“ಬಡವರ ಫ್ರಿಜ್’ಗೆ ಈಗ ಭಾರೀ ಬೇಡಿಕೆ
Team Udayavani, Mar 16, 2019, 11:10 AM IST
ಹುಮನಾಬಾದ: ಬಿಸಿಲಿನ ಬೇಗೆಯಿಂದ ಬಳಲಿದ ಜನರಿಗೆ ತಂಪನ್ನೀಯಲು ಮಾರುಕಟ್ಟೆಗೆ ಆಗಮಿಸಿರುವ ಬಡವರ ಫ್ರಿಜ್
ಗಳಿಗೆ ಭಾರೀ ಬೇಡಿಕೆ ಬಂದಿದೆ. ವೀರಭದ್ರೇಶ್ವರ ಅಗ್ನಿಕುಂಡದ ಮುಂಭಾಗದಲ್ಲಿ ಬಸವಕಲ್ಯಾಣ ತಾಲೂಕು ರಾಜೇಶ್ವರದ ಪರಿವಾರವೊಂದು ಎರಡು ವಾರದಿಂದ ಮಡಿಕೆ ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಮನೆಯಲ್ಲಿ ಫ್ರಿಜ್‌ಗಳಿರುವ ಈ ಕಾಲದಲ್ಲಿಯೂ ಜನರು ಈ ಮಡಿಕೆಗಳನ್ನು ಖರಿದಿಸುತ್ತಾರಾ ಎಂಬ ಸಾರ್ವಜನಿಕರ ಪ್ರಶ್ನೆಗೆ ಪದವಿ ಶಿಕ್ಷಣ ಪಡೆಯುತ್ತಿರುವ ಬಸವಕಲ್ಯಾಣ ತಾಲೂಕು ರಾಜೇಶ್ವರ ಗ್ರಾಮದ ಧನರಾಜ ಕುಂಬಾರ ಹೀಗೆ ಪ್ರತಿಕ್ರಿಯಿಸುತ್ತಾರೆ. ಇದೂ ಮೇಲ್ನೋಟಕ್ಕೆ ಬಡವರ ಫ್ರಿಜ್ ಎಂಬ ಖ್ಯಾತಿಗೆ ಪಾತ್ರವಾದರೂ ಇವುಗಳನ್ನು ಕೇವಲ ಬಡವರು ಮಾತ್ರ ಖರೀದಿಸುವುದಿಲ್ಲ. ಶೇ.75ರಷ್ಟು ಮಡಿಕೆಗಳು ಫ್ರಿಜ್ ಉಳ್ಳವರ ಮನೆಗೇ ಹೋಗುತ್ತವೆ. ಫ್ರಿಜ್ ನೀರು ಕುಡಿಯುವುದರಿಂದ ಸೀತ ಬರುತ್ತದೆ. ಆದರೆ ನಮ್ಮ ಫ್ರಿಜ್ ನೀರು ದೇಹಕ್ಕೆ ತಂಪು ನೀಡುವುದರ ಜೊತೆಯಲ್ಲಿ ಆರೋಗ್ಯಕ್ಕೂ ಉತ್ತಮ ಎನ್ನುತ್ತಾರೆ.
ಅಂದಹಾಗೆ ನಮ್ಮ ಬಳಿ ನೀರುವ ಸಂಗ್ರಹ ಸಾಮರ್ಥ್ಯ ಆಧರಿಸಿ, 50 ರೂ.ದಿಂದ 350 ರೂ. ವರೆಗಿನ ಮಡಿಕೆಗಳಿವೆ.
ಪ್ರತಿನಿತ್ಯ ಎಲ್ಲ ಅಳತೆಯ ಮಡಿಕೆ ಸೇರಿ ಕನಿಷ್ಟ 75ರಿಂದ 100ಮಡಿಕೆಗಳು ಮಾರಾಟ ಆಗುತ್ತವೆ. ಅಂದಹಾಗೆ ಈ ಎಲ್ಲ
ಮಡಿಕೆಗಳನ್ನೂ ಯಾವುದೋ ದೂರದ ಊರಿಂದ ಬಂದು ಖರೀದಿಸುವುದಿಲ್ಲ. ಪ್ರತೀ ವರ್ಷ ಜನವರಿ ಕೊನೆ ವಾರದಿಂದ
ಏಪ್ರಿಲ್ ಅಂತ್ಯದ ವರೆಗೆ ತಯಾರಿಸುತ್ತೇವೆ. ನಮ್ಮಲ್ಲಿ ಸಿದ್ಧಗೊಂಡ ಮಡಿಕೆಗಳು ಉಳಿದ ನಿದರ್ಶನ ವಿರಳ ಎಂದು
ಧನರಾಜ ಹೇಳುತ್ತಾರೆ. ಇಸ್ಲಾಂಪೂರ ಗ್ರಾಮದ ನಾಗರೆಡ್ಡಿ ಅವರು ದೇಸಿ ಫ್ರಿಜ್ ಬಳಕೆ ಆರೋಗ್ಯಕ್ಕೆ ಪೂರಕ ಎನ್ನುತ್ತಾರೆ.
ಫ್ರಿಜ್ ನೀರು ಸೇವನೆ ಅನಾರೋಗ್ಯಕ್ಕೆ ಮೂಲ. ತಕ್ಷಣಕ್ಕೆ ಆರಾಮ ಅನ್ನಿಸಿದರೂ ನಂತರ ಸೀತ ಇತರೆ ಕಾಯಿಲೆ
ಬರುವುದು ಖಚಿತ. ವಿದ್ಯಾರ್ಥಿಗಳಿಗೆ ತಂಪಾದ ನೀರಿನ ಸೌಲಭ್ಯ ಕಲ್ಪಿಸಲು ಪ್ರತೀ ವರ್ಷ ಕನಿಷ್ಟ 25 ಮಡಿಕೆ ಖರೀದಿಸುತ್ತೇನೆ. ನಮ್ಮ ಪುತ್ರ ನಿರ್ವಹಿಸುವ ಇನ್ನೊಂದು ಕಾಲೇಜಿಗೂ ಅಷ್ಟೇ ಮಡಿಕೆಗಳನ್ನು ಖರೀದಿಸುತ್ತೇವೆ. ಮಕ್ಕಳು ತಂಪು ನೀರು ಸೇವಿಸಿ ನೆಮ್ಮದಿಯಿಂದ ಪಾಠ ಆಲಿಸುತ್ತಾರೆ.
ಮೀನಾಕ್ಷಿ ಯಲಾಲ್, ಯಲಾಲ್ ಶಿಕ್ಷಣ ದತ್ತಿಗಳು
ಶಶಿಕಾಂತ ಕೆ.ಭಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.