ರಂಗದಲ್ಲಿ ಅಸ್ತಮಿಸಿದ “ಯಕ್ಷ ಚಂದ್ರ’ 


Team Udayavani, Mar 15, 2019, 12:30 AM IST

x-40.jpg

ಚಂದ್ರಹಾಸ ಹುಡುಗೋಡುರವರು ಕಠಿಣ ಪರಿಶ್ರಮದಿಂದ ವೃತ್ತಿಯಲ್ಲಿ ಯಶಸ್ಸನ್ನು ಕಂಡವರು. ಇದರ ಜೊತೆಗೆ ಅವರಲ್ಲಿ ಓರ್ವ ಕಲಾವಿದನಿಗೆ ಅಗತ್ಯವಾಗಿ ಇರಬೇಕಾದ ನಯ ವಿನಯ ಸ್ನೇಹಪರ ಅಧ್ಯಯನಶೀಲ ಮನಸ್ಸು ಇತ್ತು. ಹಾಗಾಗಿ ಹುಡುಗೋಡುರವರು ರಾತ್ರಿ ರಂಗದಲ್ಲಿಯೂ ಹಗಲು ಬಿಡಾರದಲ್ಲಿಯೂ ಎಲ್ಲರಿಗೂ ಬೇಕಾದ ಕಲಾವಿದರಾಗಿದ್ದರು.

 ಅವರು ಯಕ್ಷಗಾನ ರಂಗ ಪಾದಾರ್ಪಣೆ ಮಾಡಿದ ಸಮಯದಲ್ಲಿ ಹೊಸಬರು ದಿಢೀರ್‌ ಆಗಿ ಪ್ರವೇಶಿಸಿ ರಂಗವನ್ನು ಆವರಿಸಿ ಮೆರೆವ ಫಾಸ್ಟ್‌ಫ‌ುಡ್‌ ಸಂಸ್ಕೃತಿ ಖಂಡಿತಾ ಇರಲಿಲ್ಲ .ಅಲ್ಲಿ ಹಂತ ಹಂತವಾಗಿ ಒಂದೊಂದೇ ವಿಭಾಗವನ್ನು ಕ್ರಮಿಸಿ ಕಲಾವಿದ ರೂಪುಗೊಳ್ಳುತ್ತ ಇದ್ದ ಕಾಲವದು. ಅದೇ ರೀತಿ ಹುಡುಗೋಡುರವರು ಬಚ್ಚಗಾರು ಬಯಲಾಟ ಮೇಳದಲ್ಲಿ ವೃತ್ತಿ ತಿರುಗಾಟ ಆರಂಭಿಸಿದ ನಂತರ ಹಂತ ಹಂತವಾಗಿ ಮೇಲೇರಿ ಮುಂದೆ ಬಡಗಿನ ಸಾಲಿಗ್ರಾಮ, ಪೆರ್ಡೂರು ಶಿರಸಿ, ಕುಮಟಾ, ಗೋಳಿಗರಡಿ, ಕಮಲಶಿಲೆ ಮೇಳಗಳಲ್ಲಿ ತಿರುಗಾಟ ಮಾಡಿ ತನ್ನದಾದ ಅಸ್ತಿತ್ವವನ್ನು ತೋರಿಸಿ ಕೊಟ್ಟರು.

ಹುಡುಗೋಡುರವರು ನಡೆದ ಹಾದಿ ನುಣ್ಣನೆಯ ರನ್‌ವೇ ಆಗಿರಲಿಲ್ಲ ಬದಲಿಗೆ ಅದೊಂದು ಆಗಷ್ಟೇ ರಚಿಸಿದ ಕಚ್ಚಾ ರಸ್ತೆ ಆಗಿದ್ದ ಕಾಲವಾಗಿತ್ತದು. ಯಾಕೆಂದರೆ 1980-1990 ದಶಕದಲ್ಲಿ ಒಂದನೇ ತಲೆಮಾರಿನ ಕೆರೆಮನೆ ಸಹೋದರರು ಚಿಟ್ಟಾಣಿ,ಜಲವಳ್ಳಿ, ನಗರ, ಐರೋಡಿ, ಗೋಡೆ, ಆರ್ಗೋಡು, ಕುಮಟಾ, ಬೇಗಾರ್‌ ಮುಂತಾದ ಮೇರು ಕಲಾವಿದರ ದಂಡೇ ಮೆರೆದು ರಂಗದಲ್ಲಿ ವಿಜೃಂಭಿಸಿ ಕಡೆದಿಟ್ಟ ಪ್ರತಿಯೊಂದು ಪೇಟೆಂಟ್‌ ಪಾತ್ರಗಳಿಗೆ ಹೊಸ ಭಾಷ್ಯವನ್ನು ಬರೆಯುವುದು ಯುವ ಕಲಾವಿದರಿಗೆ ಅಷ್ಟು ಸುಲಭದ ವಿಚಾರವಾಗಿರಲಿಲ.É ಅಂತಹ ಕಾಲಘಟ್ಟದಲ್ಲಿ ಎರಡನೇ ತಲೆಮಾರಿನ ವೇಷಧಾರಿಯಾಗಿ ರಂಗ ಪ್ರವೇಶ ಮಾಡಿದ ಹುಡುಗೋಡುರವರು ಆ ಎಲ್ಲ ಹಿರಿಯರ ವೇಷಗಳನ್ನು ಬೆರಗಿನಿಂದಲೇ ನೋಡುತ್ತಾ ರಂಗವೇರಿ ಅವರನ್ನು ಅದರ್ಶವಾಗಿರಿಸಿಕೊಂಡವರು. 

ಹುಡುಗೋಡುರವರದು ರಂಗ ಪರಿಭಾಷೆಯನ್ನು ಮೀರದ ಅಭಿವ್ಯಕ್ತಿ. ಆವರು ಖಳ ಪಾತ್ರಗಳತ್ತ ಒಲವು ತೋರಿ ಅವುಗಳತ್ತ ವಾಲಿದ್ದೇ ಅಧಿಕ. ಹಾಗಾಗಿ ಅವರು ನಿರ್ವಹಿಸಿದ ಸಾಲ್ವ, ದುಷ್ಟಬುದ್ಧಿ, ಕೌರವ ,ಭಸ್ಮಾಸುರ, ಕಂಸ, ದುಷ್ಟಬುದ್ಧಿ ,ಕಾರ್ತವೀರ್ಯ,ರಾವಣ, ಭದ್ರಸೇನ ಮುಂತಾದ ಪಾತ್ರಗಳು ರಂಗದಲ್ಲಿ ಅವರದೇ ಆದ ವಿಶಿಷ್ಟವಾದ ಛಾಪು ಮೂಡಿಸಿವೆ. ಒಂದು ಕೋನದಲ್ಲಿ ನೋಡಿದಾಗ ಚಿಟ್ಟಾಣಿಯವರನ್ನು ಇನ್ನೊಂದು ಕೋನದಲ್ಲಿ ನೋಡಿದಾಗ ಗೋಡೆ ನಾರಾಯಣ ಹೆಗಡೆಯವರನ್ನು ಪ್ರತಿನಿಧಿಸಿದ್ದೇ ಹೆಚ್ಚು.

ಪ್ರತಿನಾಯಕ ಪಾತ್ರಗಳನ್ನು ನಿರ್ವಹಿಸಿದಷ್ಟೇ ಸಮರ್ಥವಾಗಿ ನಾಯಕ ಪಾತ್ರಗಳಾದ ಭೀಷ್ಮ , ಅರ್ಜುನ, ಸುಧನ್ವ , ಮದನ, ಚಂದ್ರಹಾಸ ಪಾತ್ರಗಳನ್ನು ನಿರ್ವಹಿಸಿದ ಖ್ಯಾತಿ ಇವರದು. ಯಾವುದೇ ಪಾತ್ರ ಇರಲಿ ಅದರಲ್ಲಿ ಪರಕಾಯ ಪ್ರವೇಶ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು .ಪಾತ್ರಗಳು ಪೌರಾಣಿಕ ಅಥವಾ ಸಾಮಾಜಿಕ ಪ್ರಸಂಗಗಳದು ಆಗಿರಲಿ ಅದರ ನಿರ್ವಹಣೆಯಲ್ಲಿ ಅದು ಯûಾ ನೀಯ ವೇಷವಾಗಿದ್ದದ್ದು ಇವರ ವಿಶೇಷತೆ. ಇದೇ ಅರ್ಹತೆ ಅವರನ್ನು ಬಡಗುತಿಟ್ಟಿನ ಎರಡನೇ ವೇಷದ ಸ್ಥಾನದ ಎತ್ತರಕ್ಕೆ ಏರಿಸಿದ್ದು. ಹುಡುಗೋಡುರವರು ಆಹಾರ್ಯ ವಾಚಿಕ ಆಂಗಿಕ ಸಾತ್ವಿಕ ಎನ್ನುವ ಚತುರಂಗದ ಅಭಿನಯದಲ್ಲಿ ಸಿದ್ಧಿಯನ್ನು ಯಥೇತ್ಛವಾಗಿ ಪಡೆದಿದ್ದರು. ಇದಕ್ಕೆ ಕಾರಣ ರಂಗದಲ್ಲಿ ಎದ್ದು ಕಾಣುವಂತಹ ವಿಶಾಲವಾದ ವರ್ಚಸ್ಸಿನ ಮುಖ ಆಯಕಟ್ಟಿನ ದೇಹ ಪ್ರಕೃತಿ ಸ್ವರ ಗಾಂಭೀರ್ಯ ಅವರಿಗಿದ್ದ ದೈವದತ್ತ ವರವಾಗಿತ್ತು.

ಅವರ ವೇಷಕ್ಕೆ ಭಾಗವತನ ನೆಲೆಯಲ್ಲಿ ಒಂದಷ್ಟು ಪದ ಹೇಳಿದ ಅನುಭವದಲ್ಲಿ. ಹೇಳುವುದಾದರೇ ಅವರ ವೇಷಗಾರಿಕೆಯಲ್ಲಿ ಕೌರವನಲ್ಲಿಯ ಛಲ ಕೀಚಕನಲ್ಲಿಯ ವಿರಹ ಕಾರ್ತ್ಯ ಹಾಗೂ ರಾವಣನಲ್ಲಿಯ ಶೌರ್ಯ ಸಾಲ್ವನಲ್ಲಿಯ ಶೃಂಗಾರ ರಸೊತ್ಪತ್ತಿಯನ್ನು ಸ್ಪಷ್ಟವಾಗಿ ಕಾಣಬಹುದಿತ್ತು ಹುಡುಗೋಡುರವರ ಪಾತ್ರದ ಸ್ಥಾಯಿ ಭಾವ ತಿಳಿಯದೆ ಈಗಿನ ಒಟ್ಟಾರೆ ಚಾಲು ಕುಣಿತದ ನಾಟ್ಯ ವೈಭವದತ್ತ ಮನಗೊಡದೆ ವಾಚಿಕದಲ್ಲೂ ರಸಭಾವವನ್ನು.ಕೆಡಿಸದೆ ಪಾತ್ರ ಕಟ್ಟಿಕೊಡುವ ಜಾಣ್ಮೆ ಪ್ರೌಢಿಮೆ ಅನನ್ಯ. 

ಸುರೇಂದ್ರ ಪಣಿಯೂರು 

ಟಾಪ್ ನ್ಯೂಸ್

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.