ಮೈಸೂರು ಸಂಸ್ಥಾನಕ್ಕೆ ರಾಜಮಾತೆಯರ ಕೊಡುಗೆ ಅಪಾರ: ತ್ರಿಷಿಕಾ
Team Udayavani, Mar 14, 2019, 8:41 AM IST
ಮೈಸೂರು: ಮೈಸೂರು ಸಂಸ್ಥಾನದಲ್ಲಿ ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಗೆ ರಾಜಮಾತೆಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ರಾಜವಂಶಸ್ಥರಾದ ತ್ರಿಷಿಕಾ ಕುಮಾರಿ ಹೇಳಿದರು.
ಶ್ರೀಜೈನ್ ಶ್ವೇತಾಂಬರ ತೇರಾಪಂಥ ಮಹಿಳಾ ಮಂಡಲ ವತಿಯಿಂದ ಬುಧವಾರ ನಗರದ ತೇರಾ ಪಂಥ್ ಭವನದಲ್ಲಿ ಏರ್ಪಡಿಸಿದ್ದ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಮೈಸೂರು ರಾಜ ಮನೆತನ ಪ್ರಾರಂಭವಾಗಿದ್ದು ಕೂಡ ರಾಜಮಾತೆ ಯರಿಂದಲೇ, ರಾಜಮಾತೆ ಕೆಂಪ ನಂಜಮ್ಮಣ್ಣಿ ಆಡಳಿತ ಚುಕ್ಕಾಣಿ ಹಿಡಿದು ಸೈ ಎನಿಸಿ ಕೊಂಡಿದ್ದರು. ಮಹಿಳಾ ಶಿಕ್ಷಣಕ್ಕಾಗಿ ಬಹುದೊಡ್ಡ ಕ್ರಾಂತಿಯನ್ನೇ ಅವರು ಮಾಡಿದ್ದಾರೆ ಎಂದರು.
ಮೈಸೂರಿನಲ್ಲಿ ಬಾಲಕಿಯರ ಶಾಲೆ ಆರಂಭಿಸಿದ್ದಲ್ಲದೆ, ನಗರಾಭಿವೃದ್ಧಿ ಸಮಿತಿ ರಚನೆ, ವಾಣಿ ವಿಲಾಸ ನೀರು ಸರಬರಾಜು ಕೇಂದ್ರ, ಶಿವನ ಸಮುದ್ರದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆ ಹೀಗೆ ರಾಜಮಾತೆ ಕೆಂಪನಂಜಮ್ಮಣ್ಣಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯರಿದ್ದು, ಕೇವಲ ಮದುವೆ ಯಾಗುವುದೊಂದೇ ಮಹಿಳೆಯರ ಗುರಿ ಆಗ ಬಾರದು. ನಾನು ನನ್ನ ಮಗನಿಗೆ ಈಗಿನಿಂದಲೇ ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಸುತ್ತಿದ್ದೇನೆ. ಮಹಿಳೆಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ ಎಂದು ತಿಳಿಸಿದರು.
ತೇರಾಪಂಥ್ ಮಹಿಳಾ ಮಂಡಲದ ಅಧ್ಯಕ್ಷೆ ವನಮಾಲ ನಹರ್, ಕಾರ್ಯದರ್ಶಿ ಖಮೋಶ್ ಮೆಹರ್ ಮೊದಲಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.