ಮತದಾನ ದಿನ ಆಸುಪಾಸು ದರ ಒಂದೂವರೆ ಪಟ್ಟು ಹೆಚ್ಚಳ

Team Udayavani, Mar 14, 2019, 1:00 AM IST

bus-fare.jpg

ಮಂಗಳೂರು: ಚುನಾವಣೆಗೆ ಇನ್ನೂ ಒಂದು ತಿಂಗಳಿದೆ; ಖಾಸಗಿ ಬಸ್‌ಗಳು ಮತದಾನ ಮತ್ತು ಹಿಂದು-ಮುಂದಿನ ದಿನಗಳ ಮಟ್ಟಿಗೆ ಪ್ರಯಾಣ ದರವನ್ನು ಒಂದೂವರೆ ಪಟ್ಟು ಏರಿಕೆ ಮಾಡುವ ಮೂಲಕ ತಮ್ಮ ಹಳೆಯ ಚಾಳಿಗಿಳಿದಿವೆ. ಮತ ಹಾಕಲು ಊರಿಗೆ ಬರಬೇಕಿದ್ದರೆ ಮತದಾರ ಕಿಸೆ ಕರಗಿಸಲೇ ಬೇಕು. 
ಖಾಸಗಿ ಬಸ್‌ ಮಾಲಕರ ಈ ನಡೆಯನ್ನು ರಾಜ್ಯ ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ದರ ಏರಿಕೆ ಮಾಡಿದ ಬಸ್‌ ಮಾಲಕರಿಗೆ ನೋಟಿಸ್‌ ನೀಡಲು ಚಿಂತನೆ ನಡೆಸಿದೆ. ಅಲ್ಲದೆ, ಹಣ ಸುಲಿಗೆ ಮಾಡುವ ಬಸ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

ಬೆಂಗಳೂರು, ಮೈಸೂರು ಮತ್ತಿತರ ಪ್ರದೇಶದಲ್ಲಿರುವ ಮಂದಿ ಚುನಾವಣೆ ಸಮಯ ಊರುಗಳಿಗೆ ಬರುತ್ತಾರೆ. ಉದ್ಯೋಗಕ್ಕಾಗಿ ಕರಾವಳಿ ಭಾಗಕ್ಕೆ ಬಂದಿರುವ ಉತ್ತರ ಕರ್ನಾಟಕದ ಮಂದಿ ಸ್ವಂತ ಊರುಗಳಿಗೆ ಮರಳುತ್ತಾರೆ. ಅಲ್ಲದೆ, ಈ ಬಾರಿ ಮತದಾನ ದಿನದ ಹಿಂದು-ಮುಂದು ಸಾಲು ರಜಾ ಇರುವುದರಿಂದ ಈಗಾಗಲೇ ಯೋಜನೆಯನ್ನೂ ರೂಪಿಸಿರುತ್ತಾರೆ. ಇದರಿಂದಲೇ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ಕೆಲವು ಖಾಸಗಿ ಬಸ್‌ ಮಾಲಕರು ದರವನ್ನು ಏಕಾಏಕಿ ಏರಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಟೀಕೆ ಕೇಳಿಬರುತ್ತಿದೆ.

ಸರಕಾರಿ ಬಸ್‌ ದರ ಯಥಾಸ್ಥಿತಿ
ಕೆಎಸ್ಸಾರ್ಟಿಸಿ ಅಧಿಕಾರಿಗಳ ಪ್ರಕಾರ, ಬೆಂಗಳೂರಿನಿಂದ ಮಂಗಳೂರು ಸಂಪರ್ಕಿಸುವ ಸರಕಾರಿ ಬಸ್‌ಗಳಲ್ಲಿ ಸದ್ಯ ದರ ಹೆಚ್ಚಳವಾಗಿಲ್ಲ. ಸರಕಾರಿ ಬಸ್‌ಗಳಲ್ಲಿ ವಿಶೇಷ ದಿನಗಳು ಮತ್ತು ಸಾಮಾನ್ಯ ದಿನಗಳ ದರ ಎಂಬ ಎರಡು ದರಪಟ್ಟಿ ಇರುತ್ತದೆ. ಅದರ ಪ್ರಕಾರ ಎಪ್ರಿಲ್‌ ತಿಂಗಳಿನಿಂದ ವಿಶೇಷ ದಿನಗಳ ದರ ಜಾರಿಯಾಗುತ್ತದೆ. ಬಳಿಕ ಟಿಕೆಟ್‌ ಬುಕ್‌ ಮಾಡಿದರೆ ಶೇ.10ರಷ್ಟು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ.

ಮತ್ತಷ್ಟು ಹೆಚ್ಚಳ ಸಾಧ್ಯತೆ
ಚುನಾವಣೆ ದಿನಾಂಕ ಈಗಷ್ಟೇ ನಿಗದಿಯಾಗಿದ್ದು, ಜನರು ಸೀಟ್‌ ಬುಕ್‌ ಮಾಡುತ್ತಿದ್ದಾರೆ. ಸೀಟು ಭರ್ತಿಯಾದಂತೆ ಹೆಚ್ಚಿನ ಬಸ್‌ ಹಾಕುವ ಜತೆಗೆ ದರವೂ ಹೆಚ್ಚಳವಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ 650 ರೂ.ನಿಂದ 700 ರೂ. ಇರುವ ಖಾಸಗಿ ಬಸ್‌ ದರವನ್ನು ಮತದಾನ ದಿನದ ಆಸುಪಾಸು 1,350 ರೂ.ಗೆ ಏರಿಸಲಾಗಿದೆ. 

ಸ್ವೀಪ್‌ ಆಶಯಕ್ಕೆ ವಿರುದ್ಧ
ಜಿಲ್ಲೆಯಲ್ಲಿ ಈ ಬಾರಿ ಶೇ.92ಕ್ಕಿಂತ ಅಧಿಕ ಮತದಾನವಾಗಬೇಕು ಎಂಬ ಗುರಿಯನ್ನು ಜಿಲ್ಲಾ ಸ್ವೀಪ್‌ ಸಮಿತಿ ಹೊಂದಿದೆ. ಮತದಾನ ಜಾಗೃತಿಗೆಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಖಾಸಗಿ ಬಸ್‌ಗಳು ಪ್ರಯಾಣ ದರ ಏರಿಸುವ ಮೂಲಕ ಸಾರಿಗೆ ವೆಚ್ಚದ ಹೊರೆ ಹೆಚ್ಚಾಗುವುದು ಸ್ವೀಪ್‌ ಆಶಯಕ್ಕೆ ವಿರುದ್ಧ ದಿಕ್ಕಿನಲ್ಲಿದೆ. 

ಬಸ್‌ಗಿಂತ ವಿಮಾನ ಯಾನ ಅಗ್ಗ
ಬಸ್‌ಗಿಂತ ವಿಮಾನವೇ ಲೇಸೇನೋ ಎನ್ನುತ್ತಿದ್ದಾರೆ ಕೆಲವು ಪ್ರಯಾಣಿಕರು. ಸದ್ಯ ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಪ್ರಯಾಣಿಸಲು (ಎ.17) 1,952 ರೂ. ದರವಿದೆ. ಆದರೆ ಆ ದಿನಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಸ್‌ ಯಾನ ದರ ಸುಮಾರು 4,500 ರೂ. ಇನ್ನು ಮಂಗಳೂರಿನಿಂದ ಬೆಂಗಳೂರಿಗೆ ಬಸ್‌ ದರ 1,500 ರೂ. ಇದೆ. ಇನ್ನು ಎ.17ಕ್ಕೆ ವಿಮಾನ ಟಿಕೆಟ್‌ ದರ ಅಂದಾಜು 1,829 ರೂ. ವಿಮಾನ ಯಾನದಿಂದ ಸಮಯದ ಉಳಿತಾಯವೂ ಆಗುತ್ತದೆ. ಅಂದರೆ ಸದ್ಯ ಎ.17ರಂದು ಮತದಾನ ಮಾಡಲು ಊರಿಗೆ ಬರುವವರಿಗೆ ಬಸ್‌ ದರಕ್ಕೆೆ ಹೋಲಿಸಿದರೆ ವಿಮಾನ ಪ್ರಯಾಣವೇ ಅಗ್ಗ ಎನ್ನುವ ಪರಿಸ್ಥಿತಿ ಇರುವುದು ಗಮನಾರ್ಹ.

ರಾಜ್ಯ ಸರಕಾರವೇ ದರ ನಿಗದಿ ಮಾಡಲಿ
ಕೆಲವು ಖಾಸಗಿ ಬಸ್‌ಗಳಲ್ಲಿ ಮಾತ್ರ ವಿಶೇಷ ದಿನಗಳಲ್ಲಿ ಹೆಚ್ಚಿನ ದರ ವಿಧಿಸಲಾಗುತ್ತಿದೆ. ಒಪ್ಪಂದದ ಮೇರೆಗೆ ಓಡಾಡುವ ಖಾಸಗಿ ಬಸ್‌ಗಳಲ್ಲಿ ನಿರ್ದಿಷ್ಟ ದರ ವಿಧಿಸಲು ರಾಜ್ಯ ಸರಕಾರ ಮುಂದಾಗಬೇಕು. 
– ಸದಾನಂದ ಚಾತ್ರ ಕೆನರ ಖಾಸಗಿ ಬಸ್‌ ಮಾಲಕರ ಸಂಘದ ವಕ್ತಾರ

ಸಾರಿಗೆ ಆಯುಕ್ತರ ಗಮನಕ್ಕೆ ತರುವೆ
ಅಂತರ್‌ ಜಿಲ್ಲಾ ವ್ಯಾಪ್ತಿ ಸಂಚರಿಸುವ ಬಸ್‌ಗಳಲ್ಲಿ ಯಾನ ದರ ಹೆಚ್ಚಳ ಮಾಡಿದ್ದು, ಈ ಬಗ್ಗೆ ಕಾನೂನಿನ ರೀತಿ ಕ್ರಮ ಕೈಗೊಳ್ಳಲು ನಮಗೆ ಅಧಿಕಾರವಿಲ್ಲ. ಈ ಬಗ್ಗೆ ಸಾರಿಗೆ ಇಲಾಖೆಯ ಆಯುಕ್ತರ ಗಮನಕ್ಕೆ ತರುತ್ತೇನೆ.
– ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

ನೋಟಿಸ್‌ ನೀಡುತ್ತೇವೆ
ಈ ಹಿಂದೆ ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್‌ ಮಾಲಕರು ದರವನ್ನು ಎರಡು ಪಟ್ಟು ಹೆಚ್ಚಿಸಿದ್ದರು. ಈಗ ಪುನರಾವರ್ತನೆಯಾಗಿದ್ದು, ಗಂಭೀರವಾಗಿ ಪರಿಗಣಿಸಿದ್ದೇವೆ. ಈ ರೀತಿ ದುಪ್ಪಟ್ಟು ಹಣ ಸುಲಿಗೆ ಮಾಡುವ ಬಸ್‌ ಮಾಲಕರಿಗೆ ನೋಟಿಸ್‌ ನೀಡಲಾಗುವುದು. ಅಂತಹ ಬಸ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು.
– ಡಿ.ಸಿ. ತಮ್ಮಣ್ಣ, ಸಾರಿಗೆ ಸಚಿವ

– ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

Team India; Bumrah meets Kiwi surgeon: Doubts over Champions Trophy?

Team India; ಕಿವೀಸ್‌ ಸರ್ಜನ್‌ ಭೇಟಿಯಾದ ಬುಮ್ರಾ: ಚಾಂಪಿಯನ್ಸ್‌ ಟ್ರೋಫಿಗೆ ಅನುಮಾನ?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ

2

Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು

4-aryabhata

ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

13-frndshp

Friendship: ಸ್ನೇಹವೇ ಸಂಪತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.