ದೇವೇಗೌಡರ ಇಡೀ ಕುಟುಂಬದ ಸಾಮೂಹಿಕ ಅಳು
Team Udayavani, Mar 14, 2019, 12:30 AM IST
ಹೊಳೆನರಸೀಪುರ: ಮಾಜಿ ಪ್ರಧಾನಿ ದೇವೇಗೌಡರ ಇಡೀ ಕುಟುಂಬ ಒಂದೇ ವೇದಿಕೆಯಲ್ಲಿ ಸಾಮೂಹಿಕವಾಗಿ ಗಳಗಳನೆ ಅತ್ತ ಘಟನೆ ಬುಧವಾರ ನಡೆದಿದೆ. ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪೆ ಗ್ರಾಮದ ಜನ ದೇವೇಗೌಡರ ಕುಟುಂಬದ ಅಳುವಿಗೆ ಸಾಕ್ಷಿಯಾದರು. ಐದು ಬಾರಿ ತಾವು ಪ್ರತಿನಿಧಿಸಿದ್ದ ಹಾಸನ ಲೋಕಸಭಾ ಕ್ಷೇತ್ರವನ್ನು ಈ ಬಾರಿ ತಮ್ಮ ಮೊಮ್ಮಗ ಪ್ರಜ್ವಲ್ರಿಗೆ ಬಿಟ್ಟುಕೊಡುವ ವಿಚಾರವನ್ನು ಸಾರ್ವಜನಿಕರೆದುರು ಬಹಿರಂಗಪಡಿಸುತ್ತಿರುವಂತೆಯೇ, ಗೌಡರಿಗೆ ಅಳು ನಿಯಂತ್ರಿಸಿಕೊಳ್ಳಲಾಗಲಿಲ್ಲ. “”ಇಷ್ಟು ದಿನ ನಾನು ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದೆ. ಈಗ ಮೊಮ್ಮಗನಿಗೆ ಕ್ಷೇತ್ರ ಬಿಟ್ಟುಕೊಡುತ್ತಿದ್ದೇನೆ” ಎಂದು ಹೇಳುತ್ತಲೇ ಭಾವುಕರಾಗಿ ಕಣ್ಣೀರುಗರೆದರು.
“ತಾತ’ ಅಳುವನ್ನು ನೋಡುತ್ತಲೇ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಸೂರಜ್ ಗದ್ಗದಿತರಾಗಿ ಕಣ್ಣೀರುಗರೆದರು. ಜತೆಜತೆಯಲ್ಲೇ ಭವಾನಿ ರೇವಣ್ಣ ಮತ್ತು ಎಚ್. ಡಿ.ರೇವಣ್ಣ ಕೂಡ ಬಹಿರಂಗವಾಗಿ ಕಣ್ಣೀರು ಹಾಕಿದರು. ಇಷ್ಟಕ್ಕೇ ನಿಲ್ಲಲಿಲ್ಲ, ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಕೂಡ ಗಳಗಳನೇ ಅತ್ತರು. ಈ ಅಳು ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಬಿಜೆಪಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ, “”ಪುಲ್ವಾಮ ಘಟನೆಗೆ ಅಳದ
ಗೌಡರ ಕುಟುಂಬ ಈಗ ಅಳುತ್ತಿದೆ’ ಎಂದು ಕಟಕಿಯಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.