ಭಾರತೀಯರ ಮೇಲೂ ದ್ವೇಷ ಕಾರಿದ ಹಂತಕ
Team Udayavani, Mar 17, 2019, 12:30 AM IST
ಕ್ರೈಸ್ಟ್ ಚರ್ಚ್: “ಐರೋಪ್ಯ ನೆಲದಲ್ಲಿರುವ ಭಾರತೀಯರು, ರೊಮೇನಿಯನ್ನರು, ಆಫ್ರಿಕನ್ನರು, ತುರ್ಕಿಸ್ತಾನಿಗಳು ಹಾಗೂ ಇನ್ನಿತರ ರಾಷ್ಟ್ರಗಳ ಮೂಲದವರನ್ನು ಅಲ್ಲಿಂದ ಹೊಡೆದೋಡಿಸಬೇಕು. ಆ ಕೆಲಸಕ್ಕೆ ನಾನು ಈಗ ಶ್ರೀಕಾರ ಹಾಕಿದ್ದೇನೆ’. ಇದು ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ ನಡೆಸಿದ ಹಂತಕ ಬ್ರೆಂಟನ್ ಟರ್ರಾಂಟ್ (28) ಆಕ್ರೋಶಭರಿತ ಮಾತು. ದಾಳಿ ನಡೆಸುವ ತನ್ನ ದುಷ್ಕೃತ್ಯದ ಸಮರ್ಥನೆಗಾಗಿ 71 ಪುಟಗಳ “ಕಾರಣಗಳನ್ನು’ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿರುವ ಬ್ರೆಂಟನ್, “ನಮ್ಮವರಲ್ಲ’ದವರು ನಮ್ಮ ನೆಲದಲ್ಲೇಕೆ ಬಂದು ನೆಲೆಸಬೇಕು ಎಂದು ಪ್ರಶ್ನಿಸಿದ್ದಾನಲ್ಲದೆ, ಪೂರ್ವಭಾಗದಿಂದ ಯೂರೋಪ್ ನೆಲಕ್ಕೆ ವಲಸೆ ಬಂದಿರುವವರನ್ನು ಯಾವಾಗ ಬಂದರು, ಹೇಗೆ ಬಂದರು ಎಂಬ ತರ್ಕ ಮಾಡದೆ ಹೊಡೆದೋಡಿಸಬೇಕು. ವಿಶೇಷವಾಗಿ, ಭಾರತ, ಚೀನಾ, ಟರ್ಕಿ ದೇಶದವರು ಯೂರೋಪಿಯನ್ನರ ಪ್ರಬಲ ಶತ್ರುಗಳು ಎಂದು ಕಿಡಿಕಾರಿದ್ದಾನೆ.
ತನ್ನನ್ನು ತಾನು “ಜನಾಂಗೀಯ ದ್ವೇಷಿ ಹಾಗೂ ರಾಷ್ಟ್ರೀಯವಾದಿ’ ಎಂದೂ, ತಾನು ನಡೆಸಿದ ಹತ್ಯಾಕಾಂಡವನ್ನು “ಶ್ವೇತ ಹತ್ಯಾಕಾಂಡ’ (ವೈಟ್ ಜೆನೋಸೈಡ್) ಎಂದೂ ಬಣ್ಣಿಸಿಕೊಂಡಿದ್ದಾನೆ. ಜನಾಂಗೀಯ ದ್ವೇಷಿಗಳಲ್ಲೊಬ್ಬನಾದ ಆ್ಯಂಡ್ರಿಸ್ ಬೆಹರಿಂಗ್ ಬ್ರಿವಿಕ್‌ನಿಂದ (2011ರಲ್ಲಿ ನಾರ್ವೆಯಲ್ಲಿ 77 ಮಂದಿಯನ್ನು ಹತ್ಯೆಗೈದಿದ್ದವ) ಸ್ಫೂರ್ತಿ ಪಡೆದಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ, 1930ರಲ್ಲಿ ಯೂರೋಪ್ ರಾಷ್ಟ್ರಗಳಲ್ಲಿ ಅಪಾಯಕಾರಿಯಾಗಿ ಬೆಳೆದು ನಿಂತಿದ್ದ ಓಸ್ವಾಲ್ಡ್ ಮೋಸ್ಲೆಯ ಚಿಂತನೆಗೆ ತನ್ನ ಆಲೋಚನೆಗಳು ಹೋಲುತ್ತವೆ ಎಂದಿದ್ದಾನೆ.
9 ಮಂದಿ ನಾಪತ್ತೆ: ಶೂಟೌಟ್‌ನಲ್ಲಿ ಇಬ್ಬರು ಭಾರತೀಯರು ಅಸುನೀಗಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಎರಡೂ ಶೂಟೌಟ್ ಪ್ರಕರಣಗಳಿಗೆ ಸಂಬಂಧಿಸಿ 9 ಭಾರತೀಯರು ಕಾಣೆಯಾಗಿದ್ದು ಅವರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯೂಜಿಲೆಂಡ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.