ಭಿಂದ್ರನ್‌ವಾಲೆ ಸಹವರ್ತಿ, ಖಾಲಿಸ್ಥಾನ್ ಉಗ್ರ ದಿಲ್ಲಿಯಲ್ಲಿ ಅರೆಸ್ಟ್
Team Udayavani, Mar 13, 2019, 10:31 AM IST
ಹೊಸದಿಲ್ಲಿ : 1984ರಲ್ಲಿ ಭಾರತೀಯ ಸೇನೆ ಪಂಜಾಬ್ ನ ಅಮೃತಸರದ ಸ್ವರ್ಣ ಮಂದಿರದ ಮೇಲೆ ನಡೆಸಿದ್ದ ಆಪರೇಶನ್ ಬ್ಲೂ ಸ್ಟಾರ್ ನಲ್ಲಿ ಹತನಾಗಿದ್ದ ಉಗ್ರ ಜರ್ನೇಲ್ ಸಿಂಗ್ ಭಿಂದ್ರನ್‌ವಾಲೆಯ ಸಹವರ್ತಿ ಮತ್ತು ನಿಷೇಧಿತ ಖಾಲಿಸ್ಥಾನ್ ಉಗ್ರ ಸಂಘಟನೆಯ ಓರ್ವ ಸದಸ್ಯ, ಗುರುಸೇವಕ್ ಸಿಂಗ್ (53) ಎಂಬಾತನನ್ನು ದಿಲ್ಲಿ ಪೊಲೀಸರು ಇಂದು ಬುಧವಾರ ಬಂಧಿಸಿದರು.
ಗುರುಸೇವಕ್ ಸಿಂಗ್ ನಿಷೇಧಿತ ಖಾಲಿಸ್ಥಾನ್ ಕಮಾಂಡೋ ಪಡೆ (ಕೆಸಿಎಫ್) ಓರ್ವ ಸದಸ್ಯ. ಈತನು ಪ್ರಕೃತ ಪಾಕಿಸ್ಥಾನದಲ್ಲಿರುವ ಕೆಸಿಎಫ್ ಮುಖ್ಯಸ್ಥ ಪರಮ್ ಜಿತ್ ಸಿಂಗ್ ಪಂಜವಾಡ್ ನ ನಿರ್ದೇಶನದ ಪ್ರಕಾರ ಭಾರತದಲ್ಲಿ ತನ್ನ ಸಂಘಟನೆಯನ್ನು ಪುನಾರಚಿಸುವ ಯೋಜನೆ ಹೊಂದಿದ್ದ.
ಗುರುಸೇವಕ್ ಸಿಂಗ್ ತನ್ನ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನನ್ನು ಭೇಟಿಯಾಗಲು ಕಳೆದ ಮಾರ್ಚ್ 12ರಂದು ದಿಲ್ಲಿಗೆ ಬಂದಿದ್ದಾಗ ಆತನನ್ನು ಐಎಸ್‌ಬಿಟಿ ದಿಲ್ಲಿಯ ಕ್ರೈಮ್ ಬ್ರಾಂಚ್ ಅಧಿಕಾರಿಗಳು ಬಂಧಿಸಿದ್ದರು. ಈತನ ತಿಹಾರ್ ಸೇರಿದಂತೆ ಭಾರತದ ವಿವಿಧ ಜೈಲುಗಳಲ್ಲಿರುವ ಖಾಲಿಸ್ಥಾನ ಉಗ್ರ ಸಂಘಟನೆಯ ಜಗತಾರ್ ಸಿಂಗ್ ಹವಾರಾ ಮತ್ತು ಇತರ ಉಗ್ರರೊಡನೆ ಸಂಪರ್ಕ ದಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.