾ ತಪಾಸಣೆ ಎ. 5ರಂದು, ನಾಮಪತ್ರ ಹಿಂದೆೆಗೆತಕ್ಕೆ ಕೊನೆಯ ದಿನಾಂಕ ಎ. 8 ಆಗಿದೆ.
ಜಿಲ್ಲೆಯಲ್ಲಿ ಸುಗಮ, ನೀತಿ ಪೂರ್ವಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ನೀತಿಸಂಹಿತೆ ಜಾರಿಗೊಳಿಸುವ ಸಂಬಂಧ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಪೊಲೀಸ್ ಸಂರಕ್ಷಣೆ ಸಹಿತದ ವೀಡಿಯೋ ಚಿತ್ರೀಕರಣ ಸಹಿತದ 5 ಆ್ಯಂಟಿ ಡಿಫೇಸ್‌ಮೆಂಟ್ ಸ್ಕಾ Ìಡ್‌ಗಳು, ಜಿಲ್ಲಾಮಟ್ಟದಲ್ಲಿ ಒಂದು ಸ್ಕ್ವಾಡ್ ರಚನೆಯಾಗಿದೆ.
ಸ್ಕಾÌಡ್ ಗಳ ಚಟುವಟಿಕೆ ಏಕೀಕರಣಗೊಳಿಸುವ ನಿಟ್ಟಿನಲ್ಲಿ, ನಿರೀಕ್ಷಿ ಸುವ ನಿಟ್ಟಿನಲ್ಲಿ, ಆದೇಶ ನೀಡುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧಿಕಾರಿಯೋರ್ವರನ್ನು ನೇಮಿಸಲಾಗಿದೆ. ಚುನಾವಣೆ ನೀತಿಸಂಹಿತೆ ಸಂಬಂಧ ಚಟುವಟಿಕೆಗಳ ಒಟ್ಟು ಹೊಣೆ ಹೆಚ್ಚುವರಿ ದಂಡನಾಧಿಕಾರಿ ಅವರಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಂದೂಕು ಠಾಣೆಗೆ ಹಾಜರುಪಡಿಸಲು ಆದೇಶ
ಲೋಕಸಭೆ ಚುನಾವಣೆ ಘೋಷಿಸಿರುವ ಹಿನ್ನೆಲೆಯಲ್ಲಿ ಪರವಾನಗಿ ಹೊಂದಿರುವ ಬಂದೂಕು ಇರಿಸಿಕೊಂಡಿರುವವರು ಮಾ.15ರ ಮುಂಚಿತವಾಗಿ ಸಮೀಪದ ಪೊಲೀಸ್ ಠಾಣೆಗೆ ಆಯುಧ ಹಾಜರುಪಡಿಸಿ, ರಶೀದಿ ಪಡೆದು, ಜಿಲ್ಲಾಧಿಕಾರಿ ಕಚೇರಿಯ “ಡಿ’ ವಿಭಾಗಕ್ಕೆ ಸಲ್ಲಿಸಬೇಕು. ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಮುಂಗಡ ಸೂಚನೆಗಳಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.