ಹರಿದ ನೋಟುಗಳಿಗೆ ನೋಟಿಸ್‌


Team Udayavani, Mar 17, 2019, 1:41 PM IST

s-10.jpg

ಬ್ಯಾಂಕಿಗೆ ಹಳೇ ನೋಟುಗಳನ್ನು ಕೊಟ್ಟರೆ ಏಕೆ ತೆಗೆದುಕೊಳ್ಳುವುದಿಲ್ಲ? ಹರಿದ ನೋಟುಗಳನ್ನು ಬದಲಿಸಿಕೊಡಬೇಕು ಅಂತ ನಿಯಮ ಇದೆಯಲ್ಲಾ?ಹಾಗಿದ್ದರೂ  ಬ್ಯಾಕ್‌ನವರು ಏಕೆ  ತಕರಾರು ಮಾಡುತ್ತಾರೆ… ಇಂಥ ಹಲವು ಅನುಮಾನಗಳು  ಎಲ್ಲರಿಗೂ ಇದ್ದೇ ಇವೆ. ಹರಿದ ನೋಟುಗಳನ್ನು ವಿನಿಮಯ ಮಾಡುವುದು ಹೇಗೆ, ಅದಕ್ಕಿರುವ ಮಾನದಂಡ ಏನು?ಈ ಕುರಿತು  ಸಮಗ್ರ ಮಾಹಿತಿ ಇಲ್ಲಿದೆ. 

ಕೊಳಕಾದ, ಹರಿದ, ನೋಟಿನ ಮೇಲೇ ಲೆಕ್ಕ-ಪತ್ರ ಬರೆದಿಟ್ಟ, ಸುಟ್ಟ,ಎಣ್ಣೆ ಬಿದ್ದ ನೋಟುಗಳೇನಾದರೂ ನಿಮ್ಮ ಕೈಗೆ ಬಂದರೆ… ಮುಖ ಕಿವುಚುವಂತಾಗುತ್ತದೆ. ಅಂಗಡಿಯವರಾಗಲಿ, ಜನಸಾಮಾನ್ಯರಾಗಲಿ ಅಂತಹ ನೋಟುಗಳನ್ನು ಸ್ವೀಕರಿಸುವುದಿಲ್ಲ. ಇದು ನೋಟುಗಳಿಗೆ ಮಾತ್ರವಲ್ಲ, ನಾಣ್ಯಗಳಿಗೂ ಇಂಥ ಸಂಕಷ್ಟವಾಗಿದೆ.

ಭಾರತೀಯ ರಿಜರ್ವ್‌ ಬ್ಯಾಂಕ್‌ (ಆರ್‌ಬಿಐ) ಪದೇಪದೆ ಹತ್ತು ರೂಪಾಯಿ ಹಾಗೂ ಐವತ್ತು ಪೈಸೆ ನಾಣ್ಯಗಳು ಈಗಲೂ ಚಲಾವಣೆಯಲ್ಲಿವೆ ಎಂದು ಸಾರಿ ಹೇಳಿದರೂ ಇವು ಅಘೋಷಿತವಾಗಿ ಬಹಿಷ್ಕಾರಕ್ಕೆ ಒಳಗಾಗಿವೆ. ಇವುಗಳನ್ನೆಲ್ಲಾ ಬ್ಯಾಂಕಿನಲ್ಲಿ ಬದಲಾಯಿಸೋಣ ಎಂದರೆ ಅವರು ಕೂಡಾ ಬೇರೆ ಬ್ಯಾಂಕಿನಲ್ಲಿ ಬದಲಾಯಿಸಿಕೊಳ್ಳಿ ಎಂದು ಕೈತೋರಿಸುತ್ತಾರೆ. ಹಾಗಾದರೆ, ಈ ನೋಟುಗಳನ್ನು ಮುದ್ರಿಸುವ, ಹಣಕಾಸಿನ ಮೇಲೆ ನೀತಿ ನಿಯಮ ರೂಪಿಸುವ ಆರ್‌ಬಿಐ ಈ ವಿಚಾರವಾಗಿ ಏನೆನ್ನುತ್ತದೆ ಎಂದು ತಿಳಿದುಕೊಳ್ಳ ಬೇಕಾಗಿದೆ.

“ನೋಟು ಹಾಗೂ ನಾಣ್ಯಗಳ ವಿನಿಮಯ ಅವಕಾಶಗಳು’ ಎಂಬ ಮಾಸ್ಟರ್‌ ಸುತ್ತೋಲೆಯಲ್ಲಿ ಯಾವ ಯಾವ ನೋಟುಗಳನ್ನು ನಾಣ್ಯಗಳನ್ನು ಎಲ್ಲೆಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ. ಒಂದೊಮ್ಮೆ ಬ್ಯಾಂಕುಗಳು ಇದಕ್ಕೆ ನಿರಾಕರಿಸಿದಲ್ಲಿ ಬ್ಯಾಂಕಿಂಗ್‌ ಓಂಬುಡ್ಸ್‌ಮನ್‌ ಇವರಿಗೆ ದೂರು ಸಲ್ಲಿಸಬಹುದು.

ಆರ್‌ಬಿಐ ನಿಯಮಗಳ ಪ್ರಕಾರ, ದೇಶದಲ್ಲಿ ಇರುವ ಎಲ್ಲಾ ಬ್ಯಾಂಕ್‌ಗಳ, ಎಲ್ಲಾ ಶಾಖೆಗಳು (ಕೋ ಆಪರೇಟಿವ್‌ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ಸೇರಿ) ಜನರಿಗೆ ಒಳ್ಳೆಯ ನೋಟುಗಳನ್ನು ಮಾತ್ರ ಹಾಗೂ ತನ್ನಲ್ಲಿರುವ ನಾಣ್ಯಗಳನ್ನು ವಿತರಿಸಬೇಕು ಎಂದು ಹೇಳಿದೆ. ಅಂದರೆ, ಜನರು ತಮ್ಮ ಬ್ಯಾಂಕ್‌ ಖಾತೆಗಳಿಗೆ ಕಟ್ಟುವ ನೋಟುಗಳನ್ನು ಬೇರೆ ಬೇರೆಯಾಗಿ ವಿಂಗಡಿಸದೇ ಹಾಗೇ ಕೊಡುವಂತಿಲ್ಲ. ನಾವು ಬ್ಯಾಂಕುಗಳಿಗೆ ಕಟ್ಟಿರುವ ನೋಟುಗಳನ್ನು ಸಾಮಾನ್ಯವಾಗಿ ಬ್ಯಾಂಕುಗಳು ಮೂರು ಬಗೆಯಲ್ಲಿ ವಿಂಗಡಿಸುತ್ತವೆ.

1)ಕೊಳಕಾದ ನೋಟು ಮತ್ತು ಒಂದೇ ನೋಟಿನ ಎರಡು ಭಾಗಗಳನ್ನು ಅಂಟಿಸಿರುವ ನೋಟು (ಸಾಯಿಲ… ನೋಟ್ಸ್‌),
2) ಎರಡಕ್ಕಿಂತ ಹೆಚ್ಚು ಭಾಗಗಳಾಗಿ ಹರಿದ ನೋಟು (ಮ್ಯುಟಿಲೇಟೆಡ್‌ ನೋಟ್ಸ್‌) 3) ಹೊಸ ಮತ್ತು ವಿತರಣಾ ನೋಟು

ಈ ರೀತಿ ವಿಂಗಡಿಸಿ, ಹೊಸ ಮತ್ತು ವಿತರಣಾ ನೋಟುಗಳನ್ನು ಮಾತ್ರ ಗ್ರಾಹಕರಿಗೆ ಕೊಡಬೇಕು. ಉಳಿದ ಎರಡು ಬಗೆಯ ನೋಟುಗಳನ್ನು ತಮಗೆ ಸಂಬಂದಿಸಿದ ಕರೆನ್ಸಿ ಚೆಸ್ಟುಗಳ ಮೂಲಕ ವಾಪಸ್ಸು ರಿಜರ್ವ್‌ ಬ್ಯಾಂಕಿಗೆ ಕಳುಹಿಸಲಾಗುತ್ತದೆ.  ಹೀಗೆ ವಾಪಸ್‌ ಬಂದ ನೋಟುಗಳನ್ನು ರಿಜರ್ವ್‌ ಬ್ಯಾಂಕು ತನಗೆ ವಾಪಸ್ಸು ಬಂದ ನೋಟುಗಳನ್ನು ನಾಶಮಾಡುತ್ತದೆ.

ಕೆಲವು ಬ್ಯಾಂಕುಗಳು ಸಣ್ಣ ಸಣ್ಣ ಮೌಲ್ಯದ ನೋಟುಗಳನ್ನು ಬ್ಯಾಂಕಿಗೆ ಜಮೆ ಮಾಡಲು ತಂದಾಗ ಸ್ವೀಕರಿಸಲು ನಿರಾಕರಿಸುತ್ತವೆ. ದೊಡ್ಡ ಮೌಲ್ಯದ ನೋಟುಗಳನ್ನೇ ನೀಡುವಂತೆ ತಿಳಿಸುತ್ತವೆ. ಜೊತೆಗೆ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುತ್ತವೆ. ಗೊತ್ತಿರಲಿ,  ಆರ್‌ಬಿಐ ಬ್ಯಾಂಕಿನ ನಿಯಮಗಳ ಪ್ರಕಾರ, ಬ್ಯಾಂಕುಗಳು ಇಂತಹ ಸಣ್ಣ ಮೊತ್ತದ ನೋಟುಗಳನ್ನು, ನಾಣ್ಯಗಳನ್ನು ನಿರಾಕರಿಸುವಂತಿಲ್ಲ.

ಎಲ್ಲಾ ಬ್ಯಾಂಕುಗಳ ಎಲ್ಲಾ ಶಾಖೆಗಳೂ(ಕೋ ಆಪರೇಟಿವ್‌ ಬ್ಯಾಂಕ್‌ಗಳು,ಗ್ರಾಮೀಣ ಬ್ಯಾಂಕ್‌ಗಳು ಸೇರಿ) ಸಾರ್ವಜನಿಕರು ಕೊಳಕಾದ, ಹರಿದ ನೋಟುಗಳನ್ನು ಹಾಗೂ ನಾಣ್ಯಗಳನ್ನೂ ಬದಲಾವಣೆ ಮಾಡಿಕೊಡುವಂತೆ ಕೇಳಿದಲ್ಲಿ, ಅದನ್ನು ನಿರಾಕರಿಸದೇ ಬದಲಾಯಿಸಿಕೊಡಬೇಕು. ಆದರೆ, ನಾಣ್ಯಗಳನ್ನು ಹೆಚ್ಚಿನ ಮೊತ್ತದಲ್ಲಿ ಸ್ವೀಕರಿಸಲು ಅಥವಾ ವಿನಿಮಯ ಮಾಡಿಕೊಡಲು ಬ್ಯಾಂಕು ನಿರಾಕರಿಸಬಹುದು. ಒಂದು ರೂಪಾಯಿ ನಾಣ್ಯಗಳನ್ನು ಗರಿಷ್ಠ ಒಂದು ಸಾವಿರ, ಐವತ್ತು ಪೈಸೆ ನಾಣ್ಯವನ್ನು ಗರಿಷ್ಠ ಹತ್ತು ರೂಪಾಯಿಗಳಷ್ಟನ್ನು ಸ್ವೀಕರಿಸಬಹುದು.

ಆದರೆ ಸುಟ್ಟ, ಕರುಕಲಾದ, ಎಣ್ಣೆ ಮೆತ್ತಿದ, ನೋಟಿನ ಗುಣಲಕ್ಷಣಗಳನ್ನು ಗುರುತಿಸಲಾಗದ ನೋಟುಗಳನ್ನು ಬ್ಯಾಂಕುಗಳು ಬದಲಾಯಿಸುವಂತಿಲ್ಲ. ಅವನ್ನು ರಿಸರ್ವ್‌ ಬ್ಯಾಂಕಿನ ಶಾಖೆಗಳಲ್ಲಿ ಮಾತ್ರ ಬದಲಾಯಿಸಿಕೊಳ್ಳಬಹುದು.

ಎಷ್ಟು ನೋಟುಗಳನ್ನು ಬದಲಾಯಿಸಿಕೊಳ್ಳಬಹುದು?
ಒಬ್ಬರು ಒಂದು ದಿನಕ್ಕೆ 20 ಸಾಯಿಲ… ನೋಟುಗಳನ್ನು, ಗರಿಷ್ಠ 2000ರೂ. ವರೆಗಿನ ಮೊತ್ತದಷ್ಟು, ಮ್ಯುಟಿಲೇಟೆಡ್‌ ನೋಟುಗಳಾದಲ್ಲಿ ದಿನವೊಂದಕ್ಕೆ 5 ನೋಟುಗಳು ಗರಿಷ್ಠ ಮೊತ್ತ ರೂ.5,000 ರವರೆಗೆ ಬದಲಾಯಿಸಿಕೊಳ್ಳಬಹುದು. ಈ ಬಗೆಯ ನೋಟುಗಳನ್ನು ಹೆಚ್ಚಿನ ಮೊತ್ತದಲ್ಲಿ ಬದಲಾಯಿಸಿಕೊಳ್ಳುವುದಿದ್ದಲ್ಲಿ, ಬ್ಯಾಂಕು ಅವರಿಗೆ ಹಣ ಸ್ವೀಕರಿಸಿದ್ದಕ್ಕೆ ಸ್ವೀಕೃತಿ ನೀಡಿ 30 ದಿನಗಳಲ್ಲಿ ಅವರ ಖಾತೆಗೆ ಹಣ ಹಾಕಬೇಕು ಅಥವಾ ಹತ್ತಿರದ ಕರೆನ್ಸಿ ಚೆಸ್ಟಿಗೆ ಕಳುಹಿಸಿಕೊಡಬೇಕು. ಒಂದೊಮ್ಮೆ ಹೆಚ್ಚಿನ ನೋಟುಗಳನ್ನು ಬದಲಾಯಿಸಿದಲ್ಲಿ ಅದಕ್ಕೆ ಹೆಚ್ಚಿನ ಶುಲ್ಕವನ್ನು ಪಡೆಯುವ ಅಧಿಕಾರವನ್ನು ಆಯಾ ಬ್ಯಾಂಕ್‌ಗಳಿಗೆ ನೀಡಲಾಗಿದೆ. ಇದಲ್ಲದೇ ನೀವು ನೀಡಿರುವ ಹರಿದ ನೋಟುಗಳಲ್ಲಿ ಕೆಲವೊಂದು ಭಾಗವೇ ಇಲ್ಲದಿದ್ದಲ್ಲಿ ಅದಕ್ಕೂ ಶೇಕಡ ಎಷ್ಟು ಭಾಗವಿದೆ ಎಂಬ ಆಧಾರದಲ್ಲಿ ಕರೆನ್ಸಿ ಚೆಸ್ಟು ಬ್ಯಾಂಕ್‌ಗಳು ಹಾಗೂ ಆರ್‌ಬಿಐ ಅದರ ಮೌಲ್ಯವನ್ನು ನಿರ್ಧರಿಸಿ ವಿನಿಮಯ ಮಾಡಿಕೊಡುತ್ತವೆ.

ಸ್ಲೋಗನ್‌ ಇರುವಂತಿಲ್ಲ…
ನೋಟುಗಳ ಮೇಲೆ ರಾಜಕೀಯ ಪಕ್ಷಗಳ ಸ್ಲೋಗನ್ನುಗಳನ್ನು ಬರೆದಲ್ಲಿ, ನೋಟುಗಳ ಗುಣ ಲಕ್ಷಣಗಳು ಹಾಳಾಗುವಂತೆ ಗೀಚಿದ್ದಲ್ಲಿ, ಕತ್ತರಿಯಿಂದ ಕತ್ತರಿಸಿದ್ದು ಉದ್ದೇಶಪೂರ್ವಕವಾಗಿ ಹರಿದಿದ್ದಲ್ಲಿ ಅಂತಹ ನೋಟುಗಳನ್ನು ಬದಲಾಯಿಸಲು ಹಾಗೂ ಸ್ವೀಕರಿಸಲು ಬರುವುದಿಲ್ಲ. ಯಾರಾದರೂ ಹೀಗೆ ಮಾಡಿದ ಹೆಚ್ಚಿನ ನೋಟುಗಳನ್ನು ಬದಲಾಯಿಸುವಂತೆ ತಂದಲ್ಲಿ ಅವರ ಮೇಲೆ ಪೊಲೀಸಿಗೆ ದೂರು ನೀಡುವುದಲ್ಲದೇ, ಆರ್‌ಬಿಐಗೆ ವರದಿ ಸಲ್ಲಿಸಬೇಕು ಎನ್ನುವ ಕಾನೂನೂ ಜಾರಿಯಲ್ಲಿದೆ.

ರಾಮಸ್ವಾಮಿ ಕಳಸವಳ್ಳಿ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.