ವೀರೇಂದ್ರ ಪಾಟೀಲ ಆದರ್ಶ ಮಾದರಿ
Team Udayavani, Mar 15, 2019, 10:23 AM IST
ಚಿಂಚೋಳಿ: ಮಾಜಿ ಮುಖ್ಯಮಂತ್ರಿ ದಿ| ವೀರೇಂದ್ರ ಪಾಟೀಲ ಚಿಂಚೋಳಿ ಮತಕ್ಷೇತ್ರದಿಂದ ಗೆಲುವು ಸಾಧಿಸಿ ರಾಜ್ಯ ರಾಜಕೀಯದಲ್ಲಿ ಉತ್ತಮ ಆಡಳಿತಗಾರ, ದಕ್ಷ ಮತ್ತು ಪ್ರಾಮಾಣಿಕ ಆದರ್ಶ ರಾಜಕಾರಣಿ ಆಗಿ ಸೇವೆ ಸಲ್ಲಿಸಿದ ಕ್ಷೇತ್ರದಲ್ಲಿ ಶಾಸಕ ಡಾ| ಉಮೇಶ ಜಾಧವ್ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದು, ಅವರಿಗೆ ಇಲ್ಲಿನ ಜನರ ಪ್ರೀತಿ ವಿಶ್ವಾಸದ ಅರಿವಿದೆ ಎಂದು ಮಾಜಿ ಶಾಸಕ ಕೈಲಾಶನಾಥ ಪಾಟೀಲ ಹೇಳಿದರು.
ಪಟ್ಟಣದ ವೀರೇಂದ್ರ ಪಾಟೀಲ ಆಂಗ್ಲ ಮಾಧ್ಯಮ ಶಾಲೆ ಸಭಾಂಗಣದಲ್ಲಿ ಗುರುವಾರ ದಿ| ವೀರೇಂದ್ರ ಪಾಟೀಲ ಅವರ 22ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಸಕ ಡಾ| ಉಮೇಶ ಜಾಧವ್ ಕೇವಲ ಆರು ವರ್ಷಗಳ ಹಿಂದೆ ಚಿಂಚೋಳಿ ಮತಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿ ಸಿದ ನಂತರ ತಮ್ಮ ರಾಜಕೀಯ ಜೀವನವನ್ನು ಹೊಸ ದಿಕ್ಕಿನತ್ತ ತೆಗೆದುಕೊಂಡು ಹೊರಟಿದ್ದಾರೆ. ರಾಜಕಾರಣಿಗಳಿಗೆ ಜನರೇ ಜನಾರ್ಧನರು. ಅವರ ಆಶೀರ್ವಾದಂತೆ ನಮ್ಮ ರಾಜಕೀಯ ಜೀವನ ಭವಿಷ್ಯ ನಿರ್ಮಾಣ ಆಗಲಿದೆ. ಕಾರ್ಯಕರ್ತರನ್ನು ಎಂದಿಗೂ ಮರೆಯಬಾರದು ಎಂದರು.
ಮಾಜಿ ಶಾಸಕ ಎಂ. ವೀರಯ್ಯ ಸ್ವಾಮಿ ಮಾತನಾಡಿ, ದಿ. ವೀರೇಂದ್ರ ಪಾಟೀಲ ಆದರ್ಶ ರಾಜಕಾರಣಿಯಾಗಿ ಅನೇಕರಿಗೆ ದಾರಿದೀಪ ತೋರಿಸಿದ್ದಾರೆ. ವೀರೇಂದ್ರ ಪಾಟೀಲರ ಸ್ಮಾರಕ ಸ್ಥಾಪಿಸುವ ಕುರಿತು ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ, ಎನ್. ಧರ್ಮಸಿಂಗ್ ಭರವಸೆ ನೀಡಿದ್ದರು. ಆದರೆ ಇನ್ನುವರೆಗೆ ಕಾರ್ಯಗತ ಆಗಿಲ್ಲವೆಂದು ಅತೃಪ್ತಿ ವ್ಯಕ್ತಪಡಿಸಿದರು.
ಶಾಸಕ ಡಾ|ಉಮೇಶ ಜಾಧವ್ ಮಾತನಾಡಿ, ಹಿಂದುಳಿದ ಪ್ರದೇಶದಲ್ಲಿ 18 ಸಣ್ಣ ನೀರಾವರಿ ಕೆರೆಗಳು ಮತ್ತು ಎರಡು ಮಧ್ಯಮ ನೀರಾವರಿ ಯೋಜನೆಗಳನ್ನು ನಿರ್ಮಿಸಿದ್ದಾರೆ. ನಾನು ಈ ಕ್ಷೇತ್ರಕ್ಕೆ ಎರಡು ಸಲ ಶಾಸಕರಾಗಿ ಆಯ್ಕೆಗೊಂಡಿದ್ದೇನೆ. ನಿಮ್ಮ ಆಶೀರ್ವಾದ ಎಂದಿಗೂ ಮರೆಯುವುದಿಲ್ಲ. ವೀರೇಂದ್ರ ಪಾಟೀಲರು ಎಲ್ಲ ಜಾತಿ ಜನಾಂಗದವರಿಗೆ ಸಾಮಾಜಿಕ ನ್ಯಾಯ ಕೊಡಿಸಿದವರು ಆಗಿದ್ದರು. ಮಾನಸಿಕ ಖನ್ನತೆಗೆ ಒಳಗಾದ ರಾಜಕಾರಣಿಗಳು ವೀರೇಂದ್ರ ಪಾಟೀಲರ ಸಮಾಧಿಗೆ ನಮಸ್ಕರಿಸಿದರೆ ಅವರಿಗೆ ಸಮಾಧಾನ ಸಿಗಲಿದೆ ಎಂದರು.
ಬಂಜಾರಾ ಸಮಾಜದ ಯುವ ಮುಖಂಡ ಸುಭಾಷ ರಾಠೊಡ, ಮಹೆಮೂದ ಪಟೇಲ ಸಾಸರಗಾಂವ, ಹೈಕೋರ್ಟ್ ನ್ಯಾಯವಾದಿ ಕಾಶಿನಾಥ ಮೋತಕಪಳ್ಳಿ, ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ಮಾತನಾಡಿದರು. ಗೋಪಾಲರಾವ್ ಕಟ್ಟಿಮನಿ, ಈಶ್ವರ ನಾಯಕ, ದೇವಲಾ ನಾಯಕ ಇದ್ದರು. ಬಸವರಾಜ ಮಲಿ ಸ್ವಾಗತಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.