ಅಷ್ಟಬಂಧ ದೇವರಿಗೆ, ಭಕ್ತಿಬಂಧ ಮನುಷ್ಯರಿಗೆ : ಪೇಜಾವರ ಶ್ರೀ
Team Udayavani, Mar 13, 2019, 1:00 AM IST
ಕಾಸರಗೋಡು: ದೇವರು ಸರ್ವಾಂತರ್ಯಾಮಿ. ಗಾಳಿ ಎಲ್ಲೆಡೆ ಇದ್ದರೂ ಬೀಸಣಿಕೆ ಬೀಸಿದಾಗ ಗಾಳಿಯ ಅನುಭವ ವಾಗುವಂತೆ, ದೇವರನ್ನು ವಿಶೇಷವಾಗಿ ಪೂಜಿಸಿದಾಗ ಹೊಸ ಚೈತನ್ಯದ ಅನುಭವವಾಗುವುದು. ಅಷ್ಟಬಂಧ ದೇವರಿಗೆ, ಭಕ್ತಿಬಂಧ ಮನುಷ್ಯರಿಗೆ. ಭಕ್ತರಲ್ಲಿ ಭಕ್ತಿ ಮತ್ತಷ್ಟು ಉದ್ದೀಪನವಾಗಬೇಕು. ಭಕ್ತಿಯ ವೃದ್ಧಿಯೇ ಬ್ರಹ್ಮಕಲಶೋತ್ಸವದ ಉದ್ದೇಶವಾಗಿರಬೇಕು ಎಂದು ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಹೇಳಿದರು.
ಕಾಸರಗೋಡು ನಗರದ ಇತಿಹಾಸ ಪ್ರಸಿದ್ಧವಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿ ಆಶೀರ್ವಚನವಿತ್ತರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದರು. ಕೇರಳ ಕ್ಷೇತ್ರ ಸಂರಕ್ಷಣ ಸಮಿತಿ ರಾಜ್ಯ ಅಧ್ಯಕ್ಷ ಕೃಷ್ಣವರ್ಮ ರಾಜ ಅವರು “ಭಕ್ತಿ ಚತುರ್ಯುಗಗಳಲ್ಲಿ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಉಡುಪಿಯ ಪ್ರಸಾದ್ ನೇತ್ರಾಲಯದ ನಿರ್ದೇಶಕ ರಘುರಾಮ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಜಗದೀಶ್ ಕಾಮತ್, ಡಾ| ಸುರೇಶ್ ಮಲ್ಯ ಕಾಸರಗೋಡು, ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಭಾಸ್ಕರನ್, ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನ ಮಂದಿರ ಅಧ್ಯಕ್ಷ ಶ್ರೀಧರ, ವಿಶ್ವ ಹಿಂದೂ ಪರಿಷದ್ ಕಾಸರಗೋಡು ಮುಖಂಡ ಎ.ಟಿ.ನಾೖಕ್, ಕಾಸರಗೋಡು ನಗರಸಭಾ ಸದಸ್ಯರಾದ ಜಯಪ್ರಕಾಶ್, ದಿನೇಶ್, ಅಣಂಗೂರು ಶ್ರೀ ಶಾರದಾ ಭಜನಾ ಮಂದಿರ ಅಧ್ಯಕ್ಷ ಸೂರಜ್ ಶೆಟ್ಟಿ, ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಅಧ್ಯಕ್ಷ ಬಾಲಕೃಷ್ಣ ಚೆನ್ನಿಕರೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಅನಂತ ಕಾಮತ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಿ.ವಿ. ಪೊದುವಾಳ್ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ಬಾಲಕೃಷ್ಣ ನೆಲ್ಲಿಕುಂಜೆ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ವಂದಿಸಿದರು. ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ಬ್ರಿಜೇಶ್ ತಾಳಿಪಡು³ ಕಾರ್ಯಕ್ರಮ ನಿರೂಪಿಸಿದರು.
ಪೂರ್ಣಕುಂಭ ಸ್ವಾಗತ
ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಚಿತ್ತೆ$çಸಿದ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.
ಸಂಹಾಚಿರ ತತ್ವ ಕಲಶ ಪೂಜೆ
ಮಾ. 12ರಂದು ಬೆಳಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ಶಯ್ನಾ ಪೂಜೆ, ಸಂಹಾಚಿರ ತತ್ವ ಕಲಶ ಪೂಜೆ, ಸಂಹಾರ ತತ್ವಹೋಮ, ಸಂಹಾರ ತತ್ವ ಕಲಶಾಭಿಷೇಕ, ಜೀವ ಕಲಶ ಪೂಜೆ ಜೀವೋಧ್ವಾಸನೆ, ಜೀವ ಕಲಶ ಶಯ್ನಾಗಮನ, ಶಯನ, ವಿವಿಧ ಭಜನಾ ತಂಡಗಳಿಂದ ಭಜನೆ, ಸುಗಮ ಸಂಗೀತ ಹಾಗೂ ಭಕ್ತಿಗೀತೆ, ಮಧ್ಯಾಹ್ನ ಭಕ್ತಿಗಾನ ಸುಧಾ, ಸಂಜೆ ಧಾರ್ಮಿಕ ಸಭೆ, ರಾತ್ರಿ ಧ್ಯಾನಾಧಿವಾಸ, ಅಧಿವಾಸ ಹೋಮ, ಕುಂಭೇಶ ಕರ್ಕರಿ ಕಲಶ ಪೂಜೆ, ಮಂಡಲ ಪೂಜೆ, ಪ್ರಾಸಾದ ಶುದ್ಧಿ, ವಾಸ್ತು ಬಲಿ, ಪ್ರಾಸಾದ ಅಧಿವಾಸ, ಭಕ್ತಿ ಸಂಗೀತ ಸೌರಭ ನಡೆಯಿತು.
ಇಂದಿನ ಕಾರ್ಯಕ್ರಮ : ಬೆಳಗ್ಗೆ 5 ರಿಂದ ಗಣಪತಿ ಹೋಮ, ಅಧಿವಾಸ ಉದ್ಘಾಟನೆ, 7.10 ಕ್ಕೆ ಮೀನ ಲಗ್ನ ರೋಹಿಣಿ ನಕ್ಷತ್ರ ಶುಭ ಮುಹೂರ್ತದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಪುನ:ಪ್ರತಿಷ್ಠೆ, ಜೀವಕಲಶಾಭಿಷೇಕ, ಅಷ್ಟಬಂಧ ಲೇಪನ, ಶ್ರೀ ಗಣಪತಿ, ಶ್ರೀ ಶಾಸ್ತಾವು ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಬಲಿ, 8 ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ, 11.30 ಕ್ಕೆ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 5.30ರಿಂದ ಧಾರ್ಮಿಕ ಸಭೆ, ರಾತ್ರಿ 8.30ರಿಂದ ಯಕ್ಷಗಾನ ಬಯಲಾಟ ಜರಗಲಿದೆ.
ಪರರ ಸೇವೆಯೇ ತಪ
ಮಾನವರ ಕಷ್ಟ ಕೋಟಲೆಗಳನ್ನು ದೂರೀಕರಿಸುವ ಪ್ರಯತ್ನವೇ ದೇವರ ಪೂಜೆಯಾಗಬೇಕು. ಕಾರ್ಕೋಟಕ ವಿಷವನ್ನು ಕುಡಿದ ಶಿವನು ನೀಡಿದ ಸಂದೇಶವೇ ಇದು. ನಮ್ಮ ಸುಖಕ್ಕಾಗಿ ನಾವು ಪ್ರಯತ್ನಿಸಿದರೆ ಇದು ತಾಪ. ಅರ್ಥಾತ್ ತಾಪತ್ರಯ. ಆದರೆ ನಾನಾ ಜನರ ಸುಖಕ್ಕಾಗಿ ಪ್ರಯತ್ನಿಸಿದರೆ ಅದುವೇ ತಪ. ಅರ್ಥಾತ್ ತಪಸ್ಸು. ದೀನದಲಿತರ ಸೇವೆಯೇ ಮಾಧವ ಸೇವೆಯಾಗಲಿ. ಉತ್ತರೋತ್ತರ ಅಭಿವೃದ್ಧಿಯಾಗಲಿ.
-ಪೇಜಾವರ ಶ್ರೀ ಉಡುಪಿ ಪೇಜಾವರ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.