ನಟ ಪ್ರವೀಣ್ ದರಾಡೆಗೆ ಸ್ವಾಮಿ ಸಮರ್ಥ ಅನ್ನಛತ್ರದಿಂದ ಸಮ್ಮಾನ
Team Udayavani, Mar 15, 2019, 1:38 PM IST
ಸೊಲ್ಲಾಪುರ: ಮಹಾರಾಷ್ಟ್ರದ ತೀರ್ಥ ಕ್ಷೇತ್ರಗಳಲ್ಲಿ ಅತ್ಯಂತ ಪವಿತ್ರವಾಗಿರುವ ತೀರ್ಥ ಕ್ಷೇತ್ರ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದಲ್ಲಿ ಆಗಮಿಸಿದಾಗ ನಮಗೆ ಯಾವ ಸಮಾಧಾನ ದೊರೆಯುತ್ತದೆ ಅದು ಬೇರೆ ಎಲ್ಲಿಯೂ ಸಿಗುವುದಿಲ್ಲ ಎಂದು ಚಿತ್ರನಟ ಪ್ರವೀಣ್ ದರಡೆ ಅವರು ನುಡಿದರು.
ಮಾ. 12ರಂದು ಅಕ್ಕಲ್‌ಕೋಟೆ ತೀರ್ಥಕ್ಷೇತ್ರದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಟ್ರಸ್ಟ್ ಮಂಡಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಂಡಳದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಮಂಡಳದ ಸಂಸ್ಥಾಪಕ ಅಧ್ಯಕ್ಷರಾದ ಜನ್ಮೆಜಯ ಭೋಸಲೆ ಮತ್ತು ವಿಶ್ವಸ್ತ ಅಮೋಲ್ ಭೋಸ್ಲೆ ಅವರ ಪರಿಶ್ರಮದಿಂದ ಪ್ರಾರಂಭಗೊಂಡಿರುವ ಅನ್ನ ಛತ್ರವು ಇಂದು ದೇಶಾದ್ಯಂತ ಹೆಸರುವಾಸಿಯಾಗಿದೆ. ಅಲ್ಲದೇ ಅನ್ನದಾಸೋಹದ ಜತೆಗೆ ಶಿವಾಜಿ ಮಹಾರಾಜರ ಸ್ಮಾರಕ, ಶಿವಚರಿತ್ರೆ ಮತ್ತು ಭವ್ಯವಾದ ಉದ್ಯಾನ ನಿರ್ಮಾಣ ಮಾಡಿದ್ದರಿಂದ ಭಕ್ತರ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆಯುವಂತಾಗಿದೆ ಎಂದು ಹೇಳಿದರು.
ಮಂಡಳದ ಮುಖ್ಯ ವಿಶ್ವಸ್ತ ಅಮೋಲ್ ಭೋಸ್ಲೆ, ಕಾರ್ಯದರ್ಶಿ ಶ್ಯಾಮರಾವ ಮೋರೆ, ಉಪಾಧ್ಯಕ್ಷ ಅಭಯ ಖೋಬರೆ, ಲಕ್ಷ್ಮಣ್ ಪಾಟೀಲ್, ಅಪ್ಪಾ ಹಂಚಾಟೆ, ಸಿದ್ಧೇಶ್ವರ ಮೋರೆ, ವೈಭವ ನವಲೆ, ಪ್ರವೀಣ್ ದೇಶಮುಖ್, ರೋಹಿತ ಖೋಬರೆ, ನಿಖೀಲ್ ಪಾಟೀಲ್, ಸಿದ್ಧೇಶ್ವರ ಹತ್ತುರೆ, ಶ್ರೀಶೈಲ ಕುಂಬಾರ, ಮಹಾಂತೇಶ ಸ್ವಾಮಿ, ಸ್ವಾಮಿನಾಥ ಗುರವ, ಸಿದ್ಧಪ್ಪ ಪೂಜಾರಿ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.