ಮಂಡ್ಯದಲ್ಲಿ ಸುಮಲತಾ ಪ್ರಚಾರದ ಅಬ್ಬರ
Team Udayavani, Mar 18, 2019, 1:37 AM IST
ಮಂಡ್ಯ: ಮಂಡ್ಯ ಲೋಕ ಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಸುಮಲತಾ ಅವರು ಭಾನುವಾರ ನಗರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.
ಬೆಳ್ಳಂ ಬೆಳಗ್ಗೆ 6ಕ್ಕೆ ನಗ ರದ ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿ ದೇವ ಸ್ಥಾ ನದಲ್ಲಿ ವೈರಮುಡಿ-ರಾಜಮುಡಿ ಕಿರೀಟ ಹಾಗೂ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾ ರಕ್ಕೆ ಚಾಲನೆ ನೀಡಿದರು. ಬಳಿಕ, ಶಂಕರ ಮಠದ ಶ್ರೀ ಆದಿ ಚುಂಚನಗಿರಿ ಮಠ, ಶ್ರೀ ಶನೇಶ್ವರ ದೇವ ಸ್ಥಾನ ದಲ್ಲಿ ಪೂಜೆ ಸಲ್ಲಿಸಿ, ನಂತರ ಕಾಂಗ್ರೆಸ್‌ನ ವಿವಿಧ ಮುಖಂಡರ ಮನೆಗಳಿಗೆ ಭೇಟಿ ನೀಡಿದರು. ಶಂಕರ ಮಠದಲ್ಲಿರುವ ನಗರಸಭೆ ಸದಸ್ಯ ನಹೀಂ, ಬ್ರಾಹ್ಮಣ ಸಭಾ ಅಧ್ಯಕ್ಷ ಬೆಳ್ಳೂರು ಶಿವರಾಂ, ಸೇವಾ ಕಿರಣ ವೃದ್ಧಾ ಶ್ರಮ, ಸೊಸೈಟಿ ಚಂದ್ರು ಸೇರಿ ದಂತೆ ಹಲ ವಾರು ಕಾಂಗ್ರೆಸ್ ಮುಖಂಡರು, ಅಂಬರೀಶ್ ಅಭಿಮಾನಿಗಳ ಮನೆಗಳಿಗೆ ಭೇಟಿ ನೀಡಿ, ಬೆಂಬಲ ಕೋರಿದರು.
ಚೆಲುವರಾಯಸ್ವಾಮಿ ಬೆಂಬಲ?: ಈ ಮಧ್ಯೆ, ಸುಮಲತಾ ಬೆಂಬಲಕ್ಕೆ ಮಾಜಿ ಸಚಿವ ಚೆಲುವರಾಯಸ್ವಾಮಿ ನಿಂತಿದ್ದು, ರಹಸ್ಯವಾಗಿಯೇ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಘ ಟಿ ಸಿ, ಚುನಾ ವಣಾಕಾರ್ಯಾ ಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮದ್ದೂರು ಪಟ್ಟಣದ ಕಾಂಗ್ರೆಸ್ ನಾಯಕ ವಿ.ಕೆ. ಜಗದೀಶ್ ಮನೆಯಲ್ಲಿ ನಾಗ ಮಂಗಲ ಹಾಗೂ ಮದ್ದೂರು ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಹಾಗೂ ಶ್ರೀ ವೆಂಕಟೇಶ್ವರ ರೆಸಿಡೆನ್ಸಿಯಲ್ಲಿ ಕೊಪ್ಪ ಭಾಗದ ಹಲವು ಮುಖಂಡರ ಸಭೆನಡೆಸಿ, ಸುಮಲತಾರನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳುವುದಕ್ಕೆ ಸುಮಲತಾ ಗೆಲುವು ನಮಗೆ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ. ಇದಕ್ಕೆ,ಸಭೆ ಯ ಲ್ಲಿ ಭಾಗ ವ ಹಿ ಸಿದ್ದ ಮುಖಂಡರು,ಕಾರ್ಯಕರ್ತರೆಲ್ಲರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿ ದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ, ಸುಮಲತಾ ಅವರು ಮಂಡ್ಯ ಜನರ ಪ್ರೀತಿಗೆ ತಮ್ಮಅಧಿಕೃತ ಫೇಸ್‌ಬುಕ್‌ನಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ. ಯುವಕ-ಯುವತಿಯರು ಅಮ್ಮ,ಅತ್ತಿಗೆ, ಅಕ್ಕ ಎಂದು ಕರೆಯುವಾಗ ನನಗೆ ಸಂತೋಷವಾಗುತ್ತದೆ ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸುಮಲತಾ ಅವರು ಮುಂದೆ ಸೂಕ್ತ ನಿರ್ಧಾರಕೈಗೊಳ್ಳುವ ವಿಶ್ವಾಸವಿದೆ.ಅಂಬರೀಶ್ ಜತೆ ಮೂರು ದಶಕದ ಬಾಂಧವ್ಯ ಇದೆ. ಅವರ ಹಿತೈಷಿಯಾಗಿ ಸುಮಲತಾ ಅವರ ಸ್ಪರ್ಧೆಯನ್ನು ನಾನು ಬೆಂಬಲಿಸುತ್ತೇನೆ. ಅಂಬರೀಶ್‌ಗೆ ಮಂಡ್ಯದಲ್ಲಿ ದೊಡ್ಡ ಅಭಿಮಾನಿ ಬಳಗವೇ
ಇದೆ. ಅದೇ ಅವರ ಗೆಲುವಿಗೆ ಸಹಕಾರಿಯಾಗಲಿದೆ.
● ಜಗ್ಗೇಶ್, ನಟ , ಬಿಜೆಪಿ ಮುಖಂಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.