ಅನಿವಾಸಿ ಕೇರಳಿಗರಲ್ಲಿದೆ ಮತೋತ್ಸಾಹ
Team Udayavani, Mar 15, 2019, 12:30 AM IST
ಕೇರಳವೆಂದರೆ ಹಾಗೆಯೇ. ಸಾಕ್ಷರತೆಯಲ್ಲಿ ಶೇ.100ರಷ್ಟು ಪರಿಪೂರ್ಣತೆ ಸಾಧಿಸಿರುವುದರ ಜತೆಗೆ, ರಾಜಕೀಯ ಪ್ರಜ್ಞೆ ಮತ್ತು ನಾಗರಿಕರ ಹಕ್ಕು ಪಾಲನೆಯ ಪರಾಯಣತೆಯಲ್ಲೂ ಅಲ್ಲಿನವರು ಶೇ.100ರ ಸಮೀಪಕ್ಕೆ ಬರುವವರೇ. ಕೇರಳದ ಒಟ್ಟು ಮತದಾರರ ಪೈಕಿ ಹೆಚ್ಚಿನವರು ಇತರ ರಾಜ್ಯ, ವಿದೇಶಗಳಲ್ಲಿರುವವರೇ. ಸ್ಥಳೀಯ ಸಂಸ್ಥೆಗಳು, ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸುತ್ತಾರೆ. ಬಹುತೇಕ ಮಂದಿ ಮಲಯಾಳಿಗರು ಕೇರಳದಿಂದ ಹೊರತಾಗಿರುವ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿರುವವರೇ.
2014ರಲ್ಲಿ 12, 653 ಮಂದಿ ಸಾಗರೋತ್ತರ ಮತದಾರರು ಇದ್ದರೆ, ಜ.30ರ ವೇಳೆಗೆ ಅವರ ಸಂಖ್ಯೆ 66, 584ಕ್ಕೆ ಹೆಚ್ಚಳವಾಗಿದೆ. ದೇಶದ ಒಟ್ಟು ಅನಿವಾಸಿ ಮತದಾರರ ಸಂಖ್ಯೆ 1.3 ಕೋಟಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಎನಿಸಿದರೂ, ಅವರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸುತ್ತಾರೆ.
ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ 66, 584 ಮತದಾರರ ಪೈಕಿ 3,729 ಮಂದಿ ಮಹಿಳಾ ಮತದಾರರೇ ಇದ್ದಾರೆ. ಕೇರಳದಲ್ಲಿನ ಹಲವಾರು ಸಂಘಟನೆಗಳು ವಿದೇಶಗಳಲ್ಲಿರುವ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಗಲ್ಫ್ ರಾಷ್ಟ್ರಗಳಲ್ಲಿ ಆಯೋಜಿಸಿದ್ದರು. ವಿಶೇಷವಾಗಿ 2018ರ ಆಗಸ್ಟ್‌ನಲ್ಲಿ ವಿದೇಶಗಳಲ್ಲಿರುವ ಭಾರತೀಯರು ಮತದಾನ ಮಾಡಲು ಅವಕಾಶ ನೀಡುವ ಕಾಯ್ದೆಗೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಅದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. 2018ರ ಅಕ್ಟೋಬರ್ ಮತ್ತು 2019ರ ಜನವರಿ ಅವಧಿಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಬೇರೆ ರಾಜ್ಯ ಮತ್ತು ವಿದೇಶಗಳಲ್ಲಿರುವ ಕೇರಳಿಗರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಸ್ವಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡ ಎನ್‌ಆರ್‌ಐಗಳು ಮತಹಾಕಲು ಅವಕಾಶ ಉಂಟು. ಮತೋತ್ಸಾಹ ಅಂದರೆ ಇದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.