ಹೊಸಗದ್ದೆ ಒಳಚರಂಡಿ ತ್ಯಾಜ್ಯ ಶುದ್ಧೀಕರಣ ಘಟಕವೇ ಅಶುದ್ಧ!


Team Udayavani, Mar 15, 2019, 6:27 AM IST

4.jpg

ಸುಳ್ಯ : ನಗರದ ಒಳಚರಂಡಿ ತ್ಯಾಜ್ಯ ಸಂಸ್ಕರಣೆಗೆ ನಿರ್ಮಿಸಲಾಗಿದ್ದ ಹೊಸಗದ್ದೆ ತ್ಯಾಜ್ಯ ಶುದ್ಧೀಕರಣ ಘಟಕ ಪಾಳು ಬಿದ್ದು ಹಸಿ, ಒಣ ಕಸ ಎಸೆಯುವ ಡಂಪಿಂಗ್‌ ಕೇಂದ್ರವಾಗಿ ಬದಲಾಗುತ್ತಿದೆ.

ಎರಡೂವರೆ ಕೋಟಿ ರೂ. ವೆಚ್ಚದ ಒಳಚರಂಡಿ ಯೋಜನೆ ಅಸಮರ್ಪಕ ಅನುಷ್ಠಾನದ ಪರಿಣಾಮ ಶುದ್ಧೀಕರಣ ಘಟಕ ಪ್ರಯೋಜನಕ್ಕೆ ಬಂದಿಲ್ಲ. ಈಗ ನಿರ್ವಹಣೆಯಿಲ್ಲದ ಪರಿಣಾಮ ಅಶುದ್ಧಗೊಂಡು ರೋಗ ರುಜಿನ ಉತ್ಪತ್ತಿ, ಹರಡುವಿಕೆ ಕೇಂದ್ರವಾಗಿ ಮಾರ್ಪಟ್ಟಿದೆ.

ಮನೆ ಬಾಗಿಲು ಮುಚ್ಚಬೇಕು
ಘಟಕದ ಆವರಣದಲ್ಲಿ 6ಕ್ಕಿಂತ ಅಧಿಕ ಬೃಹತ್‌ ಹೊಂಡಗಳಿವೆ. ಯೋಜನೆ ಪ್ರಕಾರ ನಗರದ ಎರಡು ವಲಯಗಳಿಂದ ಬರುವ ತ್ಯಾಜ್ಯ ಹೊಂಡದಲ್ಲಿ ಶೇಖರಣೆಯಾಗಿ, ಬೇರೆ ಬೇರೆ ಹೊಂಡಕ್ಕೆ ಹರಿದು, ಹಂತ ಹಂತವಾಗಿ ಶುದ್ಧೀಕರಣಗೊಂಡು, ಕೃಷಿ ಚಟುವಟಿಕೆಗೆ ಮರು ಬಳಸುವ ಉದ್ದೇಶ ಹೊಂದಲಾಗಿತ್ತು. ಆದರೆ ಒಳಚರಂಡಿ ಸಂಪರ್ಕ ಲೋಪದ ಪರಿಣಾಮ ಯಶಸ್ಸು ಕಾಣಲಿಲ್ಲ. ಎರಡು ವಲಯಗಳ ಪೈಕಿ ಕೆಲವೆಡೆ ಸಂಪರ್ಕ ನೀಡಲಾಗಿದೆ. ಆ ತ್ಯಾಜ್ಯದ ಬಹುಪಾಲು ನಗರದೊಳಗೆ ಸೋರಿಕೆ ಆಗುತ್ತಿದೆ. ಅಲ್ಪ ಪ್ರಮಾಣದ ತ್ಯಾಜ್ಯ ನೀರು ಘಟಕದ ಒಂದು ಹೊಂಡಕ್ಕೆ ಬಂದು ಬೀಳುತ್ತದೆ. ನಿಯಮಾನುಸಾರ ಆ ತ್ಯಾಜ್ಯ ನೀರನ್ನು ಸಂಸ್ಕರಿಸಬೇಕು. ಆ ವ್ಯವಸ್ಥೆ ಇಲ್ಲದ ಕಾರಣ ದುರ್ವಾಸನೆ ಹಬ್ಬಿ ಆಸುಪಾಸಿನ ಮನೆ ಬಾಗಿಲು ಮುಚ್ಚಿಕೊಂಡೇ ದಿನ ಕಳೆಯುತ್ತಾರೆ.

ಎಲ್ಲೆಂದರೆಲ್ಲಿ ಕಸ
ಈಗ ತ್ಯಾಜ್ಯ ಹರಿವು ಕಡಿಮೆ ಆಗುತ್ತಿದೆ. ಆರು ಹೊಂಡಗಳ ಪೈಕಿ ಉಳಿದ ಐದು ಹೊಂಡಗಳು ನಿರುಪಯುಕ್ತವಾಗಿವೆ. ತ್ಯಾಜ್ಯ ತುಂಬುವ ಹೊಂಡ ಸಹಿತ ಎಲ್ಲೆಂದರಲ್ಲಿ ಕಸ ಬಿಸಡಲಾಗಿದೆ. ತಿಂದುಂಡು ಬಿಸಾಡಿದ ಪ್ಲೇಟ್‌, ಕೊಳತೆ ವಸ್ತುಗಳು ಹೊಂಡದೊಳಗಿವೆ. 

ಘಟಕದೊಳಗೆ ಪೊದೆ ತುಂಬಿ ಗುಡ್ಡ ಪ್ರದೇಶದಂತಾಗಿದೆ. ಹೀಗಾಗಿ ಶುದ್ಧೀಕರಣ ಘಟಕ ಅವ್ಯವಸ್ಥೆಯ ಬೀಡಾಗಿದೆ.

ಶುದ್ಧೀಕರಣ ಘಟಕಕ್ಕೆ ಆಕ್ಷೇಪ
ತ್ಯಾಜ್ಯ ನೀರನ್ನು ಮರುಬಳಕೆ ಮಾಡಿಕೊಳ್ಳುವ ಒಳಚರಂಡಿ ಯೋಜನೆ ಅನುಷ್ಠಾನಿಸುವ 2.87 ಕೋಟಿ ರೂ. ಕ್ರಿಯಾಯೋಜನೆಗೆ ಸರಕಾರದಿಂದ 2001 ಜುಲೈ ತಿಂಗಳಲ್ಲಿ ಒಪ್ಪಿಗೆ ಸಿಕ್ಕಿ, 2011ರಲ್ಲಿ ನವೆಂಬರ್‌ನಲ್ಲಿ ತಾಂತ್ರಿಕ ಮಂಜೂರಾತಿ ದೊರೆಯಿತು. ಆದರೆ ಒಳಚರಂಡಿಯಲ್ಲಿ ಹರಿದು ಬರುವ ತ್ಯಾಜ್ಯ ನೀರಿನ ಸಂಸ್ಕರಣಗೆ ಹಳೆಗೇಟು ಸನಿಹದ ಹೊಸಗದ್ದೆ ಬಳಿ ತ್ಯಾಜ್ಯ ಶುದ್ಧೀಕರಣ ಘಟಕ ಸಾಪಿಸುವ ವಿಚಾರಕ್ಕೆ ಸ್ಥಳೀಯ ಪರಿಸರದ 300ಕ್ಕೂ ಅಧಿಕ ಮನೆ ಮಂದಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರತಿಭಟನೆ ಲೆಕ್ಕಿಸದೆ ಅಲ್ಲಿ ಘಟಕ ನಿರ್ಮಿಸಲಾಗಿತ್ತು. ಈಗ ಅದರ ಪರಿಣಾಮ ಜನರ ಮೇಲೆ ಉಂಟಾಗಿದೆ.

ದುರ್ನಾತ, ಸೊಳ್ಳೆಕಾಟ
ವೈಜ್ಞಾನಿಕ ಪದ್ಧತಿಯಲ್ಲಿ ಅನುಷ್ಠಾನ ಆಗದಿರುವ ಕಾರಣ, ಒಳಚರಂಡಿ ವಲಯ 2ರಿಂದ ಬರುವ ತ್ಯಾಜ್ಯ ಇಲ್ಲಿ ಶುದ್ಧೀಕರಣಗೊಳ್ಳುತ್ತಿಲ್ಲ. ಸಂಪರ್ಕ ನೀಡಿದ ವಲಯದಿಂದ ತ್ಯಾಜ್ಯ ನೀರು ಹರಿದು ಬಂದರೂ ನಿಯಮಾನುಸಾರ ಶುದ್ಧೀಕರಣದ ಒಂದು ಹೊಂಡದಿಂದ ಹಂತ-ಹಂತವಾಗಿ ಭರ್ತಿ ಆಗಬೇಕಾದ ತ್ಯಾಜ್ಯ ನೀರು ಎರಡನೇ ಹೊಂಡದಲ್ಲೇ ಬಾಕಿ ಆಗುತ್ತದೆ. ಇದರಿಂದ ಮಳೆಗಾಲದಲ್ಲಿ ಪರಿಸರವಿಡಿ ದುರ್ನಾತ ಬೀರುತ್ತಿದೆ. ಜತೆಗೆ ಸೊಳ್ಳೆ ಕಾಟವು ಹೆಚ್ಚಿ ಆರೋಗ್ಯ ಸಮಸ್ಯೆ ಕೂಡ ಉಂಟಾಗಿದೆ.

ಹರಿಯದ ತ್ಯಾಜ್ಯ
ಅವೈಜ್ಞಾನಿಕ ಕಾಮಗಾರಿ ಕಾರಣದಿಂದ ಒಳ ಚರಂಡಿ ಫೇಲ್‌ ಆಗಿದೆ. ಅದು ದುರಸ್ತಿ ಮಾಡಲಾಗದ ಸ್ಥಿತಿಯಲ್ಲಿದೆ ಅನ್ನುವುದು ಅಧಿಕಾರಿಗಳ ಅಭಿಮತ. 4 ಸಾವಿರಕ್ಕೂ ಅಧಿಕ ಗೃಹ ಮತ್ತು ಗೃಹೇತರ ಕಟ್ಟಡಗಳ ತ್ಯಾಜ್ಯ ಒಳಚರಂಡಿಯಲ್ಲಿ ಹರಿಯದೆ ಮಳೆ ನೀರು ಹರಿಯುವ ಚರಂಡಿಯೊಳಗೆ ಹರಿಯುತ್ತಿದೆ. ವಲಯ-2ರಲ್ಲಿ ಪರಿವೀಕ್ಷಣೆಗೆಂದು ಕನೆಕ್ಷನ್‌ ನೀಡಿದ್ದು, ಆ ವೇಳೆ ಕಾಮಗಾರಿ ಲೋಪ ಬೆಳಕಿಗೆ ಬಂದಿತ್ತು. ಮಳೆಗಾಲದಲ್ಲಿ ಜಟ್ಟಿಪಳ್ಳದ ವೆಟ್‌ ವೆಲ್‌ನಲ್ಲಿ ಉಕ್ಕೇರಿದ ತ್ಯಾಜ ನೀರು ಪಯಸ್ವಿನಿ ನದಿಗೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಹರಡಿ ಜನರು ಮೂಗು ಮುಚ್ಚಿಕೊಳ್ಳುವಂತಾಗಿತ್ತು.

ಕಸ ಹಾಕುವ ಯೋಚನೆ ಕೊನೆ ಕ್ಷಣದಲ್ಲಿ ಬದಲು..!
ಈ ಬಾರಿ ನ.ಪಂ. ಸಾಮಾನ್ಯ ಸಭೆಯಲ್ಲಿ ನಗರ ಪಂಚಾಯತ್‌ ಆವರಣದಲ್ಲಿ ಸಂಗ್ರಹಿಸಲಾಗಿರುವ ಒಣ ಕಸವನ್ನು ಹೊಸಗದ್ದೆಗೆ ಕೊಂಡೊಯ್ಯುವ ಬಗ್ಗೆ ಪ್ರಸ್ತಾವಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅದನ್ನು ಕೈ ಬಿಡಲಾಯಿತು. ಇಲ್ಲಿದ್ದರೆ ಎಲ್ಲೆಂದರಲ್ಲಿ ಬಿಸಾಡುವ ಕಸದ ಜತೆಗೆ ನಗರದ ಕಸವು ಸೇರಿ ಇನ್ನೊಂದು ಕಲ್ಚರ್ಪೆ ಡಂಪಿಂಗ್‌ ಯಾರ್ಡ್‌ ಆಗುವ ಅಪಾಯವಿತ್ತು.

ಪರಿಶೀಲಿಸಿ ಕ್ರಮ
ಒಳಚರಂಡಿ ತ್ಯಾಜ್ಯ ಶುದ್ಧೀಕರಣ ಘಟಕದ ಬಳಿ ಕಸ, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದಿರುವ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 
-ಮತ್ತಡಿ
ಮುಖ್ಯಾಧಿಕಾರಿ, ನ.ಪಂ., ಸುಳ್ಯ

ಆರಂಭದಲ್ಲೇ ವಿರೋಧ
ಈ ಘಟಕಕ್ಕೆ ಆರಂಭದಲ್ಲೇ ವಿರೋಧ ವ್ಯಕ್ತವಾಗಿತ್ತು. ಇಲ್ಲಿ ಸಂಸ್ಕರಣ ವ್ಯವಸ್ಥೆಯು ಇಲ್ಲ. ಮಳೆಗಾಲದಲ್ಲಿ ದುರ್ವಾಸನೆ ಸಹಿಸಲಾಗುತ್ತಿಲ್ಲ. ನಿರ್ವಹಣೆ ಇಲ್ಲದ ಕಾರಣ ಘಟಕ ಅವ್ಯವಸ್ಥೆಗಳ ಆಗರವಾಗಿದೆ.
 - ಕೇಶವ,
 ಸ್ಥಳೀಯ ನಿವಾಸಿ

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.