ವಿಶ್ವಕಪ್ ಬಳಿಕ ಜೆ.ಪಿ. ಡ್ಯುಮಿನಿ ಏಕದಿನ ವಿದಾಯ
Team Udayavani, Mar 16, 2019, 12:30 AM IST
ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಆಲ್‌ರೌಂಡರ್, ಮಾಜಿ ನಾಯಕನೂ ಆಗಿರುವ ಜೀನ್‌ಪಾಲ್ ಡ್ಯುಮಿನಿ ಮುಂಬರುವ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟಿಗೆ ವಿದಾಯ ಘೋಷಿಸಲು ತೀರ್ಮಾನಿಸಿದ್ದಾರೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯುವುದು ಅವರ ಬಯಕೆ. ಡ್ಯುಮಿನಿ 2017ರಲ್ಲೇ ಟೆಸ್ಟ್ ಕ್ರಿಕೆಟಿಗೆ ಗುಡ್‌ಬೈ ಹೇಳಿದ್ದಾರೆ. “ಇಂಥದೊಂದು ನಿರ್ಧಾರ ತೆಗೆದು ಕೊಳ್ಳುವುದು ಸುಲಭವಲ್ಲ. ಆದರೆ ಏಕದಿನದಿಂದ ದೂರ ಸರಿಯಲು ಇದೇ ಸೂಕ್ತ ಸಮಯ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಅಂತಾರಾಷ್ಟ್ರೀಯ ಹಾಗೂ ದೇಶಿ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದೇನೆ’ ಎಂದು ಡ್ಯುಮಿನಿ ಹೇಳಿದರು.
“ಮುಂದಿನ ದಿನಗಳನ್ನು ಕುಟುಂಬ ದವರ ಜತೆ ಕಳೆಯಬೇಕು. ಅವರಿಗೆ ಇನ್ನು ನನ್ನ ಮೊದಲ ಆದ್ಯತೆ. ಇಷ್ಟು ವರ್ಷಗಳ ದಕ್ಷಿಣ ಆಫ್ರಿಕಾ ಪರ ಕ್ರಿಕೆಟ್ ಆಡುವುದನ್ನು ಆನಂದಿಸಿದೆ. ನನ್ನ ಬೆಳವಣಿಗೆಗೆ ಕಾರಣರಾದ ಸಹ ಆಟಗಾರರು, ಕೋಚ್, ಕುಟುಂಬ, ಗೆಳೆಯರು ಮತ್ತು ಅಭಿಮಾನಿಗಳಿಗೆ ಕೃತಜ್ಞತೆಗಳು’ ಎಂದರು.
ಡ್ಯುಮಿನಿ ಏಕದಿನ ಸಾಧನೆ
2004ರ ಶ್ರೀಲಂಕಾ ಪ್ರವಾಸದ ವೇಳೆ ಕೊಲಂಬೊದಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ ಡ್ಯುಮಿನಿ, ಈವರೆಗೆ 193 ಪಂದ್ಯಗಳನ್ನು ಆಡಿದ್ದಾರೆ. 37.39ರ ಸರಾಸರಿಯಲ್ಲಿ 5,047 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳಿವೆ. ಅಜೇಯ 150 ರನ್ ಅತ್ಯುತ್ತಮ ಸಾಧನೆ. 68 ವಿಕೆಟ್ ಕೂಡ ಉರುಳಿಸಿದ್ದಾರೆ. 2011 ಮತ್ತು 2015ರ ವಿಶ್ವಕಪ್ ಕೂಟಗಳಲ್ಲಿ ಆಡಿದ್ದಾರೆ. ದಕ್ಷಿಣ ಆಫ್ರಿಕಾದ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಕೂಡ ವಿಶ್ವಕಪ್ ಬಳಿಕ ವಿದಾಯ ಹೇಳಲು ನಿರ್ಧರಿಸಿದ್ದು, ಈ ಘೋಷಣೆಯಾದ ಕೆಲವೇ ದಿನಗಳಲ್ಲಿ ಡ್ಯುಮಿನಿಯ ನಿರ್ಧಾರ ಪ್ರಕಟಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.