SBI ಗ್ರಾಹಕರು ಈಗ ಕಾರ್ಡ್ ಬಳಸದೆಯೇ ATM ಹಣ ಡ್ರಾ ಮಾಡಬಹುದು
Team Udayavani, Mar 16, 2019, 5:27 AM IST
ಮುಂಬಯಿ : ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ನಿನ್ನೆ ಗುರುವಾರ ಮಾರ್ಚ್ 15ರಿಂದ ತನ್ನ ಗ್ರಾಹಕರಿಗೆ, ಕಾರ್ಡ್ ಬಳಸದೆಯೇ ಎಟಿಎಂ ನಿಂದ ಹಣ ಡ್ರಾ ಮಾಡುವ “Yono cash” ಎಂಬ ಹೊಸ ಅವಕಾಶವನ್ನು ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ಆರಂಭಿಸಿದೆ.
ಎಟಿಎಂ ಕಾರ್ಡ್ ಬಳಸದೆಯೇ ಎಟಿಎಂ ಬೂತ್ ನಿಂದ ಹಣ ಡ್ರಾ ಮಾಡಲು ಎಸ್ಬಿಐ ಗ್ರಾಹಕರು ತಮ್ಮ ಮೊಬೈಲ್ ಮೂಲಕ ಆರು ಅಂಕಿಗಳ ಪಿನ್ ಮತ್ತು ಟ್ರಾನ್ಸ್ಯಾಕ್ಷನ್ ಪಿನ್ ಅನ್ನು ಎಸ್ಎಂಎಸ್ ಮೂಲಕ ಪಡೆದುಕೊಳ್ಳಬೇಕು. ಈ ರೀತಿಯ ಎರಡು ಫ್ಯಾಕ್ಟರ್ ಗಳ ಅಥೆಂಟಿಕೇಶನ್ ನಿಂದ ಗ್ರಾಹಕರ ಎಟಿಎಂ ವಹಿವಾಟು ಸುಭದ್ರವಾಗಿರುತ್ತದೆ.
ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರು, “ದೀರ್ಘಾವಧಿಯಲ್ಲಿ ನಾವು ಕಾರ್ಡ್ ಬಳಕೆಯನ್ನು ನಿಲ್ಲಿಸಲು ಉದ್ದೇಶಿಸಿದ್ದೇವೆ. “Yono cash”ಸೌಕರ್ಯವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಇದು ಅವಲಂಬಿಸುತ್ತದೆ’ ಎಂದು ಹೇಳಿದ್ದಾರೆ.
ಈಚಿನ ದಿನಗಳಲ್ಲಿ ಎಟಿಎಂ ಕಾರ್ಡ್ ಬಳಕೆದಾರರಿಗೆ ಸ್ಕಿಮ್ಮಿಂಗ್ ಮತ್ತು ಕ್ಲೋನಿಂಗ್ ನಿಂದಾಗಿ ತಮ್ಮ ಹಣ ಕಳೆದುಕೊಳ್ಳುವ ಅಪಾಯ ವ್ಯಾಪಕವಾಗಿರುವುದರಿಂದ ಕಾರ್ಡ್ ಬಳಸದೆಯೇ ಮೊಬೈಲ್ ಅಪ್ಲಿಕೇಶನ್ ಮೂಲಕ ಎಟಿಎಂ ನಿಂದ ಹಣ ಡ್ರಾ ಮಾಡುವ “Yono cash” ಸೌಕರ್ಯವನ್ನು ಎಸ್ಬಿಐ ಜಾರಿಗೆ ತಂದಿದೆ.
ಮೊಬೈಲ್ ಅಪ್ಲಿಕೇಶನ್ ಸೌಕರ್ಯದ ಮೂಲಕ SBI ಗ್ರಾಹಕರು ಕಾರ್ಡ್ ಬಳಸದೆಯೇ ದಿನಕ್ಕೆ ಎರಡು ಬಾರಿ ತಲಾ 10,000 ರೂ. ಡ್ರಾ ಮಾಡಬಹುದಾಗಿದ. ಎಸ್ಬಿಐ ಮತ್ತು ಇತರ ಬ್ಯಾಂಕ್ಗಳ ಎಟಿಎಂ ಗಳಲ್ಲಿ ಕಾರ್ಡ್ ಬಳಕೆ ಮೂಲಕ ಹಣ ಡ್ರಾ ಮಾಡುವ ಮಿತಿಗಿಂತಲೂ ಇದು ಜಾಸ್ತಿ ಇದೆ.
ಎಸ್ಬಿಐ ಎಟಿಎಂ ಗಳಲ್ಲಿ ಗ್ರಾಹಕರು ಐದಕ್ಕಿಂತ ಹೆಚ್ಚು ಬಾರಿ ಹಾಗೂ ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ಮಾಡುವ ವ್ಯವಹಾರಗಳಿಗೆ ಬ್ಯಾಂಕ್ ಶುಲ್ಕ ವಿಧಿಸುತ್ತದೆ.
ಕಾರ್ಡ್ ರಹಿತವಾಗಿ ಎಟಿಎಂ ನಿಂದ ಹಣ ಮಾಡುವ “Yono cash” ಸೌಕರ್ಯವನ್ನು ಎಸ್ಬಿಐ ಈಗಿನ್ನು ನ್ಯಾಶನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್ಪಿಸಿಐ) ಅಭಿವೃದ್ಧಿಪಡಿಸಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಗೂ ವಿಸ್ತರಿಸುವ ಕೆಲಸವನ್ನು ಮಾಡುತ್ತಿದೆ. ಇದರಿಂದಾಗಿ ಮೊಬೈಲ್ ನಂಬರ್ ಮಾತ್ರವೇ ಬಳಸಿಕೊಂಡು ಹಣ ವರ್ಗಾವಣೆ ಮಾಡುವುದೂ ಸೇರಿದಂತೆ ಇನ್ನೂ ಹೆಚ್ಚಿನ ಬಗೆಯ ಸೌಕರ್ಯಗಳನ್ನು ಇದು ಒದಗಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.