ಈ ಬಾರಿಯೂ ಬಜೆಟ್ ಅನುಷ್ಠಾನ ವಿಳಂಬ
Team Udayavani, Mar 17, 2019, 6:39 AM IST
ಬೆಂಗಳೂರು: ರಾಜಧಾನಿ ಜನತೆಗೆ ಬಜೆಟ್‌ನಲ್ಲಿ ಬಿಬಿಎಂಪಿ ಘೋಷಿಸಿರುವ ಯೋಜನೆಗಳ ಅನುಷ್ಠಾನ ಈ ಬಾರಿಯೂ ವಿಳಂಬವಾಗಲಿದೆ. ಆ ಮೂಲಕ ಈ ವರ್ಷವೂ ಬಿಬಿಎಂಪಿ ಕೈಗೊಳ್ಳಬೇಕಿದ್ದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುವುದು ಅನುಮಾನವಾಗಿದೆ.
ಪಾಲಿಕೆ ಪ್ರಸಕ್ತ ಸಾಲಿನಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ 12,800 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದೆ. ಬಿಬಿಎಂಪಿ ಆದಾಯಕ್ಕೂ ಬಜೆಟ್‌ನಲ್ಲಿನ ವೆಚ್ಚಕ್ಕೂ ಹೋಲಿಕೆಯಾಗದಿದ್ದರೂ, ಕೌನ್ಸಿಲ್ ಸಭೆಯಲ್ಲಿ ಅನುಮೋದಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ.
ಇದೀಗ ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಾಗಿದೆ. ಹೀಗಾಗಿ ಚುನಾವಣೆ ಮುಗಿಯುವವರೆಗೆ ಬಜೆಟ್‌ಗೆ ಸರ್ಕಾರದಿಂದ ಅನುಮೋದನೆ ದೊರೆಯುವುದಿಲ್ಲ. ಹೀಗಾಗಿ 2018-19ರಂತೆ 2019-20ರ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನಕ್ಕೂ ಪಾಲಿಕೆ ಒದ್ದಾಡಬೇಕಿದ್ದು, ಆದಾಯ ಸಂಗ್ರಹದಲ್ಲೂ ಹಿಂದೆಬೀಳುವ ಆತಂಕ ಎದುರಾಗಿದೆ.
ಇನ್ನು ಬಿಬಿಎಂಪಿ ಆಯುಕ್ತರೇ, ಬಜೆಟ್ ಅವಾಸ್ತವಿಕವಾಗಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 13 ಸಾವಿರ ಕೋಟಿ ರೂ. ಹೊಸ್ತಿಲಲ್ಲಿರುವ ಬಜೆಟ್‌ನಲ್ಲಿ ಕನಿಷ್ಠ 5 ಸಾವಿರ ಕೋಟಿ ರೂ. ಮೊತ್ತದ ಯೋಜನೆಯನ್ನು ಕಡಿತಗೊಳಿಸಬೇಕು. ಇಲ್ಲದಿದ್ದರೆ, ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಅನುಮೋದನೆಗೂ ಮೊದಲು ಬಜೆಟ್ ಗಾತ್ರ ಕಡಿತಗೊಳ್ಳುವ ಸಾಧ್ಯತೆಯಿದೆ. ಬಜೆಟ್ ಮಂಡನೆಗೂ ,ಮೊದಲೇ ರಾಜ್ಯ ಸರ್ಕಾರದ ಅನುದಾನ ನೆಚ್ಚಿಕೊಳ್ಳದೆ ಬಿಬಿಎಂಪಿ ಆದಾಯಕ್ಕೆ ತಕ್ಕಂತೆ ಬಜೆಟ್ ಮಂಡಿಸುವಂತೆ ನಗರಾಭಿವೃದ್ಧಿ ಇಲಾಖೆಯು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಪತ್ರ ಬರೆದಿತ್ತು.
ಆದರೂ, ಸಮಿತಿ ಅಧ್ಯಕ್ಷೆ ಹೇಮಲತಾ, ಬಜೆಟ್ ಗಾತ್ರವನ್ನು 12,800 ಕೋಟಿ ರೂ.ಗೆ ತಲುಪಿಸಿದರು. ಹೀಗಾಗಿ ಬಜೆಟ್ ಪರಿಶೀಲನೆ ನಡೆಸಲಿರುವ ನಗರಾಭಿವೃದ್ಧಿ ಇಲಾಖೆ, ಯಾವೆಲ್ಲ ಯೋಜನೆಗಳನ್ನು ಕಡಿತಗೊಳಿಸಬಹುದು ಎಂದು ನಿರ್ಧರಿಸಲು 1ರಿಂದ 2 ತಿಂಗಳು ಬೇಕು. ಹೀಗಾಗಿ ಸರ್ಕಾರ ಜುಲೈ ತಿಂಗಳಲ್ಲಿ ಬಜೆಟ್‌ಗೆ ಅನುಮೋದನೆ ನೀಡಿ ಬಿಬಿಎಂಪಿಗೆ ಕಳುಹಿಸುವ ಸಾಧ್ಯತೆಗಳಿವೆ.
ಪೂರ್ಣ ಅನುಷ್ಠಾನ ಕಷ್ಟ: ಆರ್ಥಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳ ನಂತರ ಬಜೆಟ್‌ಗೆ ಅನುಮೋದನೆ ದೊರೆತರೆ ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಕೇವಲ 8 ತಿಂಗಳ ಕಾಲಾವಕಾಶ ಸಿಗಲಿದೆ. ಹೀಗಾಗಿ ಕಾರ್ಯಕ್ರಮಗಳು ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗುವ ಸಾಧ್ಯತೆ ಕಡಿಮೆ. ಆದ್ದರಿಂದ ಯೋಜನೆಗಳು ಕೇವಲ ಘೋಷಣೆಗೆ ಸೀಮತ ಎಂಬಂತಾಗಿವೆ.
ಕಳೆದ ಬಾರಿ ಅರ್ಧ ಅನುಷ್ಠಾನ: ಕಳೆದ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆದ ಹಿನ್ನೆಲೆಯಲ್ಲಿ 2018-19ನೇ ಸಾಲಿನ ಬಿಬಿಎಂಪಿ ಬಜೆಟ್ ಪೂರ್ಣ ಪ್ರಮಾಣದಲ್ಲಿ ಜಾರಿಗೊಂಡಿಲ್ಲ. ಬಜೆಟ್‌ನಲ್ಲಿನ ಯೋಜನೆಗಳಲ್ಲಿ ಅನುಷ್ಠಾನಗೊಳಿಸಿರುವುದು, ಚಾಲನೆ ನೀಡಿರುವ ಯೋಜನೆಗಳ ಪ್ರಮಾಣ ಶೇ.50 ಮಾತ್ರ. ಉಳಿದ ಯೋಜನೆಗಳು ಇನ್ನಷ್ಟೇ ಜಾರಿಯಾಗಬೇಕು.
ಬಜೆಟ್ ಅನುಷ್ಠಾನದ ವಿವರ (ಕೋಟಿ ರೂ.ಗಳಲ್ಲಿ)
ವರ್ಷ ಆಯವ್ಯಯ ಗಾತ್ರ ಅನುಷ್ಠಾನ ಮೊತ್ತ
2010-11 8862.04 3626.18
2011-12 9398.54 3838.99
2012-13 9920.35 4358.05
2013-14 8497.48 3343.39
2014-15 6024.52 3777.80
2015-16 5409.68 5197.93
2016-17 9353.10 5309.61
2017-18 9994.54 7513.53
ಬಿಬಿಎಂಪಿ ಬಜೆಟ್‌ನಲ್ಲಿ ಶೇ.30ರಷ್ಟು ಅನುದಾನ ಬಳಕೆಗೆ ಸರ್ಕಾರ ಅನುಮೋದನೆ ನೀಡಲಿದೆ. ಉಳಿದಂತೆ ನೀತಿ ಸಂಹಿತೆ ಮುಗಿದ ಕೂಡಲೇ ಬಜೆಟ್‌ನ ಶೀಘ್ರ ಅನುಷ್ಠಾನ ಕುರಿತು ಮೇಯರ್ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.