ಸಸ್ಯ ಪಾಲನ ಕೇಂದ್ರದಲ್ಲಿ ಪರಿಸರ ಪಾಠ 

Team Udayavani, Mar 18, 2019, 4:58 AM IST

18-march-2.jpg

ಸುಬ್ರಹ್ಮಣ್ಯ : ಕಾಡಿನ ಹಸಿರೆಲ್ಲ ಮಾಯವಾಗುತ್ತಿದೆ. ನೀರು, ಗಾಳಿ, ಮಣ್ಣು ಕೂಡ ವಿಷವಾಗುತ್ತಿದೆ. ಇವನ್ನೆಲ್ಲ ಗಮನಿಸುವಾಗ ಭವಿಷ್ಯದ ಕುರಿತು ಭಯ ಮೂಡುತ್ತದೆ. ಹೀಗಾಗಿ ಎಳೆಯರಿಗೆ ಸೃಷ್ಟಿಯ ಸೌಂದರ್ಯ ಪರಿಚಯಿಸಿ ಭವಿಷ್ಯದ ಹೊಂಗನಸು ಬಿತ್ತುವ ಕೆಲಸ ಆಗಬೇಕು. ನಾಳೆಯ ವಾರಸುದಾರ ಮಕ್ಕಳಿಗೆ ಅರಿವು ಮೂಡಿಸುವ ಪರಿಸರ ಶಿಕ್ಷಣ ಇಂದಿನ ಅಗತ್ಯ. ಇದೆಲ್ಲವನ್ನು ಮನಗಂಡ ಸುಬ್ರಹ್ಮಣ್ಯ ಕೆಎಸ್‌ಎಸ್‌ ಕಾಲೇಜಿನ ಆಂಗ್ಲ ಭಾಷಾ ವಿಭಾಗದ
ಮುಖ್ಯಸ್ಥರು ಪ್ರಕೃತಿಯಲ್ಲಿ ಒಂದು ದಿನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದರು.

ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ದ್ವಿತೀಯ ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿಗಳಿಗೆ ಪ್ರಕೃತಿಯೊಂದಿಗೆ ಒಂದು ದಿನದ ಕಾರ್ಯಕ್ರಮ ರವಿವಾರ ನಡೆಯಿತು. ಅರಣ್ಯ ಇಲಾಖೆ ಸುಬ್ರಹ್ಮಣ್ಯ ವಲಯದ ಸಹಕಾರದಲ್ಲಿ ಕಾಲೇಜಿನ ಸುಮಾರು 250 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರವಿವಾರ ರಜಾ ದಿನವಾಗಿದ್ದರೂ, ಮಕ್ಕಳು ಕಾಲೇಜಿಗೆ ಬಂದರು. ಅಲ್ಲಿಂದ ದೇವರಹಳ್ಳಿಯಲ್ಲಿನ ಕಲ್ಲಾಜೆ ಸಸ್ಯ ಪಾಲನ ಕ್ಷೇತ್ರಕ್ಕೆ ತೆರಳಿ ಪರಿಸರ ಸಂರಕ್ಷಣೆ ಪಾಠ ಕಲಿಯುವಿಕೆಯಲ್ಲಿ ತೊಡಗಿಸಿಕೊಂಡರು.

ಸ್ವಚ್ಛತಾ ಕಾರ್ಯ ನಡೆಸಿದರು
ಸಸ್ಯಪಾಲನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಅಲ್ಲಿರುವ ವಿವಿಧ ಜಾತಿಯ ಹಣ್ಣಿನ ಸಸಿಗಳು, ವಿವಿಧ ಜಾತಿಯ ಮರಗಳ ಸಸಿಗಳ ಬಗ್ಗೆ ಪರಿಚಯಿಸಿಕೊಂಡರು. ವಿದ್ಯಾರ್ಥಿಗಳು ಮಣ್ಣಿನಲ್ಲಿ ಬೆರೆತು ಬೀಜದುಂಡೆ ಸಿದ್ಧಪಡಿಸಿದರು. ಮಣ್ಣು ಅಗೆದು ನೀರು ಹಾಯಿಸಿ ಮಣ್ಣು ಹದಗೊಳಿಸಿ ಚಿಕ್ಕ ಉಂಡೆಗಳನ್ನಾಗಿ ಪರಿವರ್ತಿಸಿ ಅದರ ಮಧ್ಯೆ ಬೀಜವನ್ನು ಹುದುಗಿಸಿಟ್ಟು ಹಣ್ಣಿನ ಬೀಜದ ಉಂಡೆಗಳನ್ನು ಸಿದ್ಧಪಡಿಸಿದರು. ಇನ್ನುಳಿದ ಮಕ್ಕಳು ಸಸಿ ತುಂಬಿಸಿಡುವ ತೊ ಟ್ಟೆಗಳಿಗೆ ಮಣ್ಣು ತುಂಬಿಸಿ ಸಸಿಗಳನ್ನು ನೆಟ್ಟರು. ವಿದ್ಯಾರ್ಥಿನಿ ಯರು ಕೇಂದ್ರದಲ್ಲಿ ಸಂಗ್ರಹಿಸಿಡಲಾದ ಸಸಿಗಳ ಮಧ್ಯೆ ಬೆಳೆದು ಕೊಂಡಿರುವ ಅನುಪಯುಕ್ತ ಗಿಡಗಂಟಿ, ಕಳೆಗಳನ್ನು ತೆಗೆದು ಸ್ವತ್ಛ ಗೊಳಿಸಿದರು.

ಪ್ರಾಯೋಗಿಕ ಉದ್ದೇಶ
ಕಾಲೇಜು ಶಿಕ್ಷಣದ ಜತೆಗೆ ಪರಿಸರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ವಿದ್ಯಾರ್ಥಿಗಳಲ್ಲಿ ಪಠ್ಯಕ್ರಮ ಚೌಕಟ್ಟಿನ ಜತೆಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಶಿಕ್ಷಣವೂ ಕಡ್ಡಾಯವಾಗಿರಬೇಕು. ಇವೆಲ್ಲವನ್ನು ಪರಿಣಾಮಕಾರಿಯಾಗಿ ಮಕ್ಕಳಲ್ಲಿ ಜಾಗೃತಗೊಳಿಸುವ ಮೂಲಕ ಶಿಕ್ಷಣವನ್ನು ಆಹ್ಲಾದಕರವಾಗಿಯೂ ಕಲಿಕೆಯ ಫ‌ಲಶೃತಿಯನ್ನು ಶಿಸ್ತುಬದ್ಧವಾಗಿ ನಡೆಸಲು ಪ್ರಾಯೋಗಿಕ ಉದ್ದೇಶ ಇರಿಸಿಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 ಹೊಸತನ ಹುಡುಕುವ ಯತ್ನ
ಭವಿಷ್ಯದ ಪರಿಸರ ಸ್ನೇಹಿ ನಾಗರಿಕರನ್ನಾಗಿ ವಿದ್ಯಾರ್ಥಿಗಳನ್ನು ರೂಪಿಸಲು ಮತ್ತು ಭೂಮಿಯನ್ನು ಹಸಿರಾಗಿ ಇಡಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಿಕೆ ಅಂಕ ಕೂಡ ನೀಡಲಾಗುತ್ತದೆ. ಶಿಕ್ಷಣದಲ್ಲಿ ಹೊಸತನ್ನು ಹುಡುಕುವ ಪ್ರಯತ್ನವಿದು.
– ಡಾ| ಗೋವಿಂದ
ಎನ್‌.ಎಸ್‌. ಮುಖ್ಯಸ್ಥರು

 ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

1

Pushpa 2: ಕಿಸಿಕ್‌ ಎಂದು ಕುಣಿದ ಶ್ರೀಲೀಲಾ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.