“ಮ್ಯಾತ್-ಎ ಸಟ್ಲ ಲ್ಯಾಂಗ್ವೇಜ್ ಆಫ್ ದಿ ಯುನಿವರ್ಸ್’ ಪುಸ್ತಕ ಬಿಡುಗ
Team Udayavani, Mar 15, 2019, 1:00 AM IST
ಉಡುಪಿ: ವಿದ್ಯಾರ್ಥಿ ರಾಘವೇಂದ್ರ ಎನ್. ಭಟ್ ಅವರು ಬರೆದಿರುವ “ಮ್ಯಾತ್-ಎ ಸಟ್ಲ ಲ್ಯಾಂಗ್ವೇಜ್ ಆಫ್ ದಿ ಯುನಿವರ್ಸ್’ ಪುಸ್ತಕವನ್ನು “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್.ಪೈ ಅವರು ಬುಧವಾರ ಮಣಿಪಾಲದ ಮಣಿಪಾಲ್ ಡಾಟ್ ನೆಟ್ ಕಟ್ಟಡದಲ್ಲಿ ಜರಗಿದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ| ಸಂಧ್ಯಾ ಎಸ್. ಪೈ ಅವರು “ಮುಂದಿನ 20 ವರ್ಷಗಳು ಯುವಜನತೆಯ ಸಾಧನೆಯ ಯುಗಗಳಾಗಲಿದೆ. ಪ್ರತಿಭಾವಂತ, ಸಾಧನೆಯ ಹಂಬಲವುಳ್ಳ, ದೇಶ ಭಕ್ತಿ, ಅರ್ಪಣಾ ಮನೋಭಾವದ ಯುವಕರ ತಂಡದ ಅಗತ್ಯವಿದೆ. ರಾಘವೇಂದ್ರ ಅವರಂಥ ಯುವಕರಿಂದ ಸತ್ಯ ಯುಗ ಮತ್ತೆ ಬಂದಂತಾಗಿದೆ. ರಾಘವೇಂದ್ರ ಅವರು ಬರೆದಿರುವ ಪುಸ್ತಕ ಗಣಿತವನ್ನು ವಿವಿಧ ವಿಧಾನಗಳ ಮೂಲಕ ಸರಳವಾಗಿ ತಿಳಿಸಿಕೊಡುತ್ತದೆ. ವಿದ್ಯಾರ್ಥಿಯೋರ್ವ ಇಂತಹ ಪುಸ್ತಕ ಬರೆದಿರುವುದು ಮಹತ್ವದ ಸಾಧನೆ’ ಎಂದು ಹೇಳಿದರು.
ರಾಘವೇಂದ್ರ ಅವರು ಮಾತನಾಡಿ, “ಗಣಿತ ಯಾಕೆ ಕಷ್ಟವಾಗುತ್ತದೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ನಡೆಸಿದ್ದೇನೆ. ಇದು ಗಣಿತದ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ. ಶಿಕ್ಷಕರು ಕೂಡ ಸುಲಭ ವಿಧಾನದಲ್ಲಿ ಗಣಿತವನ್ನು ಹೇಗೆ ಬೋಧಿಸಬಹುದೆಂಬುದನ್ನು ಹೇಳಿಕೊಡುವ ಯತ್ನ ನಡೆಸಿದ್ದೇನೆ. ದಿನನಿತ್ಯದ ಚಟುವಟಿಕೆಗಳಲ್ಲಿ ಗಣಿತ, ಗಣಿತದ ಕತೆಗಳು, ಪ್ರಾಚೀನ ಭಾರತದ ಗಣಿತ, ಗಣಿತದ ಒಗಟುಗಳು ಮೊದಲಾದವುಗಳನ್ನೊಳಗೊಂಡ ಅಧ್ಯಾಯಗಳಿವೆ’ ಎಂದು ಹೇಳಿದರು.
ಪ್ರೇಮಲೀಲಾ ಭಟ್, ಕಸ್ತೂರಿ ಹೆಗ್ಡೆ ಉಪಸ್ಥಿತರಿದ್ದರು. ಮೇಧಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.