ಮಕ್ಕಳ ಸುರಕ್ಷಿತ ಸಂಚಾರ: ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿರ್ಲಕ್ಷ್ಯ?
Team Udayavani, Mar 17, 2019, 4:25 AM IST
ಉಡುಪಿ: ಶಿಕ್ಷಣ ಪಡೆಯಲು ದೂರದ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಾಹನದಲ್ಲಿ ತೆರಳುವ ಮುದ್ದು ಕಂದಮ್ಮಗಳ ಸುರಕ್ಷೆ ಬಗ್ಗೆ ಆತಂಕ ಮೂಡಿಸುವ ವಾತಾವರಣ ಸೃಷ್ಟಿಯಾಗಿದೆ. ನರ್ಸರಿಯಿಂದ ಹೈಸ್ಕೂಲ್ ತನಕದ ಮಕ್ಕಳ ಸುರಕ್ಷಿತ ಸಂಚಾರ ವ್ಯವಸ್ಥೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೆಚ್ಚು ಆಸಕ್ತಿ ತೋರಿದಂತೆ ಕಾಣುತ್ತಿಲ್ಲ.
ಕುಂದಾಪುರ ತಾಲೂಕಿನ ತ್ರಾಸಿ ಮೊವಾಡಿ ಕ್ರಾಸ್‌ನಲ್ಲಿ 2016ರ ಜೂ. 21ರಂದು ನಡೆದ ಭೀಕರ ಅಪಘಾತದಲ್ಲಿ 8 ಮಕ್ಕಳು ಬಲಿಯಾಗಿದ್ದು ಇನ್ನೂ ಮರೆತಿಲ್ಲ. ಏತನ್ಮಧ್ಯೆ ಶುಕ್ರವಾರ ಉಡುಪಿ ಸಂತೆಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಶಾಲಾ ಮಕ್ಕಳು ಹೋಗುತ್ತಿದ್ದ ಅಟೋರಿಕ್ಷಾ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಸುಮಾರು ಏಳು ವಿದ್ಯಾರ್ಥಿಗಳು ಗಾಯಗೊಂಡಿರುವುದು ಮಕ್ಕಳ ಸುರಕ್ಷೆ ಬಗ್ಗೆ ಮತ್ತೆ ಚರ್ಚಿಸುವಂತೆ ಆಗಿದೆ.
ಜಿಲ್ಲೆಯ ಕಾಪು, ಕುಂದಾಪುರ, ಬ್ರಹ್ಮಾವರ, ಕಾರ್ಕಳ, ಹೆಬ್ರಿ ತಾಲೂಕಿನ ಶೇ. 80ರಷ್ಟು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಸಾರಿಗೆ ವ್ಯವಸ್ಥೆಯನ್ನು ನೆಚ್ಚಿಕೊಂಡಿ¨ªಾರೆ. ಇದರಿಂದಾಗಿ ಬೆಳಗ್ಗೆ , ಸಂಜೆ ವೇಳೆ ಹೆಚ್ಚಿನ ವಿದ್ಯಾರ್ಥಿಗಳು ಆಟೋದಲ್ಲಿ ಜೋತು ಬಿದ್ದು ಒಬ್ಬರ ಮೇಲೊಬ್ಬರು ಕುಳಿತುಕೊಂಡು ಹೋಗುವ ಸ್ಥಿತಿ ಜೀವಂತವಾಗಿದೆ.
ಕುರಿಗಳಂತೆ ತುಂಬುತ್ತಾರೆ!
ಅಟೋಗಳಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುವ ಅಟೋ ಚಾಲಕರು ಮಕ್ಕಳನ್ನು ಕುರಿಗಳಂತೆ ತುಂಬಿಸುತ್ತಾರೆ. ಪೋಷಕರಿಗೆ ಸಮಯದ ಅಭಾವ ಇರುವುದರಿಂದ ಮಕ್ಕಳು ಶಾಲೆ ತಲುಪಿದರೆ ಸಾಕು ಎನ್ನುವ ಮನೋಭಾವದಿಂದ ರಿಕ್ಷಾದಲ್ಲಿ ಕಳಿಸುತ್ತಾರೆ. ಇದರಲ್ಲಿ ಮಕ್ಕಳು ಕಂಬಿ ಮೇಲೆ ಕುಳಿತು ಸರ್ಕಸ್ ಮಾಡಿಕೊಂಡು ಶಾಲೆ ತಲುಪುತ್ತಿದ್ದಾರೆ.
ಮೇಲ್ವಿಚಾರಣೆ ಇಲ್ಲ
ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಮಕ್ಕಳ ಸುರಕ್ಷೆ ಕುರಿತಾಗಿ ಲಿಖೀತ ಆದೇಶ ಹೊರಡಿಸಿದೆಯೇ ವಿನಾ ಆದೇಶ ಪಾಲಿಸುವಲ್ಲಿ ಮೇಲ್ವಿಚಾರಣೆ ನಡೆಸುತ್ತಿಲ್ಲ ಎಂಬ ಆರೋಪವಿದೆ. ಕೇಂದ್ರ ಸರಕಾರ ಹೊರಡಿಸಿರುವ ಆರ್.ಟಿ.ಇ ನಿಯಮಗಳನ್ನು ಪಾಲಿಸುವಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಎಡವಿದೆ.
ಫೋನ್ -ಇನ್ ಕಾರ್ಯಕ್ರಮದಲ್ಲಿ ದೂರು
ಕೆಲವು ದಿನಗಳ ಹಿಂದೆ ಎಸ್ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕೊಬ್ಬರು ಕರೆ ಮಾಡಿ ಶಾಲಾ ವಾಹನಗಳು ಸರ್ವಿಸ್ ರೋಡ್ ಇದ್ದರೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಕ್ಕಳನ್ನು ಇಳಿಸುತ್ತಿರುವುದಾಗಿ ದೂರು ನೀಡಿದ್ದರೂ ಕ್ರಮ ತೆಗೆದುಕೊಂಡಿಲ್ಲ. ತಾಲೂಕು ಶಿಕ್ಷ ಣ ಇಲಾಖೆ ಮತ್ತು ಆರಕ್ಷಕ ಇಲಾಖೆ ಜತೆಗೂಡಿ ಸುರಕ್ಷತೆಯ ಕುರಿತಾಗಿ ಹೆಚ್ಚಿನ ಗಮನಹರಿಸುವ ಅನಿವಾರ್ಯತೆ ಇದೆ.
ಶಾಲಾ ವಾಹನ ದುಬಾರಿ ವೆಚ್ಚ
ಖಾಸಗಿ ಶಾಲೆಗಳು ತಮ್ಮ ವಾಹನಗಳ ಸೇವೆ ಪಡೆಯುವ ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿರುವುದರಿಂದ ಪೋಷಕರು ಕಡಿಮೆ ವೆಚ್ಚದ ಆಟೋಗಳನ್ನು ಅವಲಂಬಿಸುತ್ತಿ¨ªಾರೆ.
6 ತಿಂಗಳಲ್ಲಿ ವೈಜ್ಞಾನಿಕ ವರದಿ ಸಿದ್ಧ
ಎರಡು ದಿನಗಳ ಹಿಂದೆ ನಡೆದ ಆರ್‌ಟಿಒ ಸಭೆಯಲ್ಲಿ ಮಕ್ಕಳ ಸುರಕ್ಷ ತೆ ಬಗ್ಗೆ ಸರಕಾರಿ ಮತ್ತು ಖಾಸಗಿ ಶಾಲೆಗಳ ಪ್ರಾಂಶುಪಾಲರ, ಪೋಷಕರ ಸಭೆ ನಡೆಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ. ಶಾಲೆಗಳ ವ್ಯಾಪ್ತಿಗೆ ಬರುವ ಖಾಸಗಿ ವಾಹನಗಳು, ಅಟೋ, ಬಸ್ ಮತ್ತು ಶಾಲಾ ವಾಹನಗಳ ಚಾಲಕರಿಗೆ ಪ್ರತ್ಯೇಕ ಸುರûಾ ನಿಯಮಗಳನ್ನು ಪಾಲಿಸುವಂತೆ ಕಡ್ಡಾಯವಾಗಿ ಆದೇಶ ನೀಡಲಾಗುತ್ತದೆ. ವಾಹನದಲ್ಲಿ ಸಂಚರಿಸುವ ಮಕ್ಕಳ ಸುರಕ್ಷತೆ ಕುರಿತು ವೈಜ್ಞಾನಿಕ ವರದಿ ಸಿದ್ಧಪಡಿಸಿ ಮುಂದಿನ ಆರು ತಿಂಗಳಲ್ಲಿ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳಲಾಗುತ್ತದೆ.
ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಉಡುಪಿ
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.