ಸಾಮೂಹಿಕ ಓಟದಲ್ಲಿ ಪಿ.ಟಿ. ಉಷಾ
Team Udayavani, Mar 18, 2019, 12:30 AM IST
ಕಾಸರಗೋಡು: ವಿಶ್ವ ಕ್ಷಯರೋಗ ನಿಯಂತ್ರಣ ದಿನಾಚರಣೆ ಅಂಗವಾಗಿ ಕಾಸರಗೋಡಿನಲ್ಲಿ ಭಾರತದ ಚಿನ್ನದ ಜಿಂಕೆ ಪಿ.ಟಿ.ಉಷಾ ಓಟ ನಡೆಸಲಿದ್ದಾರೆ. ಕ್ಷಯರೋಗ ನಿಯಂ ತ್ರಣ ಸಂಬಂಧ ನಡೆಯುವ ಮ್ಯಾರಥಾನ್ (ಸಾಮೂಹಿಕ ಓಟ)ದಲ್ಲಿ ಅವರು ಭಾಗವಹಿಸುವರು. ಮಾ.23ರಂದು ಬೆಳಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆ ಬಳಿ ಆರಂಭಗೊಳ್ಳುವ ಸಾಮೂಹಿಕ ಓಟ ಹೊಸಬಸ್ ನಿಲ್ದಾಣ ಬಳಿ ಸಮಾರೋಪಗೊಳ್ಳಲಿದೆ. ಎನ್.ಎಸ್.ಎಸ್. ಸ್ವಯಂಸೇವಕರು, ಕಾಲೇಜು ವಿದ್ಯಾರ್ಥಿಗಳು, ನೆಹರೂ ಯುವ ಕೇಂದ್ರ ಯೂತ್ ಕ್ಲಬ್ ಕಾರ್ಯಕರ್ತರು, ಕುಟುಂಬಶ್ರೀ, ಸಾಕ್ಷರತಾ ಮಿಷನ್ ಕಾರ್ಯಕರ್ತರು ಸಹಿತ ವಿವಿಧ ವಲಯಗಳ ಮಂದಿ ಭಾಗವಹಿಸುವರು.
ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಜೇಮ್ಸ್ ಜೋಸೆಫ್ ಹಸುರು ನಿಶಾನೆ ತೋರುವರು. ಓಟದ ನಂತರ ನೂತನ ಬಸ್ ನಿಲ್ದಾಣ ಬಳಿ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಪಿ.ಟಿ.ಉಷಾ ಮುಖ್ಯ ಅತಿಥಿಯಾಗಿರುವರು. ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ಪಿ. ದಿನೇಶ್ ಕುಮಾರ್ ಅಧ್ಯಕ್ಷತೆ ವಹಿಸುವರು. ಸೀನಿಯರ್ ಫಿಸಿಶಿಯನ್, ಮಾಜಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿ ಕಾರಿ ಡಾ| ಬಿ.ಎಸ್. ರಾವ್ ಅವರನ್ನು ಅಭಿನಂದಿಸಲಾಗುವುದು. ಮಾರಕ ಟಿ.ಬಿ. (ಮಲ್ಟಿ ಡ್ರಗ್ ರೆಸಿಸ್ಟೆನ್ಸ್ ಟಿ.ಬಿ.)ಯಿಂದ ಚಿಕಿತ್ಸೆಯ ಮೂಲಕ ಗುಣಮುಖರಾದ ಜಿಲ್ಲೆಯ ಮೊದಲ ವ್ಯಕ್ತಿಯನ್ನು ಗೌರವಿಸಲಾಗುವುದು. ಬಾಯಿಯ ಮೂಲಕ ಹರಡುವ ಕ್ಷಯರೋಗವನ್ನು ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಲಾಗುವುದು. ಜಿಲ್ಲೆಯಲ್ಲಿ ಸೂಕ್ತ ಕ್ರಮಗಳ ಹಿನ್ನೆಲೆಯಲ್ಲಿ ಕ್ಷಯರೋಗ ಬಾಧೆ ಕಡಿಮೆಯಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾ ಕಾರಿ ಡಾ| ಟಿ.ಪಿ.ಆಮಿನಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ಷಯರೋಗ ದಿನಾಚರಣೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ| ಎ.ಟಿ. ಮನೋಜ್, ಡಾ| ಕೆ.ಕೆ. ಶಾಂಟಿ, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಬಿ. ಭಾಸ್ಕರನ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharstra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.