ಬಿಹಾರದಲ್ಲಿ ಎನ್.ಡಿ.ಎ. ಕ್ಷೇತ್ರ ಹಂಚಿಕೆ ಫೈನಲ್
Team Udayavani, Mar 17, 2019, 11:04 AM IST
ಪಾಟ್ನಾ: ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಕೇಂದ್ರದಲ್ಲಿ ಮರಳಿ ಅಧಿಕಾರದ ಗದ್ದುಗೆಗೆ ಏರಲು ನಿರ್ಣಾಯಕವಾಗಿರುವ ರಾಜ್ಯಗಳಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿರುವ ಬಿಹಾರ ಕೂಡಾ ಒಂದು. 2014ರಲ್ಲಿ ಮೋದಿ ಜೊತೆ ನಿತೀಶ್ ಮುನಿಸಿಕೊಂಡಿದ್ದ ಕಾರಣ ಜೆಡಿಯು ಪಕ್ಷದ ಬೆಂಬಲವಿಲ್ಲದೇ ಬಿಜೆಪಿ ಇಲ್ಲಿ ಸ್ಪರ್ಧಿಸಿ ಬರೋಬ್ಬರಿ 28 ಸೀಟುಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ನಿತೀಶ್ ಕುಮಾರ್ ಅವರು ಮತ್ತೆ ಎನ್.ಡಿ.ಎ. ಮೈತ್ರಿಕೂಟಕ್ಕೆ ಮರಳಿರುವುದರಿಂದ ಇಲ್ಲಿ ಮೋದಿಗೆ ಹೆಚ್ಚಿನ ಬಲ ಸಿಕ್ಕಿದಂತಾಗಿದೆ. ಈ ಬಾರಿ ಬಿಜೆಪಿ ಮತ್ತು ಜೆಡಿಯು ತಲಾ 17 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಹಾಗೂ ಪಾಸ್ವಾನ್ ಅವರ ಎಲ್.ಜೆ.ಪಿ. ಪಾಲಿಗೆ 6 ಕ್ಷೇತ್ರಗಳು ಒಲಿದಿವೆ.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವು ಪಾಟ್ನಾ ಸಾಹೀಬ್, ಪಾಟಲೀಪುತ್ರ, ಅರಾ, ಬಕ್ಸಾರ್, ಸರಾನ್, ಮಹಾರಾಜಗಂಜ್, ಪೂರ್ವಿ ಚಂಪಾರಣ್, ಪಶ್ಚಿಮ್ ಚಂಪಾರಣ್, ಧರ್ಬಾಂಗ, ಮುಝಾಫರಪುರ್, ಬೇಗುಸರಾಯ್, ಉಜೈರ್ ಪುರ್, ಮಧುಬನಿ, ಸಸರಮ್, ಅರಾರಿಯಾ, ಶೇಹಿಯಾರ್ ಮತ್ತು ಔರಂಗದಾಬಾದ್ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಇನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳವು ನಳಂದಾ, ಮುಂಗೇರ್, ಭಾಗಲ್ಪುರ, ಕಾರಕಟ್, ಗಯಾ, ಜಹಾನಾಬಾದ್, ಪೂರ್ಣಿಯಾ, ಬಾಂಕಾ, ಕಿಶನ್ ಗಂಜ್, ಸುಪೌಲ್, ಕಥಿಹಾರ್, ವಾಲ್ಮೀಕಿ ನಗರ್, ಸಿವಾನ್, ಗೋಪಾಲ್ ಗಂಜ್, ಜಂಝರ್ ಪುರ್, ಸೀತಾಮರ್ಹಿ ಮತ್ತು ಮಾಧೇಪುರಗಳಲ್ಲಿ ಸ್ಪರ್ಧಿಸಲಿದೆ.
ಪಾಸ್ವಾನ್ ಅವರ ಲೋಕ ಜನತಾಂತ್ರಿಕ ಪಕ್ಷದ ಅಭ್ಯರ್ಥಿಗಳು ಹಾಜೀಪುರ್, ವೈಶಾಲಿ, ಸಮಷ್ಠಿಪುರ್, ನಾವಾಡ, ಖಗಾರಿಯಾ ಮತ್ತು ಜಮುಯ್ ಕ್ಷೇತ್ರಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಮೈತ್ರಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪಾಟ್ನಾದಲ್ಲಿರುವ ಜೆಡಿಯು ಕಛೇರಿಯಲ್ಲಿ ಪಕ್ಷದ ಹಿರಿಯ ನಾಯಕ ಬಶಿಷ್ಠ ನಾರಾಯಣ್ ಸಿಂಗ್ ಅವರು ಇಂದು ಪ್ರಕಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.