‘ನಿಮ್ಮ ಈ ಟ್ವೀಟ್ ಪಾಕಿಸ್ಥಾನದ ಪತ್ರಿಕೆಗಳಿಗೆ ಹೆಡ್ ಲೈನ್ ಆಗಲಿದೆ’
Team Udayavani, Mar 14, 2019, 8:57 AM IST
ನವದೆಹಲಿ: ಜೈಶ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಮತದಾನದಲ್ಲಿ ತನ್ನ ವಿರೋಧ ವ್ಯಕ್ತಪಡಿಸಿದ ಚೀನಾದ ನಿಲುವನ್ನು ಖಂಡಿಸುವಲ್ಲಿ ಪ್ರಧಾನಿ ಮೋದಿ ಅವರು ಮೃದುಧೋರಣೆ ಅನುಸರಿಸುತ್ತಿದ್ದಾರೆ ಮತ್ತು ಚೀನಾ ಅಧ್ಯಕ್ಷ ಕ್ಸಿ ಪಿಂಗ್ ಅವರಿಗೆ ಮೋದಿ ಹೆದರುತ್ತಿದ್ದಾರೆ ಎಂದು ಇಂದು ಬೆಳಿಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡುವ ಮೂಲಕ ಟೀಕಿಸಿದ್ದರು. ರಾಹುಲ್ ಅವರ ಈ ಟೀಕೆಗೆ ಭಾರತೀಯ ಜನತಾ ಪಕ್ಷವು ಸರಿಯಾದ ತಿರುಗೇಟನ್ನು ನೀಡಿದೆ. ಚೀನಾ ಇವತ್ತು ವಿಶ್ವಸಂಸ್ಥೆಯಲ್ಲಿ ಪದೇ ಪದೇ ಭಾರತದ ತೀರ್ಮಾನಗಳಿಗೆ ಅಡ್ಡಗಾಲು ಹಾಕಲು ನಿಮ್ಮ ತಾತ ನೆಹರೂ ಅಂದು ನೀಡಿದ ‘ಭದ್ರತಾ ಸ್ಥಾನ ಕೊಡುಗೆ’ಯ ಭಿಕ್ಷೆಯೇ ಕಾರಣ ಎಂದು ಬಿ.ಜೆ.ಪಿ. ರಾಹುಲ್ ಅವರಿಗೆ ತಿರುಗೇಟು ನೀಡಿದೆ. ಪ್ರಧಾನಿ ಮೋದಿಯನ್ನು ಟೀಕಿಸಿ ರಾಹುಲ್ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ಮೂಲಕ ಈ ಪ್ರತ್ಯುತ್ತರವನ್ನು ನೀಡಿದೆ.
China wouldn’t be in UNSC had your great grandfather not ‘gifted’ it to them at India’s cost.
India is undoing all mistakes of your family. Be assured that India will win the fight against terror.
Leave it to PM Modi while you keep cosying up with the Chinese envoys secretly. https://t.co/lAyp12CXBD
— BJP (@BJP4India) March 14, 2019
‘ಆವತ್ತು ನಿಮ್ಮ ಆದರಣೀಯ ಮಹಾನ್ ತಾತ ಭಾರತದ ಆಶಯಗಳನ್ನು ಬದಿಗಿಟ್ಟು ಚೀನಾ ಪರವಾಗಿ ನಿಂತು ಅವರಿಗೆ ಭದ್ರತಾ ಸ್ಥಾನದ ‘ಕೊಡುಗೆ’ಯನ್ನು ನೀಡದೇ ಇರುತ್ತಿದ್ದರೆ ಚೀನಾ ಇವತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲೇ ಇರುತ್ತಿರಲಿಲ್ಲ. ನಿಮ್ಮ ಘನ ಕುಟುಂಬವು ಈ ದೇಶಕ್ಕೆ ಮಾಡಿದ ಎಲ್ಲಾ ತಪ್ಪುಗಳನ್ನು ಇವತ್ತು ಈ ದೇಶ ಸರಿಪಡಿಸಿಕೊಳ್ಳುತ್ತಿದೆ. ಮತ್ತು ಭಯೋತ್ಪಾದನಾ ವಿರುದ್ಧದ ಹೋರಾಟದಲ್ಲಿ ನಾವು ಖಂಡಿತವಾಗಿಯೂ ಜಯಗಳಿಸಲಿದ್ದೇವೆ. ಈ ವಿಚಾರವನ್ನು ಮೋದಿಯವರಿಗೆ ಬಿಟ್ಟುಬಿಡಿ ಮತ್ತು ಅಲ್ಲಿಯವರೆಗೆ ನೀವು ಚೀನೀ ರಾಜತಾಂತ್ರಿಕರೊಂದಿಗೆ ಗೌಪ್ಯ ಮಾತುಕತೆಯನ್ನು ನಡೆಸುತ್ತಿರಿ’ ಎಂದು ಕೇಸರಿ ಪಕ್ಷವು ರಾಹುಲ್ ಅವರಿಗೆ ಖಡಕ್ ಉತ್ತರವನ್ನು ನೀಡಿದೆ. ‘ದೇಶವು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭಗಳಲ್ಲಿ ಎಲ್ಲಾ ರಾಹುಲ್ ಗಾಂಧಿ ಅವರು ಯಾಕೆ ಸಂಭ್ರಮದ ಮನಸ್ಥಿತಿಯಲ್ಲಿರುತ್ತಾರೆ?’ ಎಂದು ಕೇಂದ್ರ ಸಚಿವ ಆರ್. ಎಸ್. ಪ್ರಸಾದ್ ಅವರು ಪ್ರಶ್ನಿಸಿದ್ದಾರೆ. ‘ನಿಮಗೆ ಏನಾಗಿದೆ? ಖಂಡಿತವಾಗಿಯೂ ನಿಮ್ಮ ಈ ಟ್ವೀಟ್ ಪಾಕಿಸ್ಥಾನದ ಪತ್ರಿಕೆಗಳಿಗೆ ಹೆಡ್ ಲೈನ್ ಆಗಲಿದೆ’ ಎಂದವರು ‘ಕೈ’ ಪಕ್ಷದ ಮುಖಂಡನನ್ನು ತರಾಟೆಗೆ ತೆಗೆದುಕೊಂಡರು. ‘ಇನ್ನು 2009ರಲ್ಲಿಯೂ ಸಹ ಚೀನಾ ತಾಂತ್ರಿಕ ಅಂಶಗಳನ್ನು ಮುಂದೊಡ್ಡಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ತಡೆಯೊಡ್ಡಿತ್ತು, ಆವಾಗಲೂ ನೀವು ಇದೇ ರೀತಿ ಟ್ವೀಟ್ ಮಾಡಿದ್ದೀರಾ?’ ಎಂಬ ಪ್ರಶ್ನೆಯನ್ನು ಪ್ರಸಾದ್ ಅವರು ರಾಹುಲ್ ಗಾಂಧಿ ಅವರನ್ನು ಕೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.