ಫೇಸ್ ವಾರ್
Team Udayavani, Mar 18, 2019, 12:30 AM IST
ಎಲೆಕ್ಷನ್ ಬರುತ್ತಿದ್ದ ಹಾಗೆಯೇ ಚುನಾವಣಾ ಅಖಾಡಗಳು ಕಳೆಕಟ್ಟಿ, ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಶುರುವಾಗಿದೆ. ಸೋಷಿಯಲ್ ಮೀಡಿಯಾ ಕೂಡ ಬಿಸಿಯೇರಿದೆ. ಅಲ್ಲೊಂದು ವರ್ಚುವಲ್ ವಾರ್ ಶುರುವಾಗಿದೆ. ಇದನ್ನು ನಿಯಂತ್ರಿಸಲು ಒಂದು “ಭೌತಿಕ ವಾರ್ ರೂಮ್’ ಅನ್ನು ಫೇಸ್‌ಬುಕ್ ಸ್ಥಾಪಿಸಲು ಹೊರಟಿದೆ. ಇದೇ ರೀತಿಯ ವಾರ್ ರೂಮ್ ಅನ್ನು ಅಮೆರಿಕ ಚುನಾವಣೆ ವೇಳೆಯೂ ಸ್ಥಾಪಿಸಲಾಗಿತ್ತು. ಕೇಂಬ್ರಿಜ್ ಅನಾಲಿಟಿಕಾದಂತಹ ಸಂಸ್ಥೆಗಳು ಈ ವಾರ್ ರೂಮ್‌ನಲ್ಲೂ ತಮ್ಮ ಕೈಚಳಕ ತೋರಿಸಿದ್ದವು.
ಈ ವಾರ್ ರೂಮ್, ಕ್ಯಾಲಿಫೋರ್ನಿಯಾ ಹಾಗೂ ಸಿಂಗಾಪುರದಲ್ಲಿರುವ ಕೇಂದ್ರ ಕಚೇರಿಯ ಜೊತೆಗೆ ಸಹಭಾಗಿತ್ವ ಸಾಧಿಸಲಿದೆ. ಇದರಿಂದಾಗಿ ಚುನಾವಣಾ ಆಯೋಗದ ಜೊತೆಗೂ ಫೇಸ್‌ಬುಕ್ ನಿರಂತರವಾಗಿ ಸಂಪರ್ಕದಲ್ಲಿರಬಹುದಾಗಿದೆ ಎಂದು ಫೇಸ್‌ಬುಕ್‌ನ ಭಾರತ ಮತ್ತು ದಕ್ಷಿಣ ಏಷ್ಯಾದ ಸಾರ್ವಜನಿಕ ನೀತಿ ವಿಭಾಗದ ನಿರ್ದೇಶಕ ಶಿವನಾಥ್ ತುಕ್ರಾಲ್ ಹೇಳಿದ್ದಾರೆ.
ಈ ಹಿಂದಿನ ಚುನಾವಣೆ ವೇಳೆ ತನ್ನ ಪ್ಲಾಟ್‌ಫಾರಂನಲ್ಲಿ ಅಕ್ರಮ ನಡೆಯದಂತೆ ತಡೆಯಲು ಫೇಸ್‌ಬುಕ್ ಯಶಸ್ವಿಯಾಗಿರಲಿಲ್ಲ. ಇದಕ್ಕೆ ಭಾರಿ ಆಕ್ಷೇಪವೂ ಕೇಳಿಬಂದಿತ್ತು. ಕೇಂಬ್ರಿಜ್ ಅನಾಲಿಟಿಕಾ ಪ್ರಕರಣದಲ್ಲಿ ಭಾರತದ ಚುನಾವಣೆಯಲ್ಲೂ ಅಕ್ರಮ ನಡೆದಿರುವ ಶಂಕೆ, ವರದಿ ಹರಿದಾಡಿದ್ದವು. ಹೀಗಾಗಿ, ಭಾರತದಲ್ಲಿ ಫೇಸ್‌ಬುಕ್ ಮೇಲೆ ಈಬಾರಿ ಒತ್ತಡ ಹೆಚ್ಚಿದೆ. ಅಮೆರಿಕದಲ್ಲಿ ಹೇಗೆ ಕೆಲಸ ಮಾಡಿತ್ತೋ ಅದೇ ರೀತಿಯಲ್ಲೇ ಇಲ್ಲೂ ಕಾರ್ಯನಿರ್ವಹಿಸಲಿದೆ.
ಕಂಟೆಂಟ್, ನೀತಿ ನಿರೂಪಣೆ, ಕಾನೂನು ಹಾಗೂ ಇತರ ವಿಷಯಗಳ ಮೇಲ್ವಿಚಾರಣೆ ಮಾಡುವುದು ಈ ವಾರ್ ರೂಮ್ ಉದ್ದೇಶ. ಪ್ರತಿ ವಿಭಾಗಕ್ಕೂ ಒಂದೊಂದು ತಂಡ ಇರಲಿದೆ. ಇವರು ಕಂಟೆಂಟ್‌ಗಳನ್ನು ಕೀ ಟರ್ಮ್ಬೇಸ್ ಆಧಾರದಲ್ಲಿ ವಿಂಗಡಿಸಿ, ಫಿಲ್ಟರ್ ಮಾಡುತ್ತಾರೆ. ಯಾವುದೇ ಆಕ್ಷೇಪಾರ್ಹ ಕಂಟೆಂಟ್ ಕಂಡುಬಂದರೂ ಅಂಥವುಗಳನ್ನು ಅಳಿಸುವುದು, ಖಾತೆಯನ್ನು ನಿರ್ಬಂಧಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಇದು ಕೈಗೊಳ್ಳಲಿದೆ. ಸುಮಾರು 40 ತಂಡಗಳು ಈಗ ಭಾರತದಲ್ಲಿ ಕೆಲಸ ಮಾಡುತ್ತಿವೆ. ಕರ್ನಾಟಕ ವಿಧಾನಸಭೆ ಚುನಾವಣೆಯಿಂದಲೇ ಲೋಕಸಭೆ ಚುನಾವಣೆ ತಯಾರಿ ಪ್ರಕ್ರಿಯೆ ಆರಂಭವಾಗಿತ್ತು. ನಂತರ ಬೇರೆ ಬೇರೆ ವಿಧಾನಸಭೆ ಚುನಾವಣೆಯಲ್ಲಿ ಈ ತಂಡ ಇನ್ನಷ್ಟು ಮೊನಚಾಯಿತು. ಕೆಲವು ತಂಡಗಳು ಚುನಾವಣಾ ಆಯೋಗದ ಜೊತೆಗೆ ನೇರವಾಗಿ ಸಂಪರ್ಕದಲ್ಲಿ ಇರಲಿವೆ. ಚುನಾವಣಾ ಆಯೋಗ ಕಂಡುಕೊಂಡ ಕೆಲವು ವಿಷಯಗಳನ್ನು ಈ ತಂಡ ಗುರುತಿಸಿ, ಅವುಗಳನ್ನು ನಿಯಂತ್ರಿಸಲಿದೆಯಂತೆ.
ಯುಟ್ಯೂಬ್ ಸಂಗೀತ
ಸಂಗೀತ ಕೇಳಬೇಕು ಅಂದರೆ, ಅಮೇಜಾನ್, ಆ್ಯಪಲ್ ಮ್ಯೂಸಿಕ್, ಗಾನ ಮ್ಯೂಸಿಕ್ ಆನ್‌ಲೈನ್ ಪ್ಲಾಟ್‌ಫಾರ್ಮ್ ಇದೆ. ಈಗ ಇದರ ಜೊತೆಗೆ ಯುಟ್ಯೂಬ್ ಸೇರಿಕೊಂಡಿದೆ. ಇದು ಪ್ರಪಂಚದ ಎಲ್ಲ ವಿಷಯಗಳ ವಿಡಿಯೋಗಳನ್ನು ಬಿತ್ತರಿಸುತ್ತಿತ್ತು. ಈಗ ತನ್ನದೇ ಆದ ಯುಟ್ಯೂಬ್ ಮ್ಯೂಸಿಕ್ ಅನ್ನೋ ಕಂಪೆನಿ ತೆರೆದಿದೆ. ಯುಟ್ಯೂಬ್‌ನ ಬಲ ಏನೆಂದರೆ, ತನ್ನಲ್ಲಿರುವ ಅಗಾಧ ಸಂಗೀತ ಭಂಡಾರ. ಇದು ಯಾರ ಬಳಿಯೂ ಇರದಷ್ಟು ಸಂಗೀತವನ್ನು ಇಟ್ಟಕೊಂಡಿರುವುದರಿಂದ ಇತರೆ ಆನ್‌ಲೈನ್ ಮ್ಯೂಸಿಕ್ ಕಂಪೆನಿಗಳಿಗಿಂತಲೂ ಯುಟ್ಯೂಬ್ ಭಿನ್ನ ಎನ್ನಬಹುದು.
ಇನ್ನು ಬೆಲೆ ಏನು ದುಭಾರಿ ಇಲ್ಲ. ತಿಂಗಳಿಗೆ ಕೇವಲ 99 ಅಥವಾ ಐದು ಜನ ಒಟ್ಟಿಗೆ ಬಳಸಲು 149ರೂ. ಕೊಡಬೇಕಾಗುತ್ತದೆ. ಮೂರು ತಿಂಗಳು ಟ್ರಯಲ್‌ಗಾಗಿ ಉಚಿತವಾಗಿ ಸಂಗೀತ ಕೇಳಬಹುದು. ಕೇಳುವ ಸಂಗೀತವನ್ನೆಲ್ಲಾ ಡೌನ್‌ಲೋಡ್ ಮಾಡಬಹುದೇ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಒಟ್ಟಾರೆ, ಅಂತರ್ಜಾಲದ ಸಂಗೀತ ಕೇಳ್ಕೆ ಈ ಮೂಲಕ ಶ್ರೀಮಂತವಾಗುವುದರಲ್ಲಿ ಸಂಶಯವಿಲ್ಲ. ಈಗ ಅಮೇಜಾನ್ ಮತ್ತು ಇತರೆ ಕಂಪೆನಿಗಳು ಯುಟ್ಯೂಬ್ ಹೆಜ್ಜೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದೆ. ಭಾರತದಲ್ಲಿ ಇದು ತಳವೂರುವ ಎಲ್ಲ ಲಕ್ಷಣಗಳೂ ಇವೆ ಅನ್ನೋ ನಿರೀಕ್ಷೆ ಕೂಡ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.