ತುಳು-ಕನ್ನಡ ವೆಲ್ಪೇರ್ ಅಸೋಸಿಯೇಶನ್ ಪ್ರಶಸ್ತಿ ಪ್ರದಾನ
Team Udayavani, Mar 14, 2019, 4:07 PM IST
ಮುಂಬಯಿ: ಗುರು ಶಿಷ್ಯರ ಸಂಬಂಧಗಳನ್ನು ಭದ್ರವಾಗಿರಿಸಿ ಉಸಿರಿನ ನಂತರವೂ ಹೆಸರನ್ನು ಉಳಿಸಿಕೊಂಡ ಆದರ್ಶ ಶಿಕ್ಷಕ, ಕವಿ, ನಾಟಕಕಾರ, ಅಂಕಣಕಾರ ದಿವಂಗತ ಬಿ. ಎಸ್. ಕುರ್ಕಾಲ್ ಆಗಿದ್ದಾರೆ. ಹಾಡು ಕವಿಯಾಗಿ ಮಕ್ಕಳಿಗೆ ಪದ್ಯ ಬರೆದು ಅವರ ಜವಾಬ್ದಾರಿಯನ್ನು ಹೆಚ್ಚಿಸಿ ದೇಶಭಕ್ತಿ, ಪ್ರಕೃತಿ, ಧರ್ಮ, ಮಾನವೀಯ ಚಿಂತನೆಗಳ ಬರವಣಿಗೆ ನೀಡಿ ಜನ ಜಾಗೃತಿಗೊಸಿದ ಅವರು ಇತರರಿಗೆ ಮಾದರಿಯಾಗಿದ್ದಾರೆ. ಅವರ ಸ್ಮರಣಾರ್ಥ ಜರಗುವ ದತ್ತಿನಿಧಿ ಸಂಸ್ಮರಣಾ ಪ್ರಶಸ್ತಿ ಸಮಾರಂಭ ಅವರ ಸಾಧನೆಗೆ ಸಂದ ಗೌರವವಾಗಿದೆ ಎಂದು ಸಾಹಿತಿ, ವಿಮರ್ಶಕ ಡಾ| ಕರುಣಾಕರ ಎನ್. ಶೆಟ್ಟಿ ಅಭಿಪ್ರಾಯಪಟ್ಟರು.
ಮಾ.10ರಂದು ಮೀರಾ ರೋಡು ಪೂರ್ವದ ಜಹಾಂಗೀರ್ ಸರ್ಕಲ್ ಸಮೀಪದ ಶೀ ಗುರುನಾರಾಯಣ ಸಭಾಗೃಹದಲ್ಲಿ ತುಳು-ಕನ್ನಡ ವೆಲ್ಪೇರ್ ಅಸೋಸಿಯೇಶನ್ ಮೀರಾ-ಭಾಯಂದರ್ ಇದರ ದಿ| ಬಿ. ಎಸ್. ಕುರ್ಕಾಲ್ ಸ್ಮರಣಾರ್ಥ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತ
ನಾಡಿದ ಅವರು, ಮುಂಬಯಿ ಮಹಾನಗರದಲ್ಲಿ ಕನ್ನಡವನ್ನು ಡಾ| ಜಿ. ಡಿ. ಜೋಶಿ ಪ್ರತಿಷ್ಠಾನ ಹೆಸರಿನಲ್ಲಿ ಮನೆ ಮನೆಯಲ್ಲಿ ಸಾಹಿತ್ಯ ಸಂಭ್ರಮವನ್ನು ನಡೆಸುತ್ತಾ ಕ್ರಿಯಾಶೀಲರಾಗಿರುವ ಡಾ| ಜಿ. ಡಿ. ಜೋಶಿ ದತ್ತಿ ನಿಧಿ ಪ್ರಶಸ್ತಿ ಪ್ರಧಾನಿಸಿ ಅದರ ಘನತೆ ಗೌರವ ಹೆಚ್ಚಿಸಿದ್ದೀರಿ. ಇಂತಹ ಕಾರ್ಯಗಳು ನಿರಂತರ ಸಾಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಹಿರಿಯ ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ| ಜಿ. ಡಿ. ಜೋಶಿ ಅವರಿಗೆ ಪ್ರಶಸ್ತಿ ಪ್ರಧಾನಿಸಿ ಗಣ್ಯರು ಗೌರವಿಸಿದರು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಜಿ. ಡಿ. ಜೋಶಿ ಅವರು ಸೃಜನ ಶೀಲ ಲೇಖಕರಿಗೆ, ಉದಯೋನ್ಮಖ ಬರಹಗಾರರಿಗೆ, ಸಾಹಿತ್ಯಾಸಕ್ತರಿಗೆ ಮುಂಬಯಿ ಜನತೆಯ ಪ್ರೋತ್ಸಾಹ ಅನನ್ಯವಾಗಿದೆ. ಸಾಮಾನ್ಯ ಶಿಕ್ಷಕನಾದ ನನಗೆ ಪದೋನ್ನತಿ, ಹಲವಾರು ಪ್ರಶಸ್ತಿ, ಸಂಘ ಸಂಸ್ಥೆಗಳ ವಿವಿಧ ಹು¨ªೆಗಳಲ್ಲಿ ಸಮಾಜ ಸೇವೆ ಮಾಡುವ ಅವಕಾಶ ನೀಡಿ ಇಷ್ಟು ಎತ್ತರಕ್ಕೆ ಬೆಳೆಸಿದ್ದಿರಿ ಎಂದು ಹೇಳಿ ಅವರು ಕೃತಜ್ಞತೆ ಸಲ್ಲಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ| ಎನ್. ಎ. ಹೆಗ್ಡೆ ಮಾತನಾಡಿ ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರ್ಪಡೆಗೊಂಡು ಸ್ವಾವಲಂಬಿ ಬದುಕಿಗೆ ಮಹತ್ವರ ಆದ್ಯತೆ ನೀಡಬೇಕು. ಹೆಣ್ಣು ಮಗುವನ್ನು ಆರೋಗ್ಯಕರ ಸ್ಥಾನಮಾನದೊಂದಿಗೆ ಪೋಷಿಸಬೇಕು ಎಂದರು. ವಿದ್ವಾನ್ ರಾಧಾಕೃಷ್ಣ ಭಟ್, ಲಯನ್ ಡಾ| ಶಂಕರ್ ಕೆ. ಟಿ., ರವೀಂದ್ರ ಶೆಟ್ಟಿ ಕೊಟ್ರಪಾಡಿ ಶುಭ ಹಾರೈಸಿ ಮಾತನಾಡಿದರು. ತುಳು ಕನ್ನಡ ವೆಲ್ಪೇರ್‌ನ ಅಧ್ಯಕ್ಷ ಎ. ಕೆ. ಹರೀಶ್ ಸ್ವಾಗತಿದರು.ಅಶೋಕ್ ವಳದೂರ್ ಅತಿಥಿಗಳನ್ನು ಪರಿಚ ಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೀತಾ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಆಶಾ ಪಿ. ಶೆಟ್ಟಿ ವಂದಿಸಿ ದರು. ವೇದಿಕೆಯಲ್ಲಿ ಉದಯ ಶೆಟ್ಟಿ ಪೆಲತ್ತೂರು, ಶುಭಾ ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ, ಉಪಾಧ್ಯಕ್ಷೆ ಲೀಲಾ ಗಣೇಶ್ ಕಾರ್ಕಳ ಉಪಸ್ಥಿತರಿದ್ದರು. ಸಂಸ್ಕೃತಿ ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ ವೈಭವ ಮತ್ತು ಗಣೇಶ್ ಎರ್ಮಾಳ್ ಅವರಿಂದ ಸಂಗೀತ ರಸಮಂಜರಿ ನಡೆಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು.
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
Desi Swara@150: ಪೊಲೇಂಡ್ ಕನ್ನಡಿಗರು ಸಂಘದ ಅದ್ದೂರಿ ಉದ್ಘಾಟನೆ
Desi Swara@150: ನವವಿಂಶತಿ ನೃತ್ಯ ಹಬ್ಬದಲ್ಲಿ ದ್ವಿದಳದ ಸತ್ರಿಯ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.