ಸುಜನಾ ಸುಳ್ಯಗೆ ಯಕ್ಷ ಪ್ರಶಸ್ತಿ
Team Udayavani, Mar 15, 2019, 12:30 AM IST
ಯಕ್ಷರಂಗದ ಸವ್ಯಸಾಚಿ ಸುಜನಾ ಸುಳ್ಯ ಮೊಗಸಾಲೆ ಶಾರದಮ್ಮ ಯಕ್ಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾ.17ರಂದು ಮಂಗಳೂರಿನ ರಮಣಶ್ರೀ ಕನ್ವೆನ್‌ಷನಲ್ ಹಾಲ್‌ನಲ್ಲಿ ನಡೆಯುವ ಆರಾಧನಾ ಚಾರಿಟೇಬಲ್ ಟ್ರಸ್ಟ್ ಆರಾಧನಾ ಸಂಭ್ರಮದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನಿಸಲಾಗುವುದು. ಯಕ್ಷಗಾನ ಕಲಾವಿದ ಕೋಳ್ಯೂರು ಗೋಪಾಲಕೃಷ್ಣ ಭಟ್ಟರ ಮಾತೃಶ್ರೀ ಮೊಗಸಾಲೆ ಶಾರದಮ್ಮ ಸ್ಮರಣಾರ್ಥ ನೀಡುವ ಯಕ್ಷ ಪ್ರಶಸ್ತಿ ಇದಾಗಿದೆ.
ಹೈದ್ರಾಬಾದ್‌ನ ನಾಟಕ ಮಂಡಳಿಯಲ್ಲಿ 2 ವರ್ಷ ನಟನಾಗಿ ದುಡಿದ ಇವರು ಆನಂತರ ಮಾವ ಕಾವು ಶ್ರೀನಿವಾಸ ರಾಯರ ಪ್ರೇರಣೆಯಂತೆ ಯಕ್ಷಗಾನ ಕಲಾವಿದರಾಗಿ ಮೇಳದಲ್ಲಿ ಸೇರ್ಪಡೆಗೊಂಡರು. ಬೆಳ್ಳಂಬೆಟ್ಟು ಶಾಸ್ತಾವೇಶ್ವರ ಮೇಳದಲ್ಲಿ ಪ್ರಥಮ ಗೆಜ್ಜೆಕಟ್ಟಿದ ಸುಜನಾ ಅವರು ಬಳಿಕ ವೇಣೂರು,ಇರಾ, ಧರ್ಮಸ್ಥಳ, ಕುದ್ರೋಳಿ, ಕೂಡ್ಲು, ಆದಿ ಸುಬ್ರಹ್ಮಣ್ಯ, ಸುಂಕದಕಟ್ಟೆ, ಮಾಡಾವು, ಪುತ್ತೂರು, ಕಟೀಲು ಯಕ್ಷಗಾನ ಮೇಳಗಳಲ್ಲಿ ಒಟ್ಟು 38 ವರ್ಷ ಕಲಾಸೇವೆಗೈದರು. ಅತಿಕಾಯ, ಗಜೇಂದ್ರ, ಭಸ್ಮಾಸುರ, ರಕ್ತಬೀಜ, ಅರ್ಜುನ, ದಕ್ಷ, ಜಮದಗ್ನಿ ಮೊದಲಾದ ಗಂಭೀರ ಪಾತ್ರಗಳಿಗೆ ಜೀವತುಂಬಿದಲ್ಲದೆ ಜತೆಯಲ್ಲಿ ಹಾಸ್ಯ , ಸ್ತ್ರೀ ಪಾತ್ರಗಳಲ್ಲೂ ಮಿಂಚಿದ್ದರು. ತಾಳಮದ್ದಳೆ ಕೂಟದಲ್ಲಿ ಅರ್ಥಧಾರಿಯಾಗಿ ವಾಕ್ಚಾತುರ್ಯ ಮೆರೆದಿದ್ದರು. ಭಾಗವತರಾಗಿ ,ಮೃದಂಗ, ಚಂಡೆವಾದಕರಾಗಿ, ರಂಗ ವಿನ್ಯಾಸಗಾರರಾಗಿ ನಾಟ್ಯ ಗುರುವಾಗಿ ವೇಷಧಾರಿಯಾಗಿ ಹೀಗೆ ತಮ್ಮನ್ನು ತೊಡಗಿಸಿಕೊಂಡು ಅಗ್ರಮಾನ್ಯ ಕಲಾವಿದರೆನಿಸಿಕೊಂಡರು. ಪುತ್ರ ಜೀವನ್ ರಾಂ ಸುಳ್ಯ ಪ್ರಾರಂಭಿಸಿದ ರಂಗಮನೆಯಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಯಕ್ಷಗಾನದ ನಾಟ್ಯ ಮತ್ತು ಹಿಮ್ಮೇಳನ ಕಲಿಯುತ್ತಿದ್ದಾರೆ. ಆ ಮಕ್ಕಳಿಗೆಲ್ಲಾ ಈ ಅಜ್ಜ ಅಚ್ಚುಮೆಚ್ಚು. ಮನೆಗೆ ಬಂದ ಯಾರೇ ಆಗಲಿ ಅವರಿಗೆ ಆತಿಥ್ಯ ನೀಡದೆ ಇವರು ಕಳುಹಿಸುವುದಿಲ್ಲ.ಮಧ್ಯೆ ಸ್ವಲ್ಪಕಾಲ ಅನಾರೋಗ್ಯ ಪೀಡಿತರಾಗಿದ್ದ ಸುಜನಾ ಅವರಿಗೆ ಈ ರಂಗಮನೆಯೇ ಪುನಶ್ಚೇತನ ನೀಡಿತ್ತು.
ಗಂಗಾಧರ ಮಟ್ಟಿ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಅಧಿಕೃತವಾಗಿ ಅನೌನ್ಸ್ ಆಯಿತು ʼಜೈಲರ್ -2ʼ; Tiger Ka Hukum.. ಎನ್ನುತ್ತಲೇ ಮಿಂಚಿದ ತಲೈವಾ
Ramanagara: ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ
Share Market: ಷೇರುಪೇಟೆ ಸೂಚ್ಯಂಕ 300 ಅಂಕ ಜಿಗಿತ: ಲಾಭಗಳಿಸಿದ ಷೇರು ಯಾವುದು?
Bhalki: ಬಸವೇಶ್ವರ ಪುತ್ತಳಿ ಕಿಡಿಗೇಡಿಗಳಿಂದ ವಿರೂಪ; ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.