ಮಾಸಾಂತ್ಯಕ್ಕೆ  ಪಶುಭಾಗ್ಯ ಯೋಜನೆ ಅನುಷ್ಠಾನ ಪೂರ್ಣ


Team Udayavani, Mar 15, 2019, 5:49 AM IST

15-march-3.jpg

ಬೆಳ್ತಂಗಡಿ : ರಾಜ್ಯದಲ್ಲಿ ಪಶುಭಾಗ್ಯ ಯೋಜನೆಯಡಿ 19 ಯೋಜನೆ ಮುಖೇನ ಫಲಾನುಭವಿಗಳ ಖಾತೆಗೆ ಸರಕಾರದಿಂದ ನೇರ ಹಣ ಜಮೆಯಾಗಿದ್ದು, ಮಾರ್ಚ್‌ ತಿಂಗಳೊಳಗಾಗಿ ಯೋಜನೆ ಶೆ. 100 ಅನುಷ್ಠಾನಗೊಳ್ಳಗೊಳ್ಳಲಿದೆ.

ಈಗಾಗಲೇ ರಾಜ್ಯಾದ್ಯಂತ ಯೋಜನೆ ಯಶ ಕಂಡಿದ್ದು, ದ.ಕ. ಜಿಲ್ಲೆಯಲ್ಲಿ ಶೇ. 90 ರಷ್ಟು ಪಕ್ರಿಯೆ ಪೂರ್ಣಗೊಂಡಿದೆ. ಪಶುಭಾಗ್ಯ ಯೋಜನೆ, ಮಹಿಳೆಯರಿಗೆ ಪಶುಸಂಗೋಪನ ಕಾರ್ಯಕ್ರಮ, ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ ಯಲ್ಲಿ ಜಿಲ್ಲೆಯ 1,342 ಫಲಾನುಭವಿಗಳಿಗೆ 293.74 ಲಕ್ಷ ರೂ. ಹಣ ಈಗಾಗಲೇ ಜಿಲ್ಲೆಗೆ ಅನುದಾನ ಲಭಿಸಿದೆ. ಹಣ ವಾಣಿಜ್ಯ ಬ್ಯಾಂಕ್‌ ಗಳಿಗೆ ನೇರ ಜಮೆಯಾಗಿದ್ದು, ತಾಲೂಕು ವ್ಯಾಪ್ತಿಯ ಕೆಲವೆಡೆ ಅನುಷ್ಠಾನ ಪ್ರಕ್ರಿಯೆ ಕೊನೇ ಹಂತದಲ್ಲಿದೆ.

 ಪಶುಭಾಗ್ಯ ಯೋಜನೆ ಲಾಭ
ಯೋಜನೆಯಡಿ ರಾಜ್ಯವ್ಯಾಪಿ ವಾಣಿಜ್ಯ ಬ್ಯಾಂಕ್‌ಗಳಿಂದ 1.20 ಲಕ್ಷ ರೂ.ಗಳವರೆಗೆ ಗರಿಷ್ಠ ಸಾಲ ಪಡೆದು ಸಣ್ಣ-ಅತಿ ಸಣ್ಣ ರೈತರಿಗೆ ಹಸು, ಕುರಿ, ಆಡು, ಹಂದಿ ಘಟಕ ಸ್ಥಾಪಿಸಲು ಪ. ಜಾತಿ- ಪಂಗಡದವರಿಗೆ ಶೆ. 50ರಷ್ಟು ಹಾಗೂ ಇತರ ಜನಾಂಗದವರಿಗೆ ಶೆ. 25 ಸಹಾಯಧನ ಒದಗಿಸಲಾಗಿದೆ.

ಈಗಾಗಲೇ ದ.ಕ. ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು 5 ತಾ|ಗಳಲ್ಲಿ ಕಳೆದ ಡಿಸೆಂಬರ್‌ ಅಂತ್ಯಕ್ಕೆ ಆಯ್ಕೆ ಸಮಿತಿ ಫಲಾನುಭವಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದರಿಂದ ಸಂಪೂರ್ಣ ಅನುದಾನ ಬಳಸುವಲ್ಲಿ ಯಶಸ್ವಿಯಾಗಿದೆ.

19 ಯೋಜನೆಗಳಿಂದ ಅನುದಾನ
19 ವಿವಿಧ ಯೋಜನೆಗಳ ಮುಖಾಂತರ ಫಲಾನುಭವಿಗಳಿಗೆ ಹೈನುಗಾರಿಕೆ, ಕುರಿ/ಆಡು, ಹಂದಿ, ಕರು ಘಟಕದಂತೆ ವಿಭಾಗಿಸಲಾಗಿದೆ.

ಹೈನುಗಾರಿಕೆ ಘಟಕ: ಒಬ್ಬರಿಗೆ ವರ್ಷದಲ್ಲಿ ಎರಡು ದನ ಖರೀದಿಗೆ ತಲಾ ರೂ. 60 ಸಾವಿರದಂತೆ 1.20 ಲಕ್ಷ ರೂ. ವೆಚ್ಚ ಭರಿಸಿದೆ. ಅನುದಾನದಲ್ಲಿ ಸಾಗಾಟ ವೆಚ್ಚ, ವಿಮೆ, 6 ತಿಂಗಳ ಮೇವು ಒಳಗೊಳ್ಳಲಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಶೇ. 60 ಸಾಲ ಹಾಗೂ ಶೇ. 60 ಸಾವಿರ ಸಬ್ಸಿಡಿ ನೀಡಿದೆ. ಸಾಮಾನ್ಯ ವರ್ಗದ ಮಹಿಳೆಯರಿಗೆ ಮಾತ್ರ ಅದರಲ್ಲೂ ವಿಧವೆಯರಿಗೆ ಅವಕಾಶ ಕಲ್ಪಿಸಿರುವುದರಿಂದ ಕಡುಬಡವರು ಯೋಜನೆಯಿಂದ ವಿಮುಖರಾಗಿದ್ದಾರೆ.

ಕುರಿ/ಮೇಕೆ ಘಟಕ: ಒಂದು ಕುಟುಂಬದ ಫಲಾನುಭವಿಗೆ 11 ಕುರಿ/ಮೇಕೆ ಘಟಕಕ್ಕೆ 67,440 ರೂ.ನಂತೆ ಸಾಲ ಒದಗಿಸಿದೆ.

ಹಂದಿ ಘಟಕ: 4 ಹಂದಿ ಘಟಕಕ್ಕೆ 1 ಲಕ್ಷ ರೂ. ಸಾಲ, ಶೇ. 75 ಸಬ್ಸಿಡಿ ನಿಗದಿ ಪಡಿಸಲಾಗಿದೆ. ಸದ್ಯಕ್ಕೆ ಒಬ್ಬರಿಗೆ 1 ಹಂದಿ ಸಾಕಣೆಗೆ ಅವಕಾಶ ಕಲ್ಪಿಸಲಾಗಿದೆ.

ಕರು ಘಟಕ: ಹೆಣ್ಣು ಕರು ಇದ್ದಲ್ಲಿ ಅದರ ಪೋಷಣೆಗೆ 18 ಸಾವಿರ ರೂ. ಖರ್ಚು ನೀಡಲಾಗುತ್ತಿದ್ದು, 13,500 ಸಬ್ಸಿಡಿ ಸಿಗಲಿದೆ. ಇದು ನೇರ ಹಾಲಿನ ಡೇರಿಯಲ್ಲಿ ಹಿಂಡಿ ವಿತರಿಸುವ ಮೂಲಕ ಫಲಾನುಭವಿಗಳಿಗೆ ತಿಂಗಳಿಗೆ 50 ಕೆ.ಜಿ. ಯಂತೆ 1 ವರ್ಷದ ವರೆಗೆ ಆಹಾರ ವಿತರಿಸುವ ಯೋಜನೆಯಾಗಿದೆ.

ಖಜಾನೆಯಿಂದ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗಿದ್ದು, ಇದಕ್ಕಾಗಿ ಯುಟಿಆರ್‌ ಕೋಡ್‌ ನೀಡಲಾಗಿದೆ. ಪಶು ಇಲಾಖೆ ಅಧಿಕಾರಿ, ಬ್ಯಾಂಕ್‌ ವ್ಯವಸ್ಥಾಪಕ, ಫಲಾನುಭವಿ ಸಮಕ್ಷಮ ಹಸು, ಆಡು ಖರೀದಿಸಿ ಹಣ ನೀಡಲಾಗುತ್ತಿದೆ. 

ಅನುದಾನ ಸಂಪೂರ್ಣ ಬಳಕೆ
ದ.ಕ. ಜಿಲ್ಲೆಯಲ್ಲಿ ಪಶುಭಾಗ್ಯ ಯೋಜನೆ ಯಡಿ ಅನುದಾನ ಸಂಪೂರ್ಣ ಬಳಕೆಯಾಗಿದೆ. ಆಯಾ ವಿ. ಸಭಾ ಕ್ಷೇತ್ರದ ಮೂಲಕ ಫಲಾನುಭವಿಗಳ ಆಯ್ಕೆ ಪೂರ್ಣಗೊಂಡಿದ್ದು, ಬ್ಯಾಂಕ್‌ನಲ್ಲಿ ಕೆ-2 ಕಲೆಕ್ಷನ್‌ ಖಾತೆಗೆ ಹಣ ಜಮೆಯಾಗಿದೆ. ಶೇ. 90ರಷ್ಟು ಯೋಜನೆ ಅನುಷ್ಠಾನಗೊಂಡಿದೆ.
ಎಸ್‌. ಮೋಹನ್‌
ಉಪನಿರ್ದೇಶಕರು, ಪಶುಪಾಲನ
ಇಲಾಖೆ, ದ.ಕ., ಮಂಗಳೂರು

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

6-madikeri-1

Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ

Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ

1(1

Madanthyar: ಬಾಲಕಿಯರ ಹಾಸ್ಟೆಲ್‌ ಕಟ್ಟಡ ಅನಾಥ!

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Rashmika Mandanna gave hint of Pushpa 3

Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.