ಕನ್ನಡ ಸಂಘ ಪಿಂಪ್ರಿ-ಚಿಂಚ್ವಾಡ್‌ ವಾರ್ಷಿಕ ಸ್ನೇಹ ಸಮ್ಮಿಲನ ಸಂಭ್ರಮ


Team Udayavani, Mar 16, 2019, 12:30 AM IST

1503mum01.jpg

ಪುಣೆ: ಪಿಂಪ್ರಿ-ಚಿಂಚ್ವಾಡ್‌ ಸೇರಿದಂತೆ ಪುಣೆ ಎಂಬುವುದು ಒಂದು ಸಾಂಸ್ಕೃತಿಕ ನಗರವಾಗಿದ್ದು, ಹಾಗೆಯೇ ಇಲ್ಲಿ ನೆಲೆಸಿರುವ ದೇಶದ ಎÇÉಾ ಭಾಷಾ ಬಾಂಧವರ  ಭಾಷಾಭಿಮಾನ ಕೂಡ ಅಷ್ಟೇ ಮಹತ್ವವನ್ನು ಪಡೆದಿದೆ.  ಪುಣೆಯಲ್ಲಿ ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ತುಳು-ಕನ್ನಡಿಗರಿದ್ದು, ತಮ್ಮ ಕಾಯಕದೊಂದಿಗೆ ಭಾಷಾ ಭಿಮಾನವನ್ನು ಬೆಳೆಸಿಕೊಂಡಿದ್ದೇವೆ. ಇಂದು ನಮ್ಮ ಸಂಸ್ಕೃತಿ, ಕಲೆ ಅಚಾರ, ವಿಚಾರಗಳಿಗೆ ಮಹತ್ವ ಕೊಟ್ಟು ಸಂಘ ಸಂಸ್ಥೆಗಳನ್ನು ಕಟ್ಟಿ ಆ ಮೂಲಕ ನಮ್ಮವರನ್ನು  ಒಂದುಗೂಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಇದು ನಿಜವಾಗಿಯೂ  ಮೆಚ್ಚುವಂತಹ ಕಾರ್ಯವಾಗಿದೆ. ಆದರೆ ಸಂಸ್ಥೆಯನ್ನು ಕಟ್ಟುವಲ್ಲಿ  ನಾವು ತಳಪಾ ಯದಿಂದಲೇ  ಗಟ್ಟಿಯಾಗಿ ಬೆಳೆದು ನಿಲ್ಲುವಂತಹ  ಸುಧೃಡವಾದ ಅಡಿಪಾಯ ಹಾಕಬೇಕು. ಅಷ್ಟೇ ಕಾರ್ಯತತ್ಪರತೆಯ ಸಮಿತಿಯನ್ನು ರಚಿಸಿ ಮುನ್ನಡೆಸುವ ಕಾರ್ಯವನ್ನು ಮಾಡಬೇಕಾಗಿದೆ. ಕೇವಲ ಹಣ ಬಲವಿದೆ, ಜನ ಬಲವಿದೆ ಎಂಬ ಕಾರಣದಿಂದ ಅಧ್ಯಕ್ಷ ಗಾದಿಯನ್ನು ಪಡೆದರೆ ಏನೂ ಸಾಲದು. ಮುಖ್ಯವಾಗಿ ಅವನಿಗೆ ಅನುಭವ ಬಲ, ಭಾಷಾಭಿಮಾನ, ಕಲಾಜ್ಞಾನ ಹಾಗೂ ಎಲ್ಲರನ್ನು ಒಂದುಗೂಡಿಸಿ ಮುನ್ನಡೆಸುವ ಮನೋಭಾವ ಇರಬೇಕು. ತಳಮಟ್ಟದಿಂದ ಕಾರ್ಯಕರ್ತನಾಗಿ, ಸಮಿತಿ ಸದಸ್ಯನಾಗಿ ನಂತರ ಉನ್ನತ ಸ್ಥಾನದಲ್ಲಿ ಕೆಲಸ ಮಾಡಿದ ಅನುಭವ ಇದ್ದಂತಹ ಯಾವುದೇ ವ್ಯಕ್ತಿ ಒಂದು ಸಂಘ ಅಥವಾ ಸಂಘಟನೆಯನ್ನು ಉತ್ತಮ ರೀತಿಯಲ್ಲಿ ನಡೆಸಬಲ್ಲ ಎಂಬುವುದರಲ್ಲಿ ಎರಡು ಮಾತಿಲ್ಲ. ಸಂಘಟನೆ ಮುನ್ನಡೆಯಲು ಪದವಿ  ಮುಖ್ಯವಲ್ಲ, ಬದಲಾಗಿ ಕಾಯಕ ಮುಖ್ಯ. ತಮ್ಮ ಕಾಯಕದ ಜೊತೆಯಲ್ಲಿ ಕಲಾ ಚಟುವಟಿಕೆಗಳಿಗೆ ಮತ್ತು ಕನ್ನಡಕ್ಕಾಗಿ  ತಮ್ಮ ಮನಸ್ಸನ್ನು ಹರಿಯ ಬಿಟ್ಟು, ಕಲಾ ಪ್ರೇಮ,  ಅಪ್ಪಟ ಭಾಷಾಭಿಮಾನದ ಕಾರ್ಯವನ್ನು ಮಾಡಬೇಕಾಗಿದೆ. ಅದಕ್ಕೆ ಎಲ್ಲರ ಯೋಗದಾನದ ಅಗತ್ಯವಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಇನ್ನ ಕುರ್ಕಿಲ್‌  ಬೆಟ್ಟು ಸಂತೋಷ್‌ ಶೆಟ್ಟಿ ಅವರು ನುಡಿದರು.

ಮಾ. 7ರಂದು ಭೋಸ್ರಿಯ ಅಂಕುಶ್‌ ರಾವ್‌ ಲಾಂಡೆY ನಾಟ್ಯಗೃಹದಲ್ಲಿ ನಡೆದ  ಪಿಂಪ್ರಿ-ಚಿಂಚಾÌಡ್‌ ಕನ್ನಡ ಸಂಘ ಇದರ 5ನೇ ವಾರ್ಷಿಕ  ಕನ್ನಡ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಇಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ನಾಡಿನ  ಕಲೆ, ಸಂಸ್ಕೃತಿಯನ್ನು ಪ್ರಚುರಪಡಿಸುವ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ನಮ್ಮಲ್ಲಿ  ಕಲಾ  ಪ್ರೇಮಿಗಳು, ಕಲಾಭಿಮಾನಿಗಳು ಸಾಕಷ್ಟ ಮಂದಿ ಇದ್ದಾರೆ. ಕನ್ನಡಿಗರ ಪ್ರತಿಭಾ ಪ್ರದರ್ಶನಕ್ಕೆ ಮುಖ್ಯವಾಗಿ ವೇದಿಕೆ ಬೇಕು. ಅವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಇಂತಹ ಸಂಘಟನೆಗಳು ಮಾಡಬೇಕು. ನನ್ನ ಪ್ರಕಾರವಾಗಿ  ಪುಣೆಯಲ್ಲಿ ನಮ್ಮ ಎÇÉಾ ಕನ್ನಡಿಗರಿಗಾಗಿ  ಬೃಹತ್‌ ಮಟ್ಟದಲ್ಲಿ ಕರ್ನಾಟಕ ಮಹಾ ಮಂಡಲವನ್ನು ಸ್ಥಾಪಿಸಬೇಕು. ಇದರ ಮೂಲಕ ಕರ್ನಾಟಕ ಸರಕಾರದ ಅನುದಾನವನ್ನು ಪಡೆದು ನಮ್ಮವರಿಗೆ ಸಹಾಯ ಅಗುವಂಥಹ ಕಾರ್ಯಗಳನ್ನು ಮಾಡಬಹುದು. ನಾವು ಪುಣೆಯಲ್ಲಿ ಲೋಕಾರ್ಪಣೆಗೈದ  ಬಂಟರ ಭವನ ತುಳುವರ ಹಾಗೂ ನಮ್ಮ ಎÇÉಾ ಕನ್ನಡಿಗರ ಭವನವಾಗಿದೆ. ಪಿಂಪ್ರಿ-ಚಿಂಚಾÌಡ್‌ ಕನ್ನಡಿಗರು ಕಳೆದ 5 ವರ್ಷದ ಹಿಂದೆ  ಕನ್ನಡ ಸಂಘವನ್ನು ಸ್ಥಾಪಿಸಿ ಅ ಮುಖಾಂತರ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿ¨ªಾರೆ ಅವರಿಗೆ ಅಭಿನಂದನೆಗಳು ಎಂದರು.

ಅಖೀಲ ಭಾರತ ಬ್ರಾಹ್ಮಣ ಸಂಘದ ಅಧ್ಯಕ್ಷರಾದ  ಡಾ| ಗೋವಿಂದ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಪಿಂಪ್ರಿ-ಕನ್ನಡ ಸಂಘದ ಈ ಸ್ನೇಹ ಸಮ್ಮಿಲನ  ಕಾರ್ಯಕ್ರಮವನ್ನು  ಪುಣೆಯ ಉದ್ಯಮಿ ರಾಮ ಮಾನೆ ಹಾಗು ಯೋಗೇಶ್‌ ಗವಲಿ ಮತ್ತು ವೇದಿಕೆಯಲ್ಲಿದ್ದ ಗಣ್ಯರು  ದೀಪ  ಬೆಳಗಿಸಿ ಚಾಲನೆ ನೀಡಿದರು. ಸಂತ ಸಾಹಿತಿ ಇಂಗ್ಲೀಷ್‌  ಮೀಡಿಯಂ ಸ್ಕೂಲ್‌ನ ಸಂಸ್ಥಾಪಕರಾದ  ಶಿವಲಿಂಗ ಡವಳೇಶ್ವರ ಮತ್ತು ಭೋಸರಿಯ ಶಾಸಕರಾದ ಮಹೇಶ್‌ ದಾದ ಲಾಂಡೆY ಅವರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ನಗರ ಸೇವಕರಾದ ರವಿ ಲಾಂಡೆY, ಉದ್ಯಮಿ ಸುಭಾಷ್‌ ನೆಳಗೆ, ಮಾಜಿ ಶಾಸಕ ವಿಲಾಸ್‌  ಲಾಂಡೆ, ನಗರ ಸೇವಕ ವಿಲಾಸ್‌ ಮಡಗೇರಿ ಅವರು ಆಗಮಿಸಿದ್ದರು. ಪಿಂಪ್ರಿ ಪರಿಸರದ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಪಾಲ್ಗೊಂಡಿದ್ದರು. ಹೆಚ್ಚಿನ ಸಂಖ್ಯೆಯ ಕನ್ನಡಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಅತಿಥಿ-ಗಣ್ಯರನ್ನು ಕನ್ನಡ ಸಂಘದ ಪದಾಧಿಕಾರಿಗಳು ಗೌರವಿಸಿದರು. ಅತಿಥಿ-ಗಣ್ಯರು ಸಂದಭೋìಚಿತವಾಗಿ ಮಾತನಾಡಿ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದ ಪ್ರಾಣೇಶ್‌ ಗಂಗಾವತಿ ಮತ್ತು ಬಸವರಾಜು ಮಹಾಮುನಿ, ನರಸಿಂಹ ಜೋಷಿ ಇವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರಗಿತು. ಪಿಂಪ್ರಿ-ಚಿಂಚಾÌಡ್‌ ಕನ್ನಡ ಸಂಘದ ಅಧ್ಯಕ್ಷರಾದ ಎಚ್‌. ಎಸ್‌. ಶಾಸ್ತ್ರಿ, ಉಪಾಧ್ಯಕ್ಷರಾದ ರಾಜೇಂದ್ರ ಕುಲಕರ್ಣಿ, ಪದಾಧಿಕಾರಿಗಳಾದ ಧ್ರುವ ಕುಲಕರ್ಣಿ, ಸುಧಾಕರ ಕಲಶೆಟ್ಟಿ, ಸಂಜು ರೋಡಗಿ, ಪ್ರವೀಣ ಕುಶಬೇಟ, ಅವಿನಾಶ್‌ ಹೊಸಮನಿ, ರಮೇಶ್‌ ಜಹಗಿರ್‌ದಾರ್‌, ಚಂದ್ರಕಾಂತ್‌ ಕುಲಕರ್ಣಿ  ಮೊದಲಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಸ್ನೇಹಾ ಹ್ರುಮ್ಯಾಳ್ಕರ್‌  ಕಾರ್ಯಕ್ರಮ ನಿರ್ವಹಿಸಿದರು.

  ಚಿತ್ರ-ವರದಿ : ಹರೀಶ್‌ ಮೂಡಬಿದ್ರೆ

ಟಾಪ್ ನ್ಯೂಸ್

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.