ನುಗ್ಗೆ ಬೆಳೆಯಲು ನುಗ್ಗಿ


Team Udayavani, Mar 17, 2019, 12:06 PM IST

s-1.jpg

ನುಗ್ಗೆ ಬೆಳೆಯುವುದು ತೀರ ಕಷ್ಟದ ಕೆಲಸವಲ್ಲ. ಆದರೆ ನಿರ್ವಹಣೆ ಮಾತ್ರ ಅಚ್ಚುಕಟ್ಟಾಗಿರಬೇಕು.  ರಾಸಾಯನಿಕ ಬಳಸಿ ನುಗ್ಗೆ ಬೆಳೆಯುತ್ತೇನೆ ಅಂದರೆ ಪ್ರಯೋಜನವಿಲ್ಲ. ಸಾವಯವ ಪದ್ಧತಿಯಲ್ಲಿ ಬೆಳೆದು ನೋಡಿ, ಬಂಪರ್‌ ಇಳುವರಿ ಗ್ಯಾರಂಟಿ. ಅಂದಹಾಗೇ, ನುಗ್ಗೆ ಬೆಳೆಯುವುದು ಹೇಗೆ ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿದೆ ಮಾಹಿತಿ. 

ನುಗ್ಗೆ ಬೆಳೆಯ ಬೇಕೆಂದಿರುವ ಕೃಷಿಕರೇ ಕೆಲ ಸತ್ಯ ತಿಳಿದುಕೊಳ್ಳಿ.  ರಾಸಾಯನಿಕ ಬಳಸಿ ನುಗ್ಗೆ ಕೃಷಿ ಮಾಡಲು ಆಗದು. ಚೆನ್ನಾಗಿ ಬೆಳೆ ಬರಬೇಕು, ಲಾಭ ಮಾಡಬೇಕು ಅಂದರೆ ಮೊದಲು ನುಗ್ಗೆಗೆ ಯಥೇಚ್ಚವಾಗಿ ಪೋಷಕಾಂಶಗಳು ದೊರೆಯುವಂತೆ ಮಾಡಬೇಕು. 

ನುಗ್ಗೆ ತೀರ ದೊಡ್ಡ  ಗಿಡವಾಗುವ ಬೆಳೆ ಅಲ್ಲ, ಆರೇಳು ಅಡಿ ಎತ್ತರಕ್ಕೆ ಪೊದೆಯಾಕಾರದಲ್ಲಿ ಬೆಳೆಸಬೇಕು, ಹೀಗಾಗಿ ಜಾಸ್ತಿ ಅಂತರ ಇಟ್ಟು ಬೆಳೆಯುವ ಅವಶ್ಯಕತೆ ಇಲ್ಲ. ಸಾಲಿನಿಂದ ಸಾಲಿಗೆ ಏಳು ಅಡಿ, ಗಿಡದಿಂದ ಗಿಡಕ್ಕೆ ಆರು ಅಡಿ ಸಾಕು. ಹೀಗೆ ನಿಮ್ಮ ಜಮೀನಿನಲ್ಲಿ ಅಳತೆ ಪ್ರಕಾರ ಗುರುತು ಮಾಡಿಕೊಂಡು ಒಂದೂವರೆ ಅಡಿ ಆಳ-ಅಗಲದ ಗುಂಡಿ ತೆಗೆಸಬೇಕು.  ಗುಂಡಿಯಿಂದ ತೆಗೆದ ಮಣ್ಣು ಹಾಗೂ ಅಷ್ಟೇ ಪ್ರಮಾಣದ ಒಳ್ಳೆಯ ಕೊಟ್ಟಿಗೆ ಗೊಬ್ಬರ ಬೆರೆಸಿ ಅದೇ ಗುಂಡಿಗೆ ತುಂಬಬೇಕು. ಹೀಗೆ ರೆಡಿಯಾದ ಗುಂಡಿಯಲ್ಲಿ ಸದೃಢವಾದ ಸಸಿ ನೆಡಬೇಕು.

 ನಿಮಗೆ ಗೊತ್ತೇ ಇರುವಂತೆ, ನುಗ್ಗೆಗಿಡಗಳು ಸಾರಜನಕ ಸ್ಥಿರೀಕರಣ ಮಾಡುವ ಸಾಮರ್ಥ್ಯ ಹೊಂದಿವೆ. ಇದಕ್ಕೆ ನೀವು ಒಂದೇ ಒಂದು ಕಾಳು ಯೂರಿಯಾ ಗೊಬ್ಬರ ಕೊಡುವುದು ಬೇಡ. ಪ್ರತಿ ಎರಡು ತಿಂಗಳಿಗೊಮ್ಮೆ ಬುಡದ ಸುತ್ತ ಪಾತಿ ಮಾಡಿ ನಾಲ್ಕೈದು ಬೊಗಸೆ ಎರೆಹುಳು ಗೊಬ್ಬರ ಕೊಟ್ಟರೆ ಸಾಕು. ಜೊತೆಗೆ ಜೀವಾಮೃತ ತಯಾರಿಸಿಕೊಂಡು ಪ್ರತಿ ಇಪ್ಪತ್ತು ದಿನಕ್ಕೊಮ್ಮೆ ಕಡ್ಡಾಯವಾಗಿ ಸಿಂಪಡಿಸಬೇಕು ಹಾಗೂ ಗಿಡಗಳ ಬುಡದಲ್ಲಿ ಹಾಕಬೇಕು. ಇಷ್ಟಾದರೆ ಸಾಕು, ಮತ್ಯಾವುದೇ ಮೇಲುಗೊಬ್ಬರದ ಅವಶ್ಯಕತೆ ಇಲ್ಲ.

ಇಳುವರಿ ಹೀಗಿದ್ದರೇನೇ ಲಾಭ
* ಒಂದು ಕಾಯಿ 60-70 ಸೆಂ.ಮೀ. (ಎರಡು ಅಡಿ) ಉದ್ದ ಇರಬೇಕು
* ಒಂದು ಕಾಯಿ 100-120 ಗ್ರಾಂ. ತೂಕ ಇರಬೇಕು
* ಒಂದು ಗಿಡ ಒಂದು ವರ್ಷಕ್ಕೆ ಕಮ್ಮಿಯೆಂದರೂ 250-300 ಕಾಯಿ ಬಿಡಬೇಕು.
ಸಸಿ ನಾಟಿ ಮಾಡಿದಾಗ ಯಾವುದೇ ರಾಸಾಯನಿಕ ಗೊಬ್ಬರ ಹಾಕಬೇಡಿ, ನಾಟಿಯಾದ ಮೂರು ತಿಂಗಳ ನಂತರ ಒಂದು ಎಕರೆಗೆ, 25 ಕೆ.ಜಿ ಡಿಎಪಿ, 10 ಕೆ.ಜಿ ಯೂರಿಯಾ, 7 ಕೆ.ಜಿ ಪೊಟ್ಯಾಷ್‌ ಗೊಬ್ಬರದ ಜೊತೆ ಸೇರಿಸಿ, ಗಿಡದ ಸುತ್ತ ರಿಂಗ್‌ ಮಾಡಿ ಹಾಕಿ. ನಂತರ ಮತ್ತೆ ಮೂರು ತಿಂಗಳು ಬಿಟ್ಟು ಇಷ್ಟೇ ಪ್ರಮಾಣದ ಗೊಬ್ಬರವನ್ನು ಹೀಗೇ ಕೊಡಿ. 

ಇನ್ನು ಹಾಗೇ ಬಿಟ್ಟರೆ ನುಗ್ಗೆ 6-7 ಮೀಟರ್‌ ಎತ್ತರಕ್ಕೆ ಬೆಳೆದು ನಿಲ್ಲುತ್ತದೆ. ಹೀಗೆ ಎತ್ತರ ಬೆಳೆದರೆ ಕಾಯಿ ಕೀಳುವುದು ಕಷ್ಟ ಜೊತೆಗೆ ಇಳುವರಿಯಲ್ಲೂ ಗಣನೀಯವಾಗಿ ಕಡಿಮೆಯಾಗುತ್ತದೆ. ಸಾಧ್ಯವಾದಷ್ಟು ಗಿಡಗಳು ಗಿಡ್ಡಗೆ ಪೊದೆಯಾಕಾರವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. ಒಂದು, ಒಂದೂವರೆ ಮೀಟರ್‌ ಬೆಳೆದಾಕ್ಷಣ ಕುಡಿ ಚಿವುಟಿ ಎತ್ತರ ಬೆಳೆಯದಂತೆ ಮಾಡಬೇಕು. ಇದರಿಂದ ಹೆಚ್ಚು ಕವಲುಗಳು ಬಂದು ಗಿಡ ಪೊದೆಯಂತಾಗಿ ಹೆಚ್ಚಿನ ಕಾಯಿ ಬಿಡುತ್ತವೆ. ನೀರಿನ ನಿರ್ವಹಣೆಯೂ ಅಷ್ಟೇ ಮುಖ್ಯ, ಪ್ರತಿ ಐದಾರು ದಿನಕ್ಕೊಮ್ಮೆ ತಪ್ಪದೇ ನೀರುಣಿಸಿ. 
ಆಮೇಲೆ ನುಗ್ಗೆದು ಜೊತೆಗೇ ನುಗ್ಗಿ ಬರುತ್ತದೆ ಲಾಭ.

ಎಸ್‌.ಕೆ. ಪಾಟೀಲ್

ಟಾಪ್ ನ್ಯೂಸ್

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rape

Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

Wadi-Pro

Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್‌ ಪ್ರತಿಭಟನೆ, ವಾಡಿ ಬಂದ್

1-bharat

Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ

9

Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.