ವಿರಾಜಪೇಟೆ -ಕಣ್ಣೂರು ಅಂತಾರಾಜ್ಯ ಹೆದ್ದಾರಿಯಲ್ಲಿ ವೇಗಕ್ಕೆ ಕಡಿವಾಣ
Team Udayavani, Mar 17, 2019, 4:17 AM IST
ಗೋಣಿಕೊಪ್ಪಲು: ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದೊಳಗೆ ಹಾದು ಹೋಗಿರುವ ಹುಣಸೂರು, ವಿರಾಜಪೇಟೆ ಕಣ್ಣೂರು ಅಂತಾರಾಜ್ಯ ಹೆದ್ದಾರಿಯಲ್ಲಿನ ವಾಹನಗಳ ಅತಿಯಾದ ವೇಗಕ್ಕೆ ಈಗ ಬ್ರೇಕ್ ಬಿದ್ದಿದೆ.
ಅರಣ್ಯದೊಳಗಿನ ಆನೆಚೌಕೂರು ಭಾಗದಲ್ಲಿ 5 ಕಿಮೀ ಉದ್ದದ ರಸ್ತೆಗೆ 10 ಉಬ್ಬುಗಳು ನಿರ್ಮಾಣವಾಗಿವೆ. ಪ್ರತಿ 500 ಮೀಟರ್‌ಗೆ ಒಂದು ಉಬ್ಬನ್ನು ನಿರ್ಮಿಸಲಾಗಿದೆ.ಈ ಬಗ್ಗೆ ರಸ್ತೆ ಬದಿಯಲ್ಲಿ ನಾಮಫಲಕ ಅಳವಡಿಸಿ ವಾಹನ ಚಾಲಕರಿಗೆ ಸೂಚನೆ ನೀಡಲಾಗಿದೆ. 500 ಮೀಟರ್ ಗೆ ಒಂದೊಂದು ಉಬ್ಬುಗಳಿರುವುದರಿಂದ ಅರಣ್ಯ ಕಳೆಯುವವರೆಗೂ ಉಬ್ಬುಗಳಿದ್ದೇ ಇರುತ್ತವೆ ಎಂಬುದು ಹೊಸದಾಗಿ ಸಂಚರಿಸುವ ವಾಹನ ಚಾಲಕರಿಗೂ ಮನವರಿಕೆಯಾಗಲಿದೆ. ಹೀಗಾಗಿ ಚಾಲಕರು ಎಚ್ಚರವಹಿಸಿ ವಾಹನಗಳ ವೇಗವನ್ನು ಸಹಜವಾಗಿಯೇ ನಿಯಂತ್ರಣದಲ್ಲಿ ಇಡಲಿದ್ದಾರೆ. ಇದರಿಂದ ಮನಸೊ ಇಚ್ಚೆ ವಾಹನಗಳನ್ನು ಓಡಿಸಿ ವನ್ಯಜೀವಿಗಳ ಪ್ರಾಣಕ್ಕೆ ಕಂಟಕವಾಗಿದ್ದ ಸ್ಥಿತಿ ನಿವಾರಣೆಯಾಗಲಿದೆ.
6ತಿಂಗಳ ಹಿಂದೆ ಕೇರಳದ ಖಾಸಗಿ ಬಸ್ ಒಂದು ಆನೆಚೌಕೂರು ಬಳಿಯ ಮತ್ತಿಗೋಡು ಸಾಕಾನೆ ಶಿಬಿರದ ಬಳಿ ರಂಗ ಎಂಬ ಹೆಸರಿನ ಸಾಕಾನೆಯೊಂದಕ್ಕೆ ಡಿಕ್ಕಿ ಹೊಡೆದು ಅದರ ಸಾವಿಗೆ ಕಾರಣವಾಗಿತ್ತು. ಅರಣ್ಯದೊಳಗಿನ ಹೆದ್ದಾರಿಯಲ್ಲಿ ವಾಹನಗಳ ಅತಿಯಾದ ವೇಗವೇ ಆನೆ ಸಾವಿಗೆ ಕಾರಣ ಎಂದು ಇವುಗಳ ನಿಯಂತ್ರಣಕ್ಕೆ ವನ್ಯ ಜೀವಿಪ್ರಿಯರು ಸುಪ್ರೀಂಕೋರ್r ಮೊರೆ ಹೋಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್r ಹೆದ್ದಾರಿಯಲ್ಲಿನ ವಾಹನಗಳ ವೇಗವನ್ನು ನಿಯಂತ್ರಿಸಲು ಕಟ್ಟು ನಿಟ್ಟಾಗಿ ಆದೇಶಿಸಿತ್ತು.
ಆನೆ ಮೃತಪಟ್ಟಂದಿನಿಂದ ಹೆದ್ದಾರಿ ಪಟ್ರೋಲ್ ಪೊಲೀಸ್ ವಾಹನ ಅರಣ್ಯದೊಳಗೆ ಗಸ್ತು ತಿರುಗುತ್ತಾ ಅತಿಯಾದ ವೇಗದ ಚಾಲಕರಿಗೆ ದಂಡ ವಿದಿಸಿ ವೇಗ ನಿಯಂತ್ರಣಕ್ಕೆ ಮುಂದಾಗಿತ್ತು. ಆದರೂ ಕೂಡ ಕೆಲವು ವಾಹನ ಚಾಲಕರು ವೇಗವನ್ನು ನಿಯಂತ್ರಿಸಿರಲಿಲ್ಲ. ಇದಕ್ಕೆ ಈಗ ಲೋಕೋಪಯೋಗಿ ಇಲಾಖೆಯೇ ಉಬ್ಬುಗಳನ್ನು ನಿರ್ಮಿಸುವ ಮೂಲಕ ಸುಪ್ರೀಂ ಕೋರ್r ನ ಆದೇಶ ಪಾಲನೆಗೆ ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ಎಂಜಿನಿಯರ್ ನವೀನ್ ಒಂದು ಉಬ್ಬು ನಿರ್ಮಾಣಕ್ಕೆ ರೂ 50 ಸಾವಿರ ವೆಚ್ಚವಾಗಲಿದೆ. ಆನೆಚೌಕೂರು ಭಾಗದಿಂದ ಮಜ್ಜಿಗೆಹಳ್ಳದ ವರೆಗೆ 10 ಉಬ್ಬುಗಳನ್ನು ನಿರಿ°ಸಲಾಗಿದೆ. ಇಷ್ಟೇ ಪ್ರಮಾಣದ ಉಬ್ಬುಗಳು ಅಳ್ಳೂರು ಕಡೆಗೂ ನಿರ್ಮಾಣಗೊಳ್ಳಲಿದೆ. ಅದು ಮೈಸೂರು ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಿದೆ. ವಾಹನಕ್ಕೆ ಮತ್ತು ಚಾಲಕರಿಗೆ ತೊಂದರೆಯಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ಉಬ್ಬು ನಿರ್ಮಿಸಲಾಗಿದೆ.
ಸಿಮೆಂಟ್, ಮರಳು ಇಂಟರ್ ಲಾಕ್ ಟೈಲ್ಸ್, ಡಾಂಬಾರ್ ಮೂಲಕ ಉಬ್ಬುಗಳನ್ನು ನಿರ್ಮಿಸಲಾಗಿದೆ ಎಂದರು.
ಈ ಹೆದ್ದಾರಿಯ ಒಂದು ಬದಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವಿದ್ದರೆ, ಮತ್ತೂಂದು ಬದಿಯಲ್ಲಿ ಪಿರಿಯಾಪಟ್ಟಣ, ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಗೆ ಒಳಪಟ್ಟ ಮೀಸಲು ಅರಣ್ಯವಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನ ವನದೊಳಗೆ ಸಂಜೆ 6 ಗಂಟೆ ಬಳಿಕ ವಾಹನ ಸಂಚಾರಕ್ಕೆ ನಿಷೇಧವಿರುವುದರಿಂದ ಕೇರಳದ ಮಾನಂದವಾಡಿ, ತೆಲಚೇರಿ ಭಾಗಗಳಿಗೆ ತೆರಳುವ ವಾಹನಗಳು ರಾತ್ರಿವೇಳೆ ಆನೆಚೌಕೂರು ಮಾರದಲ್ಲಿಯೇ ಚಲಿಸುತ್ತಿವೆ. ಹೀಗಾಗಿ ಈ ಭಾಗದಲ್ಲಿ ರಾತ್ರಿವೇಳೆ ಸಾವಿರಾರು ವಾಹನಗಳು ಎಡೆಬಿಡದೆ ಸಂಚರಿಸುತ್ತಿವೆ. ಇದರಿಂದ ಅರಣ್ಯದೊಳಗೆ ರಸ್ತೆದಾಟುವಾಗ ವಾಹನಗಳ ಜೀವಕ್ಕೆ ಕಂಟಕ ಎದುರಾಗಿತ್ತು. ಉಬ್ಬು ನಿರ್ಮಾಣದಿಂದ ಈ ಆತಂಕ ದೂರವಾಗಲಿದೆ. ಲೋಕೋಪ ಇಲಾಖೆಯ ಸಜಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.