ಆರೋಗ್ಯಕರ ನಿದ್ದೆಗಾಗಿ ವಿಶೇಷ ದಿನ 


Team Udayavani, Mar 15, 2019, 5:30 AM IST

15-march-2.jpg

ನಿದ್ರಾಹೀನತೆಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ವಿಶ್ವಾದ್ಯಂತ ಸ್ಲೀಪ್‌ ಡೇಯನ್ನು ಆಚರಿಸಲಾಗುತ್ತದೆ. ನಿದ್ರೆ ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ನಿದ್ರೆಯಲ್ಲಿ ಉಂಟಾಗುವ ವ್ಯತ್ಯಾಸದಿಂದ ಹಲವಾರು ರೋಗಗಳು ಉದ್ಭವವಾಗುತ್ತವೆ. ಇವುಗಳ ಬಗೆಗೆ ಎಚ್ಚರಿಕೆ ನೀಡುವುದೇ ಈ ದಿನದ ವಿಶೇಷತೆ.

ನಿದ್ದೆಗಾಗಿಯೂ ಒಂದು ದಿನವನ್ನು ಮೀಸಲಾಗಿಡಲಾಗಿದೆಯೇ  ಎಂದು ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ಆಧುನಿಕತೆಯ ಜೀವನಕ್ಕೆ ಹೊಂದಿಕೊಂಡಿರುವ ಯುವಜನರು ನಿದ್ರಿಸುವ ಸಮಯವನ್ನು ಕಡಿಮೆಗೊಳಿಸುತ್ತಿದ್ದಾರೆ. ತಂತ್ರಜ್ಞಾನದ ಮಹಾಪೂರದಲ್ಲಿ ಮುಳುಗಿ ತಮ್ಮ ನಿದ್ರೆಯ ಸಮಯವನ್ನು ಇನ್ನಿತರ ಕಾರಣಗಳಿಗಾಗಿ ಉಪಯೋ ಗಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ನಿದ್ದೆಯ ಮಹತ್ವವನ್ನು, ನಿದ್ರಾಹೀನತೆಯಿಂದ ಜೀವನದಲ್ಲಾಗುವ ಏರುಪೇರುಗಳನ್ನು, ಆರೋಗ್ಯ ಸಂಬಂಧಿ ವಿಚಾರಗಳನ್ನು ಅವರಿಗೆ ಮನವರಿಕೆ ಮಡುವುದು ತೀರಾ ಅಗತ್ಯ. ಹೀಗೆ ಸಮಾಜವನ್ನು ಎಚ್ಚೆತ್ತುಕೊಳ್ಳುವಂತೆ ಮಾಡುವ ಉದ್ದೇಶವನ್ನಿಟ್ಟುಕೊಂಡು ಅಮೆರಿಕದ ನರ ವಿಜ್ಞಾನಿಗಳು ಚಾಲ್ತಿಗೆ ತಂದ ದಿನವೇ ‘ವರ್ಲ್ಡ್ ಸ್ಲೀಪ್  ಡೇ’.

ಇದನ್ನು 2008ರ ಮಾ. 14ರಂದು ಪ್ರಥಮ ಬಾರಿಗೆ ವಿಶ್ವಾದ್ಯಂತ ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ವಿಶ್ವ ಮಟ್ಟದಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಭೂಮಿ ಮತ್ತು ಸೂರ್ಯನ ಚಲನೆಗೆ ಸಂಬಂಧಿಸಿ ಹಗಲು ರಾತ್ರಿಗಳಲ್ಲಿ ವ್ಯತ್ಯಯವಾಗುವ ಸಂದರ್ಭಕ್ಕೂ (ಸ್ಪ್ರಿಂಗ್‌ ವರ್ನಲ್‌ ಈಕ್ಷಿನಾಕ್ಸ್‌ ) ಮೊದಲಿನ ಶುಕ್ರವಾರ ಈ ದಿನವನ್ನು ಆಚರಿಸಲಾಗುತ್ತದೆ.

ವರ್ಲ್ಡ್ ಸ್ಲೀಪ್  ಡೇ ಹೆಸರೇ ಸೂಚಿಸುವಂತೆ ಈ ದಿನ ಪೂರ್ತಿಯಾಗಿ ನಿದ್ದೆಮಾಡುವುದು ಎಂದುಕೊಂಡರೆ ನಿಮ್ಮ ಅನಿಸಿಕೆ ತಪ್ಪು. ಬದಲಾಗಿ ನಿದ್ರಾಹೀನತೆಯ ಸಮಸ್ಯೆಗಳ ಕುರಿತು ಮತ್ತು ಯೋಗಕ್ಷೇಮವನ್ನು ಹೇಗೆ ಕಾಪಿಟ್ಟುಕೊಳ್ಳುವುದು ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಬಳಕೆ ಮಾಡಲಾಗುತ್ತಿದೆ. ಭಾರತ ಸಹಿತ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.

ಯಾರಿಂದ ಆರಂಭಗೊಂಡಿತು?
ನಿದ್ದೆಯ ಅಗತ್ಯ ಮತ್ತು ಅವಶ್ಯಕತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡೆಡಿಕೇಟೆಡ್‌ ಹೆಲ್ತ್‌ಕೇರ್‌ ಪ್ರೊವೃಡರ್, ಮೆಡಿಕಲ್‌ ಕಮ್ಯೂನಿಟಿ ಸದಸ್ಯೆರು ಮತ್ತು ನಿದ್ದೆಯ ಕುರಿತಂತೆ ಅಧ್ಯಯನ ನಡೆಸುವ ತಂಡವೊಂದು ಮೊದಲ ಬಾರಿಗೆ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ವರ್ಲ್ಡ್ ಸ್ಲೀಪ್ ಡೇ ಯನ್ನು ಆರಂಭಿಸಲಾಯಿತು. ಇದರ ಸ್ಥಾಪಕಾಧ್ಯಕ್ಷ ಲಿಬೊರೆಯೋ ಪ್ಯಾರಿನೋ (ಇಟಲಿಯ ಫಾರ್ಮಾ ವಿವಿಯ ನರವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಮತ್ತು ಎಂ.ಡಿ.) ಮತ್ತು ಕಮ್ಯೂನಿಟಿ ಜನರಲ್‌ ಹಾಸ್ಪಿಟಲ್‌ನ ದಿ ಸ್ಲೀಪ್‌ ಸೆಂಟರ್‌ ಸಲಹೆಗಾರ, ನ್ಯೂರಾಲಜಿ ಪ್ರಾಧ್ಯಾಪಕ ಆಂಟೋನಿಯೊ ಕುಲೆಬ್ರಸ್‌ ಅವರು ಜನತೆಗೆ ನಿದ್ದೆಯ ಕುರಿತಾದಂತೆ ಉಪಯೋಗಕಾರಿ ಅಂಶಗಳನ್ನು ಹಂಚಿಕೊಳ್ಳುವ ಉದ್ದೇಶವನ್ನಿಟ್ಟುಕೊಂಡು ಈ ದಿನದ ಆಚರಣೆಗೆ ನಾಂದಿ ಹಾಡಿದರು.

ಯಾಕಾಗಿ?
ನಿದ್ರಾ ಹೀನತೆಯಿಂದ ದೇಹಾರೋಗ್ಯದ ಮೇಲಾಗುವ ವ್ಯತಿರಿಕ್ತ ಪರಿಣಾಮ ಮತ್ತು ಮಾನಸಿಕತೆಯ ಮೇಲಾಗುವ ಅಡ್ಡ ಪರಿಣಾಮಗಳನ್ನು ಮನಗಂಡು ಈ ಆಚರಣೆ ಆರಂಭಿಸಲಾಯಿತು. ಆರೋಗ್ಯದ ವಿಚಾರದಲ್ಲಿ ಜನರಲ್ಲಿ ಕಾಳಜಿ ಮೂಡಿಸುವುದಕ್ಕಾಗಿ ಡಬ್ಲ್ಯೂಎಸ್‌ಡಿ ಜಾಗೃತಿ ಸಂಘಟನೆಯ ಸದಸ್ಯರು ನಿದ್ರೆಯ ಪ್ರಾಮುಖ್ಯದ ಬಗ್ಗೆ ಬೆಳಕು ಚೆಲ್ಲುವುದಕ್ಕಾಗಿ ಈ ದಿನವನ್ನು ಆಚರಿಸುತ್ತಾರೆ. ಈ ಸಂಘಟನೆ 24/7 ಎಂಬಂತೆ ನಿದ್ರಾ ಹೀನತೆಯ ಸಮಸ್ಯೆಗಳು, ಪರಿಹಾರಗಳನ್ನು ಸಮಾಜದ ಮುಂಡುವಲ್ಲಿಯೂ ಸಾರ್ಥಕ ಪ್ರಯತ್ನಗಳನ್ನು ನಡೆಸುತ್ತಿದೆ. ಯಾವುದೇ ವಾಣಿಜ್ಯ ಉದ್ದೇಶದ ದೃಷ್ಟಿಯನ್ನಿಟ್ಟುಕೊಂಡು ಇದನ್ನು ಜಾರಿಗೆ ತಂದಿಲ್ಲ. ಬದಲಾಗಿ ವಿಶ್ವ ಮಟ್ಟದಲ್ಲಿ ಅರಿವು ಮೂಡಿಸುವ ಸದುದ್ದೇಶವನ್ನಿಟ್ಟುಕೊಂಡು ಈ ದಿನಕ್ಕೆ ರೂಪುರೇಷೆಗಳನ್ನು ನೀಡಲಾಗಿದೆ.

ಲೋಗೋ ಬಳಕೆ
ಡಬ್ಲ್ಯೂ ಎಸ್‌ಡಿ ಗೆ ಅಧಿಕೃತ ಲೋಗೋ ಇದ್ದು, ಈ ಚಟುವಟಿಕೆಯಲ್ಲಿ ಅಧಿಕೃತ ಪ್ರಾತಿನಿಧ್ಯವನ್ನು ಹೊಂದಿದವರು ಮಾತ್ರವೇ ಇದನ್ನು ಬಳಕೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಈ ಲೋಗೋವನ್ನು ಬಳಕೆ ಮಾಡುವ ಮುನ್ನ ಕಂಪೆನಿಗಳು ಅಥವಾ ವ್ಯಕ್ತಿಗಳು ಸಂಘಟನೆಯ ಅಧಿಕೃತ ಲಿಖಿತ ಸಮ್ಮತಿಯನ್ನು ಪಡೆಯುವಂತೆ ಸೂಚಿಸಲಾಗಿದೆ. ವರ್ಲ್ಡ್ ಸ್ಲೀಪ್  ಡೇ ಪದ ಬಳಕೆಗೆ ಯುನೈಟೆಡ್‌ ಸ್ಟೇಟ್ಸ್‌ನ ಪೇಟೆಂಟ್‌ ಮತ್ತು ಟ್ರೇಡ್‌ ಮಾರ್ಕ್‌ ಅಫೀಸ್‌ನ ಹಕ್ಕು ಸ್ವಾಮ್ಯವೂ ಇದೆ. ಹಾಗಾಗಿ ಇದನ್ನು ಅನಧಿಕೃತವಾಗಿ ಎಲ್ಲಿಯೂ ಬಳಕೆ ಮಾಡುವಂತಿಲ್ಲ ಮತ್ತು ಬಳಕೆ ಮಾಡಲೇಬೇಕೆಂದಾದಲ್ಲಿ ಟ್ರೇಡ್‌ ಮಾರ್ಕ್‌ ಸೊಸೈಟಿಯ ಲಿಖಿತ ಅನುಮತಿ ಪಡೆದುಕೊಳ್ಳುವುದು ಮುಖ್ಯ.

ಜನಜಾಗೃತಿ
ಮಾರ್ಚ್‌ 21ರ ಅನಂತರ ಪ್ರಾಕೃತಿಕ ಕಾರಣಗಳಿಂದಾಗಿ ಹಗಲಿನ ಪ್ರಮಾಣ ಹೆಚ್ಚಾಗಿ, ರಾತ್ರಿ ಸಮಯ ಕಡಿಮೆಯಾಗುತ್ತದೆ. ಈ ಕಾರಣದಿಂದಲೂ ಸಮರ್ಪಕ ನಿದ್ದೆಯ ಕೊರತೆಯೂ ಎಲ್ಲರನ್ನೂ ಬಾಧಿಸುತ್ತದೆ. ಸಮರ್ಪಕ ನಿದ್ದೆ ಇಲ್ಲದಿದ್ದರೆ, ಸಮತೋಲಿತ ನಿದ್ರೆಯನ್ನು ಕಾಪಾಡಿಕೊಳ್ಳುವ ಶಿಸ್ತು ಜೀವನದಲ್ಲಿ ಇಲ್ಲದೇ ಹೋದರೆ ಅದರಿಂದಾಗುವ ಅಪಾಯಗಳ ಕುರಿತು ಮತ್ತು ಅದಕ್ಕೆ ವಹಿಸಬಹುದಾದ ಮುನ್ನೆಚ್ಚರಿಕೆಗಳ ಕುರಿತ ಸವಿವರವನ್ನು ನೀಡುವ ಶ್ಲಾಘನೀಯ ಕಾರ್ಯ ಡಬ್ಲ್ಯೂಎಸ್‌ಡಿ ಸಂಘಟನೆ ಮಾಡಿಕೊಂಡು ಬರುತ್ತಿದೆ.

ಭುವನ ಬಾಬು, ಪುತ್ತೂರು 

ಟಾಪ್ ನ್ಯೂಸ್

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.