ಜೇಬಿಗೆ ಕತ್ತರಿ ಹಾಕುವ ಆಫರ್ ಗಳು !
Team Udayavani, Mar 18, 2019, 9:40 AM IST
ಬಟ್ಟೆ ಖರೀದಿಯ ಮೇಲೆ ಭಾರೀ ರಿಯಾಯಿತಿ ಎಂಬ ಬೋರ್ಡ್ ಗಳನ್ನು ನಾವೆಲ್ಲ ನೋಡಿರುತ್ತೇವೆ. ರಿಯಾಯಿತಿ ಘೋಷಣೆಯ ಸಂದರ್ಭದಲ್ಲಿ ಬಟ್ಟೆಗಳಿಗೆ ದುಬಾರಿ ಬೆಲೆ ನಮೂದಿಸಲಾಗಿರುತ್ತದೆ. ಈ ಆಫರ್ ಮುಗಿದ ಅನಂತರ ಹೋಗಿ ನೋಡಿದರೆ, ಅದೇ ಬಟ್ಟೆಗೆ ಮೊದಲಿಗಿಂತ ಅರ್ಧಕ್ಕರ್ಧ ಕಡಿಮೆ ಬೆಲೆಯ ಸ್ಟಿಕ್ಕರ್ ಅಂಟಿರುತ್ತದೆ.
ಮಾರ್ಕೆಟ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲೊಂದು ದೊಡ್ಡ ಬೋರ್ಡ್. ಅದರ ಮೇಲೆ ದೊಡ್ಡದಾಗಿ 50 ಪರ್ಸೆಂಟ್ ಕಡಿತ ಎಂಬ ಬರಹ.
ಅರೆ! ಇಡೀ ಮೂರು ಅಂತಸ್ತಿನ ಮಳಿಗೆಯಲ್ಲಿ ಸಣ್ಣ ಕರ್ಚೀಫ್ ನಿಂದ ಹಿಡಿದು ಶರ್ಟ್‌ವರೆಗೂ ಎಲ್ಲವನ್ನೂ 50 ಪರ್ಸೆಂಟ್ ರಿಯಾಯಿತಿ ದರದಲ್ಲಿ ಕೊಡ್ತಾರಾ ಅನ್ನೋ ಪ್ರಶ್ನೆ ಮನದಲ್ಲಿ. ಹಾಗೇ ಒಳಕ್ಕೆ ಕಾಲಿಟ್ಟರೆ ಅಲ್ಲೆಲ್ಲೋ ಮೂಲೆಯಲ್ಲಿ ಸ್ವಲ್ಪ ಬಟ್ಟೆಗಳನ್ನು ಹರಡಿಟ್ಟು ಇದಕ್ಕೆ ಮಾತ್ರ 50 ಪರ್ಸೆಂಟ್ ಆಫ್ ಸಾರ್… ಬೇರೆ ಕಲೆಕ್ಷನ್ಸ್ ಬೇಕು ಅಂದ್ರೆ ಅಲ್ಲಿದೆ ನೋಡಿ. ಅದಕ್ಕೆ ಆಫ್ ಇಲ್ಲ ಅಂತ ನಯವಾಗಿ ಹೇಳ್ತಾರೆ. 50 ಪರ್ಸೆಂಟ್ ಆಫ್ ಅಂತ ಬೋರ್ಡ್
ತಗಲು ಹಾಕಿದ ಕಡೆ ನೋಡಿದರೆ ನಿಮಗೆ ಇಷ್ಟವಾಗುವ ಯಾವುದೂ ಇರೋದಿಲ್ಲ.
ಹೇಗೂ ಗಾಡಿ ಪಾರ್ಕ್ ಮಾಡಿ ಆಗಿದೆ. ಅಂಗಡಿ ಒಳಗೆ ಕಾಲಿಟ್ಟಾಗಿದೆ ಅಂದ್ಕೊಂಡು, ಅಲ್ಲಿ ನಿಮಗೆ ಇಷ್ಟವಾಗದ್ದು ಏನೂ ಸಿಗದೇ ಇದ್ದಾಗ, ಆಫರ್ ಇಲ್ಲದ ನಿಮಗೆ ತುಂಬಾ ಇಷ್ಟವಾದ ಯಾವುದನ್ನಾದರೂ ಖರೀದಿಸುತ್ತೀರಿ.
ಬಹುತೇಕ ಮಾಲ್‌ಗಳಲ್ಲಿ ಇದೇ ಥರದ ಕಥೆಗಳಿರುತ್ತವೆ.
ಬಟ್ಟೆಗಳ ವಿಚಾರದಲ್ಲಿ ಆಫರ್‌ನಲ್ಲಿ ಕಣ್ಣಿಗೆ ಮಣ್ಣೆರಚಲು ಹಲವು ಅವಕಾಶಗಳಿರುತ್ತವೆ. ಕೆಲವು ಕಡೆಗಳಲ್ಲಿ ಸೇಲ್ ಆಗದೇ ಸಂಗ್ರಹವಾಗಿರುವ ಅಥವಾ ಎರಡನೇ ದರ್ಜೆಯ ಬಟ್ಟೆಗಳನ್ನು ಆಫರ್ ಮೂಲಕ ಕೊಡುವುದಿದೆ. ಅದರ ಜತೆಗೆ ಎಂಆರ್ ಪಿಯ ಸ್ಟಿಕ್ಕರ್ ಬದಲಿಸುವ ವ್ಯವಸ್ಥೆಯಂತೂ ವ್ಯಾಪಕವಾಗಿದೆ. ಕೊಡುಗೆ ಇಲ್ಲದೇ ಇದ್ದಾಗಿನ ಎಂಆರ್‌ಪಿಯೇ ಬೇರೆ, ಆಫರ್ ಕೊಟ್ಟಾಗ ಹಾಕಿರುವ ಎಂಆರ್‌ಪಿಯೇ ಬೇರೆ ಇರುತ್ತದೆ. ಇದನ್ನು ಒಂದೇ ಮಾಲ್ ಗೆ ಪದೇ ಪದೇೆ ಭೇಟಿ ನೀಡುತ್ತಿರುವವರು ಬಹಳಷ್ಟು ಬಾರಿ ಗಮನಿಸಿಯೂ ಇರುತ್ತಾರೆ. ಇಂಥದ್ದನ್ನೆಲ್ಲ ನಿಯಂತ್ರಿಸಲು ಎಂಆರ್‌ಪಿ ಬದಲಿಸದಂತೆ ಕ್ರಮ ಕೈಗೊಂಡರೂ ಅದೇನೂ ಯಶಸ್ವಿಯಾದಂತಿಲ್ಲ.
ಇದು ಆಫ್ಲೈ ನ್‌ನ ಕಥೆಯಾದರೆ, ಆನ್ ಲೈನ್ ಮಾರಾಟದ್ದು ಇನ್ನೊಂದು ವಿಧ. ಇಲ್ಲಿ ಈ ರೀತಿಯ 50 ಪರ್ಸೆಂಟ್ ರೀತಿಯ ಆಫರ್ ಜತೆಗೆ ಕೂಪನ್, ಕ್ಯಾಶ್ ಬ್ಯಾ ಕ್ ಇರುತ್ತದೆ. ಕೂಪನ್‌ಗ ಳಂತೂ ಮೋಸ ಮಾಡುವ
ನಂಬರ್ ಒನ್ ಚೀಟಿಗಳು! ಒಂದು ಶರ್ಟ್ ಖರೀದಿಸಿದರೆ 500 ರೂ. ಮೌಲ್ಯದ ಕೂಪನ್ ಕೊಡುತ್ತೇವೆ ಎಂದು ಶರ್ಟ್ ಚಿತ್ರಕ್ಕಿಂತ ದೊಡ್ಡ ಗಾತ್ರದಲ್ಲಿ ಬರೆದಿರುತ್ತಾರೆ. ಆದರೆ ವಾಸ್ತವ ಅದರ ಹಿಂಬದಿಯಲ್ಲಿರುತ್ತದೆ. ಆ ಕೂಪನ್ ನಿಮ್ಮ ಮೇಲ್ ಗೆ ಬಂದಾಗ ಅಥವಾ ಆ ಕೂಪನ್ ಟಮ್ಸ್ ಆ್ಯಂಡ್ ಕಂಡೀಷನ್ ಓದಿದಾಗ ನಿಮ್ಮನ್ನು ದೊಡ್ಡದೊಂದು ಖೆಡ್ಡಾಗೆ ಕೆಡವಿರುವುದು ತಿಳಿಯುತ್ತದೆ.
ಹೀಗಾಗಿ ಎಲ್ಲ ಆಫರ್ ಗಳೂ ನಿಜ ಅರ್ಥದಲ್ಲಿ ಆಫರ್‌ಗಳಾಗಿರುವುದಿಲ್ಲ. ಬದಲಿಗೆ ಬಹುತೇಕ ಸಮಯದಲ್ಲಿ ಅವು ನಿಮ್ಮನ್ನು ಸೆಳೆಯಲು ಮಾಡುವ ತಂತ್ರಗಳಾಗಿರುತ್ತವೆ. ಹೀಗಾ ಗಿ ಕಣ್ಕಿಟ್ಟು ಆಫ ರ್ ನಿಮ್ಮ ಜೇಬಿಗೆ
ಹೊರೆಯಾಗದಂತೆ ಎಚ್ಚರವಹಿಸಿ.
ಕ್ಯಾಶ್‌ಬ್ಯಾಕ್‌ನಿಂದ ಜೇಬಿಗೆ ಕತ್ತರಿ
ಕ್ಯಾಶ್‌ಬ್ಯಾಕ್ ನಿಮ್ಮನ್ನು ಮತ್ತೆ ಮತ್ತೆ ಖರೀದಿಸುವಂತೆ ಪ್ರೇರೇಪಿಸುತ್ತದೆ. ಅಂದರೆ 1,000 ರೂ. ಮೊತ್ತದ ಐಟಂ ಖರೀದಿಸಿದರೆ 100 ರೂ. ಕ್ಯಾಶ್‌ಬ್ಯಾಕ್ ಕೊಡುವುದಾಗಿ ನಿಮಗೆ ಆಫರ್ ಮಾಡಿರುತ್ತಾರೆ. ಆದರೆ ಇದನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಾಕುವುದಿಲ್ಲ. ಬದಲಿಗೆ ಇದು ನೀವು ಯಾವ ಆ್ಯಪ್‌ನಿಂದ ಖರೀದಿ ಮಾಡಿರುತ್ತೀರೋ ಆ ಅಪ್ಲಿಕೇಶನ್‌ನ ವಾಲೆಟ್‌ಗೆ ಬಂದು ಕುಳಿತಿರುತ್ತದೆ. ಆ 100 ರೂ. ಕ್ಯಾಶ್‌ಬ್ಯಾಕ್ ಬಳಸಬೇಕು ಎಂದಾದರೆ ನೀವು ಏನನ್ನಾದರೂ ಖರೀದಿಸಲೇಬೇಕು. ಬಹುತೇಕ ಸಮಯದಲ್ಲಿ ಆ ವಾಲೆಟ್ನಿಂದ ನಿಮ್ಮ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಅವಕಾಶವೇ ಇರುವುದಿಲ್ಲ.
ಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.