ಉಡುಪಿ-ಚಿಕ್ಕಮಗಳೂರು ಕ್ಷೇತ್ರ:ಪಕ್ಷಾಂತರ ನಿರಂತರ; ಟಿಕೆಟ್ ಯಾರಿಗೆ?
Team Udayavani, Mar 17, 2019, 1:12 AM IST
ಉಡುಪಿ: ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ನಾಯಕರು, ಅನುಯಾಯಿಗಳು ಪಕ್ಷಾಂತರ ಮಾಡುವುದು ಕಂಡು ಬರುವ ಸಾಮಾನ್ಯ ಸಂಗತಿ. ಈ ನಿಟ್ಟಿನಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಇತಿಹಾಸವನ್ನು ಗಮನಿಸುವಾಗ 1970ರ ದಶಕದ ಬಳಿಕ ಪಕ್ಷಾಂತರ ಪರ್ವ ಕಂಡು ಬರುತ್ತಿದೆ.ಇದು ಎಲ್ಲ ಪಕ್ಷಗಳಲ್ಲಿಯೂ ಇದೆ.
ಉಡುಪಿ ಲೋಕಸಭಾ ಕ್ಷೇತ್ರದಿಂದ 1977ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಟಿ.ಎ.ಪೈ ಅವರು ಕಾಂಗ್ರೆಸ್‌ನಿಂದ ಸಿಡಿದೆದ್ದ ದೇವರಾಜ ಅರಸು ಅವರ ಪಕ್ಷದಿಂದ 1980ರಲ್ಲಿ ಸ್ಪರ್ಧಿಸಿದ್ದರು. 1998ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ ಐ.ಎಂ.ಜಯರಾಮ ಶೆಟ್ಟಿ ಅವರು ಬಳಿಕ ಸಮಾಜವಾದಿ ಪಕ್ಷ, ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. 2004ರಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಮನೋರಮಾ ಮಧ್ವರಾಜ್ ಅವರು ಆಗಷ್ಟೇ ಕಾಂಗ್ರೆಸ್‌ನಿಂದ ಬಂದವರಾಗಿ ದ್ದರು, ಮತ್ತೆ ಕಾಂಗ್ರೆಸ್‌ಗೆ ಹೋದರು.
ಚಿಕ್ಕಮಗಳೂರು ಕ್ಷೇತ್ರದಿಂದ 1971, 1977ರಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ನ ಡಿ.ಬಿ.ಚಂದ್ರೇಗೌಡರು, 1980ರ
ಬಳಿಕ ಜನತಾದಳ, 2008ರಲ್ಲಿ ಬಿಜೆಪಿ ಸೇರಿ ಬೆಂಗಳೂರಿನಲ್ಲಿ ಸಂಸದರಾಗಿ ಆಯ್ಕೆಯಾದರು. 1984ರಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾದ ಡಿ.ಕೆ.ತಾರಾದೇವಿ ಬಳಿಕ, ಬಿಜೆಪಿ ಸೇರಿ ಕೇಂದ್ರ ಸಚಿವೆಯಾಗಿ ಈಗ ಕಾಂಗ್ರೆಸ್‌ನಲ್ಲಿದ್ದಾರೆ. 1996ರಲ್ಲಿ ಗೆಲುವು ಸಾಧಿಸಿದ ಜನತಾದಳದ ಬಿ.ಎಲ್. ಶಂಕರ್, ಈಗ ಕಾಂಗ್ರೆಸ್ ಮುಂದಾಳುಗಳಲ್ಲಿ ಒಬ್ಬರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 1991ರಿಂದ 99ರ ವರೆಗೆ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ವಿ.ಧನಂಜಯ ಕುಮಾರ್, 2012ರ ಬಳಿಕ ಕೆಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದರು.
ಟಿಕೆಟ್ ಯಾರಿಗೆ?
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾದ ಬಳಿಕ 2012ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಅದಕ್ಕೂ ಹಿಂದೆ ಜನತಾದಳ ದಲ್ಲಿದ್ದರು; ಪಕ್ಷೇತರರಾಗಿಯೂ ಇದ್ದರು. ಈಗ ಬಿಜೆಪಿ ಸೇರಿ ಪ್ರಮುಖ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ.
ಕಾರ್ಯಕರ್ತರ ಒಲವಿನಲ್ಲಿ ಮೊದಲಿಗರಾಗಿದ್ದಾರೆ. 2014ರಲ್ಲಿ ಬಿಜೆಪಿಯಿಂದ ದಾಖಲೆಯ ವಿಜಯ
ಸಾಧಿಸಿದ ಶೋಭಾ ಕರಂದ್ಲಾಜೆ ಅವರು ಈ ಹಿಂದೆ ಯಡಿಯೂರಪ್ಪನವರು ಸ್ಥಾಪಿಸಿದ ಕೆಜೆಪಿ ಪಕ್ಷದ
ಮುಂದಾಳಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.