ಬಿಲ್ಲವರ ಅಸೋಸಿಯೇಶನ್ ಅಂಧೇರಿ: ಶ್ರೀ ಶನಿಮಹಾಪೂಜೆ
Team Udayavani, Mar 15, 2019, 1:45 PM IST
ಮುಂಬಯಿ: ಬಿಲ್ಲವರ ಅಸೋಸಿಯೇಷನ್ ಅಂಧೇರಿ ಸ್ಥಳೀಯ ಕಚೇರಿಯಲ್ಲಿ ಸಾರ್ವಜನಿಕ ಶ್ರೀ ಶನಿಮಹಾಪೂಜೆಯು ಮಾ. 2 ರಂದು ಮಧ್ಯಾಹ್ನ 1ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಅಂಧೇರಿ ಸ್ಥಳೀಯ ಸಮಿತಿಯ ಗೌರವಾಧ್ಯಕ್ಷರಾದ ಬಾಬು ಕೆ. ಪೂಜಾರಿ, ಕಾರ್ಯಾಧ್ಯಕ್ಷರಾದ ರವೀಂದ್ರ ಎಸ್. ಕೋಟ್ಯಾನ್, ಉಪಾಧ್ಯಕ್ಷರಾದ ಸುರೇಶ ಬಿ. ಸುವರ್ಣ, ಕೋಶಾಧಿಕಾರಿ ಸುಧಾರ್ಕ ಜತ್ತನ್ ಮೊದಲಾದವರು ದೀಪ ಪ್ರಜ್ವಲಿಸಿ ಸಾರ್ವಜನಿಕ ಶನಿಪೂಜೆಗೆ ಚಾಲನೆ ನೀಡಿದರು.
ಶನಿಗ್ರಂಥ ಪಾರಾಯಣವು ಯಕ್ಷಗಾನ ತಾಳಮದ್ದಳೆಯ ರೂಪದಲ್ಲಿ ಜರಗಿತು. ಶನಿಗ್ರಂಥ ವಾಚಕರಾಗಿ ವಾಸು ಕೋಟ್ಯಾನ್, ಬಾಲಚಂದ್ರ ಪೂಜಾರಿ, ಸಂತೋಷ್ ಪೂಜಾರಿ, ಯಶೋಧರ ಪೂಜಾರಿ ಸಹಕರಿಸಿದರು. ಭಾಗವತಿಕೆಯಲ್ಲಿ ಮುದ್ದು ಕೆ. ಅಂಚನ್, ನಾರಾಯಣ್ ಪೂಜಾರಿ, ಜಗದೀಶ್ ನಿಟ್ಟೆ ಹಾಗೂ ಅರ್ಥಗಾರಿಕೆಯಲ್ಲಿ ಬಿ. ಎಂ. ಸುವರ್ಣ, ವಾಸು ಕೋಟ್ಯಾನ್, ಜಗದೀಶ್ ಕೋಟ್ಯಾನ್, ಪ್ರಕಾಶ್ ಪಣಿಯೂರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷರಾದ ಚಂದ್ರಶೇಖರ ಎಸ್. ಪೂಜಾರಿ, ಉಪಾಧ್ಯಕ್ಷರಾದ ಹರೀಶ್ ಜಿ. ಅಮೀನ್, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಕೆ. ಬಂಗೇರ, ಜತೆ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಧಾರ್ಮಿಕ ಉಪಸಮಿತಿಯ ಗೌರವ ಕಾರ್ಯದರ್ಶಿ ರವೀಂದ್ರ ಶಾಂತಿ, ಧರ್ಮಪಾಲ್ ಅಂಚನ್, ಭಾಸ್ಕರ ಬಂಗೇರ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ರಾಜಕೀಯ ಪ್ರಮುಖರಾದ ಸಂಸದರಾದ ರಮೇಶ್ ಲಾಡೆR, ಶಿವಸೇನೆಯ ವಿಧಾನಸಭಾ ಕ್ಷೇತ್ರ ಅಂಧೇರಿ ಘಟಕದ ಶಾಖಾ ಪ್ರಮುಖರಾದ ಪ್ರಮೋದ್ ಸಾವಂತ್, ವಾರ್ಡ್ ಕ್ರಮಾಂಕ 75ರ ನಗರ ಸೇವಕಿ ಪ್ರಿಯಾಂಕ ಸಾವಂತ್, ವಾರ್ಡ್ ಕ್ರಮಾಂಕ 76 ರ ನಗರ ಸೇವಕಿ ಕೇಸರಿಬೆನ್, ವಾರ್ಡ್ ಕ್ರಮಾಂಕ 18ರ
ನಗರ ಸೇವಕ ಮುರ್ಜಿ ಪಟೇಲ್ ಹಾಗೂ ಉದ್ಯಮಿಗಳಾದ ಮಹೇಶ್ ಶೆಟ್ಟಿ ಬಾಬಾಸ್ ಗ್ರೂಪ್, ಪ್ರಕಾಶ್ ಪೂಜಾರಿ, ನಿಲೇಶ್ ಪೂಜಾರಿ ಪಲಿಮಾರು, ಪದ್ಮನಾಭ್ ಪೂಜಾರಿ, ದಿವಾಕರ ಪೂಜಾರಿ, ವಿನೋದ್ ಕೋಟ್ಯಾನ್, ಮನೋಜ್ ನಾಯಕ್ ಪಾಲ್ಗೊಂಡಿದ್ದರು.
ಮಹಾದಾನಿಗಳೂ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಂದಿನ ಅನ್ನದಾನ ಸೇವೆಯು ಹರೀಶ್ ಜಿ. ಅಮೀನ್ ಅವರ ವತಿಯಿಂದ ನಡೆಯಿತು. ಶನಿಪೂಜೆಯು ಅತ್ಯಂತ ಶಿಸ್ತುಬದ್ಧವಾಗಿ ಆಯೋಜಿಸಿದ ಯುವವಿಭಾಗದ ಸದಸ್ಯರು ಸೇರಿದ ಭಕ್ತ ಜನಸಾಗರ ಹಾಗೂ ಅತಿಥಿಗಳ ಮೆಚ್ಚುಗೆಗೆ ಪಾತ್ರರಾದರು. ಮಹಿಳಾ ಸದಸ್ಯೆಯರು ಗಣ್ಯರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.
ಬಾಬು ಕೆ. ಪೂಜಾರಿ ಹಾಗೂ ಪರಿವಾರ ಮತ್ತು ಕೃಷ್ಣ ಎನ್. ಪೂಜಾರಿ, ಗೀತಾ ಕೆ. ಪೂಜಾರಿ ಪರಿವಾರ ಇವರು ಪೂಜೆಗೆ ಕುಳಿತಿದ್ದರು. ಪೂಜಾ ವಿಧಿ-ವಿಧಾನವನ್ನು ಪುರೋಹಿತರಾದ ಹರೀಶ್ ಶಾಂತಿ ಹೆಜಮಾಡಿ ನೆರವೇರಿಸಿದರು. ಅರ್ಚಕರಾಗಿ ಯೋಗಾನಂದ್ ಸಾಲ್ಯಾನ್, ಅಚ್ಯುತ ಕೋಟ್ಯಾನ್, ಸಂತೋಷ್ ಪೂಜಾರಿ, ಗೋಪಿನಾಥ್ ಶಾಂತಿ ಸಹಕರಿಸಿದರು. ಸಮಿತಿಯ ಸರ್ವ ಸದಸ್ಯರು, ಯುವ ವಿಭಾಗದ ಸದಸ್ಯರು, ಮಹಿಳಾ ಸದಸ್ಯರು ಸಹಕರಿಸಿದರು. ಸುಶ್ಮಿತಾ ಎಸ್. ಕೋಟ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.