‘ಚಕ್ರವರ್ತಿಗೆ ಎಲ್ಲಾ ಇದೆ ಆದ್ರೆ ಧೈರ್ಯ ಸ್ವಲ್ಪ ಕಮ್ಮಿ !’: ಸೋಮಣ್ಣ
Team Udayavani, Mar 17, 2019, 5:59 AM IST
ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶತಾಯಗತಾಯ 22 ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಮೊನ್ನೆ ತಾನೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾಜೀ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಆರ್. ಅಶೋಕ್ ನಡುವೆ ಟಾಕ್ ಫೈಟ್ ನಡೆದ ಬೆನ್ನಲ್ಲೇ ಇವತ್ತು ಸುತ್ತೂರು ಶ್ರೀಗಳ ಸಮ್ಮುಖದಲ್ಲಿಯೇ ವಿ. ಸೋಮಣ್ಣ ಮತ್ತು ಆರ್. ಅಶೋಕ್ ನಡುವೆ ಲಘು ಮಾತಿನ ಸಮರ ನಡೆದಿದೆ.
‘ಎಲ್ಲಾ ಚಕ್ರವರ್ತಿ ನೇತೃತ್ವದಲ್ಲೇ ಹೋಗ್ತಿದ್ದೀವಿ, ಚಕ್ರವರ್ತಿಗೆ ಎಲ್ಲಾ ಇದೆ ಆದ್ರೆ ಧೈರ್ಯ ಕಮ್ಮಿ’ ಎಂದು ವಿ. ಸೋಮಣ್ಣ ಅವರು ಶ್ರೀಗಳ ಎದುರು ಹೇಳುತ್ತಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡುವ ಆರ್. ಅಶೋಕ್ ಅವರು ‘ಎಲ್ಲಾ ಯೂಸ್ ಮಾಡಿಕೊಳ್ತಾರೆ, ಒಳ್ಳೆಯದಾದ್ರೆ ಹೇಳಲ್ಲ, ಕೆಟ್ಟದಾದ್ರೆ ನನ್ನ ತಲೆಗೆ ಕಟ್ಟುತ್ತಾರೆ’ ಎಂದು ಹೇಳುವ ಮೂಲಕ ಸೋಮಣ್ಣ ಅವರಿಗೆ ಟಾಂಗ್ ನೀಡುತ್ತಾರೆ. ತಕ್ಷಣವೇ ಎಚ್ಚೆತ್ತುಕೊಂಡ ವಿ. ಸೋಮಣ್ಣ, ‘ನಾನೊಬ್ನೇ ಇವರ ಪರ, ಇವರ ಮನಸ್ಸು ಒಳ್ಳೆಯದಿದೆ’ ಎಂದು ಸಮಜಾಯಿಸಿ ನೀಡುತ್ತಾರೆ.
ಬಿ.ಜೆ.ಪಿ.ಯ ಇಬ್ಬರು ಪ್ರಭಾವಿ ನಾಯಕರ ಈ ಮಾತಿನ ವರಸೆಗೆ ಸುತ್ತೂರು ಸ್ವಾಮೀಜಿಯವರ ಸಹಿತ ಅಲ್ಲಿದ್ದವರೆಲ್ಲಾ ಒಂದು ಕ್ಷಣ ಆಶ್ಚರ್ಯಕ್ಕೀಡಾಗಬೇಕಾಯಿತು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್ ಅವರನ್ನು ಸ್ವಾಮೀಜಿ ಭೇಟಿಗೆಂದು ಈ ನಾಯಕರು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.