ಮತ್ತೂಮ್ಮೆ ನಮ್ಮದೇ ಸರ್ಕಾರ ಬರಲಿದೆ 


Team Udayavani, Mar 14, 2019, 12:30 AM IST

amit-shah-800-b.jpg

ಮೈತ್ರಿ ರಚನೆಗಳು ಮತಗಳಾಗಿ ಬದಲಾಗುತ್ತವೆ ಎಂದರೆ, ಯಾವ ಮೈತ್ರಿಯೂ ಎಂದಿಗೂ ಸೋಲಬಾರದಲ್ಲವೇ? 
ಈ ಪಕ್ಷಗಳು ಹೆದರಿವೆ ಎನ್ನುವುದನ್ನು ಈ ಮೈತ್ರಿಯು ಸಾರುತ್ತಿದೆ. ಇಲ್ಲದಿದ್ದರೆ, ಒಬ್ಬರನ್ನು  ಕಂಡರೆ ಒಬ್ಬರಿಗಾಗದವರಿಗೆ ಈಗ ಏಕಾಏಕಿ ಪರಸ್ಪರರಲ್ಲಿ ಸದ್ಗುಣಗಳು ಹೇಗೆ ಕಾಣಿಸಿಕೊಂಡವಂತೆ? 

ಸರ್ಕಾರದ ಅವಧಿ ಪೂರ್ಣಗೊಳ್ಳುತ್ತಿದೆ. ನಿಮ್ಮ ಅವಲೋಕನ ಹೇಗಿದೆ? 
               ಚುನಾವಣೆ ಘೋಷಣೆಯಾದ ನಂತರ ಇದು ನನ್ನ ಮೊದಲನೆಯ ಸಂದರ್ಶನ. ಬಿಜೆಪಿ ಪಾಲಿಗೆ ಚುನಾವಣೆ ಎನ್ನುವುದು “ಪ್ರಜಾಪ್ರಭುತ್ವದ ಬೃಹತ್‌ ಹಬ್ಬ’. ನಮ್ಮ ಸಿದ್ಧಾಂತ ಮತ್ತು ಸರ್ಕಾರ ಮಾಡಿದ ಕೆಲಸಗಳನ್ನು ಜನರ ಬಳಿ ತೆಗೆದುಕೊಂಡು ಹೋಗುವ ಅವಕಾಶವಿದು. ದೇಶವಾಸಿಗಳು-ತಮ್ಮ ಗಮನವನ್ನು ಬೇರೆಡೆ ಸೆಳೆಯುವವರು ಮತ್ತು ಗೊಂದಲ ಹುಟ್ಟಿಸುವವರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಮತ್ತು  ಎನ್‌ಡಿಎ ಮೈತ್ರಿಕೂಟ ಮತ್ತೂಮ್ಮೆ, ಈಗಿನದ್ದಕ್ಕಿಂತಲೂ ಹೆಚ್ಚು ಜನಾದೇಶದೊಂದಿಗೆ ಅಧಿಕಾರಕ್ಕೆ ಹಿಂದಿರುಗಲಿದೆ.  

ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ, ಕೃಷಿ ಸಂಕಷ್ಟ ಹೆಚ್ಚುತ್ತಿದೆಎಂದು ಪ್ರತಿಪಕ್ಷಗಳು ಹೇಳುತ್ತಿವೆ.
              ಪ್ರತಿಪಕ್ಷಗಳು, 2014ಕ್ಕೂ ಮುನ್ನ ದೇಶದಲ್ಲಿ ಎಷ್ಟು ಕುಟುಂಬಗಳ ಬಳಿ ಬ್ಯಾಂಕ್‌ ಖಾತೆಗಳಿದ್ದವೋ ಹೇಳಲಿ ನೋಡೋಣ. ಇಂದು 30 ಕೋಟಿ ಬ್ಯಾಂಕ್‌ ಖಾತೆಗಳಿವೆ. 6 ಕೋಟಿ ಬಡವರಿಗೆ ಅಡುಗೆ ಅನಿಲ ಸಂಪರ್ಕವಿದೆ. ಈಗ ಗ್ಯಾಸ್‌ ಸಿಲಿಂಡರ್‌ ಸಂಖ್ಯೆ 13 ಕೋಟಿಗೆ ಏರಿದೆ. ಆಗ 10 ಕೋಟಿ ಮನೆಗಳಿಗೆ ಶೌಚಾಲಯಗಳಿರಲಿಲ್ಲ. ಈಗ ಅಜಮಾಸು 8 ಕೋಟಿ ಮನೆಗಳಿಗೆ ಶೌಚಾಲಯ ಪೂರೈಸಿದ್ದೇವೆ. ಆಗ ಸುಮಾರು 2.3 ಕೋಟಿ ಜನರಿಗೆ ವಿದ್ಯುತ್‌ ಸಂಪರ್ಕವಿರಲಿಲ್ಲ. ಈಗ ಆಲ್ಮೋಸ್ಟ್‌ ಎಲ್ಲರಿಗೂ ವಿದ್ಯುತ್‌ ಸಂಪರ್ಕವಿದೆ.  ವಾರ್ಷಿಕ 5 ಲಕ್ಷ ರೂಪಾಯಿಯ ಆರೋಗ್ಯ ವಿಮಾ ಯೋಜನೆ ತಂದಿದ್ದೇವೆ. ಕೇವಲ ನಾಲ್ಕು ತಿಂಗಳಲ್ಲೇ 15 ಲಕ್ಷ ಜನ ಇದರ ಲಾಭ ಪಡೆದಿದ್ದಾರೆ. ಪ್ರತಿಪಕ್ಷಗಳು ಸುತ್ತೂಬಳಸಿ ಮಾತನಾಡುವ ಬದಲು ಈ ಸತ್ಯಾಂಶಗಳ ಬಗ್ಗೆ ಮಾತನಾಡಬೇಕು. ಭಾರತವನ್ನು 55 ವರ್ಷ ಆಳಿದವರಿಂದ ಈ ಕೆಲಸ ಏಕಾಗಲಿಲ್ಲ? ಇವೆಲ್ಲ ಕೇವಲ 55 ತಿಂಗಳಲ್ಲೇ ಹೇಗೆ ಸಾಧ್ಯವಾದವು ಎಂದು ಪ್ರತಿಪಕ್ಷಗಳು ಪ್ರಶ್ನಿಸಿಕೊಳ್ಳಲಿ. ಮೋದೀಜಿ ಮತ್ತು ಬಿಜೆಪಿಯು ಬಾಯಾ¾ತಿನ ಭರವಸೆ ನೀಡುವುದಿಲ್ಲ. ನಮ್ಮದು ಬರೀ ಘೋಷಣೆಗಳಲ್ಲ. 50 ಕೋಟಿ ಭಾರತೀಯರ ಬದುಕಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತಂದಿದ್ದೇವೆ. ಇನ್ನು ಉದ್ಯೋಗಗಳ ವಿಷಯಕ್ಕೆ ಬಂದರೆ, ಇಲ್ಲಿಯವರೆಗೂ ಉದ್ಯೋಗದ ನಿಖರ  ಮಾಪನ ಮಾಡುವಂಥ ಯಾವ ಸಾಂಖೀಕ ವ್ಯವಸ್ಥೆಯೂ ಅಸ್ತಿತ್ವಕ್ಕೆ ಬಂದಿಲ್ಲ. 

ದೇಶದಲ್ಲಿ ಹಿಂದಿಗಿಂತಲೂ ದ್ವಿಗುಣ ವೇಗದಲ್ಲಿ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ, 2.25 ಪಟ್ಟು ಅಧಿಕ ವೇಗದಲ್ಲಿ ರೈಲ್ವೆ(ಹಳಿ) ವಿಸ್ತರಿಸುತ್ತಿದೆ. ವಿದ್ಯುತ್‌ ಗ್ರಿಡ್‌ 2 ಲಕ್ಷ ಕಿ.ಮಿ.ಗೆ ವಿಸ್ತರಿಸಿದೆ. 8 ಕೋಟಿ ಶೌಚಾಲಯಗಳನ್ನು ಮತ್ತು 2.5 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ನೀರಾವರಿ ಸಾಮರ್ಥ್ಯ ವೃದ್ಧಿಸಿದೆ, 13 ಕೋಟಿ ಜನರಿಗೆ ಮುದ್ರಾ ಸಾಲ ದೊರೆತಿದೆ. ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ನಮ್ಮ ಸರ್ಕಾರದಷ್ಟು ಮತ್ಯಾವ ಸರ್ಕಾರವೂ ಈ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ . ಈ ಬಗ್ಗೆ ದೇಶದ ಯಾವುದೇ ಚೌಕದಲ್ಲೂ ನಿಂತು ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. 

ಹಾಗಿದ್ದರೆ ನಿಮ್ಮ ಚುನಾವಣಾ ಪ್ರಚಾರದ ವಿಷಯ “55 ತಿಂಗಳು ವರ್ಸಸ್‌ 55 ವರ್ಷ’ ಎಂದು ಇರಲಿದೆಯೇ? 
              ಇದು ಕೇವಲ ಪ್ರಚಾರ ವಿಷಯವಷ್ಟೇ ಅಲ್ಲ. ಅಲ್ಲದೇ, ಚುನಾವಣೆಗಳು ಕೇವಲ ಘೋಷಣೆಗಳ ಮೇಲಷ್ಟೇ ನಡೆಯುವುದಿಲ್ಲ. ನೈಜ ಸಮಸ್ಯೆಗಳ ಮೇಲೆ  ನಾವು ಚುನಾವಣೆಯನ್ನು ಎದುರಿಸಬೇಕು. 60ರ ದಶಕದಿಂದ 2014ರವರೆಗೂ ಚುನಾವಣೆಗಳನ್ನು ಕೇವಲ ಜಾತಿವಾದ, ಸ್ವಜನಪಕ್ಷಪಾತ, ಓಲೈಕೆ ರಾಜಕಾರಣವೇ ಆಳಿದವು. ಈಗ ನಮ್ಮ ಪ್ರಜಾಪ್ರಭುತ್ವ ಪ್ರಬುದ್ಧವಾಗಿದೆ ಮತ್ತು ಜನರು “ಕಾರ್ಯಕ್ಷಮತೆಯ ರಾಜಕೀಯ’ವನ್ನು ಒಪ್ಪಿಕೊಳ್ಳುತ್ತಿದ್ದಾರೆ.  

ಓಲೈಕೆ ರಾಜಕಾರಣದ ಬಗ್ಗೆ ಮಾತನಾಡಿದಿರಿ. ಆದರೆ ನಿಮ್ಮ ಪಕ್ಷ ವಿಭಜನಕಾರಿ , ಧ್ರುವೀಕರಣ ರಾಜಕೀಯ ಮಾಡುತ್ತಿದೆ ಎನ್ನುತ್ತಿವೆ ಪ್ರತಿಪಕ್ಷಗಳು…
               ಹಜ್‌ ಯಾತ್ರೆಗೆ ಸಬ್ಸಿಡಿ ಕೊಡುವುದು ಧ್ರುವೀಕರಣವೋ ಅಥವಾ ಸಬ್ಸಿಡಿ ತೆಗೆದುಹಾಕಿ ಎಲ್ಲರಿಗೂ ಸಮಾನತೆ ತರುವುದು ಧ್ರುವೀಕರಣವೋ? ಮುಸ್ಲಿಂ ಮತ ಬ್ಯಾಂಕ್‌ಗಾಗಿ ಆ ಸಮುದಾಯದ ಹೆಣ್ಣುಮಕ್ಕಳು ತ್ರಿವಳಿ ತಲಾಖ್‌ನ  ಪೀಡೆಯನ್ನು ಎದುರಿಸುವಂತೆ ಮಾಡುವುದು ಧ್ರುವೀಕರಣವೋ ಅಥವಾ ಮುಸ್ಲಿಂ ಹೆಣ್ಣುಮಕ್ಕಳಿಗೂ ದೇಶದ ಇತರೆ ಹೆಣ್ಣು ಮಕ್ಕಳಂತೆಯೇ ಹಕ್ಕುಗಳು ಸಿಗುವಂತೆ ನೋಡಿಕೊಳ್ಳುವುದು ಧ್ರುವೀಕರಣವೋ?  ಧ್ರುವೀಕರಣ ಪದದ ವ್ಯಾಖ್ಯಾನವನ್ನು ಮೊದಲು ನಾವು ನಿರ್ಧರಿಸಬೇಕಿದೆ. ಎಲ್ಲರಿಗೂ ಸಮಾನ ಹಕ್ಕು ಒದಗಿಸಲು ಪ್ರಯತ್ನಿಸಿದಾಗ ಅದ್ಹೇಗೆ ಧ್ರುವೀಕರಣವಾಗುತ್ತದೆ?   

ಸರ್ಕಾರದ ವೈಫ‌ಲ್ಯಗಳನ್ನು ಮುಚ್ಚಿಕೊಳ್ಳಲು ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಬಳಸಿಕೊಳ್ಳುತ್ತಿದ್ದೀರಿ ಎಂದು ಆರೋಪಿಸಲಾಗುತ್ತಿದೆ..
             ಒಂದು ನಿಮಿಷ ತಡೆಯಿರಿ! ಅಂದರೆ, ಉಗ್ರರ ದಾಳಿ ಯಾವಾಗ ನಡೆಯಬೇಕು ಎಂದು ನಾವು ನಿರ್ಧರಿಸಿದೆವು ಅನ್ನುತ್ತಿದ್ದೀರಾ? ಇಂಥ ದಾಳಿಗಳು ಯಾವಾಗ ನಡೆಯುತ್ತವೆ, ನಡೆಯಬಲ್ಲವು ಎಂದು ನಿರ್ಧರಿಸಲು ಅಥವಾ ಊಹಿಸಲು ದೇಶದಲ್ಲಿ ಯಾರಿಗಾದರೂ ಸಾಧ್ಯವಿದೆಯೇ? ಈ ರೀತಿಯ ದಾಳಿ ನಡೆಸಲು ನಿರ್ಧರಿಸಿದ್ದು ಶತ್ರುಗಳು. ಪುಲ್ವಾಮಾ ದಾಳಿ ನಡೆಸಿದ್ದು ಉಗ್ರರು. ಅದ್ಯಾವಾಗಿನಿಂದ ಉಗ್ರರಿಗೆ ತಕ್ಕ ಎದುರೇಟು ನೀಡುವುದು “ರಾಷ್ಟ್ರೀಯ ಭದ್ರತೆಯ ರಾಜಕೀಕರಣ’ವಾಯಿತು? ನಮ್ಮ ಮೇಲೆ ಇಂಥ ಆರೋಪ ಮಾಡುವವರು, ಇದನ್ನೆಲ್ಲ ಬಿಟ್ಟು ನಮ್ಮ ಸೇನೆಯ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದರೆಂದರೆ, ಈ ವಿಷಯಕ್ಕೆ ರಾಜಕೀಯ ಬಣ್ಣವೇ ಹತ್ತುತ್ತಿರಲಿಲ್ಲ. ಇವರೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. 

ನಿಮ್ಮ ವಿರುದ್ಧವಿರುವ ಆರೋಪವೆಂದರೆ, ಪುರಾವೆ ಇಲ್ಲದೇ ನೀವು ಬಾಲಕೋಟ್‌ ದಾಳಿಯಲ್ಲಿ 250 ಉಗ್ರರು ಸತ್ತರು ಎಂದು ಹೇಳಿದಿರಿ ಎನ್ನುವುದು…
              ನಾನು ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಈ ಮಾತನ್ನು ಹೇಳಿದ್ದೇನೆ. ನಿಮಗೆ ಅನೇಕ ಮೂಲಗಳಿಂದ ಈ ಮಾಹಿತಿ ದೊರಕುತ್ತದೆ. ಅನೇಕ ಸ್ತರಗಳಲ್ಲಿ ಈ ಕುರಿತು ಚರ್ಚೆಗಳೂ ನಡೆಯುತ್ತಿವೆ. ಪಾಕಿಸ್ತಾನಿ ಸಂಸತ್ತು, ಅದರ ಮಾಧ್ಯಮಗಳ ಪ್ರತಿಕ್ರಿಯೆ ಕೂಡ ಇದಕ್ಕೆ ಪುಷ್ಟಿ ನೀಡುತ್ತವೆ. ಪಾಕಿಸ್ತಾನಿ ವಾಯುಪಡೆಯು ಗಡಿನಿಯಂತ್ರಣ ರೇಖೆಯಲ್ಲಿ ಭಾರೀ ಪ್ರಮಾಣದಲ್ಲಿ ಸುತ್ತಾಟ ನಡೆಸಿದ್ದೆಲ್ಲ, ಬಾಲಕೋಟ್‌ನಲ್ಲಿ ಭಾರೀ ಹಾನಿಯಾಗಿದೆ ಎನ್ನುವುದನ್ನು ಸಾಬೀತುಪಡಿಸುತ್ತದೆ. ಇಲ್ಲದಿದ್ದರೆ ಅವರೇಕೆ 20 ವಿಮಾನಗಳನ್ನು ಕಳಿಸುತ್ತಿದ್ದರು? ಹಾನಿಯ ಬಗ್ಗೆ  ಪಾಕ್‌ನ ಉಗ್ರಸಂಘಟನೆಗಳೇ ಮಾತನಾಡುತ್ತಿವೆ. ಪುರಾವೆ ಬೇಕಿರುವುದು ನಮ್ಮ ಪ್ರತಿಪಕ್ಷಗಳಿಗೆ ಮಾತ್ರ.  

ಇಂದು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಹುದೊಡ್ಡ ಸವಾಲು ಎದುರಾಗಿದೆ. ನೀವು ಮೂರು ಪ್ರಮುಖ ಎದುರಾಳಿಗಳನ್ನು ಎದುರಿಸುತ್ತಿದ್ದೀರಿ. 
                ಮೂರಲ್ಲ, ಎರಡು! ಒಂದು ಪಕ್ಷಕ್ಕೆ ಲೋಕಸಭೆಯಲ್ಲಿ ಶೂನ್ಯ ಸ್ಥಾನಗಳಿದ್ದರೆ, ಇನ್ನೊಂದಕ್ಕೆ 5 ಸ್ಥಾನಗಳಿವೆ. ಮೂರನೇ ಪಕ್ಷಕ್ಕೂ ಸೊನ್ನೆ ಸ್ಥಾನಗಳಿವೆ. 2017ರ ವಿಧಾನಸಭಾ ಚುನಾವಣೆಗಳಲ್ಲಿ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್‌ ಜೊತೆಯಾದಾಗ, ಈ ಮೈತ್ರಿಯನ್ನು ಸೋಲಿಸಲು ಸಾಧ್ಯವೇ ಇಲ್ಲ ಎನ್ನಲಾಯಿತು. ಆದರೆ ಸ್ವಾತಂತ್ರಾéನಂತರ ಉತ್ತರಪ್ರದೇಶದಲ್ಲಿ ಯಾವ ಪಕ್ಷಕ್ಕೂ ಸಿಗದಷ್ಟು ಸ್ಥಾನಗಳು ಬಿಜೆಪಿಗೆ ಸಿಕ್ಕವು. ಮೈತ್ರಿ ರಚನೆಗಳು ಮತಗಳಾಗಿ ಬದಲಾಗುತ್ತವೆೆ ಎಂದರೆ, ಯಾವ ಮೈತ್ರಿಯೂ ಎಂದಿಗೂ ಸೋಲಬಾರದಲ್ಲವೇ? ಈ ಪಕ್ಷಗಳು ಹೆದರಿವೆ ಎನ್ನುವುದನ್ನು ಈ ಮೈತ್ರಿಯು ಸಾರುತ್ತಿದೆ. ಇಲ್ಲದಿದ್ದರೆ, ಒಬ್ಬರನ್ನು ಕಂಡರೆ ಒಬ್ಬರಿಗಾಗದವರಿಗೆ ಈಗ ಏಕಾಏಕಿ ಪರಸ್ಪರರಲ್ಲಿ ಸದ್ಗುಣಗಳು ಹೇಗೆ ಕಾಣಿಸಿಕೊಂಡವಂತೆ?  

ಪ್ರಧಾನಿಗಳ ಜನಪ್ರಿಯತೆ ಅಧಿಕವಾಗಿದೆ  ಎನ್ನುತ್ತೀರಿ. ಆದರೆ ಬಿಜೆಪಿ ಇತ್ತೀಚೆಗೆ 3 ರಾಜ್ಯಗಳಲ್ಲಿ ಸೋತಿತು, ಗುಜರಾತ್‌ನಲ್ಲೂ ಗೆಲುವಿನ ಅಂತರ ತಗ್ಗಿತ್ತಲ್ಲವೇ?
              ಈ ರೀತಿ ವಿಶ್ಲೇಷಣೆ ಮಾಡುವುದು ಸರಿಯಲ್ಲ. 2014ರಲ್ಲಿ ನಮ್ಮ  ಪಕ್ಷ ಆರು ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಈಗ ನಮ್ಮವೇ 16 ರಾಜ್ಯ ಸರ್ಕಾರಗಳಿವೆ. ನಮ್ಮ ಪ್ರಾದೇಶಿಕ ವಿಸ್ತರಣೆ 12 ಪ್ರತಿಶತ ದಿಂದ 50 ಪ್ರತಿಶತಕ್ಕೆ ಏರಿದೆ. ಆಗ ನಮ್ಮ ಕಾರ್ಯಕರ್ತರ ಸಂಖ್ಯೆ 2.4 ಕೋಟಿಯಿತ್ತು. ಈಗವರ ಸಂಖ್ಯೆ 11 ಕೋಟಿಗೆ ಏರಿದೆ. ನಮ್ಮ ಕಾರ್ಯಕ್ರಮಗಳು 22 ಕೋಟಿ ಕುಟುಂಬಗಳನ್ನು ತಲು ಪಿವೆ. ಸರ್ಕಾರ ರಚಿಸಲು ನಮಗೆ 17 ಕೋಟಿ ಮತಗಳು ಬೇಕು.  ನಮ್ಮ ಬಳಿ ಈಗ 11 ಕೋಟಿ ಕಾರ್ಯಕರ್ತರು ಮತ್ತು 22 ಕೋಟಿ ಕುಟುಂಬಗಳ ಆಶೀರ್ವಾದವಿದೆ.  ಮೋದಿ ಸರ್ಕಾರದ ವಿರುದ್ಧ ಮಾತನಾಡಲು ಯಾರ ಬಳಿಯೂ ಏನೂ ಇಲ್ಲ. ಆದರೆ ಸರ್ಕಾ ರದ ಸಾಧನೆಯ ಬಗ್ಗೆ ಮಾತನಾಡುತ್ತಾ ಹೋದರೆ ನಮಗೇ ಸುಸ್ತಾಗುತ್ತದೆ. ನಾವು ಕಳಂಕ ರಹಿತ ಆಡಳಿತ ನೀಡಿದ್ದೇವೆ. 

ಆದರೆ ರಫೇಲ್‌ ಒಪ್ಪಂದದಲ್ಲಿ ಸರ್ಕಾರದಿಂದ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆಯಲ್ಲ? 
              ಭ್ರಷ್ಟಾಚಾರದ ಆರೋಪ ಮಾಡಿದಾಕ್ಷಣ ಅದೇನೂ ಸತ್ಯವಾಗಿಬಿಡುವುದಿಲ್ಲ. ಖುದ್ದು ಸಿಎಜಿ ಮತ್ತು ಸುಪ್ರೀಂಕೋರ್ಟ್‌ ಕೂಡ ಕಾಂಗ್ರೆಸ್‌ ವಾದಗಳನ್ನು ಒಪ್ಪುತ್ತಿಲ್ಲ. ಹೀಗಿದ್ದರೂ ಕಾಂಗ್ರೆಸ್‌ ತನ್ನ ಸುಳ್ಳುಗಳನ್ನು ಮುಂದುವರಿಸಿದರೆ ಈ ಆರೋಪವೇ ಅದಕ್ಕೆ ತಿರುಗುಬಾಣವಾಗಲಿದೆ. ಯುಪಿಎ ಆಡಳಿತದಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರದ ವಿಷಯದ ಬಗ್ಗೆ ಜನರು ಮಾತನಾಡದಂತೆ ಅವರ ಗಮನವನ್ನು ಬೇರೆಡೆ ಸೆಳೆಯಲು  ರಫೇಲ್‌ ವಿಚಾರದಲ್ಲಿ “ಹಗರಣದ’ ಕಥೆಯನ್ನು ಹುಟ್ಟುಹಾಕಿದೆ.  

ನೋಟ್‌ಬಂದಿಯಂಥ ಕ್ರಮಗಳಿಂದಾಗಿ ದೇಶದ ಆರ್ಥಿಕತೆಗೆ ಪೆಟ್ಟಾಯಿತು ಎನ್ನಲಾಗುತ್ತದೆ?
            ನಮ್ಮ ದೇಶ ಜಗತ್ತಿನ 6ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದು, ಇನ್ನೇನು ಬ್ರಿಟನ್‌ ಅನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಏರಲಿದೆ. 2013-2014ರಲ್ಲಿ ನಾವು 11ನೇ ಸ್ಥಾನದಲ್ಲಿದ್ದೆವು. ಹಣದುಬ್ಬರ ಅರ್ಧಕ್ಕಿಂತ ಹೆಚ್ಚು ಪ್ರಮಾಣದಲ್ಲಿ ತಗ್ಗಿದೆ. ಹಣಕಾಸಿನ ಕೊರತೆ  ಮೊದಲಿಗಿಂತ ಅರ್ಧಕ್ಕರ್ಧ ಕಡಿಮೆಯಾಗಿದೆ.  2012- 13ರಲ್ಲಿ 5.6  ಪ್ರತಿಶತದಷ್ಟಿದ್ದ ಚಾಲ್ತಿ ಖಾತೆಯ ಕೊರತೆ ಈಗ 2.5 ಪ್ರತಿಶತಕ್ಕೆ ತಲುಪಿದೆ. ನೇರ ತೆರಿಗೆ ಸಂಗ್ರಹ ಪ್ರಮಾಣವು 6.38 ಲಕ್ಷ ಕೋಟಿಯಿಂದ 12 ಲಕ್ಷಕೋಟಿಗೆ ಏರಿದೆ. ಮತ್ತು 64 ಲಕ್ಷ ಕೋಟಿಯಷ್ಟಿದ್ದ ಪರೋಕ್ಷ ತೆರಿಗೆ ಸಂಗ್ರಹಣೆಯು(ಜಿಎಸ್‌ಟಿ ಪೂರ್ವ) ಈಗ 1.2 ಕೋಟಿ ಲಕ್ಷ ತಲುಪಿದೆ. 2013-14 ಮತ್ತು 2017-18ರ ನಡುವೆ ಐಟಿ ರಿಟರ್ನ್ಸ್  ಸಲ್ಲಿಸಿದವರ ಸಂಖ್ಯೆ 3.79 ಕೋಟಿಯಿಂದ  6.86 ಕೋಟಿಗೆ ಏರಿದೆ. ಅಂದರೆ, ಅಜಮಾಸು ದ್ವಿಗುಣಗೊಂಡಿದೆ. ಕಳೆದ ಹಣಕಾಸು ವರ್ಷವೊಂದರಲ್ಲೇ ಐಟಿ ರಿಟರ್ನ್Õನ ಪ್ರಮಾಣ 25 ಪ್ರತಿಶತದಷ್ಟು ಅಧಿಕವಾಗಿದೆ.  2013-14ರಲ್ಲಿ 60 ಸಾವಿರದಷ್ಟಿದ್ದ ಪೇಟೆಂಟ್‌ ಮತ್ತು ಟ್ರೇಡ್‌ಮಾರ್ಕ್‌ಗಳ ನೋಂದಣಿ ಪ್ರಮಾಣ 2017-18ರಲ್ಲಿ 2.5 ಲಕ್ಷ ತಲುಪಿದೆ. ಯಾವುದೇ ಮಾನದಂಡದಿಂದ ನೋಡಿದರೂ “ನವಭಾರತ’ ನಿರ್ಮಾಣಕ್ಕಾಗಿ ನಡೆದಿರುವ ಪ್ರಯತ್ನ ಮತ್ತು ಫ‌ಲಿತಾಂಶಗಳು ನಿಮಗೆ ಗೋಚರಿಸುತ್ತವೆ. 

ಈ ಬಾರಿ ಅನೇಕ ರಾಜ್ಯಗಳಲ್ಲಿ ಬಿಜೆಪಿಯು ಕಾಂಗ್ರೆಸ್‌ಗೆ ಮುಖಾಮುಖೀಯಾಗಲಿದೆ. ಕಳೆದ ಬಾರಿಯೇನೋ ನಿಮಗೇ ಯಶಸ್ಸು ದೊರೆತಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಹಾಗಿದ್ದರೆ ಈಗ ಪರಿಸ್ಥಿತಿ ಭಿನ್ನವಾಗಿಲ್ಲವೇ? 
        ಅವು ವಿಧಾನಸಭಾ ಚುನಾವಣೆಗಳಾಗಿದ್ದವು. ನಮಗೆ ಮಧ್ಯಪ್ರದೇಶದಲ್ಲಿ 47,000ಕ್ಕೂ ಅಧಿಕ ಮತಗಳು ದೊರೆತವು, ರಾಜಸ್ಥಾನದಲ್ಲಿ ಕೇವಲ 0.5 ಪ್ರತಿಶತ ಅಂತರದಿಂದ ಸೋತೆವು. ಆದರೆ ಛತ್ತೀಸ್‌ಗಢದಲ್ಲಿ ನಾವು ಭಾರೀ ಸೋಲು  ಅನುಭವಿಸಬೇಕಾಯಿತು, ಇದು ನಿಜಕ್ಕೂ ಚಿಂತೆಯ ವಿಷಯ. ಸಂಘಟನಾ ದೃಷ್ಟಿಕೋನದಿಂದ ಈ ರಾಜ್ಯಗಳಲ್ಲಿ ಬಿಜೆಪಿ ಬಲಿಷ್ಠವಾಗಿದೆ.  ವಿಧಾನಸಭಾ ಚುನಾವಣೆಗಳಿಗೂ ಲೋಕಸಭಾ ಚುನಾವಣೆಗಳಿಗೂ ವ್ಯತ್ಯಾಸವಿದೆ. ಈ ಬಾರಿಯ ಚುನಾವಣೆಯ ಮುಖ್ಯ ವಿಷಯ ಯಾರು ಪ್ರಧಾನಿಯಾಗುತ್ತಾರೆ ಎನ್ನುವುದೇ ಆಗಿದೆ. ಪ್ರತಿಪಕ್ಷಗಳಲ್ಲಿ ಯಾರಿದ್ದಾರೆ ಅಂಥ ನಾಯಕರು? ಅದಕ್ಕೆ ದಿಕ್ಕುದೆಸೆಯಿಲ್ಲ.
– ಅಮಿತ್‌ ಶಾ, 
ಬಿಜೆಪಿ ರಾಷ್ಟ್ರಾಧ್ಯಕ್ಷ

ಸಂದರ್ಶನ ಕೃಪೆ: ಟೈಮ್ಸ್‌ ಆಫ್ ಇಂಡಿಯಾ

ಟಾಪ್ ನ್ಯೂಸ್

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.