ತೆಲಂಗಾಣ ಕಣ: ಪ್ರತಿಪಕ್ಷಗಳ‌‌ ಮನ ಭಣಭಣ 


Team Udayavani, Mar 18, 2019, 12:30 AM IST

s-28.jpg

ಭಾರತದ ನವ ರಾಜ್ಯ ತೆಲಂಗಾಣದಲ್ಲಿ ಲೋಕಸಭಾ ಚುನಾವಣೆಗಳು ಏಪ್ರಿಲ್‌ 11ರಂದು ನಡೆಯಲಿವೆ.  ಒಂದೇ ಹಂತದಲ್ಲಿ ಈ ಚುನಾವಣೆಗಳು ನಡೆಯಲಿದ್ದು, ಕಳೆದ ವರ್ಷವಷ್ಟೇ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಕೆ. ಚಂದ್ರಶೇಖರ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಪಕ್ಷವೇ ಈ ಬಾರಿಯೂ ಮಿಂಚಲಿದೆಯೇ ಅಥವಾ ಅದರ ಲೆಕ್ಕಾಚಾರವನ್ನು ಉಲ್ಟಾ ಮಾಡಲು ಎದುರಾಳಿ ಪಕ್ಷಗಳಿಗೆ ಸಾಧ್ಯವಾಗಲಿದೆಯೇ? 

ಲೋಕಸಭೆಗೆ 17 ಪ್ರತಿನಿಧಿಗಳನ್ನು ಕಳುಹಿಸುವ ತೆಲಂಗಾಣ ಪ್ರತ್ಯೇಕ ರಾಜ್ಯದ ಮಾನ್ಯತೆ ಪಡೆದದ್ದು 2014ರ ಜೂನ್‌ 2ರಲ್ಲಿ. ಅಂದರೆ ಆ ವರ್ಷದ ಲೋಕಸಭಾ ಚುನಾವಣೆಗಳು ಮುಗಿದ ನಂತರದಲ್ಲಿ. ಆಗ ತೆಲಂಗಾಣ ಅವಿಭಜಿತ ಆಂಧ್ರಪ್ರದೇಶದ ಭಾಗವಾಗಿದ್ದ ಕಾರಣ, ಪ್ರತ್ಯೇಕ ಲೋಕಸಭಾ ಚುನಾವಣೆ ಯೇನೂ ನಡೆದಿರಲಿಲ್ಲ. ಆದರೂ ಪ್ರಸಕ್ತ ತೆಲಂಗಾಣ ರಾಜ್ಯದ ಭಾಗವಾಗಿರುವ 17 ಕ್ಷೇತ್ರಗಳಲ್ಲಿ ಅಂದು ಕೆಸಿಆರ್‌ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು! ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಡಿಪಿ ಮೈತ್ರಿ 2 ಸ್ಥಾನಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ 2, ವೈಎಸ್‌ಆರ್‌ ಕಾಂಗ್ರೆಸ್‌ 1 ಸ್ಥಾನ ಪಡೆದಿತ್ತು. 

ವಿಧಾನಸಭಾ ಫ‌ಲಿತಾಂಶ ದಿಕ್ಸೂಚಿಯೇ?
ಕಳೆದ ಡಿಸೆಂಬರ್‌ ತಿಂಗಳಲ್ಲಿ  ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು. ಚಂದ್ರಶೇಖರ್‌ರಾವ್‌ ನೇತೃತ್ವದಲ್ಲಿ ಟಿಆರ್‌ಎಸ್‌ 119ರಲ್ಲಿ 88 ಸ್ಥಾನಗಳಲ್ಲಿ ಗೆದ್ದಿತ್ತು. ಅವರ ಪಕ್ಷ ಒಟ್ಟು ಮತಗಳಲ್ಲಿ 46.9 ಪ್ರತಿಶತ ಪಾಲು ಪಡೆದಿದ್ದರೆ, ಕಾಂಗ್ರೆಸ್‌ 28.4 ಪ್ರತಿಶತ ಮತಪಾಲು ಪಡೆದಿತ್ತು. ಬಿಜೆಪಿಗೆ ದಕ್ಕಿದ್ದು ಕೇವಲ ಒಂದು ಸೀಟು.  ವಿಧಾನಸಭಾ ಚುನಾವಣೆಗಳು ಮುಗಿದು ಕೆಲವೇ ತಿಂಗಳುಗಳಾಗಿವೆಯಾದ್ದರಿಂದ ನೆಲಮಟ್ಟದಲ್ಲಿ ಈಗಲೂ ಕೆಸಿಆರ್‌ ಪರ ಒಲವಿರುವುದು ಕಾಣಿಸುತ್ತಿದೆ. 

ಪಕ್ಷಗಳ ಸ್ಥಿತಿ ಹೇಗಿದೆ?
ಈಗಲೂ ತೆಲಂಗಾಣದಲ್ಲಿ ಕೆಸಿಆರ್‌ ನೇತೃತ್ವದ ಟಿಆರ್‌ಎಸ್‌ ಪಕ್ಷದ್ದೇ ಅಬ್ಬರವಿದೆ. ಕಾಂಗ್ರೆಸ್‌ ದುರ್ಬಲವಾಗಿದ್ದರೆ, ಭಾರತೀಯ ಜನತಾ ಪಾರ್ಟಿಗೆ ತೆಲಂಗಾಣದಲ್ಲಿ ಅಸ್ತಿತ್ವವೇ ಇಲ್ಲ. ತೆಲಂಗಾಣ ವಾಸಿಗರಿಗೆ ಈಗಲೂ ರಾಜ್ಯವಿಭಜನೆಯ ವಿಷಯದಲ್ಲಿ ಎನ್‌. ಚಂದ್ರಬಾಬು ನಾಯ್ಡು  ನಡೆದುಕೊಂಡ ರೀತಿಯ ಬಗ್ಗೆ ಸಿಟ್ಟಿದೆಯಾದ್ದರಿಂದ, ಅವರು ತೆಲುಗು ದೇಶಂ ಪಕ್ಷವನ್ನು(ಟಿಡಿಪಿ) ಹೊರಗಿನ ಪಕ್ಷ ಎಂದೇ ಭಾವಿಸುತ್ತಾರೆ. ಚಂದ್ರಶೇಖರ್‌ ರಾವ್‌ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅಸಾದುದ್ದೀನ್‌ ಓವೈಸಿಯವರ ಎಂಐಎಂಗೆ ತೆಲಂಗಾಣದಲ್ಲಿ ತುಸು ಮಟ್ಟಿಗೆ ನೆಲೆಯಿದೆ. 

ಸಮೀಕ್ಷೆಗಳೇನನ್ನುತ್ತವೆ?
ಕೆಲ ತಿಂಗಳ ಹಿಂದೆ ಹೊರಬಿದ್ದ ರಿಪಬ್ಲಿಕ್‌-ಸಿ ಓಟರ್‌ ಸಮೀಕ್ಷೆ ಕೂಡ ಇದೇ ಮಾತನ್ನೇ ಹೇಳಿತ್ತು. ಅದರ ಪ್ರಕಾರ ಈ ಬಾರಿ ಟಿಆರ್‌ಎಸ್‌17ರಲ್ಲಿ 16 ಸ್ಥಾನಗಳಲ್ಲಿ ಗೆಲ್ಲಲಿದೆ. ಅಲ್ಲದೆ ಆಲ್‌-ಇಂಡಿಯಾ ಮಜಿಸ್‌-ಇತ್ತೆಹಾದುಲ್‌ ಮುಸ್ಲಿಮೀನ್‌(ಎಂಐಎಂ)ನ ಮುಖ್ಯಸ್ಥ, ಹೈದ್ರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ, ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇನ್ನು ಮತ ಹಂಚಿಕೆ ಪ್ರಮಾಣದ ವಿಚಾರಕ್ಕೆ ಬಂದರೆ, ಟಿಆರ್‌ಎಸ್‌ 42.4 ಪ್ರತಿಶತ ಮತಗಳನ್ನು, ಯುಪಿಎ-29 ಪ್ರತಿಶತ ಮತಗಳನ್ನು, ಎನ್‌ಡಿಎ 12.7 ಪ್ರತಿಶತ ಮತ್ತು ಎಂಐಎಂ 7.7 ಪ್ರತಿಶತ ಮತ ಪಡೆಯಲಿದೆ ಎನ್ನುವ ಅಂದಾಜಿದೆ. ಮತ ಪ್ರಮಾಣದಲ್ಲಿ ಹಿಂದೆ ಬಿದ್ದರೂ ಎಂಐಎಂ  ಹೈದ್ರಾಬಾದ್‌ನಲ್ಲಿ ತನ್ನ ಸ್ಥಾನವನ್ನಂತೂ ಉಳಿಸಿಕೊಳ್ಳಲಿದೆ(ಕೆಸಿಆರ್‌ ದೋಸ್ತಿ ಕಾರಣದಿಂದ ಬಿಟ್ಟುಕೊಡಲಿದ್ದಾರೆ) ಎಂದಿತ್ತು ಸಿ ಓಟರ್‌ ಸಮೀಕ್ಷೆ. 

ಆದರೆ ಈಗಲೂ ತೆಲಂಗಾಣದಲ್ಲಿ ಇದೇ ಅಲೆ ಇದೆಯೋ ಅಥವಾ ಕಳೆದ ತಿಂಗಳಲ್ಲಿ ದೇಶಾದ್ಯಂತ ಆಗಿರುವ ಬದಲಾವಣೆ (ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ) ತೆಲಂಗಾಣದ ಚಹರೆಯನ್ನು ಬದಲಿಸಲಿದೆಯೋ? ಪರಿಣತರ ಪ್ರಕಾರವಂತೂ ಮೋದಿ ಅಲೆಯಿಂದ ಚಂದ್ರಶೇಖರ್‌ ರಾವ್‌ರಿಗಂತೂ ಯಾವುದೇ ತೊಂದರೆ ಆಗುವುದಿಲ್ಲ.  ಒಂದು ವೇಳೆ ಈ ಮಾತು ನಿಜವಾದರೆ ನಿಸ್ಸಂಶಯವಾಗಿಯೂ, ಈ ಚುನಾವಣೆ ಕೆಸಿಆರ್‌ ಅವರಿಗೆ ರಾಷ್ಟ್ರಮಟ್ಟದಲ್ಲಿ ವರ್ಚಸ್ಸು ಸೃಷ್ಟಿಸಿಕೊಳ್ಳಲು ಸಹಾಯ ಮಾಡಲಿದೆ. ಹಾಗೆಂದು ಅವರ ಫೆಡರಲ್‌ ಫ್ರಂಟ್‌ ಪರಿಕಲ್ಪನೆಗೇನೂ ಇದರಿಂದ ಭಾರೀ ಲಾಭವೇನೂ ಆಗುವುದಿಲ್ಲ. 

ತೆಲಂಗಾಣ ರಾಷ್ಟ್ರೀಯ ಸಮಿತಿಯ ಕಾರ್ಯಕಾರಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವರ ಪುತ್ರ ಕೆ.ಟಿ. ರಾಮಾರಾವ್‌ ತಮ್ಮ ಪಕ್ಷಕ್ಕೆ ಗೆಲುವಿನ ಹಾದಿ ಸುಗಮಗೊಳಿಸಲು ಪರಿಶ್ರಮಿಸುತ್ತಿದ್ದಾರೆ. ಸದ್ಯಕ್ಕೆ ಅವರ ಪಕ್ಷ ಖಮ್ಮಂನಲ್ಲಿ ತುಸು ದುರ್ಬಲವಾದಂತೆ ಕಾಣಿಸುತ್ತಿರುವುದರಿಂದ, ಅವರು ಆ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಿದ್ದಾರೆ. 15-16 ಸ್ಥಾನಗಳಲ್ಲಾದರೂ ನಾವು ಗೆಲ್ಲುತ್ತೇವೆ ಎನ್ನುವುದು ಅವರ ಭರವಸೆ.

ಚುನಾವಣಾ ವಿಷಯಗಳೇನಿವೆ?
ಉದ್ಯೋಗದ ಕೊರತೆ(ಕೆಸಿಆರ್‌ ಕೇಂದ್ರವನ್ನು ದೂಷಿಸುತ್ತಾರೆ), ಮತ್ತು ಅದಕ್ಕಿಂತಲೂ ಹೆಚ್ಚಾಗಿ ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟು ತೆಲಂಗಾಣದ ಪ್ರಮುಖ ಸಮಸ್ಯೆ. ನಿತ್ಯವೂ ಹೆಚ್ಚುತ್ತಿರುವ ರೈತರ ಆತ್ಮಹತ್ಯಾ ಪ್ರಮಾಣದಿಂದ ಬೆಚ್ಚಿರುವ ಸರ್ಕಾರ ಸಮಸ್ಯೆಯ ಪರಿಹಾರಕ್ಕೆ ರೈತ ಬಂಧುವಿನಂಥ ಸ್ಕೀಂಗಳನ್ನು ತಂದಿದೆೆ. ಆದರೂ ರೈತರ ಸಮಸ್ಯೆ ಪರಿಹಾರವಾಗಿಲ್ಲ. ಇದೇ ಕಾರಣಕ್ಕಾಗಿಯೇ ಈಗ ಪ್ರತಿಪಕ್ಷಗಳೆಲ್ಲ ಕೃಷಿ ಸಮಸ್ಯೆಯನ್ನು ಎದುರಿಟ್ಟುಕೊಂಡೇ ಕೆಸಿಆರ್‌ ಅವರ ಮೇಲೆ ದಾಳಿ ಮಾಡುತ್ತಿವೆ.

ಪ್ರಮುಖ ಕ್ಷೇತ್ರಗಳು
ಚೇವೆಲ್ಲ, ಖಮ್ಮಂ, ನಲಗೊಂಡ, ಕರೀಂನಗರ್‌, ಹೈದ್ರಾಬಾದ್‌, ವರಂಗಲ್‌ ಮತ್ತು ಸಿಕಂದ್ರಾಬಾದ್‌ ಪ್ರಮುಖ ಕ್ಷೇತ್ರಗಳು. ಕರೀಂನಗರ್‌ ಕ್ಷೇತ್ರವನ್ನು ಕೆಸಿಆರ್‌ “ಲಕ್ಕಿ’ ಎಂದು ಭಾವಿಸುತ್ತಾರೆ. ಅವರು ಸಾಮಾನ್ಯವಾಗಿ ಪ್ರಚಾರ ಕಾರ್ಯಗಳನ್ನೆಲ್ಲ ಅಲ್ಲಿಂದಲೇ ಆರಂಭಿಸುತ್ತಾರೆ. 

ಲೋಕಸಭಾ ಸ್ಥಾನಗಳು 17
ಟಿಆರ್‌ಎಸ್‌ 11
ಇತರೆ 06

ಕಾಂಗ್ರೆಸ್‌ನ ಕೆಲವರು ಎಎಪಿ ಜೊತೆಗೆ ಮೈತ್ರಿ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ಕಾಂಗ್ರೆಸ್‌ನ ಭ್ರಷ್ಟಾಚಾರಕ್ಕೆ ಪ್ರತಿಕಾರವಾಗಿ ಎಎಪಿ ಹುಟ್ಟಿತ್ತು. ಇಂದು ಕಾಂಗ್ರೆಸ್ಸಿಗೆ ಎಎಪಿ ಮಂಡಿಯೂರುತ್ತಿದೆ.
ಅರುಣ್‌ ಜೇಟ್ಲಿ, ವಿತ್ತ ಸಚಿವ

ನಮಗೆ ದೇಶವೇ ಸರ್ವೋತ್ಕೃಷ್ಟ. ಆಗ ಕಾಂಗ್ರೆಸ್ಸಿನ ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದೆವು. ಈಗ ಮೋದಿ, ಶಾರಿಂದ ದೇಶಕ್ಕೆ ಆಪತ್ತು ಇದೆ. ಅವರ ವಿರುದ್ಧದ ಹೋರಾಟದಲ್ಲಿ ನೀವೂ ಬಂದು ಕೈಜೋಡಿಸಿ.
ಅರವಿಂದ ಕೇಜ್ರಿವಾಲ್‌, ದೆಹಲಿ ಸಿಎಂ

14ಲಕ್ಷ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಂತರ ಮತದಾರರ ಸಂಖ್ಯೆ ಇಷ್ಟು ಅಧಿಕವಾಗಿದೆ. 

ಈ ಬಾರಿ
ಪ್ರಶಾಂತ್‌ ಕಿಶೋರ್‌
ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ ಈಗ ಜೆಡಿಯುನ ಭಾಗವಾಗಿದ್ದಾರೆ. ಆದರೆ ಕೆಲ ದಿನಗಳಿಂದ ನಿತೀಶ್‌ರೊಂದಿಗೆ ಅವರ ಹಗ್ಗಜಗ್ಗಾಟ ಆರಂಭವಾಗಿದೆ ಎನ್ನಲಾಗುತ್ತಿದೆ. ಲೋಕಸಭೆಯಲ್ಲಿ ತನ್ನ ಶಕ್ತಿ ಹಿಗ್ಗಿಸಿಕೊಳ್ಳಲು ಶಿವಸೇನೆ ಪ್ರಶಾಂತ್‌ರ ಮೊರೆ ಹೋಗಿರುವುದು ಸ್ಪಷ್ಟವಾಗಿದೆ. ಪ್ರಶಾಂತ್‌ ಶಿವಸೇನೆಗೆ ಸಹಾಯ ಮಾಡುವುದು ಜೆಡಿಯುನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.  

ಇಂದಿನ ಕೋಟ್‌
ಹೊಸ ಪ್ರಣಾಳಿಕೆ ಹೊರಡಿಸುವುದಕ್ಕೂ ಮುನ್ನ ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿರುವ ಭರವಸೆಯನ್ನು ಪೂರ್ತಿಗೊಳಿಸಲಿ. 15 ಲಕ್ಷ ರೂ. ಖಾತೆಗೆ ಹಾಕುತ್ತೇನೆ ಎಂದಿದ್ದನ್ನು ಮರೆತಿರಾ?
ಮಾಯಾವತಿ, ಬಿಎಸ್‌ಪಿ ನಾಯಕಿ

ತಿರುವನಂತಪುರದಲ್ಲಿ ಬಿಜೆಪಿ ಕ್ಯಾಂಪೇನ್‌ ಆರಂಭವೇ ಚುನಾವಣೆ ನೀತಿ ಸಂಹಿತೆ ಉಲ್ಲಂ ಸುವ ಮೂಲಕ ಶುರುವಾಗಿದೆ. ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಪಕ್ಷ ಮತ ಕೇಳುತ್ತಿದೆ.
ಶಶಿ ತರೂರ್‌, ಕಾಂಗ್ರೆಸ್‌ ಸಂಸದ

ಯುವ ಮತದಾರರತ್ತ ಚಿತ್ತ ಹರಿಸಿದ ಕಾಂಗ್ರೆಸ್‌
ಈ ಬಾರಿ ದೇಶದಲ್ಲಿ ನಾಲ್ಕೂವರೆ ಕೋಟಿ ಹೊಸ ಯುವ ಮತದಾರರು ಮತಚಲಾಯಿಸಲಿದ್ದಾರೆ ಎಂಬ ಸಂಗತಿ, ರಾಜಕೀಯ ಪಕ್ಷಗಳ ಚುನಾವಣಾ ರಣನೀತಿಯನ್ನು ಬದಲಿಸಿರುವುದು ಸುಳ್ಳಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ಯುವಮನಗಳನ್ನು ಸೆಳೆಯುವಲ್ಲಿ ಸೋಷಿಯಲ್‌ ಮೀಡಿಯಾ ಸೇರಿದಂತೆ, ಇನ್ನಿತರ ರೀತಿಯಲ್ಲಿ ಸಕಲ ಪ್ರಯತ್ನವನ್ನೂ ನಡೆಸಿವೆ. ಅದರಲ್ಲೂ ಈ ಬಾರಿ ತನ್ನ ರಣತಂತ್ರವನ್ನು ಶಾರ್ಪ್‌ಗೊಳಿಸಿಕೊಂಡಿರುವ ಕಾಂಗ್ರೆಸ್‌ ದೇಶದಲ್ಲಿನ 250 ಲೋಕಸಭಾ ಕ್ಷೇತ್ರಗಳಲ್ಲಿ ಯುವಮತದಾರರನ್ನು ತಲುಪಲು ಹೆಚ್ಚು ಪ್ರಯತ್ನಿಸುತ್ತಿದೆ.

ಗಮನಿಸಬೇಕಾದ ಅಂಶವೆಂದರೆ, ಅದು ಗುರುತಿಸಿರುವ ಈ ಕ್ಷೇತ್ರಗಳು ಕಾಂಗ್ರೆಸ್ಸೇತರ ಸರ್ಕಾರವಿರುವ ರಾಜ್ಯಗಳಲ್ಲಿ ಇವೆ. ಈ ಕ್ಷೇತ್ರಗಳಲ್ಲಿ ಕೇವಲ ನವಮತದಾರರನ್ನಷ್ಟೇ ಅಲ್ಲ, ಒಟ್ಟಾರೆಯಾಗಿ 18-35 ವಯೋಮಾನದವರತ್ತ ಚಿತ್ತ ನೆಟ್ಟಿದೆ ಕಾಂಗ್ರೆಸ್‌. ಮುಖ್ಯವಾಗಿ ಹರ್ಯಾಣ, ಗುಜರಾತ್‌, ಉತ್ತರಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಹಾಗೂ ಆಂಧ್ರಪ್ರದೇಶದ ಯುವಜನರನ್ನು ತಲುಪಲು ಕಾಂಗ್ರೆಸ್‌ನ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಾರೆ ಚುನಾವಣಾ ಪರಿಣತರು. ಆದರೆ ಈ ಕೆಲಸ ಈಗಷ್ಟೇ ಆರಂಭವೇನೂ ಆಗಿಲ್ಲ. 2016ರಿಂದಲೇ ಕಾಂಗ್ರೆಸ್‌, “ಚಲೋ ಪಂಚಾಯತ್‌’ ಮತ್ತು “ಹಾಥ್‌ ಉಠಾವೋ’ನಂಥ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಇದೇ ಕಾರಣಕ್ಕಾಗಿಯೇ ಎನ್ನಲಾಗುತ್ತದೆ.  

ಆದರೆ ಈಗಲೂ ಯುವ ಮತದಾರರನ್ನು ಸಕ್ಷಮವಾಗಿ ತಲುಪಲು ಹೆಚ್ಚು ಸಫ‌ಲವಾಗುತ್ತಿರುವುದು ಬಿಜೆಪಿ ಎನ್ನುವುದು ಸೋಷಿಯಲ್‌ ಮೀಡಿಯಾ  ಮ್ಯಾನೇಜಿಂಗ್‌  ಪರಿಣತರ ವಾದ. ಬೇರು ಮಟcದಲ್ಲಷ್ಟೇ ಅಲ್ಲದೆ, ಸೋಷಿಯಲ್‌ ನೆಟ್‌ವರ್ಕ್‌ನ ಪ್ರಬಲ ಬಳಕೆಯ ಮೂಲಕ ಬಿಜೆಪಿಗೆ ಇದು ಸಾಧ್ಯವಾಗಿದೆ. 2014ರ ಫ‌ಲಿತಾಂಶದ ನಂತರ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾಗಳ ಶಕ್ತಿಯನ್ನು ಅರ್ಥಮಾಡಿಕೊಂಡಿದ್ದರಿಂದ ಈ ಕ್ಷೇತ್ರದಲ್ಲಿ ಅದು ಚೂರು ಹಿಂದಿದೆ. ಆದರೆ “ಪಕ್ಷವೊಂದು ನೇರವಾಗಿ ಮತದಾರರ ಕಿಸೆಗೆ ನೋಟಿಫಿಕೇಷನ್‌ಗಳ ಮೂಲಕ ತಲುಪುತ್ತಿದೆ ಎಂದಾಕ್ಷಣ, ಮತದಾರರು ಅದರತ್ತ ವಾಲುತ್ತಾರೆ ಎಂದೇನೂ ಅಲ್ಲ, ಪಕ್ಷವೊಂದರ ಪಾಲಿಸಿಗಳು ಯುವಕರ ಪರವಾಗಿ ವೆಯೇ, ಯುವಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರೂಪಿತವಾಗಿವೆಯೇ ಎನ್ನುವುದೇ ನಿರ್ಣಾಯಕ ಪಾತ್ರ ವಹಿಸುತ್ತದೆ’  ಎನ್ನುತ್ತಾರೆ  ಕೆ.ಆರ್‌. ಪಾಲಿಟಿಕೋ ಅನಲೈಸಿಸ್‌ನ ಸಿಐಒ ರಾಂ ಸಂಜೋತ್‌ ಮಿಶ್ರಾ ಅವರು.  

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Jammu and Kashmir: Vehicle falls into gorge

Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.