ಮಸೂದ್ ಜಾಗತಿಕ ಉಗ್ರ: ವಿಶ್ವಸಂಸ್ಥೆ ಠರಾವಿಗೆ ಚೀನ ಮತ್ತೆ ಅಡ್ಡಗಾಲು ?
Team Udayavani, Mar 13, 2019, 10:50 AM IST
ಬೀಜಿಂಗ್ : ಪಾಕಿಸ್ಥಾನದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸುವುದಕ್ಕೆ ಚೀನ ಪುನಃ ತಾನು ಅಡ್ಡಗಾಲು ಹಾಕುವ ಸುಳಿವನ್ನು ನೀಡಿದೆ.
ಮಸೂದ್ ಅಜರ್ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೈಗೆತ್ತಿಕೊಳ್ಳುವ ಕೆಲವೇ ತಾಸುಗಳ ಮುನ್ನ ಬೀಜಿಂಗ್ ಇಂತಹ ಒಂದು ನಡೆಯನ್ನು ತಾನು ಬೆಂಬಲಿಸುವ ಸಾಧ್ಯತೆಗಳು ತೀರ ಕಡಿಮೆ ಎಂದು ಹೇಳಿದೆ.
ಮೂಸದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ನಿಟ್ಟಿನಲ್ಲಿ ಎಲ್ಲರಿಗೂ ಸ್ವೀಕಾರಾರ್ಹವಾಗುವ ಪರಿಹಾರದಿಂದ ಮಾತ್ರವೇ ಈ ಸಮಸ್ಯೆ ನಿವಾರಣೆಯಾಗಲು ಸಾಧ್ಯ ಎಂದು ಚೀನ ಹೇಳಿದೆ.
ಮಸೂದ್ ಅಜರ್ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವಕ್ಕೆ ಆಕ್ಷೇಪ ಎತ್ತುವ ಗಡುವು ಮುಗಿಯಲು ಇನ್ನು 24 ತಾಸಿಗಿಂತಲೂ ಕಡಿಮೆ ಅವಧಿ ಇರುವುದರಿಂದ ಮಸೂದ್ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಯುಎನ್ಎಸ್ಸಿ ಠರಾವಿನ ಗತಿ ಏನಾಗುವುದೆಂದು ಬೇಗನೆ ಸ್ಪಷ್ಟವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.