ಸಾವಯವ ಕೃಷಿಯಲ್ಲಿ ಖುಷಿ ಕಂಡ ವಿದ್ಯಾರ್ಥಿಗಳು


Team Udayavani, Mar 16, 2019, 5:35 AM IST

16-march-5.jpg

ಬೆಳ್ತಂಗಡಿ : ಗಣಿತ ಲೋಕ, ಔಷಧೀಯ ವನ, ಹಿಂದಿ ಸ್ಮಾರ್ಟ್‌ ಕ್ಲಾಸ್‌ ಮೊದಲಾದ ಅದ್ವಿತೀಯ ಕಾಣಿಕೆಗಳನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿ ಹೆಸರುವಾಸಿಯಾಗಿರುವ ಬೆಳ್ತಂಗಡಿ ತಾ|ನ ನಡ ಸರಕಾರಿ ಪ್ರೌಢಶಾಲೆ ಮೌನ ಕ್ರಾಂತಿಯನ್ನು ಮಾಡಿದೆ.

ಶಾಲೆಯ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಇಲ್ಲಿ ಸಾವಯವ ಕೃಷಿ ಕೈತೋಟವನ್ನು ನಿರ್ಮಿಸಿ ಅಧಿಕ ಇಳುವರಿ ಪಡೆದು ಕೊಳ್ಳುವುದರ ಮೂಲಕ ಯಶ ಕಂಡಿದ್ದಾರೆ. ಶಾಲೆಯಲ್ಲಿ ಕೊಯ್ಲು ಮಾಡಿಟ್ಟಿರುವ ತರಕಾರಿಯನ್ನು ನೋಡುವಾಗ ವಿದ್ಯಾರ್ಥಿಗಳ ಮುಖದಲ್ಲಿ ಸಾರ್ಥಕತೆ ಭಾವ ಕಾಣುತ್ತಿದೆ. ತಾವೇ ಬೆಳೆದ ಸಾವಯವ ತರಕಾರಿ ಗಳನ್ನು ಬಿಸಿಯೂಟದಲ್ಲಿ ಸವಿಯುವಾಗ ವಿದ್ಯಾರ್ಥಿಗಳ ಸಂತೋಷ ಅಷ್ಟಿಷ್ಟಲ್ಲ.

 ಜಾಗ ಸಮತಟ್ಟು
ಶಾಲಾಭಿವೃದ್ಧಿ ಸಮಿತಿ ಹಾಗೂ ಹೆತ್ತವರ ಸಹಕಾರದಿಂದ ಸುಮಾರು 1 ಎಕ್ರೆಯಷ್ಟು ಜಾಗವನ್ನು ಸಮತಟ್ಟುಗೊಳಿಸಿ, ಕೃಷಿ ಇಲಾಖೆ ನೆರವಿನೊಂದಿಗೆ ಮೈಸೂರಿನಿಂದ ಸಾವಯವ ಬೀಜಗಳನ್ನು ತರಿಸಿಕೊಂಡು ಇಲ್ಲಿ ನಾಟಿ ಮಾಡಲಾಗಿದೆ. ಪ್ರಗತಿಪರ ಕೃಷಿಕರಾದ ಪ್ರಭಾಕರ ಮಯ್ಯ ಹಾಗೂ ಅಜಿತ್‌ ಆರಿಗರ ಸೂಕ್ತ ಮಾರ್ಗದರ್ಶನದಲ್ಲಿ ಕೋಳಿ ಗೊಬ್ಬರ ಹಾಗೂ ಕುರಿ ಗೊಬ್ಬರಗಳನ್ನು ಮಿಶ್ರ ಮಾಡಿ ಕೊಂಡು ಬೀಜ ನಾಟಿ ಮಾಡಲಾಗಿತ್ತು. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಏಕನಾಥ್‌ ಗೌಡ ಹಾಗೂ ಶಾಲೆಯ 9ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ನೀರು ಹಾಯಿಸಿ ತರಕಾರಿ ಗಿಡಗಳನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ. ಈಗ ಸುಮಾರು ಮುಕ್ಕಾಲು ಎಕ್ರೆ ಜಾಗದಲ್ಲಿ ಕೃಷಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ವಿಸ್ತರಿಸುವ ಚಿಂತನೆಯೂ ಇದೆ.

ಜಿಲ್ಲಾ ಸಭೆಯಲ್ಲಿ ಪ್ರಶಂಸೆ
ಶಾಲೆಯ ಕೈತೋಟವನ್ನು ನೋಡಲು ರಾಷ್ಟ್ರೀಯ ಆಹಾರ ಭದ್ರತ ಮಂಡಳಿಯ ಅಧ್ಯಕ್ಷರು, ಸದಸ್ಯರ ತಂಡ ಭೇಟಿ ನೀಡಿತ್ತು. ಜಿಲ್ಲಾಧಿಕಾರಿ ಅವರ ಜಿಲ್ಲಾ ಮಟ್ಟದ ಸಭೆಯಲ್ಲಿ ಶಾಲಾ ಕೈತೋಟದ ಬಗ್ಗೆ ಪ್ರಸ್ತಾವಿಸಿ ಪ್ರಶಂಸಿಸಲಾಗಿತ್ತು. ತಾ| ಅಕ್ಷರ ದಾಸೋಹದ ಸ. ನಿರ್ದೇಶಕ ಲಕ್ಷ್ಮಣ ಶೆಟ್ಟಿ ಉತ್ತೇಜನದಿಂದ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಅಡುಗೆ ಸಿಬಂದಿ ಬೇಸಗೆಯ ಸಂದರ್ಭದಲ್ಲಿಯೂ ಸೂಕ್ತ ರೀತಿಯಲ್ಲಿ ಕೈತೋಟವನ್ನು ನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಗಳಲ್ಲಿ ಪಠ್ಯದ ಜತೆಗೆ ಸಾವಯವ ಹಾಗೂ ಸಾಂಪ್ರದಾಯಿಕ ಕೃಷಿ ಬಗ್ಗೆ ಅರಿವು ಮೂಡಿಸುವುದರ ಉದ್ದೇಶದಿಂದ ಹಾಗೂ ಮಧ್ಯಾಹ್ನದ ಬಿಸಿಯೂಟಕ್ಕೆ ವಿಷರಹಿತ ತರಕಾರಿ ಗಳನ್ನು ಬಳಕೆ ಮಾಡುವ ಇರಾದೆಯಿಂದ ಈ ಕೈತೋಟವನ್ನು ನಿರ್ಮಿಸಲಾಗಿದೆ.

ತೋಟದಲ್ಲಿ ಏನೇನಿದೆ ?
ತರಕಾರಿ ತೋಟದಲ್ಲಿ ಸೌತೆ ಕಾಯಿ, ಬಾಳೆ, ಪಡುವಲ ಕಾಯಿ, ಚೀನೀಕಾಯಿ, ಬೂದು ಕುಂಬಳ, ಹೀರೇಕಾಯಿ, ಬದನೆ, ಬಸಳೆ, ಅಲಸಂಡೆ, ಬೆಂಡೆಕಾಯಿ, ಸೋರೆಕಾಯಿ, ಹರಿವೆ ಸೊಪ್ಪು ಮೊದಲಾದವುಗಳನ್ನು ಯಥೇತ್ಛವಾಗಿ ಬೆಳೆಯಲಾಗಿದೆ. ಅಡುಗೆ ಕೋಣೆ ಅಂಗಳದಲ್ಲಿ ಒಂದೆಲಗ ನಾಟಿ ಮಾಡಲಾಗಿದೆ.

 ಕೈತೋಟ
ಶಿಕ್ಷಕರು ಮತ್ತು ಮಕ್ಕಳು ಅತ್ಯಂತ ಆಸಕ್ತಿಯಿಂದ ಪ್ರತಿದಿನ ಗಿಡಗಳ ಆರೈಕೆ ಮಾಡುತ್ತಿದ್ದಾರೆ. ಪ್ರಗತಿಪರ ಕೃಷಿಕರು ಹಾಗೂ ಹೆತ್ತವರು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಈಗಾಗಲೇ ಶಾಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಔಷಧೀಯವನ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಹಣ್ಣು ಹಂಪಲು ಗಿಡಗಳ ಅಕ್ಷರ ಕೈತೋಟ ರಚಿಸುವ ಯೋಜನೆಗೆ ಚಾಲನೆ ನೀಡಲಾಗುವುದು.
– ಶರ್ಮಿಳಾ ಬಿ.
ಶಾಲಾ ಮುಖ್ಯ ಶಿಕ್ಷಕಿ

ಟಾಪ್ ನ್ಯೂಸ್

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pro Kabaddi: ಪಾಟ್ನಾ-ಗುಜರಾತ್‌ ಟೈ

Pro Kabaddi: ಪಾಟ್ನಾ-ಗುಜರಾತ್‌ ಟೈ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.